ಗೋಧಿ ಪ್ಯಾನ್ ಕೇಕ್ | Whole Wheat Pancake in Kannada
Read this article in
ಬೇಸಿಗೆ ರಜೆ ಮುಗಿದು ಇನ್ನೇನು ಶಾಲೆಗಳು ಪ್ರಾರಂಭವಾಗಲಿವೆ. ಪ್ಯಾನ್ ಕೇಕ್ ಮಾಡುವುದು ಬಹಳ ಸುಲಭ ಮತ್ತು ಉತ್ತಮ ಉಪಹಾರ/ ಲಂಚ್ ಬಾಕ್ಸ್ ನ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಿಸಬಹುದು ಮತ್ತು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.ಮನೆಯಲ್ಲಿ ಮಕ್ಕಳಿಗೆ ಎದೆ ಹಾಲು ಬಿಡಿಸುವ ಸಮಯದಲ್ಲಿ ಮತ್ತು ಕೈಗೆ ನೀಡುವ ಆಹಾರಕ್ಕೆ ಪ್ಯಾನ್ ಕೇಕ್ ಒಳ್ಳೆಯ ಆಯ್ಕೆ.ಪ್ಯಾನ್ ಕೇಕ್ ಮಾಡಲು ಸುಲಭ ಮತ್ತು ಮೃದುವಾಗಿರುತ್ತದೆ. ವಿವಿಧ ವೈವಿಧ್ಯಮಯವಾದ ಪ್ಯಾನ್ ಕೇಕ್ ಮಾಡಬಹುದು.
ಗೋಧಿ ಪ್ಯಾನ್ ಕೇಕ್ | Whole Wheat Pancake in Kannada
ನನ್ನ ಬ್ಲಾಗ್ ನಲ್ಲಿ ಕೆಲವು ವಿಭಿನ್ನವಾದ ಪಾಕವಿಧಾನಗಳು ಲಭ್ಯವಿದೆ. ವೀಡಿಯೊದೊಂದಿಗೆ ಪಾಕವಿಧಾನವನ್ನು ನೋಡಲು ಕ್ಲಿಕ್ ಮಾಡಿ.
ಪಾಲಕ್ ಓಟ್ಸ್ ದೋಸೆ ಮತ್ತು ಪ್ಯಾನ್ ಕೇಕ್
ಮೇಲೆ ಕೊಟ್ಟಿರುವ ಪಾಕವಿಧಾನಗಳಲ್ಲದೆ ಅನೇಕ ಸ್ನ್ಯಾಕ್ ಬಾಕ್ಸ್ ಪಾಕವಿಧಾನಗಳನ್ನು ನೀಡಲಾಗಿದೆ. ಸ್ವೀಟ್ ಕಾರ್ನ್ ಪೆಪೆರ್ ರೈಸ್, ನವಣೆ ಫ್ರೈಡ್ ರೈಸ್, ಸೇಬು, ನವಣೆ ಅಕ್ಕಿ ಪಾಯಸ ಪಾಕವಿಧಾನಗಳನ್ನು ಪ್ರಯತ್ನಿಸಿ. ಮಕ್ಕಳಿಗೆ ಖಂಡಿತ ಇಷ್ಟವಾಗುತ್ತದೆ.
ಗೋಧಿ ಪ್ಯಾನ್ ಕೇಕ್ ವಿಡಿಯೋ ರೆಸಿಪಿ | Whole Wheat Pancake in Kannada :
ಗೋಧಿ ಪ್ಯಾನ್ ಕೇಕ್ | Whole Wheat Pancake in Kannada
ಗೋಧಿ ಪ್ಯಾನ್ ಕೇಕ್
ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು
- ಗೋಧಿ ಹಿಟ್ಟು - 1/2 ಕಪ್
- ಸಣ್ಣ ರವೆ - 2 tsp
- ಬಾಳೆ ಹಣ್ಣು - 1
- ಬೆಲ್ಲದ ಪುಡಿ - 1 tbsp
- ತೆಂಗಿನ ಕಾಯಿ - 1 tbsp ತುರಿದಿರುವ ಬೇಕಾದರೆ
- ಹಾಲು - 1/2 ಕಪ್
ವಿಧಾನ
- ಒಂದು ದೊಡ್ಡ ಬಟ್ಟಲಿಗೆ ಒಂದು ಕಳಿತ ಬಾಳೆಹಣ್ಣು ತೆಗೆದುಕೊಂಡು, ಸಿಪ್ಪೆ ತೆಗೆದು ಫೋರ್ಕ್ ಬಳಸಿ ಚೆನ್ನಾಗಿ ಮಸೆದುಕೊಳ್ಳಿ.
- ಮಸೆದ ಬಾಳೆ ಹಣ್ಣಿಗೆ ಬೆಲ್ಲ ಅಥವಾ ಸಕ್ಕರೆ ಪುಡಿ ಹಾಕಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಶುದ್ಧವಾದ ಬೆಲ್ಲದ ಪುಡಿ ಉಪಯೋಗಿಸಿ ಅಥವಾ ಖರ್ಜೂರದ ಸಿರಪ್/ ಬೆಲ್ಲದ ಸಿರಪ್ ಬಳಸಬಹುದು. 100% ಶುದ್ಧವಾದ ಜೈವಿಕ ಬೆಲ್ಲದ ಪುಡಿಯನ್ನು ಇಲ್ಲಿ ಖರೀದಿಸಬಹುದು.
