Spread the love

ರೋಗವನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ರೋಗ ನಿರೋಧಕ ಶಕ್ತಿ ಎನ್ನುತ್ತೇವೆ. ವೈರಸ್ ಗಳಿಂದ ಮತ್ತು ವಿವಿಧ ರೀತಿಯ ಸೋಂಕಿನಿಂದ ರಕ್ಷಣೆಗೆ ಪ್ರತಿರೋಧಕ ಶಕ್ತಿ ಅತ್ಯಗತ್ಯ.ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವುದು ಜೀವಮಾನದ ಪ್ರಕ್ರಿಯೆಯಾಗಿದೆ. ಪೋಷಕರಾಗಿ ನಾವು ಮಗುವು ಜನಿಸಿದ ನಂತರ, ಪ್ರತಿರಕ್ಷೆಯನ್ನು ಸುಧಾರಿಸಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡೋಣ. ಪ್ರಸ್ತುತ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ದಿನೇ ದಿನೇ ಕುಸಿಯುತ್ತಿದೆ. ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಹೊರತಾಗಿಯೂ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.ಕಾಲ ಕ್ರಮೇಣ ನಾವು ಮಕ್ಕಳಲ್ಲಿ  ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸಬಹುದೇ? ಇದು ಅನುವಂಶಿಕವೆ ? ನಿರ್ದಿಷ್ಟ ಅವಧಿಯ ನಂತರವು ಪ್ರತಿರಕ್ಷೆಯನ್ನು ನಿರ್ಮಿಸಲು ಪುನಃ ಪ್ರಯತ್ನಿಸಬಹುದೇ?

ರೋಗನಿರೋಧಕ ಶಕ್ತಿ ಹೆಚ್ಚಿಸಲು 10 ಸಲಹೆಗಳು

Tips to Increase Immunity in Babies and Kids | How to boost immunity Kannada hindi

ಅನೇಕ ಪ್ರಶ್ನೆಗಳು ಉದ್ಭವಿಸುವುದು, ಮತ್ತು ಪ್ರತಿ ಮಗುವು ಅನನ್ಯವಾಗಿರುತ್ತಾರೆ ಹಾಗು ಪ್ರತಿರಕ್ಷಣೆಯು ವಿಭಿನ್ನವಾಗಿರುವುದು. ವಿಶೇಷ ವೈದ್ಯಕೀಯ ಆರೈಕೆ ಅಥವಾ ಅವಶಯ್ಕತೆಗೆ ಅಗತ್ಯವಿರುವ ರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಅಭಿವೃದ್ಧಿಪಡಿಸಲು ಮತ್ತು ಉತ್ತಮ ವಿನಾಯಿತಿಯನ್ನು (immunity) ನಿರ್ಮಿಸಲು ಸಹಾಯ ಮಾಡುವ ಅನೇಕ ಅಂಶಗಳು ಖಂಡಿತವಾಗಿಯೂ ಇವೆ!

ರೋಗನಿರೋಧಕ ಶಕ್ತಿ ಹೆಚ್ಚಿಸಲು 10 ಸಲಹೆಗಳು

(ಈ ಲೇಖನದ ಕೊನೆಯಲ್ಲಿರುವ ವೀಡಿಯೊ ನೋಡಲು ಮರೆಯದಿರಿ)

Tips to Increase Immunity in Babies and Kids | How to boost immunity Kannada hindi

1. ಸ್ತನ್ಯಪಾನ Breastfeed:

Tips to Increase Immunity in Babies and Kids | How to boost immunity Kannada hindi
ತಾಯಿಯ ಎದೆ ಹಾಲು ಮಕ್ಕಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ಎದೆ ಹಾಲಿನಲ್ಲಿ ಕಂಡುಬರುವ ಪ್ರತಿಕಾಯಗಳು (Antibodies )ಸೋಂಕನ್ನು ಮತ್ತು ಇತರ ವೈರಸ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಮೊದಲ 6 ತಿಂಗಳ ಕಾಲ ಮಗುವಿಗೆ ಪ್ರತ್ಯೇಕವಾಗಿ ಎದೆಹಾಲು ಮಾತ್ರ ನೀಡಬೇಕು. ಎದೆಹಾಲು ಹೆಚ್ಚಿಸಲು ಮತ್ತು ಫಾರ್ಮುಲ ಹಾಲನ್ನು ತಪ್ಪಿಸಲು ಹಲವು ನೈಸರ್ಗಿಕ ವಿಧಾನಗಳಿವೆ. ಅಗತ್ಯವಿದ್ದರೆ ವೈದ್ಯರ (ಲ್ಯಾಕ್ಟೇಶನ್ ಕನ್ಸಲ್ಟೆಂಟ್ಸ್ ) ಸಲಹೆ ಮತ್ತು ಸಹಾಯ ಪಡೆಯಬಹುದು.


