Spread the love

ಶಿಶುಗಳು ಮತ್ತು ಮಕ್ಕಳಿಗೆ  ಕ್ಯಾರೆಟ್ ಮತ್ತು ಓಟ್ಸ್ ಗಂಜಿ. ಸಿಹಿ ಇಷ್ಟ ಪಡದ ಮಕ್ಕಳಿಗೆ ಖಾರದ ಸರಿ. ನಾವು ನಮ್ಮ ಬ್ಲಾಗ್ ಅನೇಕ ಪಾಕವಿಧಾನಗಳ ವಿಭಿನ್ನವಾದ ರುಚಿಯ ಸರಿಗಳನ್ನು ಮಕ್ಕಳಿಗೆ ಪರಿಚಯಿಸಿದ್ದೇವೆ.  ಶಿಶುಗಳು ಮತ್ತು ಕುಟುಂಬಕ್ಕೆ ಖಾರದ ಕ್ಯಾರೆಟ್ ಓಟ್ಸ್ ಸರಿ ಪಾಕವಿಧಾನವನ್ನು ಮಾಡಲು ಹೆಚ್ಚು ಪದಾರ್ಥಗಳ ಅಗತ್ಯವಿಲ್ಲ. ಆರೋಗ್ಯಕರವಾದ  ಸರಳ ಮತ್ತು  ಉತ್ತಮ ಪೌಷ್ಠಿಕಾಂಶದ ಮೌಲ್ಯಗಳು ಹೊಂದಿರುವುದು ಮತ್ತು ಮಕ್ಕಳಿಗೆ ತಿನ್ನುವ ಹಂಬಲವನ್ನು ಹೆಚ್ಚಿಸುವುದು. ಆರೋಗ್ಯಕರ ಖಾರದ ಓಟ್ಸ್ ಪಾಕವಿಧಾನ ದೈನಂದಿನ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವುದು.

ಕ್ಯಾರಟ್ & ಓಟ್ಸ್ ಸರಿ | Savory Carrot Oats Porridge recipe in Kannada

SAVORY CARROT OATS PORRIDGE for Babies, Toddlers, Kids & Family Health benefits of Carrot for kids and babies

ಕ್ಯಾರಟ್ & ಓಟ್ಸ್ ಸರಿ | Savory Carrot Oats Porridge recipe in Kannada

ಕ್ಯಾರಟ್ & ಓಟ್ಸ್ ಸರಿ | Savory Carrot Oats Porridge recipe in Kannada

ಖಾರದ ಓಟ್ಸ್ ಪಾಕವಿಧಾನ ಆರೋಗ್ಯಕರ ಪೌಷ್ಟಿಕ ಮತ್ತು ತಯಾರಿಸಲು ಸುಲಭವಾದ ಪಾಕವಿಧಾನ. ಮಕ್ಕಳಿಗೆ ಸಿಹಿ ಮತ್ತು ಖಾರದ ಎರಡು ಸಂಯೋಜನೆ ಮಾಡಿ ನೀಡಬಹುದು. ಸರಳ ಸುಲಭ, ಉತ್ತಮ ಪೌಷ್ಠಿಕಾಂಶದ ಮೌಲ್ಯಗಳು ಹೊಂದಿರುವ ಆರೋಗ್ಯಕರ ಖಾರದ ಓಟ್ಸ್ ಪಾಕವಿಧಾನ ದೈನಂದಿನ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸರಿ ,ಗಂಜಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಓಟ್ಸ್ - 2 tbsp Oats – 2 tbsp
  2. ಕ್ಯಾರೆಟ್ - 2 tsp Carrot – 2 tsp
  3. ನೀರು – ಕಪ್ Water – ¾ cup
  4. ಅರಿಶಿನ – ಒಂದು ಚಿಟಕೆ  Turmeric – Pinch
  5. ಜೀರಿಗೆ  – ಒಂದು ಚಿಟಕೆ Jeera – Pinch
  6. ಮೆಣಸು – ಒಂದು ಚಿಟಕೆ Pepper – Pinch
  7. ತುಪ್ಪ - 2 tsp Ghee 
  8. ಇಂಗು - ಒಂದು ಚಿಟಕೆ  Asafoetida- Pinch

ವಿಧಾನ

  1. ಮೇಲೆ ಪಟ್ಟಿಯಲ್ಲಿ ನೀಡಿರುವ ಎಲ್ಲಾ ಪದಾರ್ಥಗಳನ್ನು ಸುಲಭವಾಗಿ ಅಡುಗೆ ಮಾಡಲು ಸಿದ್ಧವಾಗಿಟ್ಟುಕೊಳ್ಳಿ. ಬಿಸಿಮಾಡಿದ ನಾನ್-ಸ್ಟಿಕ್ ಪ್ಯಾನ್‌ಗೆ/ಬಾಣಲೆಗೆ  ತುಪ್ಪ ಹಾಕಿ, ಬಿಸಿ ಮಾಡಿದ ನಂತರ ಜೀರಿಗೆ ಪುಡಿ ಮತ್ತು ಇಂಗು ಒಂದು ಚಿಟಕೆ ಹಾಕಿ. 
  2. ಚೆನ್ನಾಗಿ ಬೆರೆಸಿದ ನಂತರ ತುರಿದ ಕ್ಯಾರೆಟ್ ಮತ್ತು  ಒಂದು ಚಿಟಿಕೆ ಅರಿಶಿನ ಮತ್ತು ಮೆಣಸು ಪುಡಿ ಹಾಕಿ , ಸೇರಿಸಿದ ಎಲ್ಲಾ ಪದಾರ್ಥಗಳ ಜೊತೆ  ಕ್ಯಾರೆಟ್ ಚೆನ್ನಾಗಿ ಮಿಶ್ರಣ ಮಾಡಿ.
  3. ಬಿಸಿಯಾದ ನಾನ್-ಸ್ಟಿಕ್ ಪ್ಯಾನ್‌ಗೆ 3/4 ಕಪ್ ನೀರು ಹಾಕಿ ನಂತರ  ಓಟ್ಸ್ ಹಾಕಿ. ಮೇಲೆ ಸೇರಿಸಿದ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ.
  4. ಬೇಯಿಸಿದ ನಂತರ ಚೆನ್ನಾಗಿ ಮಿಶ್ರಣ ಮಾಡಿ ಬೆಚ್ಚಗೆ ನೀಡಿ.
  5. ಮಕ್ಕಳು ಕುಟುಂಬಕ್ಕೆ  ಬಿಸಿ ಮತ್ತು ರುಚಿಕರವಾದ ಖಾರದ ಕ್ಯಾರೆಟ್ ಓಟ್ಸ್ ಗಂಜಿ/ಸರಿ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ.

