Spread the love

ಶಿಶುಗಳಲ್ಲಿ ಮೂತ್ರ ನಾಳದ ಸೋಂಕು | Urinary Tract Infection in Kannada

ಮೂತ್ರ ನಾಳದ ಸೋಂಕು ಎಂದರೇನು | ಶಿಶುಗಳಲ್ಲಿ ಮೂತ್ರ ನಾಳದ ಸೋಂಕು | ಮೂತ್ರದ ಸೋಂಕಿನ ತಡೆಗಟ್ಟುವಿಕೆ | ಮೂತ್ರದ ಸೋಂಕಿನ ಲಕ್ಷಣಗಳು | ಮೂತ್ರಕೋಶದ /ನಾಳ  ಸೋಂಕಿನ ಚಿಕಿತ್ಸೆಗಳು

UTI in Babies Urinary Tract Infection in Babies What is Urinary Tract Infection Causes of Urinary Tract Infection Diagnosis of Urinary Tract Infection Symptoms of urinary tract infection treatments of urinary tract infection test for urinary tract infection
ಶಿಶುಗಳು ಮತ್ತು ಮಕ್ಕಳಲ್ಲಿ ಮೂತ್ರ ನಾಳದ ಸೋಂಕು  ಬಹಳ ಸಾಮಾನ್ಯ. ಈ ಸೋಂಕಿನಿಂದ ಮಕ್ಕಳು ತೀವ್ರವಾಗಿ ಅಸ್ವಸ್ಥವಾಗಬಹುದು. ಚಿಕ್ಕ ಮಕ್ಕಳು ಸ್ಪಷ್ಟವಾಗಿ ತಮ್ಮ ಭಾವನೆ ವ್ಯಕ್ತ ಪಡಿಸಲಾಗದೆ ಇರುವ ಕಾರಣ ರೋಗಲಕ್ಷಣವನ್ನು ಕಂಡುಹಿಡಿಯುವುದು ಮತ್ತು ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಈ ಲೇಖನದಲ್ಲಿ ಮೂತ ನಾಳದ ಸೋಂಕು ಎಂದರೇನು, ಸೋಂಕಿಗೆ ಕಾರಣ,  ಲಕ್ಷಣ ಮತ್ತು ಗುಣಪಡಿಸುವುದರ ಬಗ್ಗೆ ಮತ್ತು  ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಲೇಖನ ಓದಿ.

(ಲೇಖನದ ಕೊನೆಯಲ್ಲಿ ವಿಡಿಯೋ ನೋಡಲು ಮರೆಯದಿರಿ)

ನಮ್ಮ ಬ್ಲಾಗ್‌ ನಲ್ಲಿ ಅನೇಕ ಉಪಯುಕ್ತ ಲೇಖನಗಳ ಲಿಂಕ್‌ಗಳನ್ನು ಪರಿಶೀಲಿಸಿ:

ಮೂತ್ರ ನಾಳದ ಸೋಂಕು ಎಂದರೇನು ?

UTI in Babies Urinary Tract Infection in Babies What is Urinary Tract Infection Causes of Urinary Tract Infection Diagnosis of Urinary Tract Infection Symptoms of urinary tract infection treatments of urinary tract infection test for urinary tract infection

ಮೂತ್ರ ನಾಳದ ಸೋಂಕು ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರ ಕೋಶ ಮತ್ತು ಮೂತ್ರನಳಿಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೂತ್ರದ ಸೋಂಕು ಮೂತ್ರನಾಳದಲ್ಲಿ  ಉಂಟಾಗುವ ಸೋಂಕು. ಇದು ಸಾಮಾನ್ಯವಾಗಿ ಮೂತ್ರ  ಕೋಶದಲ್ಲಿ ಪ್ರಾರಂಭವಾಗುತ್ತದೆ ಮತ್ತು ಕೆಲವೊಮ್ಮೆ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಮಲದಿಂದ ಬರುವ ಸೂಕ್ಷ್ಮಜೀವಿಗಳು ಮೂತ್ರನಾಳಕ್ಕೆ  ಮತ್ತು ನಂತರ ಮೂತ್ರ ಕೋಶಕ್ಕೆ ಬಂದಾಗ ಸಾಮಾನ್ಯವಾಗಿ ಸೋಂಕು ಸಂಭವಿಸುತ್ತದೆ.

