Spread the love
  • 4
    Shares

ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada Savory Puffed Rice for Toddlers & Kids murmura kadalepuri hindi kannada recipe bananti postpartum mom

ಕಡಲೆಪುರಿ ಲಘುವಾದ ಆಹಾರ.  ಯಾವಾಗಲೂ ಮನೆಯಲ್ಲಿ ಲಭ್ಯವಿರುವಂತಹ ಪದಾರ್ಥ. ಅಕ್ಕಿಯಿಂದ ತಯಾರಿಸಲಾಗಿರುತ್ತದೆ ಮತ್ತು ಗರಿಗರಿಯಾಗಿರುತ್ತದೆ. ತಯಾರಿಸಿದ ಮಸಾಲೆ ಕಡಲೆಪುರಿ  ಅಥವಾ ಮುರ್ಮುರ ಮಕ್ಕಳಿಗೆ ನೀಡಲು ಲಘುವಾದ ಸಂಜೆ ಉಪಾಹಾರ/ತಿಂಡಿ. ನಿಮ್ಮ ಮಕ್ಕಳಿಗೆ ಇಷ್ಟವಾಗುವ ಪ್ರಕಾರ ಮಸಾಲೆಗಳನ್ನ ಹಾಕಿ ಹತ್ತು ನಿಮಿಷಗಳಲ್ಲಿ ಸಿದ್ಧ ಮಾಡಬಹುದು.ನಮ್ಮ ಇತರ ಸ್ನಾಕ್ಸ್ ಪಾಕವಿಧಾನಗಳ ಸಂಗ್ರಹದಲ್ಲಿರುವ ಪಾಕವಿಧಾನಗಳನ್ನು ಪ್ರಯತ್ನಿಸಿ.

ಕಡಲೆಪುರಿಯನ್ನು ಯಾವುದೇ ಮಸಾಲೆ ಹಾಕದೆ ಶಿಶುಗಳಿಗೆ ಕೈಯಿಂದ ತಿನ್ನುವ ಆಹಾರವಾಗಿ ನೀಡಬಹುದು.  ಪ್ಯಾಕ್ ಮಾಡಲಾದ ಜಂಕ್ ಆಹಾರಗಳನ್ನು ನೀಡುವ ಬದಲಾಗಿ, ಕುಟುಂಬದ ಜೊತೆ ಪ್ರಯಾಣ ಅಥವಾ ವಿಹಾರಕ್ಕೆ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಮುಂದಿನ ದಿನಗಳಲ್ಲಿ  ರಜಾದಿನಗಳಿಗೆ ಉಪಯುಕ್ತವಾಗುವ ಲಘು ಉಪಹಾರ/ ಸ್ನಾಕ್ಸ್ ಪಾಕವಿಧಾನಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಪ್ರಯಾಣಕ್ಕೆ ಉಪಯುಕ್ತವಾಗುವ ಆಹಾರದ ಬಗ್ಗೆ ವಿವರವಾದ ಮಾಹಿತಿ ಪಡೆಯಿರಿ.

ಬಾಣಂತನದಲ್ಲಿ ಕಡಲೆಪುರಿ ಒಗ್ಗರಣೆಯನ್ನು ತುಪ್ಪದಲ್ಲಿ ತಯಾರಿಸುವುದರಿಂದ ಹಾಲುಣಿಸುವ ತಾಯಂದಿರಿಗೆ ಲಘು ಉಪಹಾರವಾಗಿ ನೀಡಲು ಒಳ್ಳೆಯ ಪಾಕವಿಧಾನ. ಪೌಷ್ಟಿಕಾಂಶ ಹೆಚ್ಚಿಸಲು ಕಡಲೆಬೀಜವನ್ನು ಹಾಕಲಾಗಿದೆ. ಮಕ್ಕಳಿಗೆ ಸ್ನಾಕ್ಸ್ ಬಾಕ್ಸ್ ಗೆ ಒಳ್ಳೆಯ ಆಯ್ಕೆ.

