Spread the love
  • 10
    Shares

ಉದ್ದಿನಬೇಳೆ ಲಾಡು | Urad Dal Laddu recipe in KannadaUrad Dal Laddu - Best Winter Food and Great for Women kannada hindi recipe

ಉದ್ದಿನಬೇಳೆ ಲಾಡು ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿಭಕ್ಷ್ಯ. ಚಳಿಗಾಲದ ಬಯಕೆಗಾಗಿ ಉದ್ದಿನಬೇಳೆ ಲಾಡು ಅತ್ಯುತ್ತಮ ಪಾಕವಿಧಾನ. ಅನೇಕ ಸಾಂಪ್ರದಾಯಿಕ ಪದ್ಧತಿಯಲ್ಲಿ  ಉದ್ದಿನಬೇಳೆ ಲಾಡು ಚಳಿಗಾಲದ ಸಮಯದಲ್ಲಿ ನಿಯಮಿತವಾದ ರೀತಿಯಲ್ಲಿ ತಯಾರಿಸಲಾಗುತ್ತದೆ. ಮನೆಯಲ್ಲಿ ಆರೋಗ್ಯಕರ ಹಾಗು ರುಚಿಕರವಾದ ಲಾಡು ತಯಾರಿಸಬಹುದು. ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದ್ದಿನಬೇಳೆಯಲ್ಲಿ ಅಧಿಕ ಪ್ರಮಾಣದ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ ಹೊಂದಿರುತ್ತದೆ. ಉದ್ದಿನ ಬೇಳೆಯಲ್ಲಿ  ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು  ಮತ್ತು ಕೊಬ್ಬು ಸಮೃದ್ಧವಾಗಿರುತ್ತದೆ, ಉತ್ತಮ ತೂಕವನ್ನು ಪಡೆಯುವುದಕ್ಕೆ ಸಹಾಯಕ. ಹೃದಯ ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.  ಚರ್ಮಕ್ಕೆ  ಉತ್ತಮವಾಗಿರುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಭ್ರೂಣದಲ್ಲಿರುವ ಮಗುವಿನ ಮಿದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ ತಡೆಯುತ್ತದೆ.ದೇಹಕ್ಕೆ ಬೇಕಾಗುವ  ಪ್ರೋಟೀನ್ ಅವಶ್ಯಕತೆಯನ್ನು ತುಂಬುತ್ತದೆ. ಶಕ್ತಿ ಯುತವಾದ ಆಹಾರ. ಗರ್ಭಾವಸ್ಥೆಯಲ್ಲಿ ಉದ್ದಿನಬೇಳೆ ಲಾಡು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬಹುದು. ಆಂಧ್ರದಲ್ಲಿ ಉದ್ದಿನಬೇಳೆ ಲಾಡು ಸನ್ನುನ್ದಳು ಎಂದು ಕರೆಯುತ್ತಾರೆ. ಈ ಪಾಕವಿಧಾನ ಹೆಚ್ಚು ಆರೋಗ್ಯಕರ ಮಾಡಲು TOTS AND MOMS FOODS  ನಲ್ಲಿ ದೊರೆಯುವ ಸಾವಯವ ಪಾಮ್ ಸಕ್ಕರೆ ಬಳಸಲಾಗಿದೆ.

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ :

Video:ಉದ್ದಿನಬೇಳೆ ಲಾಡು | Urad Dal Laddu recipe in Kannada

Kannada Subscribe Button TOTS AND MOMS

ಉದ್ದಿನಬೇಳೆ ಲಾಡು | Urad Dal Laddu recipe in Kannada

ಉದ್ದಿನಬೇಳೆ ಲಾಡು | Urad Dal Laddu recipe in Kannada

ಚಳಿಗಾಲದಲ್ಲಿ ಸುಲಭವಾಗಿ ಮಾಡಬಹುದಾದ ಲಾಡು. ಗರ್ಬಿಣಿ ಮಹಿಳೆಗೆ ಒಳ್ಳೆಯ ಪೌಷ್ಟಿಕ ಆಹಾರ,ರೋಗ ನಿರೋಧಕ ಶಕ್ತಿ ನೀಡುವ ಪ್ರೋಟೀನ್ ಯುಕ್ತ ಲಾಡು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಭಾರತೀಯ ಸ್ನಕ್ಕ್ಸ್
ತಿನಿಸು:ಸಿಹಿ ಭಕ್ಷ್ಯ

