Spread the love

ಮಳೆಗಾಲದಲ್ಲಿ ಸುಟ್ಟ ಜೋಳ ಎಲ್ಲರಿಗೂ ಪ್ರಿಯವಾದದ್ದು – ಮಕ್ಕಳು, ವಯಸ್ಕರು ಇದನ್ನು ತಿನ್ನಲು ಇಷ್ಟ ಪಡುತ್ತಾರೆ. ಸಿಹಿ ಜೋಳ ಮತ್ತು ಮೆಣಸು ಅತ್ಯುತ್ತಮ ಸಂಯೋಜನೆಯಾಗಿದೆ.  ಅಕ್ಕಿ ಮತ್ತು ಮಸಾಲೆಯ ಮಿಶ್ರಣ ಇರುವುದರಿಂದ  ಅತ್ಯಂತ ರುಚಿಕರವಾಗಿರುತ್ತದೆ. ನಿಮ್ಮ ಕುಟುಂಬಕ್ಕೆ ಶಕ್ತಿ ತುಂಬಿದ ಸ್ವಾಧಿಷ್ಟ ತಿಂಡಿ ಅಥವಾ ಊಟದ ಸಮಯಕ್ಕೆ ಒಳ್ಳೆಯ ವ್ಯಂಜನ. ಮೆಣಸನ್ನು ಶೀತ ಮತ್ತು ಕೆಮ್ಮು ನಿವಾರಿಸಲು ಉಪಯೂಗಿಸುತ್ತೇವೆ, ಹಾಗಾಗಿ ಸಿಹಿ ಜೋಳ & ಮೆಣಸಿನ ಅನ್ನ ಸವಿಯಾದ ಪಾಕವಿಧಾನದಿಂದ ಶೀತಕ್ಕೆ ನೈಸರ್ಗಿಕವಾಗಿ ಚಿಕಿತ್ಸೆಯಾಗುವುದು.

Sweet Corn Pepper Rice recipe for babies, kids kannada

ಜೋಳ ಅಥವಾ ಕಾರ್ನ್ ವಿಟಮಿನ್,ಮಿನರಲ್, ಉತ್ಕರ್ಷಣ ನಿರೋಧಕ (antioxidants) ಮತ್ತು ಶಕ್ತಿಯ ಪೂರ್ಣ ಪೂರೈಕೆಯಾಗುವುದಲ್ಲದೆ ಕಾರ್ಬೋಹೈಡ್ರೇಟಗಳು ಹೇರಳವಾಗಿರುತ್ತದೆ. ಲಂಚ್ ಬಾಕ್ಸ್  ಅಥವಾ (ಬ್ರೇಕ್ಫಾಸ್ಟ್) ಬೆಳಗಿನ ಉಪಹಾರಕ್ಕೆ ಒಳ್ಳೆಯ ಪಾಕವಿಧಾನ ಸಿಹಿ ಜೋಳ & ಮೆಣಸಿನ ಅನ್ನ.

10 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀವು ಮಸಾಲೆಗಳನ್ನು ಮತ್ತು ಅಗಿಯುವಂತ ಆಹಾರವನ್ನು ಪರಿಚಯಿಸಿದ್ದರೆ ಅವರಿಗೆ ಇದನ್ನು ಕೊಡಬಹುದು, ಅಥವಾ 12 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಕೊಡಬಹುದಾದಗಿದೆ.

ಪೋರ್ಟ್ ಬಲ್ ವಂಡರ್ ಚೆಫ್ ಬ್ಲೆಂಡರ್ ಅನ್ನು ನಾನು ಬಳಸಿದ್ದೇನೆ

ಮಕ್ಕಳಿಗೆ ಹಾಗು ದೊಡ್ಡವರಿಗೆ ಸಿಹಿ ಜೋಳದ ಲಾಭಗಳು :

1. ಜೀವಸತ್ವಗಳು ಮತ್ತು ಖನಿಜಗಳು ಉತ್ತಮವಾಗಿರುತ್ತದೆ.

2. ಒಳ್ಳೆಯ ನಾರಿನ (fibre) ಅಂಶವಿರುತ್ತದೆ

3. ದೃಷ್ಟಿಗೆ ಒಳ್ಳೆಯದು

4. ನೈಸರ್ಗಿಕ ವಿರೇಚಕ (laxative).

ಮೆಣಸಿನ  ಪ್ರಯೋಜನಗಳು

1. ಶೀತ ಮತ್ತು ಕೆಮ್ಮಿಗೆ ಒಳ್ಳೆ ಮದ್ದು.

2. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಸಿಹಿ ಜೋಳ & ಮೆಣಸಿನ ಅನ್ನ ಹೇಗೆ ಮಾಡುವುದು ? ವೀಡಿಯೊ ನೋಡಿ 

Kannada Subscribe Button TOTS AND MOMS

ಸಿಹಿ ಜೋಳ & ಮೆಣಸಿನ ಅನ್ನ

ಮೆಣಸನ್ನು ಶೀತ ಮತ್ತು ಕೆಮ್ಮ ನಿವಾರಿಸಲು ಉಪಯೋಗಿಸುತ್ತೇವೆ, ಹಾಗಾಗಿ ಸಿಹಿ ಜೋಳ & ಮೆಣಸಿನ ಅನ್ನ ಸವಿಯಾದ ಪಾಕವಿಧಾನದಿಂದ ಶೀತಕ್ಕೆ ನೈಸರ್ಗಿಕವಾಗಿ ಚಿಕಿತ್ಸೆಯಾಗುವುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ತಿಂಡಿ, ರಾತ್ರಿಯ ಊಟ
ತಿನಿಸು:ಭಾರತೀಯ

ಸಾಮಗ್ರಿಗಳು

ಕಾಳು ಮೆಣಸು - 2 tsp 

ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 2 tbsp

ಗೋಡಂಬಿ - 15-20 (ನೆನೆಸಿದ)

ಹಸಿಮೆಣಸಿನ ಕಾಯಿ  - 4

ಇತರ ಪದಾರ್ಥಗಳು:

ಲವಂಗ - 4

ಚಕ್ಕೆ - 1 ಇಂಚು

ಅಕ್ಕಿ - 2 ಕಪ್ 

ಹಾಲು - 2 ಕಪ್ 

ನೀರು - 2 ಕಪ್ 

ತುಪ್ಪ / ಎಣ್ಣೆ - 5 tsp 

ಪುದೀನ  - 15-20 ಎಲೆಗಳು

ಉಪ್ಪು - ರುಚಿಗೆ ತಕ್ಕಷ್ಟು.

ವಿಧಾನ

1. ನೆನೆಸಿದ ಗೋಡಂಬಿ, ಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಸೇರಿಸಿ ನಯವಾಗಿ  ಮಿಕ್ಸರ್ ನಲ್ಲಿ  ರುಬ್ಬಿಕೊಳ್ಳ ಬೇಕು.

2. ಪ್ರೆಷರ್  ಕುಕ್ಕರ್ ನಲ್ಲಿ ಎಣ್ಣೆ / ತುಪ್ಪವನ್ನು ಹಾಕಿ ಬಿಸಿಯಾದ ನಂತರ, ಇದಕ್ಕೆ ಲವಂಗ, ಲವಂಗದ ಎಲೆ/ಪಲಾವ್ ಎಲೆ, ಚಕ್ಕೆ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ.

3. ಈಗ ಗೋಡಂಬಿ - ಮೆಣಸು ಮಿಶ್ರಣವನ್ನು ಮತ್ತು ಚಿಟಿಕೆ ಉಪ್ಪು ಸೇರಿಸಿ ಬಾಡಿಸಿ ,ಎಣ್ಣೆ ಬಿಡುವ ತನಕ ನಿರಂತರವಾಗಿ ಬೆರೆಸಿ. ಮಿಶ್ರಣ ತಳ ಹಿಡಿಯದಂತೆ ಕೈಬಿಡದೆ ಬೆರಸುತ್ತಿರಬೇಕು.

4. ಕಾರ್ನ್/ಸಿಹಿ ಜೋಳ  ಸೇರಿಸಿ,  2 ನಿಮಿಷ ಹುರಿದುಕೊಳ್ಳಿ.

5. ತೊಳೆದ ಅಕ್ಕಿಯನ್ನು ಸೇರಿಸಿ ಮತ್ತು ಎಲ್ಲಾ ಮಸಾಲೆ ಚೆನ್ನಾಗಿ ಬೆರೆಯುವ ತನಕ ಅದನ್ನು 2 ನಿಮಿಷ ಕಲಸಿ.

6. ಈಗ ನೀರು, ಹಾಲು ಮತ್ತು ಉಪ್ಪು ಸೇರಿಸಿ.

7. ಈಗ ಪುದೀನ  ಸೇರಿಸಿ.

8. ಮುಚ್ಚಳವನ್ನು ಮುಚ್ಚಿ ಮತ್ತು 3 ಕೂಗು ಬರುವ ತನಕ ಬೇಯಿಸಿತಣ್ಣಗಾದ ಮೇಲೆ ತೆಗೆದು ಬೇಕಿದ್ದರೆ ಹೆಚ್ಚು ತುಪ್ಪ ಹಾಕಿ ಕಲಸಿ ಬಡಿಸಿ.

