ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
Read this article in
ನಮ್ಮೆಲ್ಲರಿಗೂ ತಿಳಿದಿದೆ ಶಿಶುಗಳಿಗೆ ತಾಯಿಯ ಎದೆ ಹಾಲು ಉತ್ತಮ ಪ್ರೋಟೀನ್ ನೀಡುವುದು. ಪುಟ್ಟ ಮಕ್ಕಳಿಗೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರೋಟೀನ್ ಸಮೃದ್ಧ ಆಹಾರವನ್ನು ನೀಡಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿ ಇತ್ಯಾದಿಗಳು ಪ್ರೋಟೀನ್ ಸಮೃದ್ಧ ಮೂಲಗಳಾಗಿವೆ. ಶಿಶುಗಳಿಗೆ ಮತ್ತು ಮಕ್ಕಳಿಗೆ ಪ್ರೋಟೀನ್ ಯುಕ್ತ ಸೋಯಾ ಚಂಕ್ಸ್ ಫ್ರೈ ಪಾಕವಿಧಾನ ಬಹಳ ಒಳ್ಳೆಯ ಸ್ನ್ಯಾಕ್ ಆಯ್ಕೆ.
ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ಸೋಯಾ ಸಸ್ಯಾಹಾರಿ ಊಟದ ಯೋಜನೆಯಲ್ಲಿ ಉತ್ತಮ ಪ್ರೋಟೀನ್ ಮೂಲ. ಮಾಂಸದ ಬದಲು ಸೋಯಾ ಚಂಕ್ಸ್ / ಸೋಯಾ ಮೀಟ್ / ನಗೆಟ್ಸ್ ಉತ್ತಮ ಆಯ್ಕೆ. ಭಾರತದಲ್ಲಿ ನುಟ್ರೆಲಾ ಮಾರಾಟವಾಗುತ್ತಿರುವ ಉತ್ತಮ ಸೋಯಾ ಆಹಾರದ ಬ್ರಾಂಡ್ ಗಳು . ಸೋಯಾ ಮಾಂಸ ಅಥವಾ ಸೋಯಾ ಚಂಕ್ಸ್ ಅಥವಾ ನಗ್ಗೆಟ್ಸ್ ಸೋಯಾಬೀನ್ ಎಣ್ಣೆಯನ್ನು ಹೊರತೆಗೆದು ಉಳಿದಿರುವದರಲ್ಲಿ ಮಾಡುವ ಉಪ-ಉತ್ಪನ್ನ. ಸೋಯಾ ಚಂಕ್ಸ್ ಫ್ರೈ / ನುಟ್ರೆಲಾ ನಗ್ಗೆಟ್ಸ್ ಫ್ರೈ ಪಾಕವಿಧಾನ ರುಚಿಕರವಾದ ಮತ್ತು ಅಗತ್ಯ ಪ್ರೊಟೀನ್ ಳನ್ನು ನೀಡುವ ಪಾಕವಿಧಾನ. ಪ್ರೋಟೀನ್ ಯುಕ್ತ ಅತ್ಯುತ್ತಮ ಆಹಾರ, ಲಘು ಆಹಾರ ಅಥವಾ ಸಂಜೆ ತಿಂಡಿ (ಸ್ನಾಕ್ ಗಳು) ತಯಾರಿಸಿ ಕೊಡಬಹುದು . ವಯಸ್ಕರಲ್ಲಿ ಚಪಾತಿ, ಅಕ್ಕಿ ಅಥವಾ ಯಾವುದೇ ಇತರ ಭಾರತೀಯ ಆಹಾರದಲ್ಲಿ ಸಹ ಹಾಕಬಹುದು . 8 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.
ನಮ್ಮ ಇತರ ಸೋಯಾ ಪಾಕವಿಧಾನಗಳನ್ನು ಪ್ರಯತ್ನಿಸಿ :
- ತ್ವರಿತ ಸೋಯಾ & ಅವಲಕ್ಕಿ ಸರಿ Instant Soya Poha Rice Cereal
- ಸಿಹಿ ಗೆಣಸು & ಸೋಯಾ ಟಿಕ್ಕಿ Sweet Potato Soya Cutlet
- ಸ್ನಾಕ್ಸ್ ಪಾಕವಿಧಾನಗಳ ಸಂಗ್ರಹ Snacks recipe collection
- ಸಿಹಿ ಪಾಕವಿಧಾನಗಳ ಸಂಗ್ರಹ Desserts recipe collection
Video: ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ/ ಸ್ನಾಕ್ಕ್ಸ್/ ಲಂಚ್ ಬಾಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು
- ಸೋಯಾ ಚಂಕ್ಸ್ ನೆನೆಸಿರುವ - 20
- ಎಣ್ಣೆ - 2 tbsp
- ಈರುಳ್ಳಿ - 1 ತೆಳುವಾಗಿ ಹೆಚ್ಚಿರುವುದು
- ಅರಿಶಿಣ - 1/4 tsp
- ಗರಂ ಮಸಾಲೆ - 1/2 tsp
- ಸಾಂಬಾರು ಪುಡಿ - 1/2 tsp
- ಕಾಳು ಮೆಣಸಿನ ಪುಡಿ - 1/2 tsp
- ಉಪ್ಪು – ರುಚಿಗೆ ತಕ್ಕಷ್ಟು
- ನೀರು - 1/4 ಕಪ್
ವಿಧಾನ
- ನೀರಿನಲ್ಲಿ ಸೋಯಾ ಚಂಕ್ಸ್ ಅನ್ನು 2 ಗಂಟೆಗಳ ಕಾಲ ನೆನೆಸಿಡಬೇಕು ಹೆಚ್ಚಿಗೆ ನೀರನ್ನು ಹಿಂಡಿ ತೆಗೆಯ ಬೇಕು. .
