Spread the love
  • 106
    Shares

ಉದ್ದಿನ ಬೇಳೆಯಲ್ಲಿ  ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಸಮೃದ್ಧವಾಗಿರುತ್ತದೆ. ಶಿಶುಗಳಿಗೆ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುವ ಆಹಾರ. ಉದ್ದಿನ ಬೇಳೆಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ದೊರಕುವುದು. ಹೃದಯಕ್ಕೆ ಬಹಳ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಚರ್ಮಕ್ಕೆ ಉತ್ತಮ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಉದ್ದಿನ ಬೇಳೆ ಪ್ರಧಾನ ಆಹಾರವಾಗಿದ್ದು ಇದರಿಂದ  ಇಡ್ಲಿ, ದೋಸೆ, ವಡಾ ಮತ್ತು ಖಿಚಡಿಯನ್ನು ತಯಾರಿಸಲು ಬಳಸಲಾಗುವುದು.

ಉದ್ದಿನಬೇಳೆ ಸರಿ | Urad Dal Porridge Mix for Babies in Kannada

Urad Dal Cereal Porridge for Babies Split Black Gram Weight Gain uddinabele sari shishu makkalu

ಶಿಶುಗಳಿಗೆ ಸರಳ ಸಾಂಪ್ರದಾಯಿಕ ಉದ್ದಿನಬೇಳೆ ಸರಿಯನ್ನು ತಯಾರಿಸಲಾಗಿದೆ. ಉದ್ದಿನ ಬೇಳೆ ಸರಿ ಮಿಕ್ಸ್/ಮಿಶ್ರಣ  ಅಥವಾ ಗಂಜಿ ಅಕ್ಕಿ ಮತ್ತು ಓಟ್ಸ್ ಬಳಸಿ ಮಾಡಿರುವುದರಿಂದ ಇದರಲ್ಲಿ ಹೆಚ್ಚು ಪೌಷ್ಟಿಕಾಂಶವಿರುವುದು ಮತ್ತು ಶಿಶುಗಳಿಗೆ ಸಮತೋಲಿತ ಪೌಷ್ಟಿಕ ಆಹಾರ. ಉದ್ದಿನ ಬೇಳೆ ಸರಿಯನ್ನು 8 ತಿಂಗಳ ನಂತರ ಶಿಶುಗಳಿಗೆ ನೀಡಬಹುದು.
ಇಲ್ಲಿ ನೀವು ಹಲವು ಬಗೆಯ ಸರಿ/ಗಂಜಿ ಪಾಕವಿಧಾನಗಳ ಸಂಗ್ರಹವನ್ನು ನೋಡಬಹುದು. ಶಿಶುಗಳಿಗೆ ಘನ ಆಹಾರವನ್ನು ಪ್ರಾರಂಭಿಸಿದಾಗ  ಅನೇಕ ಪ್ಯೂರಿ ಪಾಕವಿಧಾನಗಳ ಸಂಗ್ರಹವನ್ನು ಇಲ್ಲಿ ಪರಿಶೀಲಿಸಿ. ಪ್ರಯಾಣಕ್ಕೆ ಅನುಕೂಲಕರವಾಗಿರುವ ತ್ವರಿತ ಶಿಶು ಆಹಾರಗಳನ್ನು ಮನೆಯಲ್ಲೇ ಮಾಡುವ ವಿಧಾನಕ್ಕೆ ಉಪಯುಕ್ತ ಪಾಕವಿಧಾನಗಳಿವೆ. ನಮ್ಮ ಎಲ್ಲಾ ಹೊಸ ಪಾಕವಿಧಾನಗಳಿಗೆ ಮತ್ತು ಅಪ್ಡೇಟ್ ಗೆ ನಮ್ಮ ಕನ್ನಡ YouTube ಚಾನಲ್ subscribe ಮಾಡಲು ಮರೆಯಬೇಡಿ.