ಸಾಮಗ್ರಿಗಳು

  1. ಉದ್ದಿನ ಬೇಳೆ  - 2 ಕಪ್
  2. ಪಾಮ್ ಬೆಲ್ಲ - 1 ಕಪ್
  3. ಸಕ್ಕರೆ - 1 1/2 cup
  4. ತುಪ್ಪ - 2 tsp + 1/2 ಕಪ್
  5. ಗೋಡಂಬಿ - 20
  6. ಪಿಸ್ತಾ  - 10
  7. ಬಾದಾಮಿ  - 10

ವಿಧಾನ

  1. ದಪ್ಪ ತಳದ ಬಾಣಲೆಯಲ್ಲಿ ಉದ್ದಿನಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಮತ್ತು ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ. ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ.
  2. ತಣ್ಣಗಿರುವ ಹುರಿದ ಉದ್ದಿನಬೇಳೆಯನ್ನ ಮಿಕ್ಸರ್/ ಗ್ರೈಂಡರ್ ನಲ್ಲಿ ನಯವಾಗಿ ಪುಡಿ ಮಾಡಿಕೊಳ್ಳಿ. ಬೆಲ್ಲ ಹಾಕಿ 2-3 ಸತಿ ರುಬ್ಬಿ ಕೊಳ್ಳಿ.
  3. ಅದೇ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಗರಿಗರಿಯಾಗಿ ಹುರಿದುಕೊಳ್ಳಿ ಇದಕ್ಕೆ ಬೆಲ್ಲ ಮತ್ತು ಉದ್ದಿನಬೇಳೆ ಪುಡಿಯನ್ನು ಹಾಕಿ 2 ನಿಮಿಷ ಮಿಶ್ರಣ ಮಾಡಿ.
  4. ಗ್ಯಾಸ್ ಆರಿಸಿ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಸಿಹಿ ಜಾಸ್ತಿ ಬೇಕಾದಲ್ಲಿ ಸಕ್ಕರೆ ಪುಡಿ ಹಾಕಿಕೊಳ್ಳಿ.
  5. ಇದಕ್ಕೆ ಹುರಿದಿರುವ ಒಣ ಹಣ್ಣುಗಳು ಹಾಕಿ ಮಿಶ್ರಣ ಮಾಡಿ ಲಾಡು ಕಟ್ಟಿ. ಬೇಕಾದರೆ ತುಪ್ಪ ಹಾಕಿಕೊಳ್ಳಬಹುದು.
  6. ಆರೋಗ್ಯಕರ ಉದ್ದಿನಬೇಳೆ ಲಾಡು ತಯಾರಾಗಿದೆ.  

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಉದ್ದಿನಬೇಳೆ ಲಾಡು | Urad Dal Laddu recipe in KannadaUrad Dal Laddu - Best Winter Food and Great for Women kannada hindi recipe

ಉದ್ದಿನ ಬೇಳೆ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು :

  1. ಉದ್ದಿನ ಬೇಳೆ  – 2 ಕಪ್
  2. ಪಾಮ್ ಬೆಲ್ಲ – 1 ಕಪ್
  3. ಸಕ್ಕರೆ – 1 1/2 cup
  4. ತುಪ್ಪ – 2 tsp + 1/2 ಕಪ್
  5. ಗೋಡಂಬಿ – 20
  6. ಪಿಸ್ತಾ  – 10
  7. ಬಾದಾಮಿ  – 10