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ : –

Video: ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada

Kannada Subscribe Button TOTS AND MOMS

ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada

ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada

ಕೆಲವೇ ನಿಮಿಷಗಳಲ್ಲಿ ಕಡಲೆಪುರಿ, ತುಪ್ಪ ಮತ್ತು ಕಡಲೆಬೀಜ ಹಾಕಿ ಕಡಲೆಪುರಿ ಒಗ್ಗರಣೆ ತಯಾರಿಸಬಹುದು. ಬಾಣಂತಿಗೆ ಮನೆಯಲ್ಲಿ ಆರೋಗ್ಯಕರವಾದ ತಿಂಡಿಗಳನ್ನು ತಯಾರಿಸಿ ನೀಡಬಹುದು. ಮಕ್ಕಳಿಗೆ ರಜೆ ದಿನಗಳಲ್ಲಿ ಕಡಲೆಪುರಿ ಒಗ್ಗರಣೆ ಸ್ನ್ಯಾಕ್ ರೂಪದಲ್ಲಿ ನೀಡಲು ಒಳ್ಳೆಯ ಆಯ್ಕೆ. ಸ್ನ್ಯಾಕ್ ಬಾಕ್ಸ್ ಗೆ ಕೂಡ ನೀಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸ್ನಾಕ್ಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಕಡಲೆಪುರಿ/ ಅವಲಕ್ಕಿ ಪುರಿ - 5 ಲೀಟರ್
  2. ತುಪ್ಪ - 1 ಕಪ್
  3. ಸಾಸಿವೆ - 1 tbsp
  4. ಕಡಲೆಕಾಯಿ - 100 gms
  5. ಒಣಮೆಣಸಿನಕಾಯಿ/ ಬ್ಯಾಡಗಿ - 5
  6. ಬೆಳ್ಳುಳ್ಳಿ - 20
  7. ಬಾದಾಮಿ - 50 gms
  8. ಗೋಡಂಬಿ - 50 gms
  9. ಕರಿಬೇವಿನ ಎಲೆಗಳು - 1/2 cup
  10. ಅಚ್ಚ ಖಾರದ ಪುಡಿ - 1/2 tbsp
  11. ಅರಿಶಿನ - 1 tbsp
  12. ಕರಿ ಮೆಣಸಿನ ಪುಡಿ - 1 tbsp
  13. ಉಪ್ಪು - 1/2 tbsp
  14. ಇಂಗು - 1/2 tbsp
  15. ಜೀರಿಗೆ - 2 tsp
  16. ಒಣ ಕೊಬ್ಬರಿ - 1/2 cup

ವಿಧಾನ

  1. ಒಂದು ದೊಡ್ಡ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿದ ಮೇಲೆ ಸಾಸಿವೆ ಹಾಕಿ ಸಿಡಿಯಲು ಬಿಡಿ.
  2. ಕಡಲೇಕಾಯಿ ಬೀಜ ಹಾಕಿ 3 ನಿಮಿಷ ಹುರಿಯಿರಿ. ಇದಕ್ಕೆ ಒಣ ಮೆಣಸಿನಕಾಯಿ, ಬೆಳುಲ್ಲಿ ಹಾಕಿ 2 ನಿಮಿಷ ಹುರಿಯಿರಿ. ತದನಂತರ ಇದಕ್ಕೆ ಸಣ್ಣಗೆ ಹೆಚ್ಚಿರುವ ಬಾದಾಮಿ ಮತ್ತು ಗೋಡಂಬಿ ಹಾಕಿ 2 ನಿಮಿಷ ಹುರಿಯಿರಿ.
  3. ಕರಿಬೇವಿನ ಎಲೆ ಹಾಕಿ. ಗರಿಗರಿಯಾದನಂತರ ಅಚ್ಚ ಖಾರದ ಪುಡಿ, ಕರಿ ಮೆಣಸಿನ ಪುಡಿ, ಅರಿಶಿನ, ಇಂಗು, ಉಪ್ಪು ಮತ್ತು ಜೀರಿಗೆ ಹಾಕಿ ಮಿಶ್ರಣ ಮಾಡಿ.
  4. ಇದಾದನಂತರ  ಹೆಚ್ಚಿರುವ ಒಣಕೊಬ್ಬರಿ ಹಾಕಿ ಎರಡು ನಿಮಿಷ ಮಸಾಲೆಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯನ್ನು ಕೆಳಗೆ ಇಳಿಸಿದ ನಂತರ ಕಡಲೆಪುರಿಯನ್ನು ಹಾಕಿ. ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿ.
  5. ಎಲ್ಲ ಪದಾರ್ಥಗಳನ್ನು 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ ಪುರಿ ಗರಿಗರಿಯಾಗಿರಬೇಕು. ತಣ್ಣಗಾದ ನಂತರ ಡಬ್ಬದಲ್ಲಿ ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಿಸಿಡಿ.
  6. ಕಡಲೆಪುರಿ ಒಗ್ಗರಣೆ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada

Savory Puffed Rice for Toddlers & Kids murmura kadalepuri hindi kannada recipe bananti postpartum mom

ಕಡಲೆಪುರಿ ಒಗ್ಗರಣೆ ಮಾಡಲು ಬೇಕಾಗುವ ಸಾಮಗ್ರಿಗಳು :

  1. ಕಡಲೆಪುರಿ/ ಅವಲಕ್ಕಿ ಪುರಿ – 5 ಲೀಟರ್
  2. ತುಪ್ಪ – 1 ಕಪ್
  3. ಸಾಸಿವೆ – 1 tbsp
  4. ಕಡಲೆಕಾಯಿ – 100 gms
  5. ಒಣಮೆಣಸಿನಕಾಯಿ/ ಬ್ಯಾಡಗಿ – 5
  6. ಬೆಳ್ಳುಳ್ಳಿ – 20
  7. ಬಾದಾಮಿ – 50 gms
  8. ಗೋಡಂಬಿ – 50 gms
  9. ಕರಿಬೇವಿನ ಎಲೆಗಳು – 1/2 cup
  10. ಅಚ್ಚ ಖಾರದ ಪುಡಿ – 1/2 tbsp
  11. ಅರಿಶಿನ – 1 tbsp
  12. ಕರಿ ಮೆಣಸಿನ ಪುಡಿ – 1 tbsp
  13. ಉಪ್ಪು – 1/2 tbsp
  14. ಇಂಗು – 1/2 tbsp
  15. ಜೀರಿಗೆ – 2 tsp
  16. ಒಣ ಕೊಬ್ಬರಿ – 1/2 cup