Video : ಉದ್ದಿನಬೇಳೆ ಸರಿ | Urad Dal Porridge Mix for Babies in Kannada

Kannada Subscribe Button TOTS AND MOMS

 ಉದ್ದಿನಬೇಳೆ ಸರಿ | Urad Dal Porridge Mix for Babies in Kannada

ಉದ್ದಿನ ಬೇಳೆ ಸರಿ

ಉದ್ದಿನ ಬೇಳೆ ಸರಿ ಮಿಕ್ಸ್/ಮಿಶ್ರಣ ಅಥವಾ ಗಂಜಿ ಅಕ್ಕಿ ಮತ್ತು ಓಟ್ಸ್ ಬಳಸಿ ಮಾಡಿರುವುದರಿಂದ ಇದರಲ್ಲಿ ಹೆಚ್ಚು ಪೌಷ್ಟಿಕಾಂಶವಿರುವುದು ಮತ್ತು ಶಿಶುಗಳಿಗೆ ಸಮತೋಲಿತ ಪೌಷ್ಟಿಕ ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಉದ್ದಿನ ಬೇಳೆ- 1/2 ಕಪ್
  2. ಅಕ್ಕಿ - 1/2 ಕಪ್
  3. ಓಟ್ಸ್- 2 tbsp
  4. ಚಕ್ಕೆ - 1/2 ಇಂಚು
  5. ಬಾದಾಮಿ - 5

ವಿಧಾನ

  1. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ತೆಗೆದುಕೊಂಡು ಬರಿ ಉದ್ದಿನಬೇಳೆ ಹಾಕಿ ಚೆನ್ನಾಗಿ ಬಣ್ಣ ಬದಲಾಗಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ.
  2. ಅದೇ ಬಾಣಲೆಗೆ ಅಕ್ಕಿ ಹಾಕಿ ಸಿಡಿಯುವ ತನಕ ಹುರಿದುಕೊಳ್ಳಿ. ತದನಂತರ ಬಾದಾಮಿ ಮತ್ತು ಚಕ್ಕೆ ಹಾಕಿ 3-4 ನಿಮಿಷ ಹುರಿದುಕೊಳ್ಳಿ.
  3. ಓಟ್ಸ್ ಹಾಕಿ ಒಂದು ನಿಮಿಷದ ತನಕ ಹುರಿದು ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ತಟ್ಟೆಗೆ ಹಾಕಿ..
  4. ತಣ್ಣಗಾದ ನಂತರ ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ. ಉದ್ದಿನಬೇಳೆ ಸರಿಯ ಪುಡಿಯನ್ನು ಗಾಜಿನ ಡಬ್ಬದಲ್ಲಿ ಶಖರಿಸಿಟ್ಟುಕೊಂಡು 4 ತಿಂಗಳು ಉಪಯೋಗಿಸಬಹುದು.  ಸಣ್ಣ ಪ್ರಮಾಣದಲ್ಲಿ ತಾಜಾ ತಯಾರಿಸಿಕೊಳ್ಳುವುದು ಒಳ್ಳೆಯದು.
  5. ಉದ್ದಿನಬೇಳೆ ಸರಿ ಮಾಡಲು ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ 2 tbsp ಸರಿ ಪುಡಿ ಹಾಕಿ 1 ಕಪ್ ನೀರು ಅಥವಾ ಹಾಲು ಬಳಸಿ ಗಂಟಿಲ್ಲದೆ ಮಿಶ್ರಣ ಮಾಡಿಕೊಂಡು ನಂತರ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿ ಒಂದು ಚಮಚ ತುಪ್ಪ ಮತ್ತು ಬೆಲ್ಲದ ಸಿರಪ್ ಬೇಕಾದರೆ ಬಳಸಬಹುದು.
  6. ಉದ್ದಿನಬೇಳೆ ಸರಿ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಉದ್ದಿನಬೇಳೆ ಸರಿ | Urad Dal Porridge Mix for Babies in Kannada

Urad Dal Cereal Porridge for Babies Split Black Gram Weight Gain uddinabele sari shishu makkalu

ಉದ್ದಿನಬೇಳೆ ಸರಿ ಮಾಡಲು ಬೇಕಾಗಿರುವ ಸಾಮಗ್ರಿಗಳು :

  1. ಉದ್ದಿನ ಬೇಳೆ– 1/2 ಕಪ್
  2. ಅಕ್ಕಿ – 1/2 ಕಪ್
  3. ಓಟ್ಸ್– 2 tbsp
  4. ಚಕ್ಕೆ – 1/2 ಇಂಚು
  5. ಬಾದಾಮಿ – 5

ಉದ್ದಿನಬೇಳೆ ಸರಿ ಮಾಡುವ ವಿಧಾನ :

1. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ತೆಗೆದುಕೊಂಡು ಬರಿ ಉದ್ದಿನಬೇಳೆ ಹಾಕಿ ಚೆನ್ನಾಗಿ ಬಣ್ಣ ಬದಲಾಗಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ.