2. ಉತ್ತಮ ಸಮತೋಲಿತ ಪೌಷ್ಟಿಕ ಆಹಾರ Good Nutrition:

Tips to Increase Immunity in Babies and Kids | How to boost immunity Kannada hindi
ಪ್ರತಿಯೊಂದು ಹಣ್ಣು ಅಥವಾ ತರಕಾರಿಗಳಲ್ಲಿ ವಿವಿಧ ರೀತಿಯ ಪೌಷ್ಟಿಕ ಅಂಶಗಳು ಹೊಂದಿರುತ್ತದೆ. ಕೆಲವುದರಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದು. ಇನ್ನು ಕೆಲವುದರಲ್ಲಿ ಪೊಟ್ಯಾಸಿಯಮ್ ಅಥವಾ ಮೆಗ್ನೀಸಿಯಮ್ ಗಳು ಲಭ್ಯವಿರುತ್ತದೆ. ಕೆಲವು ಹಣ್ಣು ಮತ್ತು ತರಕಾರಿಗಳಲ್ಲಿ ಕಬ್ಬಿಣ ಮತ್ತು ಇತರ ಪ್ರೋಟೀನ್ ದೊರೆಯುತ್ತದೆ. ಮಗುವಿಗೆ ಅಗತ್ಯವಾದ ಪೌಷ್ಠಿಕಾಂಶಕ್ಕೆ ವಿವಿಧ ಆಹಾರ ಮತ್ತು ತರಕಾರಿಗಳನ್ನು ಪರಿಚಯಿಸುವ ಅಗತ್ಯವಿರುತ್ತದೆ, ಇದರಿಂದ ದೇಹ ಸಾಕಷ್ಟು ಪ್ರತಿಕಾಯಗಳನ್ನು ತಯಾರಿಸಲು ಸಹಾಯಕ. ಋತುಮಾನದ ಹಣ್ಣುಗಳು ಅಥವಾ ತರಕಾರಿಗಳು ಸುಲಭವಾಗಿ ದೊರೆಯುವುದು ಮತ್ತು ಉತ್ತಮವಾದ ಆಯ್ಕೆಯಲ್ಲಿ ಒಂದು.

Check out Immunity Boosting Foods for Babies from our Shop : Kerala Banana Powder, Sprouted Health Mix, Dry Fruits Powder, Millets Health Mix


3. ದೈಹಿಕ ವ್ಯಾಯಾಮ Physical exercise:

Tips to Increase Immunity in Babies and Kids | How to boost immunity Kannada hindi

ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಕಠಿಣ ಮತ್ತು ಬಿಗಿಯಾಗುವುದು. ಶಿಶುಗಳನ್ನು ಸದಾ ಎತ್ತಿಕೊಳ್ಳುವುದರಿಂದ ಎಲ್ಲಾ ದೇಹದ ಭಾಗಗಳನ್ನು ಸರಿಸಲು ಸಾಧ್ಯ ಆಗುವುದಿಲ್ಲ. ಮಕ್ಕಳನ್ನು ಮುಕ್ತ ಪ್ರದೇಶಗಳಲ್ಲಿ ಆಡಲುಬಿಡಬೇಕು, ತೆರೆದ ಪ್ರದೇಶಗಳಲ್ಲಿ ಓಡುವುದರಿಂದ ಸಕ್ರಿಯರಾಗಿರುತ್ತಾರೆ. ಆಟಕ್ಕೆ ಸೂಕ್ತ ಸಮಯವನ್ನು ನಿಗಧಿಪಡಿಸಿ ಮತ್ತು ಮುಕ್ತವಾಗಿ ಆಟವಾಡಲು ಹಾಗು ಅನ್ವೇಷಿಸಲು ಅವಕಾಶ ಮಾಡಿಕೊಡಿ. ನಗರದಲ್ಲಿ ಆಟ ಆಡುವ ಪ್ರದೇಶಗಳು ಮಕ್ಕಳಿಗೆ ಸಕ್ರಿಯಾವಾಗಿರಿಸಲು ಅತ್ಯುತ್ತಮ ಆಯ್ಕೆಯಾಗಿದೆ.
ಓದಿ: ಒಳಾಂಗಣ ಆಟದ ಪ್ರದೇಶಗಳು | ಬೆಂಗಳೂರಿನಲ್ಲಿ ಕಿಡ್ಸ್ ಪ್ಲೇ ಸ್ಟೇಷನ್ ಗಳು


