Spread the love
  • 20
    Shares

ಸಿಹಿಗೆಣಸಿನ ದೋಸೆ – Sweet Potato Pancake recipe in Kannada

Sweet Potato Pancake for babies kids hindi kannada shakarkand sihigenasu

ಸಿಹಿ ಗೆಣಸಿನಿಂದ ಬಹಳ ಆರೋಗ್ಯಕರವಾದ ಶಿಶು ಆಹಾರವನ್ನು ತಯಾರಿಸಬಹುದು.ಗೆಣಸು ಸುಲಭವಾಗಿ ಯಾವುದೇ ರೀತಿಯ ಆಹಾರಕ್ಕೆ ಹೊಂದಿಕೊಳ್ಳುತ್ತದೆ. ಶಿಶು ಆಹಾರಕ್ಕೆ ಸೂಕ್ತವಾದ ಆಹಾರ. ಸಿಹಿ ಗೆಣಸಿನಿಂದ ಪ್ಯೂರಿ, ದೋಸೆ ಮತ್ತು ಇತರ ಸರಿಯ ಜೊತೆ ಉಪಯೋಗಿಸಬಹುದು. ಈ ಪಾಕವಿಧಾನಕ್ಕೆ  ಕೇವಲ 2 ಪದಾರ್ಥಗಳನ್ನು ಮಾತ್ರ ಬಳಸಲಾಗಿದೆ. ಶಿಶುಗಳು ಮತ್ತು ಮಕ್ಕಳಿಗಾಗಿ ವಿಶೇಷವಾಗಿ ಮೃದುವಾದ ವಿನ್ಯಾಸ ವಿರುವ ಕಾರಣ ರುಚಿಕರ ಹಾಗು ಆರೋಗ್ಯಕರವಾದ ದೋಸೆ ತಯಾರಿಸಿ ನೀಡಬಹುದು. ಕೈಗೆ ನೀಡುವ ಆಹಾರ.

ಸಿಹಿ ಗೆಣಸು ವಿಟಮಿನ್- A, ಕ್ಯಾಲ್ಸಿಯಂ ಮತ್ತು ಫೋಲೇಟ್ ನಲ್ಲಿ ಸಮೃದ್ಧವಾಗಿರುತ್ತದೆ.ಮೊಟ್ಟೆ ಕೂಡ ತೂಕ ಹೆಚ್ಚಿಸುವುದಕ್ಕೆ ಸಹಾಕವಾದ ಆಹಾರ. ಶಿಶುಗಳ ಬೆಳವಣಿಗೆಗೆ ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶ  ತುಂಬಾ ಸಹಾಯಕ. ಈ ಸಂಯೋಜನೆಯು ಶಿಶುಗಳಿಗೆ ಆರೋಗ್ಯಕರ, ರುಚಿಯಾದ ಮತ್ತು ಮೃದುವಾದ ದೋಸೆ ಮಾಡುವುದಕ್ಕೆ ಉಪಯುಕ್ತ. ಮಕ್ಕಳಿಗೆ ಉತ್ತಮ ತಿಂಡಿಯ ಆಯ್ಕೆ. 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಶಿಶುಗಳಿಗೆ ಕೇವಲ ಮೊಟ್ಟೆಯ ಹಳದಿ ಅಂಶವನ್ನು ಮಾತ್ರ ಬಳಸಬೇಕು. ಇಡೀ ಮೊಟ್ಟೆಯನ್ನು 1 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ನಮ್ಮ ಇತರ ಪಾಕವಿಧಾನಗಳನ್ನು ಸಹ ಪ್ರಯತ್ನಿಸಿ :

Video:  ಸಿಹಿಗೆಣಸಿನ ದೋಸೆ – Sweet Potato Pancake recipe in Kannada

Kannada Subscribe Button TOTS AND MOMS

ಸಿಹಿಗೆಣಸಿನ ದೋಸೆ – Sweet Potato Pancake recipe in Kannada

ಸಿಹಿಗೆಣಸಿನ ದೋಸೆ - Sweet Potato Pancake recipe in Kannada

ಕೇವಲ 2 ಪದಾರ್ಥಗಳಾದ ಸಿಹಿ ಗೆಣಸು ಮತ್ತು ಮೊಟ್ಟೆ ಬಳಸಿ ಮಾಡಬಹುದಾದ ಸುಲಭವಾದ ರುಚಿಕರ ದೋಸೆ, ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುವ ಆಹಾರ ಸಿಹಿಗೆಣಸಿನ ದೋಸೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಲಘು ಉಪಹಾರ, ಕೈಗೆ ನೀಡುವ ಆಹಾರ, ಶಿಶು ಆಹಾರ
ತಿನಿಸು:ಕಾಂಟಿನೆಂಟಲ್, ಭಾರತೀಯ

