Spread the love

ಮಕ್ಕಳಲ್ಲಿ ಪರೀಕ್ಷೆ  ಭಯವನ್ನು ನಿವಾರಿಸಲು 10 ಸಲಹೆಗಳು | Tips to deal with Exam Fear in Kannada

10 Tips to Deal with Exam Fear in Kids pareeksha hindi kannada

ಪರೀಕ್ಷೆಗಳು ಸಮೀಪಿಸುತ್ತಿದೆ, ಮಕ್ಕಳು ಬಹಳಷ್ಟು ಸಮಯ ಅಧ್ಯಯನದಲ್ಲಿ ತೊಡಗಿರುತ್ತಾರೆ. ವೈಫಲ್ಯದ ಭಯ, ಕಾರ್ಯ ನಿರ್ವಹಣೆಯ ಆತಂಕ, ಅವಾಸ್ತವಿಕವಾಗಿರುವ ನಿರೀಕ್ಷೆಗಳು ಮಕ್ಕಳನ್ನು ಕಾಡುತ್ತದೆ. ಮಕ್ಕಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಇದರಿಂದ ಮಕ್ಕಳಲ್ಲಿ ಪರೀಕ್ಷೆ ಯ ಭಯ ಹಾಗು ಆತಂಕ ಶುರುವಾಗುತ್ತದೆ.

ಒತ್ತಡದಲ್ಲಿರುವ ಮಕ್ಕಳಲ್ಲಿ ಕೆಳಗಿನ ಲಕ್ಷಣಗಳನ್ನು ಕಾಣಬಹುದು :

  • ಕೋಪ ಅಥವಾ ನಿರಾಶೆ/ಹತಾಶೆ
  • ತುಂಬಾ ನಿದ್ರಿಸುವುದು ಅಥವಾ ಕಡಿಮೆ ನಿದ್ರೆ
  • ವಾಕರಿಕೆ ಅಥವಾ ಎದೆಯ ನೋವು
  • ಮಾತನಾಡುವುದು ಅಥವಾ ನಕಾರಾತ್ಮಕ ಭಾವನೆ ವ್ಯಕ್ತಪಡಿಸುವುದು
  • ಬೆವರುವುದು ಮತ್ತು ಹೃದಯ ಬಡಿತದಲ್ಲಿ ಹೆಚ್ಚು ಕಡಿಮೆಯಾಗುವುದು

ಮಕ್ಕಳಲ್ಲಿ ಪರೀಕ್ಷೆ  ಭಯವನ್ನು ನಿವಾರಿಸಲು 10 ಸಲಹೆಗಳು | Tips to deal with Exam Fear in Kannada

(ಈ ಲೇಖನದ ಅಂತ್ಯದಲ್ಲಿರುವ ವೀಡಿಯೊ ನೋಡಲು ಮರೆಯದಿರಿ)

10 Tips to Deal with Exam Fear in Kids pareeksha hindi kannada

1. ಆತ್ಮ ವಿಶ್ವಾಸವನ್ನು ಹೆಚ್ಚಿಸಿ –  Boost Confidence

10 Tips to Deal with Exam Fear in Kids pareeksha hindi kannada

ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಇಷ್ಟಪಡುವುದಿಲ್ಲ. ಚೆನ್ನಾಗಿ ಪೂರ್ವ ಸಿದ್ಧತೆ ಮಾಡಿರುವ ಮಕ್ಕಳು ಸಹ ಪರೀಕ್ಷೆಗೆ ಹಾಜರಾಗಲು ಭಯಪಡುತ್ತಾರೆ.  ವಿಧ್ಯಾರ್ಥಿಗಳ ಜೊತೆ ಮಾತನಾಡಿ ಮತ್ತು ಅವರ ಪ್ರಯತ್ನಗಳು ಸುವ್ಯವಸ್ಥಿತವಾಗಿದ್ದರೆ ಉತ್ತಮವಾಗಿ ನಿರ್ವಹಿಸಬಹುದೆಂದು ಅವರಿಗೆ ಮನವರಿಕೆ ಮಾಡಿಸಿ ಭರವಸೆ ನೀಡಿಬೇಕು.

