Spread the love
  • 58
    Shares

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

ಪಾಲಕ್ ಸೊಪ್ಪು ಅದರ ಆರೋಗ್ಯಕರವಾದ  ಪ್ರಯೋಜನಕ್ಕಾಗಿ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಮೂಲಿಕೆಗಳಲ್ಲಿ ಒಂದಾಗಿದೆ. ಪಾಲಕ್ ನಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದು ವರ್ಷದ ಎಲ್ಲಾ ಕಾಲದಲ್ಲೂ ಲಭ್ಯವಿರುತ್ತೆ. ಪಾಲಕ್ ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಶಿಶುಗಳಿಗೆ ಪಾಲಕ್ ಸೂಪ್ ಅರೆ ಘನ ಆಹಾರವನ್ನು ಪರಿಚಯಿಸಿದಾಗ ಹಾಗು ಹಾಲಿನ ಜೊತೆ ಪೂರಕ ಆಹಾರವನ್ನು ನೀಡುವಾಗ ಸಹಾಯಕ ಮತ್ತು ರುಚಿಕರವಾದ ಸೂಪ್.

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

Creamy Spinach Soup for Babies, Kids and Toddlers | Palak Recipe for Babies Hindi Kannada

ಶೀತ ಮತ್ತು ಕೆಮ್ಮಿಗೆ ಪಾಲಕ್ ಸೂಪ್ ಉತ್ತಮ ಪರಿಹಾರ.ಶಿಶುಗಳು ಮತ್ತು ಮಕ್ಕಳಿಗೆ  ಉತ್ತಮ ಪೌಷ್ಟಿಕಾಂಶ ನೀಡುತ್ತದೆ. ಸ್ಪಿನಾಚ್ ಅಥವಾ ಪಾಲಾಕ್ ಅನ್ನು ಅದರ ಆರೋಗ್ಯ ಪ್ರಯೋಜನಕ್ಕಾಗಿ ‘ಮೂಲಿಕೆಗಳ ರಾಜ’ ಎಂದು ಕರೆಯಲಾಗುತ್ತದೆ ಮತ್ತು ಪಾಲಕ್ ನಲ್ಲಿ ಐರನ್, ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಈ ಪಾಕವಿಧಾನದಲ್ಲಿ ಆಲೂಗೆಡ್ಡೆ ಉಪಯೋಗಿಸಿರುವುದರಿಂದ ಸೂಪ್ ರುಚಿಕರವಾಗಿರುತ್ತದೆ. ಆಲೂಗೆಡ್ಡೆ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ, ಇದು ಮೂಳೆಗಳಿಗೆ ಉತ್ತಮ ಮತ್ತು ಶಿಶುಗಳಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ನಾನು ಇಲ್ಲಿ ಬಳಸಿರುವ ಉಪಕರಣಗಳನ್ನು ಖರೀದಿಸಲು ನೀವು ಬಯಸಿದರೆ: ಡಿಸ್ಕೌಂಟ್ನಲ್ಲಿ Wonder Chef portable Blender ಕೊಳ್ಳಬಹುದು. ನೀವು ನಮ್ಮ ಇತರ ಸೂಪ್ ಪಾಕವಿಧಾನಗಳನ್ನು ಸಹ ಪ್ರಯತ್ನಿಸಬಹುದು: ಕ್ಯಾರೆಟ್ ಟೊಮೇಟೊ ಸೂಪ್, ತರಕಾರಿ ಬೇಳೆ ಸೂಪ್. ಪಾಲಕ್ ಅವಲಕ್ಕಿ , ಪಾಲಕ್ ಓಟ್ಸ್ ದೋಸೆ, ಪಾಲಕ್ ಪನೀರ್ ರೈಸ್: ನೀವು ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.