ಸಾಮಗ್ರಿಗಳು

  1. ಸಿಹಿ ಗೆಣಸು - 200 gm
  2. ಮೊಟ್ಟೆ - 2
  3. ಚಕ್ಕೆ ಪುಡಿ- ಒಂದು ಚಿಟಕೆ (ಬೇಕಾದರೆ)

ವಿಧಾನ

  1. ಕುಕ್ಕರ್ ಪ್ಯಾನ್ ನಲ್ಲಿ ಚೆನ್ನಾಗಿ ತೊಳೆದ ಸಿಹಿ ಗೆಣಸನ್ನು ಮತ್ತು ಬೇಕಾಗುವಷ್ಟು ನೀರನ್ನು ಹಾಕಿ.
  2. 15 ನಿಮಿಷಗಳ ಕಾಲ 2-3 ಸೀಟಿ ಬರುವ ತನಕ ಬೇಯಿಸಿ.
  3. ಕುಕ್ಕರ್ ತಣ್ಣಗಾದ ನಂತರ ಗೆಣಸಿನ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.
  4. ಸಿಪ್ಪೆ ತೆಗೆದ ಸಿಹಿ ಗೆಣಸನ್ನು ಒಂದು ಬಟ್ಟಲಿಗೆ ಹಾಕಿ ಫೋರ್ಕ್ ನಿಂದ ಚೆನ್ನಾಗಿ ಮಸೆದುಕೊಳ್ಳಿ.
  5. ನಂತರ ಮಸೆದ ಗೆಣಸಿಗೆ ಬೇಕಾದರೆ ರುಚಿ ಮತ್ತು ಪರಿಮಳ ಹೆಚ್ಚಿಸಲು ಚಕ್ಕೆ ಪುಡಿ/ಏಲಕ್ಕಿ ಪುಡಿ ಹಾಕಿ. ಎರಡು ಮೊಟ್ಟೆ ಹಾಕಿ.
  6. ಶಿಶುಗಳಿಗೆ ಮಾಡುತ್ತಿದ್ದರೆ ಮೊಟ್ಟೆಯ ಹಳದಿ ಭಾಗ ಮಾತ್ರ ಉಪಯೋಗಿಸಿ.
  7. ಚೆನ್ನಾಗಿ ಮಿಶ್ರಣ ಮಾಡಿ. ದೋಸೆ/ಪ್ಯಾನ್ ಕೇಕ್ ಹಿಟ್ಟನ್ನು ತಯಾರಿಸಿ.
  8. ಬಿಸಿಯಾದ ಹೆಂಚಿನ / ತವಾ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಹಾಕಿ. ಚಿಕ್ಕ ಚಿಕ್ಕ ದೋಸೆ ಮಾಡಿ.
  9. 2-3 ನಿಮಿಷಗಳ ಕಾಲ ಎರಡು ಕಡೆ ತುಪ್ಪ ಅಥವಾ ಬೆಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.
  10. ಸಿಹಿ ಗೆಣಸಿನ ಪ್ಯಾನ್ ಕೇಕ್/  ದೋಸೆ ತಯಾರಾಗಿದೆ. ಜೇನು ತುಪ್ಪ ಅಥವಾ ಚಕೋಲೆಟ್ ಸಾಸ್ ಜೊತೆ ತಿನ್ನಲು ಬಲು ರುಚಿಯಾಗಿರುತ್ತದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಸಿಹಿಗೆಣಸಿನ ದೋಸೆ – Sweet Potato Pancake recipe in Kannada

Sweet Potato Pancake for babies kids hindi kannada shakarkand sihigenasu

ಸಿಹಿಗೆಣಸಿನ  ದೋಸೆ ಮಾಡಲು ಬೇಕಾಗುವ ಪದಾರ್ಥಗಳು :

  1. ಸಿಹಿ ಗೆಣಸು – 200 gm
  2. ಮೊಟ್ಟೆ – 2
  3. ಚಕ್ಕೆ ಪುಡಿಒಂದು ಚಿಟಕೆ (ಬೇಕಾದರೆ)

ಸಿಹಿಗೆಣಸಿನ  ದೋಸೆ ಮಾಡುವ ವಿಧಾನ :

1. ಕುಕ್ಕರ್ ಪ್ಯಾನ್ ನಲ್ಲಿ ಚೆನ್ನಾಗಿ ತೊಳೆದ ಸಿಹಿ ಗೆಣಸನ್ನು ಮತ್ತು ಬೇಕಾಗುವಷ್ಟು ನೀರನ್ನು ಹಾಕಿ.