2. ಆಟವಾಡಲು ಮತ್ತು ವಿಶ್ರಮಿಸಲು ಸಮಯ ನೀಡಬೇಕು/ ವಿರಾಮ ತೆಗೆದುಕೊಳ್ಳಬೇಕು – Allow Play Time or Breaks

10 Tips to Deal with Exam Fear in Kids pareeksha hindi kannada

ಹೆಚ್ಚು ಫಲದಾಯಕವಾದ ಫಲಿತಾಂಶ ಪಡೆಯಲು ಮುಖ್ಯವಾಗಿ ಒಂದೇ ತರಹ ಓದುಬಾರದು. ಏಕತಾನತೆಯ ಅಧ್ಯಯನದಿಂದ ಮಕ್ಕಳ ಮಿದುಳಿಗೆ ಹೆಚ್ಚು ಒತ್ತಡವಾಗುವುದು. ಮಕ್ಕಳು ಹೊರಗೆ ಹೋಗಿ ಸ್ವಲ್ಪ ಸಮಯದವರೆಗೆ ಆಟ ಆಡಲು ಬಿಡಬೇಕು, ಅವರನ್ನು ಉದ್ಯಾನವನಕ್ಕೆ ಅಥವಾ ಅವರ ನೆಚ್ಚಿನ ಐಸ್ಕ್ರೀಮ್ ಕೊಡಿಸಿ ಅಥವಾ ಅವರ ನೆಚ್ಚಿನ ತಿಂಡಿ/ಸ್ನಾಕ್ಸ್ ಮಾಡಿಕೊಡಿ. ಮೆದುಳು ಅತ್ಯುತ್ತಮವಾಗಿ ಕೆಲಸಮಾಡಲು ದಣಿವಾರಿಕೆ ಅಗತ್ಯವಾಗುತ್ತದೆ.

3. ಮಕ್ಕಳಿಗೆ ಪರೀಕ್ಷೆಯ ಸರಿಯಾದ ದೃಷ್ಟಿಕೋಣದ ಬಗ್ಗೆ  ಅರಿವು ಮೂಡಿಸಿ  – Share the right perspective of Exam

10 Tips to Deal with Exam Fear in Kids pareeksha hindi kannada

ಎಲ್ಲಾ ಮಕ್ಕಳು ತಮ್ಮ ನೆಚ್ಚಿನ ವಿಷಯವನ್ನು ಚೆನ್ನಾಗಿ ಓದುತ್ತಾರೆ ಮತ್ತು ಇತರ ವಿಷಯಗಳನ್ನು ನಿರ್ಲಕ್ಷಿಸಿರುತ್ತಾರೆ. ಒಟ್ಟಾರೆ ಅಂಕಗಳಿಸಲು ಎಲ್ಲಾ ವಿಷಯವನ್ನು ಚೆನ್ನಾಗಿ ಅಧ್ಯನ ಮಾಡುವುದು ಬಹಳ ಮುಖ್ಯ. ಯಾವುದೇ ವಿಷಯದಲ್ಲಿ ವಿಧ್ಯಾರ್ಥಿಗಳ ಕಡಿಮೆ ಕಾರ್ಯನಿರ್ವಹಣೆಯಿಂದ  ಅವರ ಒಟ್ಟು ಅಂಕದ ಮೊತ್ತ ಕಡಿಮೆಯಾಗುವುದು ಎಂದು ನಾವು ಅವರಿಗೆ ವಿವರಿಸಬೇಕು. ಅವರು ಹೆಚ್ಚು ಅಭ್ಯಾಸ ಮಾಡಬೇಕಾದ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮತ್ತು ಎಲ್ಲಾ ವಿಷಯಗಳಿಗೆ ವೇಳಾಪಟ್ಟಿಯನ್ನು ರಚಿಸಲು ಅವರಿಗೆ ಸಹಾಯ ಮಾಡಬೇಕು.

4. ಅಚ್ಚುಕಟ್ಟಾಗಿ ವಿಷಯಗಳನ್ನು ನೆನಪಿಟ್ಟುಕೊಳ್ಳಲು/ ಪರಿಷ್ಕರಿಸಲು ಸಹಾಯ ಮಾಡಿ- Help them Revise smartly