Video: ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

Kannada Subscribe Button TOTS AND MOMS

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

ಪಾಲಕ್ ನಲ್ಲಿ ಕಬ್ಬಿಣ, ವಿಟಮಿನ್ ಮತ್ತು ಮಿನರಲ್ ಹೇರಳವಾಗಿರುತ್ತದೆ. ಪಾಲಕ್ ದೇಹಕ್ಕೆ ಬೇಕಾಗಿರುವ ಎಲ್ಲಾ ಪೋಷಣೆಯ ಅಗತ್ಯವನ್ನು ಪೂರ್ಣಗೊಳಿಸಲು ಎಲ್ಲಾ ವಯಸ್ಸಿನ ಶಿಶುಗಳು ಮತ್ತು ವಯಸ್ಕರಿಗೆ ಸಹಾಯ ಮಾಡುವ ಗಿಡಮೂಲಿಕೆಗಳ ರಾಜ ಎಂದು ಪ್ರಶಿದ್ಧವಾಗಿದೆ. ಶಿಶುಗಳಿಗೆ ಕೆನೆಯುಕ್ತ  ಪಾಲಕ್ ಸೂಪ್ ಎಲ್ಲಾ ಕಾಲದಲ್ಲಿ ಸೇವಿಸಬಹುದು. ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಲು ಒಳ್ಳೆಯ ಸೂಪ್ ಆಗಿದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಪಾಲಕ್  - 1 ಕಪ್ (ಕತ್ತರಿಸಿದ)
  2. ಆಲೂಗಡ್ಡೆ - 1/2 (ಕತ್ತರಿಸಿದ)
  3. ಬೆಳ್ಳುಳ್ಳಿ - 1 ಎಸಳು
  4. ಬೆಣ್ಣೆ / ತುಪ್ಪ - 1 tsp
  5. ಈರುಳ್ಳಿ - 1/2 (ಕತ್ತರಿಸಿದ)
  6. ಜಾಯಿಕಾಯಿ - ಒಂದು ಚಿಟಕೆ ತುರಿದದ್ದು
  7. ನೀರು / ತರಕಾರಿ ಬೇಯಿಸಿದ ನೀರು  - 1 ಕಪ್
  8. ಜೀರಿಗೆ - 1 ಚಿಟಕೆ
  9. ಕಾಳು ಮೆಣಸು - 1 ಚಿಟಕೆ
  10. ಅರಿಶಿಣ - 1 ಚಿಟಕೆ
  11. ಉಪ್ಪು – ರುಚಿಗೆತಕ್ಕಷ್ಟು

ವಿಧಾನ

  1. ಕುಕ್ಕರ್ ತೆಗೆದುಕೊಂಡು ತುಪ್ಪ / ಬೆಣ್ಣೆಹಾಕಿ. ತುಪ್ಪ ಬಿಸಿಯಾದ ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು 2 ನಿಮಿಷಗಳ ಕಾಲ ಅದನ್ನು ಹುರಿಯಿರಿ. ಕತ್ತರಿಸಿದ ಆಲೂಗಡ್ಡೆ ಹಾಕಿ ಹುರಿದುಕೊಳ್ಳಿ.
  2. ತೊಳೆದು ಕತ್ತರಿಸಿದ ಪಾಲಕ್ ಎಲೆಗಳನ್ನು ಹಾಕಿ ನಂತರ ಜಾಯಿಕಾಯಿ ಪುಡಿ, ಜೀರಿಗೆ, ಮೆಣಸು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ . 2 ನಿಮಿಷ ಬೇಯಿಸಿ ನೀರುಹಾಕಿ.
  3. 2-3 ಸೀಟಿ ಬರುವ ತನಕ ಕುಕ್ಕರ್ ನಲ್ಲಿ  ಬೇಯಿಸಿ. ಕುಕ್ಕರ್ ತಣ್ಣಗಾದ ಮೇಲೆ ಎಲ್ಲಾ ತರಕಾರಿಗಳು ಚೆನ್ನಾಗಿ ಬೆಂದಿರುವುದನ್ನು  ಖಚಿತಪಡಿಸಿಕೊಳ್ಳಿ.
  4. ಮಿಕ್ಸರ್ ಅಥವಾ ಬ್ಲೆಂಡರ್ ನ ಸಹಾಯದಿಂದ ನುಣ್ಣಗೆ ರುಬ್ಬಿಕೊಳ್ಳಿ. ಸೂಪ್ ಬಿಸಿಬಿಸಿಯಾಗಿ ಸೇವಿಸಿ.
  5. ಶಿಶುಗಳಿಗೆ ಪಾಲಕ್ ಸೂಪ್ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | SPINACH SOUP recipe in Kannada