Sweet Potato pancake for babies and kids hindi kannada

2. 15 ನಿಮಿಷಗಳ ಕಾಲ 2-3 ಸೀಟಿ ಬರುವ ತನಕ ಬೇಯಿಸಿ.

3. ಕುಕ್ಕರ್ ತಣ್ಣಗಾದ ನಂತರ ಗೆಣಸಿನ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

Sweet Potato pancake for babies and kids hindi kannada

4. ಸಿಪ್ಪೆ ತೆಗೆದ ಸಿಹಿ ಗೆಣಸನ್ನು ಒಂದು ಬಟ್ಟಲಿಗೆ ಹಾಕಿ ಫೋರ್ಕ್ ನಿಂದ ಚೆನ್ನಾಗಿ ಮಸೆದುಕೊಳ್ಳಿ.

Sweet Potato pancake for babies and kids hindi kannada

5. ನಂತರ ಮಸೆದ ಗೆಣಸಿಗೆ ಬೇಕಾದರೆ ರುಚಿ ಮತ್ತು ಪರಿಮಳ ಹೆಚ್ಚಿಸಲು ಚಕ್ಕೆ ಪುಡಿ/ಏಲಕ್ಕಿ ಪುಡಿ ಹಾಕಿ. ಎರಡು ಮೊಟ್ಟೆ ಹಾಕಿ.

6. ಶಿಶುಗಳಿಗೆ ಮಾಡುತ್ತಿದ್ದರೆ ಮೊಟ್ಟೆಯ ಹಳದಿ ಭಾಗ ಮಾತ್ರ ಉಪಯೋಗಿಸಿ.

Sweet Potato pancake for babies and kids hindi kannada

7. ಚೆನ್ನಾಗಿ ಮಿಶ್ರಣ ಮಾಡಿ. ದೋಸೆ/ಪ್ಯಾನ್ ಕೇಕ್ ಹಿಟ್ಟನ್ನು ತಯಾರಿಸಿ.

Sweet Potato pancake for babies and kids hindi kannada

8. ಬಿಸಿಯಾದ ಹೆಂಚಿನ / ತವಾ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಹಾಕಿ. ಚಿಕ್ಕ ಚಿಕ್ಕ ದೋಸೆ ಮಾಡಿ.

Sweet Potato pancake for babies and kids hindi kannada

9. 2-3 ನಿಮಿಷಗಳ ಕಾಲ ಎರಡು ಕಡೆ ತುಪ್ಪ ಅಥವಾ ಬೆಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.

Sweet Potato pancake for babies and kids hindi kannada

10. ಸಿಹಿ ಗೆಣಸಿನ ಪ್ಯಾನ್ ಕೇಕ್/  ದೋಸೆ ತಯಾರಾಗಿದೆ. ಜೇನು ತುಪ್ಪ ಅಥವಾ ಚಕೋಲೆಟ್ ಸಾಸ್ ಜೊತೆ ತಿನ್ನಲು ಬಲು ರುಚಿಯಾಗಿರುತ್ತದೆ.

ಸಿಹಿಗೆಣಸಿನ ದೋಸೆ – Sweet Potato Pancake recipe in Kannada

Sweet Potato Pancake for babies kids hindi kannada shakarkand sihigenasu

ಸೂಚನೆ : ಈ ಪಾಕವಿಧಾನವನ್ನು ಮೊಟ್ಟೆ ಇಲ್ಲದೆ ಮಾಡಬಹುದು. ಶಿಶುಗಳಿಗೆ ಮೊಟ್ಟೆ ಬದಲು ಕೇರಳ ಬಾಳೆಕಾಯಿ ಪುಡಿ ಅಥವಾ ಗೋಧಿ ಹಿಟ್ಟು ಬಳಸಿ ಮಾಡಬಹುದು. Kerala Banana Powder

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 20
    Shares