10 Tips to Deal with Exam Fear in Kids pareeksha hindi kannada

ಅನೇಕ ಮಕ್ಕಳು 2 ಕಾರಣಗಳಿಂದ ಪರೀಕ್ಷೆಯಲ್ಲಿ ಕೆಲವು ಪ್ರಶ್ನೆಗಳನ್ನು ಉತ್ತರಿಸದೆ ಹಾಗೆ ಬಿಡುತ್ತಾರೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳು ಒಂದು- ಉತ್ತರ ಮರೆತು ಬಿಡುತ್ತಾರೆ, ಎರಡು- ಅವರು ತಪ್ಪು ಉತ್ತರವನ್ನು ಬರೆಯುತ್ತಿದ್ದೇನೆಂದು ಅನುಮಾನದಿಂದ ಚಿಂತಿತರಾಗುತ್ತಾರೆ. ನಾವು ಪೋಷಕರು ಮರು-ಓದುವ ಮತ್ತು ಪರಿಷ್ಕರಿಸುವ ನಡುವಿನ ವ್ಯತ್ಯಾಸವನ್ನು ತಿಳಿಸಲು ಸಹಾಯ ಮಾಡಬೇಕು. ಪುಸ್ತಕವನ್ನು ಮುಚ್ಚಿ ಉತ್ತರಗಳನ್ನು ಪರಿಷ್ಕರಿಸುವುದು ಮತ್ತು ವಿಷಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಹಾಗು ಉತ್ತರಗಳನ್ನು ನೆನಪಿನಲ್ಲಿಡಲು ಉಪಯುಕ್ತ ಸಲಹೆ ನೀಡಬೇಕು.

5. ಆರೋಗ್ಯಕರವಾದ ಆಹಾರದ ಸೇವನೆ- Healthy Eating

10 Tips to Deal with Exam Fear in Kids pareeksha hindi kannada

ಮಕ್ಕಳ ಮೆದುಳು ಆರೋಗ್ಯಕರವಾಗಿರಲು ಎಚ್ಚರಿಕೆಯಿಂದ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ನಿರಂತರವಾಗಿ ಅಧ್ಯಯನ ಮಾಡುವಾಗ ಒತ್ತಡದಿಂದ ಮಕ್ಕಳು ತುಂಬಾ ತಿನ್ನುತ್ತಾರೆ. ಜಂಕ್ ಆಹಾರವನ್ನು ದೂರವಿರಿಸಬೇಕು ಮತ್ತು ಪೌಷ್ಠಿಕಾಂಶವಿರುವ ತಿಂಡಿಗಳು ನೀಡಬೇಕು. ಕೆಲವು ಮೆದಳು ಉತ್ತಜಿಸುವ ಆಹಾರಗಳಿಗೆ ಇಲ್ಲಿ ಪರಿಶೀಲಿಸಿ.  ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಕೆಲವು ಆರೋಗ್ಯಕರ ಸ್ನ್ಯಾಕ್ಸ್ ಪಾಕವಿಧಾನವನ್ನು  ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

6. ಸಮರ್ಪಕವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು – Rest Adequately

10 Tips to Deal with Exam Fear in Kids pareeksha hindi kannada

ಹೆಚ್ಚು ಅಧ್ಯಯನ ಮಾಡಲು ಮಕ್ಕಳು ರಾತ್ರಿ ಎಲ್ಲಾ ಎಚ್ಚರವಾಗಿರುವುದು ಮತ್ತು ಅಧ್ಯಯನ ಮಾಡುವ ತಪ್ಪು ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಸಾಕಷ್ಟು ನಿದ್ರೆ ಬಹಳ ಮುಖ್ಯ.  ಮೆದುಳಿನ ಅಧ್ಯಯನವನ್ನು ಪ್ರಕ್ರಿಯೆಗೊಳಿಸಲು ಒಳ್ಳೆಯ ಮಾತುಕತೆ ನಡೆಸಿ ಮಕ್ಕಳು ಮಲಗುವುದಕ್ಕಿಂತ ಮುಂಚೆ ಅವರ ಪರಿಶ್ರಮ ಗುರುತಿಸಿ ಮತ್ತು ಇನ್ನು ಹೆಚ್ಚು ಪ್ರೋತ್ಸಾಹಿಸಿ,  ಇದರಿಂದ ಶಾಂತಿಯುತ ನಿದ್ರೆಯನ್ನು ಮಾಡುತ್ತಾರೆ.

7. ಶಾರೀರಿಕ ವ್ಯಾಯಾಮ ಅಥವಾ ಧ್ಯಾನ – Physical Exercise or Meditating

10 Tips to Deal with Exam Fear in Kids pareeksha hindi kannada

ದೈಹಿಕ ಆರೋಗ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು ಹಾಗು ನೈಸರ್ಗಿಕವಾಗಿ ಒತ್ತಡವನ್ನು ಕಡಿಮೆ ಮಾಡಲು ಮಕ್ಕಳಿಗೆ ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಬೇಕು. ಸೈಕ್ಲಿಂಗ್, ಈಜು, ಕ್ರಿಕೆಟ್ ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ದಿನದಲ್ಲಿ ಕೆಲವು ನಿಮಿಷಗಳ ಕಾಲ ಆಡುವುದು ಬಹಳ ಮುಖ್ಯ. ಮಕ್ಕಳ ಜೊತೆ ಕುಳಿತುಕೊಂಡು ದೈನಂದಿನ ಕೆಲವು ನಿಮಿಷಗಳು ಧ್ಯಾನಿಸಿ, ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಸಹಾಯವಾಗುತ್ತೆದೆ.

