Spread the love
  • 1
    Share

ತುಳಸಿ ಕಷಾಯ | TULSI KASHAYA – Cough & Cold Home Remedy in Kannada How to make Tulsi Kashaya for babies kids cold cough remedy kannada

5000 ಕ್ಕಿಂತ ಹೆಚ್ಚು ವರ್ಷಗಳ ಕಾಲ ತುಳಸಿ ಗಿಡ ಮೂಲಿಕೆ ದೇಹ, ಮನಸ್ಸು ಮತ್ತು ಅರೋಗ್ಯ ಉತ್ತೇಜಿಸುವ ಗುಣಲಕ್ಷಣಗಳಿಗಾಗಿ ಹೆಸರುವಾಸಿಯಾಗಿದೆ. ತುಳಸಿ ಕಷಾಯ ಕೆಮ್ಮು ಮತ್ತು ಶೀತಕ್ಕೆ ಸೂಕ್ತ ಪರಿಹಾರವಾಗಿದೆ. ಶೀತ ಮತ್ತು ಕೆಮ್ಮಿನ ಮೊದಲ ಚಿಹ್ನೆಗಳು ಕಂಡುಬಂದಾಗ ಇದನ್ನು ಮಕ್ಕಳಿಗೆ ಮತ್ತು ವಯಸ್ಕರಲ್ಲಿ ನೀಡಬಹುದು. ಆಯುರ್ವೇದ ಅಥವಾ ಮನೆಯ ಪರಿಹಾರೋಪಾಯಗಳ ಉಪಯೋಗದಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳು ಏರುವುದಿಲ್ಲ. ದಿನಕ್ಕೆ ಎರಡು ಬಾರಿ ಕಷಾಯವನ್ನು ಕುಡಿಯುವುದರಿಂದ ವೈದ್ಯರ ಭೇಟಿಯನ್ನು ತಪ್ಪಿಸಲು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಉತ್ತಮ ಫಲಿತಾಂಶಗಳಿಗಾಗಿ ಆಯುರ್ವೇದ ಅಥವಾ ಮನೆಯ ಪರಿಹಾರೋಪಾಯಗಳನ್ನು ಬಳಸಬೇಕು.

ಮಕ್ಕಳು ಹಾಗು ವಯಸ್ಕರಿಗೆ ತುಳಸಿ ಚಹಾ ಅಥವಾ ತುಳಸಿ ಕಷಾಯವನ್ನು ನೀಡಬಹುದು. ಮಕ್ಕಳಿಗಾಗಿ ಸಾಕಷ್ಟು ವಿಶ್ರಾಂತಿ ಸಿಗುತ್ತದೆ ಎರಡು ಬಾರಿ ಇದನ್ನು ತೆಗೆದುಕೊಳ್ಳಬೇಕು 12 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ತುಳಸಿಯ ಪ್ರಯೋಜನಗಳು

  • ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
  • ಕೆಮ್ಮು ಶಾಂತಗೊಳಿಸಲು  ಪರಿಣಾಮಕಾರಿ  ಮತ್ತು ಒತ್ತಡಕ್ಕೆ ಒಳ್ಳೆಯ  ಪರಿಹಾರ ಒದಗಿಸುವುದು
  • ರೋಗ  ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುವುದು.
  • ತೀವ್ರವಾಗಿ ಸುರಿಯುವ  ಮೂಗು, ಶೀತ ಮತ್ತು ಕೆಮ್ಮಿಗೆ  ತ್ವರಿತ ಪರಿಣಾಮ ಬೀರುತ್ತದೆ.

ಕಾಳು ಮೆಣಸಿನ ಪ್ರಯೋಜನಗಳು 

  • ಶೀತ ಮತ್ತು ಕೆಮ್ಮಿನಿಂದ ದೂರವಿರಬಹುದು 
  • ಸೋಂಕುಗಳ ವಿರುದ್ಧ ಹೋರಾಡುತ್ತದೆ.
  • ಉಸಿರಾಟದ ಸ್ಥಿತಿಗತಿಗಳಿಗೆ ಇದು ಒಳ್ಳೆಯ ಚಿಕಿತ್ಸೆ ನೀಡುತ್ತದೆ.

ಬೆಲ್ಲದ ಪ್ರಯೋಜನಗಳು

  • ಜ್ವರದ  ರೋಗಲಕ್ಷಣಗಳು ಪರಿಹಾರವಾಗುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುವುದು.