ಶಿಶುಗಳು ಮತ್ತು ಮಕ್ಕಳಲ್ಲಿ ಮೂತ್ರ ನಾಳದ ಸೋಂಕಿನ ಲಕ್ಷಣಗಳು:

UTI in Babies Urinary Tract Infection in Babies What is Urinary Tract Infection Causes of Urinary Tract Infection Diagnosis of Urinary Tract Infection Symptoms of urinary tract infection treatments of urinary tract infection test for urinary tract infection

ಚಿಕ್ಕ ಮಕ್ಕಳಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು, ಅಧಿಕ ಬಾರಿ ಮೂತ್ರ ವಿಸರ್ಜಿಸುವುದು, ಹಾಸಿಗೆ ಒದ್ದೆಯಾಗುವುದು ಅಥವಾ ಮೂತ್ರ ಕೋಶದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವುದು ಮತ್ತು  ಮೂತ್ರದಲ್ಲಿ ರಕ್ತದ ಹನಿಗಳು ಕಾಣಿಸಿಕೊಳ್ಳುವುದು. ಹೆಚ್ಚು ಸೋಂಕಿನಿಂದ ಬಳಲುತ್ತಿರುವ ಶಿಶುಗಳಲ್ಲಿ ಮೂತ್ರ ವಿಸರ್ಜಿಸುವಾಗ ಅಳುವುದು, ದುರ್ವಾಸನೆ, ಒಂದೇ ಸತಿ ಪೂರ್ತಿ ಮೂತ್ರ ವಿಸರ್ಜಿಸಲು ಸಾಧ್ಯವಾಗದಿದ್ದರೆ, ಜ್ವರ, ವಾಕರಿಕೆ ಅಥವಾ ಅತಿಸಾರದ ಲಕ್ಷಣಗಲು ಕಾಣಿಸಿಕೊಳ್ಳುವುದು.

 ಶಿಶುಗಳು ಮತ್ತು ಮಕ್ಕಳಲ್ಲಿ ಮೂತ್ರ ನಾಳದ ಸೋಂಕಿಗೆ ಚಿಕಿತ್ಸೆ

UTI in Babies Urinary Tract Infection in Babies What is Urinary Tract Infection Causes of Urinary Tract Infection Diagnosis of Urinary Tract Infection Symptoms of urinary tract infection treatments of urinary tract infection test for urinary tract infection

ಮೂತ ನಾಳದ ಸೊಂಕನ್ನು ಪತ್ತೆಹಚ್ಚುವ ಏಕೈಕ ಮಾರ್ಗವೆಂದರೆ ಮೂತ್ರ ಪರೀಕ್ಷೆ. ಮೂತ್ರಪಿಂಡದ ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ  ಅಡೆತಡೆಗಳು ಕಂಡು ಬಂದಲ್ಲಿ ಮತ್ತು ಸರಿಯಾಗಿ  ಮೂತ್ರಪಿಂಡ ಕಾರ್ಯ ನಿರ್ವಹಣೆ ಆಗುತ್ತಿದಿಯೇ ಎಂದು ಪರಿಶೀಲಿಸಲು ಕೆಲವೊಮ್ಮೆ ಹೆಚ್ಚಿನ ತನಿಖೆ ಮತ್ತು ಪರೀಕ್ಷೆ ಅಗತ್ಯವಿರುತ್ತದೆ. ನ್ಯೂಕ್ಲಿಯರ್ ಸ್ಕ್ಯಾನ್ ಅಥವಾ ಎಂಆರ್ಐ ಅನ್ನು ಸಹ ಮಾಡಿಸ ಬೇಕಾಗ ಬಹುದು. ವೈದ್ಯರು  ಅಗತ್ಯವಿರುವಂತೆ ಪ್ರತಿಜೀವಕಗಳನ್ನು ಶಿಫಾರಸು ಮಾಡಬಹುದು ಮತ್ತು ಸೋಂಕು ಗುಣವಾಗಲು ಒಂದು ವಾರ ಬೇಕಾಗುತ್ತದೆ.