- ತದನಂತರ ಸಣ್ಣ ರವೆ ಮತ್ತು ತುರಿದಿರುವ ತೆಂಗಿನ ತುರಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಗೋಧಿ ಹಿಟ್ಟು ಮತ್ತು ಹಾಲನ್ನು ಹಾಕಿ ಗಂಟಿಲ್ಲದೆ ವಿಸ್ಕ್ (whisk) ನಿಂದ ಕಲಸಿಕೊಳ್ಳಿ.
- ಪ್ಯಾನ್ ಕೇಕ್ ಮಾಡುವುದಕ್ಕಿಂತ ಮುಂಚೆ ಸಮಯವಿದ್ದರೆ 5 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಮಧ್ಯಮ ಉರಿಯಲ್ಲಿ ಪ್ಯಾನ್ ಅಥವಾ ಕಾವಲಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಕಾವಲಿಯ ಮೇಲೆ ದೋಸೆ ತರಹ ಹರಡಿ ಸ್ವಲ್ಪ ತುಪ್ಪ ಹಾಕಿ ಬೇಯಿಸಿ.
- ಪ್ಯಾನ್ ಕೇಕ್ ಮೊಗಚಿ ಎರಡು ಕಡೆ ಚೆನ್ನಾಗಿ ಬೇಯಿಸಿ. ಗೋಧಿ ಪ್ಯಾನ್ ಕೇಕ್ ಸಿದ್ಧವಾಗಿದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ
ಗೋಧಿ ಪ್ಯಾನ್ ಕೇಕ್ | Whole Wheat Pancake in Kannada
ಪ್ಯಾನ್ ಕೇಕ್ ಮಾಡಲು ಬೇಕಾಗುವ ಪದಾರ್ಥಗಳು :
- ಗೋಧಿ ಹಿಟ್ಟು – 1/2 ಕಪ್
- ಸಣ್ಣ ರವೆ – 2 tsp
- ಬಾಳೆ ಹಣ್ಣು – 1
- ಬೆಲ್ಲದ ಪುಡಿ – 1 tbsp
- ತೆಂಗಿನ ಕಾಯಿ – 1 tbsp ತುರಿದಿರುವ ಬೇಕಾದರೆ
- ಹಾಲು – 1/2 ಕಪ್
ಪ್ಯಾನ್ ಕೇಕ್ ಮಾಡುವ ವಿಧಾನ
೧. ಒಂದು ದೊಡ್ಡ ಬಟ್ಟಲಿಗೆ ಒಂದು ಕಳಿತ ಬಾಳೆಹಣ್ಣು ತೆಗೆದುಕೊಂಡು, ಸಿಪ್ಪೆ ತೆಗೆದು ಫೋರ್ಕ್ ಬಳಸಿ ಚೆನ್ನಾಗಿ ಮಸೆದುಕೊಳ್ಳಿ.
೨. ಮಸೆದ ಬಾಳೆ ಹಣ್ಣಿಗೆ ಬೆಲ್ಲ ಅಥವಾ ಸಕ್ಕರೆ ಪುಡಿ ಹಾಕಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಶುದ್ಧವಾದ ಬೆಲ್ಲದ ಪುಡಿ ಉಪಯೋಗಿಸಿ ಅಥವಾ ಖರ್ಜೂರದ ಸಿರಪ್/ ಬೆಲ್ಲದ ಸಿರಪ್ ಬಳಸಬಹುದು. 100% ಶುದ್ಧವಾದ ಜೈವಿಕ ಬೆಲ್ಲದ ಪುಡಿಯನ್ನು ಇಲ್ಲಿ ಖರೀದಿಸಬಹುದು.
೩. ತದನಂತರ ಸಣ್ಣ ರವೆ ಮತ್ತು ತುರಿದಿರುವ ತೆಂಗಿನ ತುರಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಗೋಧಿ ಹಿಟ್ಟು ಮತ್ತು ಹಾಲನ್ನು ಹಾಕಿ ಗಂಟಿಲ್ಲದೆ ವಿಸ್ಕ್ (whisk) ನಿಂದ ಕಲಸಿಕೊಳ್ಳಿ.
೪. ಪ್ಯಾನ್ ಕೇಕ್ ಮಾಡುವುದಕ್ಕಿಂತ ಮುಂಚೆ ಸಮಯವಿದ್ದರೆ 5 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಮಧ್ಯಮ ಉರಿಯಲ್ಲಿ ಪ್ಯಾನ್ ಅಥವಾ ಕಾವಲಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಕಾವಲಿಯ ಮೇಲೆ ದೋಸೆ ತರಹ ಹರಡಿ ಸ್ವಲ್ಪ ತುಪ್ಪ ಹಾಕಿ ಬೇಯಿಸಿ.
೫. ಪ್ಯಾನ್ ಕೇಕ್ ಮೊಗಚಿ ಎರಡು ಕಡೆ ಚೆನ್ನಾಗಿ ಬೇಯಿಸಿ. ಗೋಧಿ ಪ್ಯಾನ್ ಕೇಕ್ ಸಿದ್ಧವಾಗಿದೆ.
ಗೋಧಿ ಪ್ಯಾನ್ ಕೇಕ್ | Whole Wheat Pancake in Kannada
ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.