4. ಸಾಕಷ್ಟು ನಿದ್ದೆ Enough sleep :

Tips to Increase Immunity in Babies and Kids | How to boost immunity Kannada hindi
ಮಕ್ಕಳ ದೇಹದ ಸಂಪೂರ್ಣ ವ್ಯವಸ್ಥೆಗೆ ಅಡಚಣೆಯ ನಿದ್ರೆ ಅಥವಾ ಕಡಿಮೆ ನಿದ್ರೆ ಅಸಮತೋಲನವನ್ನು ಉಂಟುಮಾಡುವುದು. ವಯಸ್ಸಿಗೆ ಅಗತ್ಯವಾದ ನಿಗದಿತ ನಿದ್ರೆಯ ಗಂಟೆಗಳ ಮಾರ್ಗಸೂಚಿಗಳಿವೆ ಅದನ್ನು ಅನುಸರಿಸಬಹುದು. ಶಿಶುಗಳಿಗೆ 11-14 ಗಂಟೆಗಳ ನಿದ್ರೆ ಬೇಕು, ಮತ್ತು ಅಂಬೆಗಾಲಿಡುವ ಮಕ್ಕಳಿಗೆ ದಿನಕ್ಕೆ 10-12 ಗಂಟೆಗಳ ಅಗತ್ಯವಿದೆ. ಸರಾಸರಿ 8 ರಿಂದ 10 ಗಂಟೆಗಳ ನಿದ್ರೆ ಅವಶ್ಯಕ.
ಓದಿ: : ಭಾರತೀಯ ಶಿಶುಗಳಿಗೆ ಮತ್ತು ಅಂಬೆಗಾಲಿಡುವ ಮಕ್ಕಳಿಗೆ ನಿದ್ರೆಯ ಸಲಹೆಗಳು


5. ಆರೋಗ್ಯಕರವಾದ ಆಹಾರ Hygiene habits:

Tips to Increase Immunity in Babies and Kids | How to boost immunity Kannada hindi
ಉತ್ತಮ ಆರೋಗ್ಯಕರ ನೈರ್ಮಲ್ಯ ಅಭ್ಯಾಸವೆಂದರೆ ಸ್ಯಾನಿಟೈಸರ್ಗಳನ್ನು ಬಳಸುವುದಲ್ಲ. ಸ್ಯಾನಿಟೈಸರ್ಗಳ ಅತಿಯಾದ ಬಳಕೆ ಕೆಟ್ಟ ಬ್ಯಾಕ್ಟೀರಿಯಾದೊಂದಿಗೆ ಉತ್ತಮ ಬ್ಯಾಕ್ಟೀರಿಯಾಗಳ ಅಸಮತೋಲನವನ್ನು ಉಂಟುಮಾಡುವುದು. ನೀರಿನಿಂದ ಕೈಯನ್ನು ಚೆನ್ನಾಗಿ ತೊಳೆಯುವುದು ಸುರಕ್ಷಿತ ಮತ್ತು ಆರೋಗ್ಯಕರ ಪದ್ಧತಿ. ಶೌಚಾಲಯ ಕೊಠಡಿಯನ್ನು ಬಳಸಿದ ನಂತರ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು ಒಳ್ಳೆಯ ಅಭ್ಯಾಸ. ನಿಯಮಿತವಾಗಿ ಸ್ನಾನ ಮಾಡುವುದರಿಂದ ಬೆವರು ಅಥವಾ ಬಿಸಿಲಿನಿಂದ ಉಂಟಾಗಬಹುದಾದ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.