ಮೂತ ನಾಳದ ಸೋಂಕಿನ ತಡೆಗಟ್ಟುವಿಕೆ

  1. ಮಕ್ಕಳ ಡೈಪರ್ ಗಳನ್ನು ಹೆಚ್ಚಾಗಿ ಬದಲಾಯಿಸಬೇಕು..
  2. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದ ಶೌಚಾಲಯಕ್ಕೆ ಹೋಗುವ ತರಬೇತಿ ನೀಡುವುದು ಸೂಕ್ತ. 
  3. ದೊಡ್ಡ ಮಕ್ಕಳು ಮೂತ್ರ ವಿಸರ್ಜನೆಯನ್ನು ಹೆಚ್ಚು ಹೊತ್ತು ಹಿಡಿಯದಂತೆ ಸೂಚಿಸಿ.
  4. ಸೋಂಕು  ನಿವಾರಣೆಗೆ ಮಕ್ಕಳಿಗೆ ಸಾಕಷ್ಟು ದ್ರವಗಳನ್ನು ಕುಡಿಯಲು ಪ್ರೋತ್ಸಾಹಿಸಬೇಕು  ಮತ್ತು ಸ್ತನ್ಯಪಾನ ಅಥವಾ ಸೂತ್ರದ ಫಾರ್ಮುಲಾ ಹಾಲು ಮಗುವಿಗೆ ಹೆಚ್ಚು ಕುಡಿಸಬೇಕು.
  5. ಪ್ರತಿ 2 ಗಂಟೆಗಳಿಗೊಮ್ಮೆ ಜನನಾಂಗದ ಪ್ರದೇಶವನ್ನು ನೀರಿನಿಂದ ಸ್ವಚ್ಚ ಗೊಳಿಸಿ ಮತ್ತು ಸೋಪ್/ಸಾಬೂನು ಬಳಸಬೇಡಿ.

ಶಿಶುಗಳು ಮತ್ತು ಮಕ್ಕಳಲ್ಲಿ ಮೂತ್ರ ನಾಳದ ಸೋಂಕಿಗೆ ಸಂಬಂಧಿಸಿದ ವಿವರಗಳು ನೀಡಲಾಗಿದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಸೋಂಕು ಸಾಮಾನ್ಯವಾಗಿ ಹೆಚ್ಚು ಮತ್ತು ಸೊಂಕಾದಾಗ ಹೆಚ್ಚುವರಿ ಆರೈಕೆಯ ಅಗತ್ಯವಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವು ನೈರ್ಮಲ್ಯದ ಅಭ್ಯಾಸಗಳು ಪಾಲಿಸಿದರೆ ಸೋಂಕು ತಡೆಯಲು ಸಹಾಯ ವಾಗುತ್ತದೆ ಆದರೆ ಇದು ನೈರ್ಮಲ್ಯದ ಸಮಸ್ಯೆಗಳಿಂದ ಮಾತ್ರ ಸೋಂಕು ಆಗುವುದಿಲ್ಲ ಎಂದು ಗಮನಿಸಬಹುದು. ರೋಗಲಕ್ಷಣಗಳನ್ನು ಬೇಗ ಪರಿಶೀಲಿಸುವುದು ಮತ್ತು ಚಿಕಿತ್ಸೆ ನೀಡುವುದು ಉತ್ತಮ.

Video: ಶಿಶುಗಳಲ್ಲಿ ಮೂತ್ರ ನಾಳದ ಸೋಂಕು | Urinary Tract Infection in Kannada

Kannada Subscribe Button TOTS AND MOMS

ಶಿಶುಗಳಲ್ಲಿ ಮೂತ್ರ ನಾಳದ ಸೋಂಕು | Urinary Tract Infection in Kannada

UTI in Babies Urinary Tract Infection in Babies What is Urinary Tract Infection Causes of Urinary Tract Infection Diagnosis of Urinary Tract Infection Symptoms of urinary tract infection treatments of urinary tract infection test for urinary tract infection

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love