Spread the love
  • 29
    Shares

ಮೊಟ್ಟೆ ಅವಲಕ್ಕಿ |Scrambled Egg Poha recipe in KannadaScrambled-Egg-Poha for babies kannada hindi recipe

ಮೊಟ್ಟೆಗಳಲ್ಲಿ ಸಂಪೂರ್ಣ ಸಮತೋಲನವಾಗಿರುವ ಕೊಬ್ಬಿನ ಅಂಶ, ಪ್ರೊಟೀನ್, ವಿಟಮಿನ್ D ಸಮೃದ್ಧವಾಗಿರುತ್ತದೆ. ಒಮೆಗಾ 3 ಫ್ಯಾಟಿ ಆಸಿಡ್ ಗಳ  ಉತ್ತಮ ಪ್ರಮಾಣವನ್ನು ಹೊಂದಿರುತ್ತವೆ. ಈ ಪಾಕವಿಧಾನದಲ್ಲಿ ಪ್ರಮುಖವಾದ  ಘಟಕಾಂಶವೆಂದರೆ ಅವಲಕ್ಕಿ, ಇದರಲ್ಲಿ ಆರೋಗ್ಯಕರವಾದ ಕಾರ್ಬೋಹೈಡ್ರೇಟ್ ಗಳು ಮತ್ತು  ಅಧಿಕ ಕಬ್ಬಿಣದ ಅಂಶವಿರುತ್ತದೆ. ಗ್ಲುಟನ್ ರಹಿತವಾಗಿದ್ದು  ಶೀಘ್ರವಾಗಿ ತೈಯಾರಿಸಬಹುದು. ಸ್ಕ್ರ್ಯಾಂಬಲ್ಡ್  ( ಮಿಶ್ರಣ ಮಾಡಿರುವ ಮೊಟ್ಟೆ ) ಮೊಟ್ಟೆ ಅವಲಕ್ಕಿಯಲ್ಲಿ ತುಂಬಾ ಕಡಿಮೆ ಪದಾರ್ಥಗಳನ್ನು ಬಳಸಿ ಮಾಡಲಾಗಿದೆ. ಮೊಟ್ಟೆ ಅವಲಕ್ಕಿಯನ್ನು  ಉಪಹಾರ, ಊಟ ಅಥವಾ ಭೋಜನಕ್ಕೆ ಬಹಳ ಸುಲಭವಾಗಿ ಮಾಡಬಹುದು. ಇದು ಆರೋಗ್ಯಕರ ಸ್ನ್ಯಾಕ್  ಬಾಕ್ಸ್ ಆಯ್ಕೆ.

ಮೊಟ್ಟೆಗಳನ್ನು 8 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು. ಒಂದು ವರ್ಷದೊಳಗಿನ ಶಿಶುಗಳಿಗೆ ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ನೀಡಬೇಕು. ಶಿಶುಗಳಿಗೆ ಮೊಟ್ಟೆಯ ಹಳದಿ ಭಾಗವನ್ನು ಬಳಸಿ ಈ ಪಾಕವಿಧಾನವನ್ನು ತಯಾರಿಸಬಹುದು. ಭಾರತೀಯ ಮಸಾಲೆಗಳಿಗೆ ಅವಲಕ್ಕಿ ಮತ್ತು ಮೊಟ್ಟೆಯ ಸಂಯೋಜನೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದೆ ರೀತಿಯಲ್ಲಿ ಓರೆಗಾನೊ, ಮೆಣಸಿನಕಾಯಿ ಚೂರುಗಳು (chilli flakes) ಹಾಕಿ ಇಟಾಲಿಯನ್ ಭಕ್ಸ್ಯ ಕೂಡ ಮಾಡಬಹುದು.