ಉದ್ದಿನಬೇಳೆ ಲಾಡು ಮಾಡುವ ವಿಧಾನ :

1. ದಪ್ಪ ತಳದ ಬಾಣಲೆಯಲ್ಲಿ ಉದ್ದಿನಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಮತ್ತು ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ. ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ.Urad Dal Laddu - Best Winter Food and Great for Women kannada hindi recipe

2. ತಣ್ಣಗಿರುವ ಹುರಿದ ಉದ್ದಿನಬೇಳೆಯನ್ನ ಮಿಕ್ಸರ್/ ಗ್ರೈಂಡರ್ ನಲ್ಲಿ ನಯವಾಗಿ ಪುಡಿ ಮಾಡಿಕೊಳ್ಳಿ. ಬೆಲ್ಲ ಹಾಕಿ 2-3 ಸತಿ ರುಬ್ಬಿ ಕೊಳ್ಳಿ.Urad Dal Laddu - Best Winter Food and Great for Women kannada hindi recipe

3. ಅದೇ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಗರಿಗರಿಯಾಗಿ ಹುರಿದುಕೊಳ್ಳಿ ಇದಕ್ಕೆ ಬೆಲ್ಲ ಮತ್ತು ಉದ್ದಿನಬೇಳೆ ಪುಡಿಯನ್ನು ಹಾಕಿ 2 ನಿಮಿಷ ಮಿಶ್ರಣ ಮಾಡಿ.Urad Dal Laddu - Best Winter Food and Great for Women kannada hindi recipe

4. ಗ್ಯಾಸ್ ಆರಿಸಿ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಸಿಹಿ ಜಾಸ್ತಿ ಬೇಕಾದಲ್ಲಿ ಸಕ್ಕರೆ ಪುಡಿ ಹಾಕಿಕೊಳ್ಳಿ.Urad Dal Laddu - Best Winter Food and Great for Women kannada hindi recipe

5. ಇದಕ್ಕೆ ಹುರಿದಿರುವ ಒಣ ಹಣ್ಣುಗಳು ಹಾಕಿ ಮಿಶ್ರಣ ಮಾಡಿ ಲಾಡು ಕಟ್ಟಿ. ಬೇಕಾದರೆ ತುಪ್ಪ ಹಾಕಿಕೊಳ್ಳಬಹುದು.Urad Dal Laddu - Best Winter Food and Great for Women kannada hindi recipe

6. ಆರೋಗ್ಯಕರ ಉದ್ದಿನಬೇಳೆ ಲಾಡು ತಯಾರಾಗಿದೆ.

ಉದ್ದಿನಬೇಳೆ ಲಾಡು | Urad Dal Laddu recipe in KannadaUrad Dal Laddu - Best Winter Food and Great for Women kannada hindi recipe

 ಸೂಚನೆ  :

  1. ಉದ್ದಿನ ಬೇಳೆ ಲಾಡುಗಳನ್ನು 7 ದಿನಗಳವರಗೆ ಶೇಖರಿಸಿಡಬಹುದು. ಮಾಡಿದ ತಕ್ಷಣ ತಿಂದರೆ ರುಚಿಯಾಗಿರುತ್ತದೆ.
  2. ಪಾಮ್ ಸಕ್ಕರೆ, ಕೊಕೊನಟ್ ಸಕ್ಕರೆ ಅಥವಾ ಸಕ್ಕರೆ ಹಾಕಿ ಲಾಡು ಮಾಡಬಹುದು.
  3. ಡ್ರೈ ಫ್ರುಟ್ಸ್ ಪುಡಿ ಅಥವಾ ಪ್ರತ್ಯೇಕ ಒಣ ಹಣ್ಣುಗಳ ಪುಡಿ ಹಾಕಿ ಮಕ್ಕಳಿಗೆ ನೀಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 10
    Shares