ಕಡಲೆಪುರಿ ಒಗ್ಗರಣೆ ಮಾಡುವ ವಿಧಾನ :

1. ಒಂದು ದೊಡ್ಡ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿದ ಮೇಲೆ ಸಾಸಿವೆ ಹಾಕಿ ಸಿಡಿಯಲು ಬಿಡಿ.

Savory Puffed Rice for Toddlers & Kids murmura kadalepuri hindi kannada recipe

2. ಕಡಲೇಕಾಯಿ ಬೀಜ ಹಾಕಿ 3 ನಿಮಿಷ ಹುರಿಯಿರಿ. ಇದಕ್ಕೆ ಒಣ ಮೆಣಸಿನಕಾಯಿ, ಬೆಳುಲ್ಲಿ ಹಾಕಿ 2 ನಿಮಿಷ ಹುರಿಯಿರಿ. ತದನಂತರ ಇದಕ್ಕೆ ಸಣ್ಣಗೆ ಹೆಚ್ಚಿರುವ ಬಾದಾಮಿ ಮತ್ತು ಗೋಡಂಬಿ ಹಾಕಿ 2 ನಿಮಿಷ ಹುರಿಯಿರಿ.

Savory Puffed Rice for Toddlers & Kids murmura kadalepuri hindi kannada recipe

3. ಕರಿಬೇವಿನ ಎಲೆ ಹಾಕಿ. ಗರಿಗರಿಯಾದನಂತರ ಅಚ್ಚ ಖಾರದ ಪುಡಿ, ಕರಿ ಮೆಣಸಿನ ಪುಡಿ, ಅರಿಶಿನ, ಇಂಗು, ಉಪ್ಪು ಮತ್ತು ಜೀರಿಗೆ ಹಾಕಿ ಮಿಶ್ರಣ ಮಾಡಿ.

Savory Puffed Rice for Toddlers & Kids murmura kadalepuri hindi kannada recipe

4. ಇದಾದನಂತರ  ಹೆಚ್ಚಿರುವ ಒಣಕೊಬ್ಬರಿ ಹಾಕಿ ಎರಡು ನಿಮಿಷ ಮಸಾಲೆಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯನ್ನು ಕೆಳಗೆ ಇಳಿಸಿದ ನಂತರ ಕಡಲೆಪುರಿಯನ್ನು ಹಾಕಿ. ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿ.

Savory Puffed Rice for Toddlers & Kids murmura kadalepuri hindi kannada recipe

5. ಎಲ್ಲ ಪದಾರ್ಥಗಳನ್ನು 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ ಪುರಿ ಗರಿಗರಿಯಾಗಿರಬೇಕು. ತಣ್ಣಗಾದ ನಂತರ ಡಬ್ಬದಲ್ಲಿ ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಿಸಿಡಿ.

Savory Puffed Rice for Toddlers & Kids murmura kadalepuri hindi kannada recipe

6. ಕಡಲೆಪುರಿ ಒಗ್ಗರಣೆ ತಯಾರಾಗಿದೆ.

ಬಾಣಂತಿ ಪುರಿ | ಕಡಲೆಪುರಿ ಒಗ್ಗರಣೆ | Savory Puffed Rice recipe in Kannada

Savory Puffed Rice for Toddlers & Kids murmura kadalepuri hindi kannada recipe bananti postpartum mom

ಸೂಚನೆ

  1. ಪೌಷ್ಠಿಕಾಂಶ ಹೆಚ್ಚಿಸಲು ತುಪ್ಪ ಮತ್ತು ಒಣ ಹಣ್ಣುಗಳನ್ನು ಉಪಯೋಗಿಸಲಾಗಿದೆ. ಬೇಕಾದರೆ ತುಪ್ಪದ ಬದಲು ಎಣ್ಣೆ ಹಾಕಿ ತಯಾರಿಸಬಹುದು.  
  2. ಕಡಲೆ ಪುರಿಯ ಗರಿಯನ್ನು ಕಾಪಾಡಲು ತಯಾರಿಸಿ ತಣ್ಣಗಾದ ನಂತರ ತಕ್ಷಣ ಡಬ್ಬಿಗೆ ಹಾಕಿ ಮುಚ್ಚಿಡಿ.
  3. 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಒಣ ಕೊಬ್ಬರಿ, ಉಪ್ಪು , ಮಸಾಲೆಯನ್ನು ಹಾಕದೆ ತಯಾರಿಸಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 4
    Shares