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ ನೋಡಿ :

Video: ಮೊಟ್ಟೆ ಅವಲಕ್ಕಿ |Scrambled Egg Poha recipe in Kannada

Kannada Subscribe Button TOTS AND MOMS

ಮೊಟ್ಟೆ ಅವಲಕ್ಕಿ |Scrambled Egg Poha recipe in Kannada

ಮೊಟ್ಟೆ ಅವಲಕ್ಕಿ |Scrambled Egg Poha recipe in Kannada

ಮಕ್ಕಳ ಆಹಾರದಲ್ಲಿ ಮೊಟ್ಟೆ ಉಪಯೋಗಿಸುವುದರಿಂದ ಸಮತೋಲನ ಕೊಬ್ಬು ಮತ್ತು ಪ್ರೋಟೀನ್ ನೀಡಬಹುದು

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಬೆಳಗಿನ ತಿಂಡಿ, ಸ್ನ್ಯಾಕ್, ಊಟ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಮೊಟ್ಟೆ - 2
  2. ಅವಲಕ್ಕಿ - 1 ಕಪ್
  3. ಎಣ್ಣೆ ಬೇಕಾಗುವಷ್ಟು
  4. ಕರಿಬೇವು ಸ್ವಲ್ಪ
  5. ಈರುಳ್ಳಿ - 1/2 ಹೆಚ್ಚಿರುವ
  6. ಟೊಮೇಟೊ - 1/2
  7. ದಪ್ಪ ಮೆಣಸಿನಕಾಯಿ - 1/2
  8. ಕಾಳು ಮೆಣಸಿನ  ಪುಡಿ / ಅಚ್ಚ ಖಾರದ ಪುಡಿ - 1 tsp
  9. ಅರಿಶಿಣ - 1/2 tsp
  10. ಉಪ್ಪು ರುಚಿಗೆ ತಕ್ಕಷ್ಟು
  11. ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ

ವಿಧಾನ

  1. ಅವಲಕ್ಕಿಯನ್ನು  ತೊಳೆದು ಜರಡಿಯಲ್ಲಿ ಸ್ವಲ್ಪ ಹೊತ್ತು ಇಡಿ. ಅವಲಕ್ಕಿಯನ್ನು ನೆನೆಸಬೇಡಿ, ಅವಲಕ್ಕಿ ಉದುರಾಗಿರಬೇಕು . ತುಂಬಾ ಮೃದುವಾದ ಅವಲಕ್ಕಿ ಬೇಕಾದರೆ 2 ನಿಮಿಷ ಮಾತ್ರ ನೆನೆಸಿ ಹೆಚ್ಚಿನ ನೀರನ್ನು ಶೋಧಿಸಿ ತೆಗೆದು ಇಟ್ಟುಕೊಳ್ಳಿ.
  2. ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಕರಿಬೇವಿನ ಎಲೆ, ಈರುಳ್ಳಿ ಮತ್ತು ಟೊಮೇಟೊ ಹಾಕಿ.
  3. ಎಲ್ಲಾ ಸಾಮಾಗ್ರಿಗಳು ಬೆಂದ ಮೇಲೆ (ವಿಸ್ಕ್ ) ಮಿಶ್ರಣ ಮಾಡಿರುವ ಮೊಟ್ಟೆಯನ್ನು ಮದ್ಯ ಹಾಕಿ ಒಂದು ನಿಮಿಷ ಬೇಯಿಸಿ ನಂತರ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕಲಸಿ.
  4. ತದನಂತರ ಮಸಾಲೆಗಳಾದ ಅರಿಶಿಣ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಹುರಿಯಿರಿ ನಂತರ ಅವಲಕ್ಕಿ ಹಾಕಿ.
  5. ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ  ಸಣ್ಣ ಉರಿಯಲ್ಲಿ 2 ನಿಮಿಷ ಬೇಯಿಸಿ.
  6. ಮೊಟ್ಟೆ ಅವಲಕ್ಕಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಮೊಟ್ಟೆ ಅವಲಕ್ಕಿ |Scrambled Egg Poha recipe in KannadaScrambled-Egg-Poha for babies kannada hindi recipe

ಮೊಟ್ಟೆ ಅವಲಕ್ಕಿ ಮಾಡಲು ಬೇಕಾಗುವ ಸಾಮಗ್ರಿಗಳು :