Video: ತುಳಸಿ ಕಷಾಯ | TULSI KASHAYA – Cough & Cold Home Remedy in Kannada

Kannada Subscribe Button TOTS AND MOMS

ತುಳಸಿ ಕಷಾಯ | TULSI KASHAYA - Cough & Cold Home Remedy in Kannada

ತುಳಸಿ ಕಷಾಯ ಅಥವಾ ತುಳಸಿ ಚಹಾ ತುಳಸಿ ಮತ್ತು ಇತರ ಗಿಡಮೂಲಿಕೆಗಳ ಕಷಾಯವಾಗಿದೆ. ಮೊದಲ ಹಂತದಲ್ಲಿ ಶೀತ ಮತ್ತು ಕೆಮ್ಮೆನ್ನು ಗುಣಪಡಿಸಲು ಅತ್ಯುತ್ತಮವಾದ ಮನೆ ಮದ್ದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಮನೆ ಮದ್ಧು / ಪರಿಹಾರಗಳು
ತಿನಿಸು:ಭಾರತೀಯ

ಸಾಮಗ್ರಿಗಳು

  1. ತುಳಸಿ (ಭಾರತೀಯ ತುಳಸಿ) ಎಲೆಗಳು - 10 ಎಲೆಗಳು
  2. ನೀರು - 1 ಕಪ್
  3. ಕಾಳು ಮೆಣಸು  - 2 ಕಾಳು (ಪುಡಿಮಾಡಿದ)
  4. ಬೆಲ್ಲ - 1 ಟೀಸ್ಪೂನ್ /ಚಮಚ 

ವಿಧಾನ

  1. ಪಾತ್ರೆಯಲ್ಲಿ 1 ಕಪ್ ನೀರು, ತುಳಸಿ ಎಲೆಗಳನ್ನು ಹಾಕಿ.
  2. ಪುಡಿಮಾಡಿದ ಮೆಣಸು ಮತ್ತು ಬೆಲ್ಲ ಸೇರಿಸಿ.
  3. 5 -10 ನಿಮಿಷಗಳ ಕಾಲ, ಮಿಶ್ರಣದ ಬಣ್ಣ ಬದಲಾಗುವವರಗೆ ಕುದಿಸಿ.
  4. ಮಿಶ್ರಣವನ್ನು ಶೋಧಿಸಿ. ವಯಸ್ಕರಿಗೆ ಬಿಸಿಯಾಗಿ ಮತ್ತು ಮಕ್ಕಳಿಗೆ ಬೆಚ್ಚಗೆ ಕೊಡಬಹುದು.
  5. ತುಳಸಿ ಕಷಾಯ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ತುಳಸಿ ಕಷಾಯ | TULSI KASHAYA – Cough & Cold Home Remedy in Kannada

ತುಳಸಿ ಕಷಾಯ ಮಾಡುವ ವಿಧಾನ :

1. ಪಾತ್ರೆಯಲ್ಲಿ 1 ಕಪ್ ನೀರು, ತುಳಸಿ ಎಲೆಗಳನ್ನು ಹಾಕಿ. How to make tulsi kashaya for babies kids 2. ಪುಡಿಮಾಡಿದ ಮೆಣಸು ಮತ್ತು ಬೆಲ್ಲ ಸೇರಿಸಿ. How to make tulsi kashaya for babies kids 3. 5 -10 ನಿಮಿಷಗಳ ಕಾಲ, ಮಿಶ್ರಣದ ಬಣ್ಣ ಬದಲಾಗುವವರಗೆ ಕುದಿಸಿ. Tulsi Kashaya cough and cold home remedy for baby kid child 4. ಮಿಶ್ರಣವನ್ನು ಶೋಧಿಸಿ. ವಯಸ್ಕರಿಗೆ ಬಿಸಿಯಾಗಿ ಮತ್ತು ಮಕ್ಕಳಿಗೆ ಬೆಚ್ಚಗೆ ಕೊಡಬಹುದು. Tulsi Kashaya cough and cold home remedy for baby kid child 5. ತುಳಸಿ ಕಷಾಯ ಸಿದ್ಧವಾಗಿದೆ.

ತುಳಸಿ ಕಷಾಯ | TULSI KASHAYA – Cough & Cold Home Remedy in Kannada How to make Tulsi Kashaya for babies kids cold cough remedy kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 1
    Share