6. ಸ್ವ-ಔಷಧಿ ಮತ್ತು ಅನಗತ್ಯ ಪ್ರತಿಜೀವಕಗಳನ್ನು ತಪ್ಪಿಸಿ: Avoid self-medication & unnecessary antibiotics:

Tips to Increase Immunity in Babies and Kids | How to boost immunity Kannada hindi

ಪ್ರಮಾಣಿತ ಔಷಧವನ್ನು ಜ್ವರ ಅಥವಾ ಕೆಮ್ಮಿಗೆ ನೀಡುವುದು ತುಂಬಾ ಸಾಮಾನ್ಯವಾದ ವಿಷಯ. ಕೆಲವೊಮ್ಮೆ ಪೋಷಕರು ವೈದ್ಯರ ಸಲಹೆ ತೆಗೆದುಕೊಳ್ಳದೆ ಮಕ್ಕಳಿಗೆ ತಮ್ಮದೇ ಆದ ಪ್ರಕಾರ ಚಿಕಿತ್ಸೆ ನೀಡುತ್ತಾರೆ. ಆದರೆ ಇದು ಮಗುವಿನ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಇದು ಅಪಾಯಕಾರಿ. ಅನಗತ್ಯ ಪ್ರತಿಜೀವಕಗಳು ದೀರ್ಘಾವಧಿಯಲ್ಲಿ ಮಗುವಿನ ವಿನಾಯಿತಿಗೆ ಸಹ ಪರಿಣಾಮ ಬೀರುತ್ತದೆ. ಸ್ವಂತ ಔಷಧಿಗಳನ್ನು ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Read : ವೈರಲ್ ಜ್ವರ – ಕಾರಣಗಳು,ಲಕ್ಷಣಗಳು,ತಡೆಗಟ್ಟುವಿಕೆ, ಮತ್ತು ಮನೆ ಮದ್ದು
ಶೀತ ಮತ್ತು ಕೆಮ್ಮಿಗೆ 20 ಮನೆ ಮದ್ದುಗಳು


7. ಅನಾರೋಗ್ಯಕರ ಮತ್ತು ಜಂಕ್ ಆಹಾರವನ್ನು ತಪ್ಪಿಸಿ: Avoid unhealthy & junk food:

Tips to Increase Immunity in Babies and Kids | How to boost immunity Kannada hindi
ಮಕ್ಕಳು ಜಂಕ್ ಆಹಾರವನ್ನು ಇಷ್ಟಪಡುತ್ತಾರೆ. ಚಿಪ್ಸ್, ಚಾಕೊಲೇಟುಗಳು ಮತ್ತು ಮಾರುಕಟ್ಟೆಯಲ್ಲಿ ಸಿದ್ಧ ಆಹಾರವನ್ನು ಬಯಸುತ್ತಾರೆ. ನಾವು ಸಂಪೂರ್ಣವಾಗಿ ಸೇವನೆಯನ್ನು ಕಡಿತಗೊಳಿಸುವುದಕ್ಕೆ ಆಗುವುದಿಲ್ಲ ಆದರೆ ನಾವು ಖಂಡಿತವಾಗಿಯೂ ಆಹಾರದ ಸೇವನೆಯನ್ನು ಸೀಮಿತಗೊಳಿಸಬಹುದು. ಆರೋಗ್ಯಕರ ಹಣ್ಣುಗಳು ಅಥವಾ ತರಕಾರಿಗಳನ್ನು ಜಂಕ್ ಆಹಾರದ ಬದಲು ಪೂರಕವಾಗಿ ಬಳಸುವುದು ಒಳ್ಳೆಯದು. ಅಲ್ಲದೆ, ಮಕ್ಕಳಿಗೆ ಜಂಕ್ ಆಹಾರ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕಾರಣವನ್ನು ನಾವು ಅರ್ಥೈಸಿ ಹೇಳಬೇಕು ಮತ್ತು ಜಂಕ್ ಆಹಾರವು ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ.
ಮಕ್ಕಳಿಗಾಗಿ ಆರೋಗ್ಯಕರ ಸ್ನ್ಯಾಕ್ ಆಯ್ಕೆಗಳುಗಾಗಿ ಇಲ್ಲಿ ಪರಿಶೀಲಿಸಿ.