9. ಸಿಹಿ ಜೋಳ & ಮೆಣಸಿನ ಅನ್ನ ಬಿಸಿ ಬಿಸಿ ರುಚಿಕರವಾಗಿರುತ್ತದೆ. ಇಷ್ಟವಿದ್ದಲ್ಲಿ ಮೊಸರುಬಜ್ಜಿಯೊಂದಿಗೆ ಸವಿಯಿರಿ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

Sweet Corn Pepper Rice recipe for babies, kids kannada

 

 ಸಿಹಿ ಜೋಳ & ಮೆಣಸಿನ ಅನ್ನ ಮಾಡುವ ವಿಧಾನ :

1. ನೆನೆಸಿದ ಗೋಡಂಬಿ, ಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಸೇರಿಸಿ ನಯವಾಗಿ  ಮಿಕ್ಸರ್ ನಲ್ಲಿ  ರುಬ್ಬಿಕೊಳ್ಳ ಬೇಕು.

Sweet Corn Pudina Pepper Rice recipe for cough or cold

2. ಪ್ರೆಷರ್ ಕುಕ್ಕರ್ ನಲ್ಲಿ ಎಣ್ಣೆ / ತುಪ್ಪವನ್ನು ಹಾಕಿ ಬಿಸಿಯಾದ ನಂತರ, ಇದಕ್ಕೆ ಲವಂಗ, ಲವಂಗದ ಎಲೆ/ಪಲಾವ್ ಎಲೆ, ಚಕ್ಕೆ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ.

Sweet Corn Pudina Pepper Rice recipe for cough or cold

3. ಈಗ ಗೋಡಂಬಿಮೆಣಸು ಮಿಶ್ರಣವನ್ನು ಮತ್ತು ಚಿಟಿಕೆ ಉಪ್ಪು ಸೇರಿಸಿ ಬಾಡಿಸಿ ,ಎಣ್ಣೆ ಬಿಡುವ ತನಕ ನಿರಂತರವಾಗಿ ಬೆರೆಸಿ. ಮಿಶ್ರಣ ತಳ ಹಿಡಿಯದಂತೆ ಕೈಬಿಡದೆ ಬೆರಸುತ್ತಿರಬೇಕು.

4. ಸಿಹಿ ಜೋಳ  ಸೇರಿಸಿ,  2 ನಿಮಿಷ ಹುರಿದುಕೊಳ್ಳಿ.

Sweet Corn Pudina Pepper Rice recipe for cough or cold

5. ತೊಳೆದ ಅಕ್ಕಿಯನ್ನು ಸೇರಿಸಿ ಮತ್ತು ಎಲ್ಲಾ ಮಸಾಲೆ ಚೆನ್ನಾಗಿ ಬೆರೆಯುವ ತನಕ ಅದನ್ನು 2 ನಿಮಿಷ ಕಲಸಿ.

Sweet Corn Pudina Pepper Rice recipe for cough or cold

6. ಈಗ ನೀರು, ಹಾಲು ಮತ್ತು ಉಪ್ಪು ಸೇರಿಸಿ.

Sweet Corn Pudina Pepper Rice recipe for cough or cold

7. ಈಗ ಪುದೀನ ಸೇರಿಸಿ.

Sweet Corn Pudina Pepper Rice recipe for cough or cold

8. ಮುಚ್ಚಳವನ್ನು ಮುಚ್ಚಿ ಮತ್ತು 3 ಕೂಗು ಬರುವ ತನಕ ಬೇಯಿಸಿತಣ್ಣಗಾದ ಮೇಲೆ ತೆಗೆದು ಬೇಕಿದ್ದರೆ ಹೆಚ್ಚು ತುಪ್ಪ ಹಾಕಿ ಕಲಸಿ ಬಡಿಸಿ.

9. ಸಿಹಿ ಜೋಳ & ಮೆಣಸಿನ ಅನ್ನ ಬಿಸಿ ಬಿಸಿ ರುಚಿಕರವಾಗಿರುತ್ತದೆ. ಇಷ್ಟವಿದ್ದಲ್ಲಿ ಮೊಸರುಬಜ್ಜಿಯೊಂದಿಗೆ ಸವಿಯಿರಿ.

Sweet Corn Pepper Rice recipe for babies, kids kannada

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ನಮ್ಮ ಪ್ರತಿ video ಮೊದಲಿಗೆ ನೋಡಲು ನಮ್ಮ YouTube Channel Subscribe ಮಾಡಿ.

 


Spread the love