ಪಾಲಕ್ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು

  1. ಪಾಲಕ್  – 1 ಕಪ್ (ಕತ್ತರಿಸಿದ)
  2. ಆಲೂಗಡ್ಡೆ – 1/2 (ಕತ್ತರಿಸಿದ)
  3. ಬೆಳ್ಳುಳ್ಳಿ – 1 ಎಸಳು
  4. ಬೆಣ್ಣೆ / ತುಪ್ಪ – 1 tsp
  5. ಈರುಳ್ಳಿ – 1/2 (ಕತ್ತರಿಸಿದ)
  6. ಜಾಯಿಕಾಯಿ – ಒಂದು ಚಿಟಕೆ ತುರಿದದ್ದು
  7. ನೀರು / ತರಕಾರಿ ಬೇಯಿಸಿದ ನೀರು  – 1 ಕಪ್
  8. ಜೀರಿಗೆ – 1 ಚಿಟಕೆ
  9. ಕಾಳು ಮೆಣಸು – 1 ಚಿಟಕೆ
  10. ಅರಿಶಿಣ – 1 ಚಿಟಕೆ
  11. ಉಪ್ಪು – ರುಚಿಗೆತಕ್ಕಷ್ಟು

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ ಮಾಡುವ ವಿಧಾನ :

1.ಕುಕ್ಕರ್ ತೆಗೆದುಕೊಂಡು ತುಪ್ಪ / ಬೆಣ್ಣೆಹಾಕಿ. ತುಪ್ಪ ಬಿಸಿಯಾದ ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು 2 ನಿಮಿಷಗಳ ಕಾಲ ಅದನ್ನು ಹುರಿಯಿರಿ. ಕತ್ತರಿಸಿದ ಆಲೂಗಡ್ಡೆ ಹಾಕಿ ಹುರಿದುಕೊಳ್ಳಿ.

Spinach Soup for Babies

2.ತೊಳೆದು ಕತ್ತರಿಸಿದ ಪಾಲಕ್ ಎಲೆಗಳನ್ನು ಹಾಕಿ ನಂತರ ಜಾಯಿಕಾಯಿ ಪುಡಿ, ಜೀರಿಗೆ, ಮೆಣಸು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ . 2 ನಿಮಿಷ ಬೇಯಿಸಿ ನೀರುಹಾಕಿ.

Spinach Soup for Babies

3.2-3 ಸೀಟಿ ಬರುವ ತನಕ ಕುಕ್ಕರ್ ನಲ್ಲಿ  ಬೇಯಿಸಿ. ಕುಕ್ಕರ್ ತಣ್ಣಗಾದ ಮೇಲೆ ಎಲ್ಲಾ ತರಕಾರಿಗಳು ಚೆನ್ನಾಗಿ ಬೆಂದಿರುವುದನ್ನು  ಖಚಿತಪಡಿಸಿಕೊಳ್ಳಿ.

Spinach Soup for Babies

4.ಮಿಕ್ಸರ್ ಅಥವಾ ಬ್ಲೆಂಡರ್ ನ ಸಹಾಯದಿಂದ ನುಣ್ಣಗೆ ರುಬ್ಬಿಕೊಳ್ಳಿ. ಸೂಪ್ ಬಿಸಿಬಿಸಿಯಾಗಿ ಸೇವಿಸಿ.

Spinach Soup for Babies

5.ಶಿಶುಗಳಿಗೆ ಪಾಲಕ್ ಸೂಪ್ ಸಿದ್ಧವಾಗಿದೆ.

ಶಿಶುಗಳಿಗೆ ಮತ್ತು ಮಕ್ಕಳಿಗೆ ಪಾಲಕ್ ಸೂಪ್ | CREAMY SPINACH SOUP recipe in Kannada

Creamy Spinach Soup for Babies, Kids and Toddlers | Palak Recipe for Babies Hindi Kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 58
    Shares