8. ಆರೋಗ್ಯಕರವಾದ ಮನೆಯ ಪರಿಸರ: Healthy Home Environment:

Tips to Increase Immunity in Babies and Kids | How to boost immunity Kannada hindi

ಮಕ್ಕಳಿಗೆ ಒತ್ತಡ-ಮುಕ್ತ ಪರಿಸರವು ಅಗತ್ಯವಿರುತ್ತದೆ, ಅವರಿಗೆ ಹೆಚ್ಚು ಪ್ರೀತಿ ಮತ್ತು ಆರೈಕೆಯ ಅವಶ್ಯಕತೆಯಿರುವುದು. ಮಕ್ಕಳು ಸಾಮಾಜಿಕ ಜೀವನದ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ಚಿಕ್ಕವರಾದರು ಸಹ, ಗಂಭೀರ ವಿಷಯದ ಚರ್ಚೆಗಳನ್ನು ಮಕ್ಕಳ ಮುಂದೆ ತಪ್ಪಿಸಬಹುದು. ಮಕ್ಕಳಿಗೆ ಮನೆ ಸುರಕ್ಷಿತ ಮತ್ತು ಪ್ರೀತಿಸುವ ಸ್ಥಳವಾಗಬೇಕು.


9. ಪ್ರಕೃತಿಯೊಂದಿಗೆ ಬೆರೆಯಲು ಬಿಡಬೇಕು :Be with nature:

Tips to Increase Immunity in Babies and Kids | How to boost immunity Kannada hindi
ತಂತ್ರಜ್ಞಾನ ನಮ್ಮ ಜೀವನವನ್ನು ಕೃತಕ ಕೊಠಡಿಗಳಲ್ಲಿ ಮತ್ತು ಕೃತಕ ಗಾಳಿಯೊಂದಿಗೆ ನೆಲೆಸಲುವಂತೆ ಮಾಡಿದೆ, ಆದರೆ ಪ್ರಕೃತಿ ಪುನಃಸ್ಥಾಪಿಸಲು ಮತ್ತು ನೈಸರ್ಗಿಕವಾಗಿ ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಮಕ್ಕಳು ಪ್ರಕೃತಿ ಮತ್ತು ತಾಜಾ ಗಾಳಿಯೊಂದಿಗೆ ಸಮಯವನ್ನು ಕಳೆಯಲು ಬಿಡಿ. ಅಗತ್ಯವಿಲ್ಲದ ಔಷಧಿಗಳಿಲ್ಲದೆ ಪ್ರತಿರಕ್ಷೆಯನ್ನು ಸುಧಾರಿಸುವ ನೈಸರ್ಗಿಕ ಮಾರ್ಗ ಪ್ರಕೃತಿಯಿಂದ ದೊರೆಯುತ್ತದೆ. ದಯವಿಟ್ಟು ದೊರದರ್ಶನ ಮತ್ತು ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸಲು ಮರೆಯಬೇಡಿ.


10. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ : Mental & emotional well-being:

Tips to Increase Immunity in Babies and Kids | How to boost immunity Kannada hindi
ಭಯದ ವಾತಾವರಣ ಮತ್ತು ಬೆದರಿಕೆಯು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಮಗುವು ಸಂತೋಷವಾಗಿರಬೇಕು ಇದರಿಂದ ವ್ಯವಸ್ಥೆಯು ಉತ್ತಮ ಕಾರ್ಯವನ್ನು ನಿರ್ವಹಿಸಲು ಸಹಾಯಕ. ಪೋಷಕರಾಗಿ, ಮಗುವಿನೊಂದಿಗೆ ಸರಿಯಾದ ಸಂವಹನವನ್ನು (communication) ಅಭಿವೃದ್ಧಿಪಡಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಪ್ರತಿಯೊಂದೂ ಭಯವಿಲ್ಲದೆ ಮುಕ್ತವಾಗಿ ಪೋಷಕರೊಂದಿಗೆ ಹಂಚಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಸ್ಥಿರವಾದ ಮಕ್ಕಳು ಆರೋಗ್ಯಕರವಾಗಿ ಮತ್ತು ಸ್ಥಿರವಾಗಿರುತ್ತಾರೆ.


ರೋಗನಿರೋಧಕ ಶಕ್ತಿ ಹೆಚ್ಚಿಸಲು 10 ಸಲಹೆಗಳು | Tips to Improve Immunity in Kannada

ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  & YouTube Channel ನಲ್ಲಿ ಭೇಟಿ ಮಾಡಿ.


Spread the love