8. ಪ್ರಚೋದಿಸುವಿಕೆ ಮತ್ತು ಒತ್ತಡವನ್ನು ಹೇರುವುದನ್ನು ನಿಲ್ಲಿಸಿ- Stop Pressurizing

10 Tips to Deal with Exam Fear in Kids pareeksha hindi kannada

ಮಕ್ಕಳು ಚೆನ್ನಾಗಿ ಅಧ್ಯಯನ ಮಾಡದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ನಕಾರಾತ್ಮಕವಾಗಿ ಮಾತನಾಡ ಬಾರದು. ಮಕ್ಕಳಲ್ಲಿ ಪರೀಕ್ಷೆಯ ಭಯಕ್ಕೆ ಇದೆ ಮುಖ್ಯ ಕಾರಣ. ಮಕ್ಕಳು ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರ ಹಾಗಾಗಿ ಫಲಿತಾಂಶಗಳ ಬಗ್ಗೆ ಚಿಂತಿಸಬಾರದು ಮತ್ತು ಪ್ರಯತ್ನ ಬಹಳ ಮುಖ್ಯವೆಂದು ಮನವರಿಕೆ ಮಾಡಬೇಕು.

9. ಬೇರೆಯವರ ಜೊತೆ ಹೋಲಿಸುವುದನ್ನು ನಿಲ್ಲಿಸಿ   – Stop Comparing

10 Tips to Deal with Exam Fear in Kids pareeksha hindi kannada

ಪ್ರಧಾನವಾಗಿ ಭಾರತದಲ್ಲಿ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸುವುದು ಸಾಮಾನ್ಯವಾಗಿದೆ. ಇದರಿಂದ ಉತ್ತಮ ಪ್ರದರ್ಶನ ನೀಡುವ ಅಥವಾ ಉತ್ತಮ ಸಹೋದರನನ್ನು ಹೊಂದಿರುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೇಗೆ ವಯಸ್ಕರಿಗೆ ಯಾವುದೇ ಹೋಲಿಕೆ ಇಷ್ಟವಾಗುವುದಿಲ್ಲವೋ ಹಾಗೆ ಮಕ್ಕಳು ಕೂಡ ಇಷ್ಟಪಡುವುದಿಲ್ಲ. ಮಕ್ಕಳನ್ನು ದೂಷಿಸಿ ಅವಮಾನಿಸುವುದರಿಂದ ಯಾವುದೇ ಒಳ್ಳೆಯ ಪರಿಣಾಮವಾಗುವುದಿಲ್ಲ.

10. ಲಂಚವನ್ನು ನೀಡಬೇಡಿ – Stop Bribing

10 Tips to Deal with Exam Fear in Kids pareeksha hindi kannada

ಮಕ್ಕಳ ಸಾಧನೆಯ ಆಧಾರದ ಮೇಲೆ ಕೆಲವು ಉಡುಗೊರೆಗಳನ್ನು ನೀಡುವುದು ಪ್ರಚಲಿತ. ಹೆತ್ತವರು ಮಕ್ಕಳು ನಿರ್ವಹಿಸಲು ಉಡುಗೊರೆ ನೀಡುವುದೊಂದೇ ಏಕೈಕ ಮಾರ್ಗವೆಂದು ಭಾವಿಸುವುದು ತಪ್ಪು ಇದು ನಿಜವಲ್ಲ . ಲಾಭದಾಯಕವಸ್ತುಗಳು ದುಬಾರಿ ಪ್ರಾಪಂಚಿಕ ಬಹುಮಾನವನ್ನು ಕೊಡುವುದಕ್ಕಿಂತ ಒಳ್ಳೆಯ ಮಾತು ಮತ್ತು ಪ್ರೋತ್ಸಾಹಿಸುವುದು ಉತ್ತಮ.

ಮಕ್ಕಳಲ್ಲಿ ಪರೀಕ್ಷೆ  ಭಯವನ್ನು ನಿವಾರಿಸಲು 10 ಸಲಹೆಗಳು | Tips to deal with Exam Fear in Kannada

Kannada Subscribe Button TOTS AND MOMS

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love