- ಒಂದು ಪ್ಯಾನ್ / ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವ ತನಕ ಹುರಿಯಿರಿ.
- ನೆನೆಸಿದ ಸೋಯಾ ಚಂಕ್ಸ್ ಅರಿಶಿಣ,ಉಪ್ಪು, ಗರಂ ಮಸಾಲೆ, ಸಾಂಬಾರ್ ಪುಡಿ ಕಾಳುಮೆಣಸಿನ ಪುಡಿ ಮಸಾಲೆಗಳನ್ನು ಹಾಕಿ ಮಿಶ್ರಣ ಮಾಡಿ.
- ನಂತರ ನೀರು ಹಾಕಿ 8 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ.
- ಮುಚ್ಚಳವನ್ನು ತೆಗೆದು ಆಗಾಗ ಮಿಶ್ರಣ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಹುರಿಯಿರಿ.
- ಕೊತ್ತಂಬರಿ ಸೊಪ್ಪು ಹಾಕಿ ಮತ್ತು ಬಿಸಿ ಬಿಸಿ ತಿನ್ನುವುದು ರುಚಿಕರವಾಗಿರುತ್ತದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ
ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ಸೋಯಾ ಚಂಕ್ಸ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು :
- ಸೋಯಾ ಚಂಕ್ಸ್ ನೆನೆಸಿರುವ – 20
- ಎಣ್ಣೆ – 2 tbsp
- ಈರುಳ್ಳಿ – 1 ತೆಳುವಾಗಿ ಹೆಚ್ಚಿರುವುದು
- ಅರಿಶಿಣ – 1/4 tsp
- ಗರಂ ಮಸಾಲೆ – 1/2 tsp
- ಸಾಂಬಾರು ಪುಡಿ – 1/2 tsp
- ಕಾಳು ಮೆಣಸಿನ ಪುಡಿ – 1/2 tsp
- ಉಪ್ಪು – ರುಚಿಗೆ ತಕ್ಕಷ್ಟು
- ನೀರು – 1/4 ಕಪ್
ಸೋಯಾ ಚಂಕ್ಸ್ ಫ್ರೈ ಮಾಡುವ ವಿಧಾನ :
1. ನೀರಿನಲ್ಲಿ ಸೋಯಾ ಚಂಕ್ಸ್ ಅನ್ನು 2 ಗಂಟೆಗಳ ಕಾಲ ನೆನೆಸಿಡಬೇಕು ಹೆಚ್ಚಿಗೆ ನೀರನ್ನು ಹಿಂಡಿ ತೆಗೆಯ ಬೇಕು. .
2. ಒಂದು ಪ್ಯಾನ್ / ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವ ತನಕ ಹುರಿಯಿರಿ.
3. ನೆನೆಸಿದ ಸೋಯಾ ಚಂಕ್ಸ್ ಅರಿಶಿಣ,ಉಪ್ಪು, ಗರಂ ಮಸಾಲೆ, ಸಾಂಬಾರ್ ಪುಡಿ ಕಾಳುಮೆಣಸಿನ ಪುಡಿ ಮಸಾಲೆಗಳನ್ನು ಹಾಕಿ ಮಿಶ್ರಣ ಮಾಡಿ.
4. ನಂತರ ನೀರು ಹಾಕಿ 8 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ.
5. ಮುಚ್ಚಳವನ್ನು ತೆಗೆದು ಆಗಾಗ ಮಿಶ್ರಣ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಹುರಿಯಿರಿ.
6. ಕೊತ್ತಂಬರಿ ಸೊಪ್ಪು ಹಾಕಿ ಮತ್ತು ಬಿಸಿ ಬಿಸಿ ತಿನ್ನುವುದು ರುಚಿಕರವಾಗಿರುತ್ತದೆ.
ಸೋಯಾ ಚಂಕ್ಸ್ ಫ್ರೈ | Soya Chunks Fry recipe in Kannada
ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.