  1. ಮೊಟ್ಟೆ – 2
  2. ಅವಲಕ್ಕಿ – 1 ಕಪ್
  3. ಎಣ್ಣೆ ಬೇಕಾಗುವಷ್ಟು
  4. ಕರಿಬೇವು ಸ್ವಲ್ಪ
  5. ಈರುಳ್ಳಿ – 1/2 ಹೆಚ್ಚಿರುವ
  6. ಟೊಮೇಟೊ – 1/2
  7. ದಪ್ಪ ಮೆಣಸಿನಕಾಯಿ – 1/2
  8. ಕಾಳು ಮೆಣಸಿನ  ಪುಡಿ / ಅಚ್ಚ ಖಾರದ ಪುಡಿ – 1 tsp
  9. ಅರಿಶಿಣ – 1/2 tsp
  10. ಉಪ್ಪು ರುಚಿಗೆ ತಕ್ಕಷ್ಟು
  11. ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ

ಮೊಟ್ಟೆ ಅವಲಕ್ಕಿ ಮಾಡುವ ವಿಧಾನ :

1. ಅವಲಕ್ಕಿಯನ್ನು  ತೊಳೆದು ಜರಡಿಯಲ್ಲಿ ಸ್ವಲ್ಪ ಹೊತ್ತು ಇಡಿ. ಅವಲಕ್ಕಿಯನ್ನು ನೆನೆಸಬೇಡಿ, ಅವಲಕ್ಕಿ ಉದುರಾಗಿರಬೇಕು . ತುಂಬಾ ಮೃದುವಾದ ಅವಲಕ್ಕಿ ಬೇಕಾದರೆ 2 ನಿಮಿಷ ಮಾತ್ರ ನೆನೆಸಿ ಹೆಚ್ಚಿನ ನೀರನ್ನು ಶೋಧಿಸಿ ತೆಗೆದು ಇಟ್ಟುಕೊಳ್ಳಿ.Scrambled-Egg-Poha_kannada2

2. ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಕರಿಬೇವಿನ ಎಲೆ, ಈರುಳ್ಳಿ ಮತ್ತು ಟೊಮೇಟೊ ಹಾಕಿ.Scrambled-Egg-Poha_kannada2

3. ಎಲ್ಲಾ ಸಾಮಾಗ್ರಿಗಳು ಬೆಂದ ಮೇಲೆ (ವಿಸ್ಕ್ ) ಮಿಶ್ರಣ ಮಾಡಿರುವ ಮೊಟ್ಟೆಯನ್ನು ಮದ್ಯ ಹಾಕಿ ಒಂದು ನಿಮಿಷ ಬೇಯಿಸಿ ನಂತರ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕಲಸಿ.Scrambled-Egg-Poha_kannada2

4. ತದನಂತರ ಮಸಾಲೆಗಳಾದ ಅರಿಶಿಣ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಹುರಿಯಿರಿ ನಂತರ ಅವಲಕ್ಕಿ ಹಾಕಿ.Scrambled-Egg-Poha_kannada2

5. ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ  ಸಣ್ಣ ಉರಿಯಲ್ಲಿ 2 ನಿಮಿಷ ಬೇಯಿಸಿ.Scrambled-Egg-Poha_kannada2

6. ಮೊಟ್ಟೆ ಅವಲಕ್ಕಿ ತಯಾರಾಗಿದೆ.

ಮೊಟ್ಟೆ ಅವಲಕ್ಕಿ |Scrambled Egg Poha recipe in Kannada Scrambled-Egg-Poha for babies kannada hindi recipe

ಸೂಚನೆಗಳು :

  1. ಒಂದು ವರ್ಷ ಒಳಗಿನ ಶಿಶುಗಳಿಗೆ ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಉಪಯೋಗಿಸಿ ತಯಾರಿಸಿಕೊಡಿ.
  2. ಶಿಶುಗಳ ರುಚಿ ಮತ್ತು ವಯಸ್ಸಿಗೆ ಅನುಗುಣವಾಗಿ ಮಸಾಲೆಗಳನ್ನು ಉಪಯೋಗಿಸಿ.
  3. ಅವಲಕ್ಕಿಯನ್ನು ನೆನೆಸಿ ಮೃದುವಾಗಿ ಮಸೆದು ಶಿಶುಗಳಿಗೆ ನೀಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 29
    Shares