Urad Dal Cereal | Split Black Lentil Porridge Mix for Babies | Weight Gaining Food

2. ಅದೇ ಬಾಣಲೆಗೆ ಅಕ್ಕಿ ಹಾಕಿ ಸಿಡಿಯುವ ತನಕ ಹುರಿದುಕೊಳ್ಳಿ. ತದನಂತರ ಬಾದಾಮಿ ಮತ್ತು ಚಕ್ಕೆ ಹಾಕಿ 3-4 ನಿಮಿಷ ಹುರಿದುಕೊಳ್ಳಿ.
Urad Dal Cereal | Split Black Lentil Porridge Mix for Babies | Weight Gaining Food

3. ಓಟ್ಸ್ ಹಾಕಿ ಒಂದು ನಿಮಿಷದ ತನಕ ಹುರಿದು ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ತಟ್ಟೆಗೆ ಹಾಕಿ.
Urad Dal Cereal | Split Black Lentil Porridge Mix for Babies | Weight Gaining Food

4. ತಣ್ಣಗಾದ ನಂತರ ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ. ಉದ್ದಿನಬೇಳೆ ಸರಿಯ ಪುಡಿಯನ್ನು ಗಾಜಿನ ಡಬ್ಬದಲ್ಲಿ ಶಖರಿಸಿಟ್ಟುಕೊಂಡು 4 ತಿಂಗಳು ಉಪಯೋಗಿಸಬಹುದು.  ಸಣ್ಣ ಪ್ರಮಾಣದಲ್ಲಿ ತಾಜಾ ತಯಾರಿಸಿಕೊಳ್ಳುವುದು ಒಳ್ಳೆಯದು.
Urad Dal Cereal | Split Black Lentil Porridge Mix for Babies | Weight Gaining Food

5. ಉದ್ದಿನಬೇಳೆ ಸರಿ ಮಾಡಲು ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ 2 tbsp ಸರಿ ಪುಡಿ ಹಾಕಿ 1 ಕಪ್ ನೀರು ಅಥವಾ ಹಾಲು ಬಳಸಿ ಗಂಟಿಲ್ಲದೆ ಮಿಶ್ರಣ ಮಾಡಿಕೊಂಡು ನಂತರ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿ ಒಂದು ಚಮಚ ತುಪ್ಪ ಮತ್ತು ಬೆಲ್ಲದ ಸಿರಪ್ ಬೇಕಾದರೆ ಬಳಸಬಹುದು.

Urad Dal Cereal | Split Black Lentil Porridge Mix for Babies | Weight Gaining Food

6. ಉದ್ದಿನಬೇಳೆ ಸರಿ ಸಿದ್ಧವಾಗಿದೆ.

ಉದ್ದಿನಬೇಳೆ ಸರಿ | Urad Dal Porridge Mix for Babies in Kannada
Urad Dal Cereal Porridge for Babies Split Black Gram Weight Gain uddinabele sari shishu makkalu

ಸೂಚನೆ :

1. ಹೊಸ ಆಹಾರವನ್ನು ಪರಿಚಯಿಸುವಾಗ ಶಿಶು ತಜ್ಞರ ಸಲಹೆ ತೆಗೆದುಕೊಳ್ಳುವುದು ಉತ್ತಮ.

2. ಸರಿ ಚೆನ್ನಾಗಿ ರುವುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ಶಿಶುಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳನ್ನು ತಪ್ಪಿಸಲು,

3. ಮಗುವಿಗೆ ವಾಯುವಿನ ಸಮಸ್ಯೆ ಇದ್ದರೆ ಇಂಗು ಅಥವಾ ಶುಂಠಿಯ ಪುಡಿಯನ್ನು ಚಿಟಕೆ ಸೇರಿಸಿ ಸರಿ ತಯಾರಿಸಬಹುದು.

4. ಬೇಯಿಸಿ ಸಿದ್ಧಪಡಿಸಿದ ಸರಿಯನ್ನು 2 ಗಂಟೆಗಳ ನಂತರ (ಯಾವುದೇ ಸರಿಯನ್ನು) ಮರುಬಳಕೆ ಮಾಡಬೇಡಿ.


Spread the love
  • 106
    Shares