ಕ್ಯಾರಟ್ & ಓಟ್ಸ್ ಸರಿ | Savory Carrot Oats Porridge recipe in Kannada

SAVORY CARROT OATS PORRIDGE for Babies, Toddlers, Kids & Family

ಮಾಡುವ ವಿಧಾನ:

  1. ಮೇಲೆ ಪಟ್ಟಿಯಲ್ಲಿ ನೀಡಿರುವ ಎಲ್ಲಾ ಪದಾರ್ಥಗಳನ್ನು ಸುಲಭವಾಗಿ ಅಡುಗೆ ಮಾಡಲು ಸಿದ್ಧವಾಗಿಟ್ಟುಕೊಳ್ಳಿ. ಬಿಸಿಮಾಡಿದ ನಾನ್-ಸ್ಟಿಕ್ ಪ್ಯಾನ್‌ಗೆ/ಬಾಣಲೆಗೆ  ತುಪ್ಪ ಹಾಕಿ, ಬಿಸಿ ಮಾಡಿದ ನಂತರ ಜೀರಿಗೆ ಪುಡಿ ಮತ್ತು ಇಂಗು ಒಂದು ಚಿಟಕೆ ಹಾಕಿ. 
  2. ಚೆನ್ನಾಗಿ ಬೆರೆಸಿದ ನಂತರ ತುರಿದ ಕ್ಯಾರೆಟ್ ಮತ್ತು  ಒಂದು ಚಿಟಿಕೆ ಅರಿಶಿನ ಮತ್ತು ಮೆಣಸು ಪುಡಿ ಹಾಕಿ , ಸೇರಿಸಿದ ಎಲ್ಲಾ ಪದಾರ್ಥಗಳ ಜೊತೆ  ಕ್ಯಾರೆಟ್ ಚೆನ್ನಾಗಿ ಮಿಶ್ರಣ ಮಾಡಿ.
  3. ಬಿಸಿಯಾದ ನಾನ್-ಸ್ಟಿಕ್ ಪ್ಯಾನ್‌ಗೆ 3/4 ಕಪ್ ನೀರು ಹಾಕಿ ನಂತರ  ಓಟ್ಸ್ ಹಾಕಿ. ಮೇಲೆ ಸೇರಿಸಿದ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ.
  4. ಬೇಯಿಸಿದ ನಂತರ ಚೆನ್ನಾಗಿ ಮಿಶ್ರಣ ಮಾಡಿ ಬೆಚ್ಚಗೆ ನೀಡಿ.
  5. ಮಕ್ಕಳು ಕುಟುಂಬಕ್ಕೆ  ಬಿಸಿ ಮತ್ತು ರುಚಿಕರವಾದ ಖಾರದ ಕ್ಯಾರೆಟ್ ಓಟ್ಸ್ ಗಂಜಿ/ಸರಿ ಸಿದ್ಧವಾಗಿದೆ.

ಓಟ್ಸ್ನ ಪ್ರಯೋಜನಗಳು:

  • ಧಾನ್ಯದಲ್ಲಿ ಅಧಿಕ ನಾರಿನಾಂಶ ದೊರಕುವುದು.
  • ಅಡುಗೆ ಮಾಡಿದ ನಂತರವೂ ಪೌಷ್ಠಿಕಾಂಶ ಉಳಿಸಿಕೊಳ್ಳುವುದು.
  • ನಾರಿನ ಅಂಶ ಸಮೃದ್ಧವಾಗಿರುವುದರಿಂದ, ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸಲು ಉತ್ತಮ ಮಾರ್ಗ.
  • ಮಲಬದ್ಧತೆ / ಕರುಳಿನ ಸಮಸ್ಯೆಗಳನ್ನು ತಡೆಯುತ್ತದೆ.
  • 1/4 ಕಪ್ ಓಟ್ಸ್ ಮಗುವಿನ ದೈನಂದಿನ ಅಗತ್ಯಗಳಲ್ಲಿ ಸುಮಾರು 8% ಕಬ್ಬಿಣವನ್ನು ಒದಗಿಸುತ್ತದೆ.
  • ಹೆಚ್ಚಿನ ಶಕ್ತಿ, ಜೀರ್ಣಿಸಿಕೊಳ್ಳಲು ಸುಲಭ, ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
  • ಕ್ಯಾಲ್ಸಿಯಂ, ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಪೂರೈಕೆಯಾಗುವುದು. ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು.

ಕ್ಯಾರೆಟ್ನ ಸೇವಿಸುವುದರಿಂದಾಗುವ ಪ್ರಯೋಜನಗಳು:

  • ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಪೂರೈಕೆಯಾಗುವುದು.
  • ಜೀರ್ಣಕ್ರಿಯೆಗೆ ಸಹಕಾರಿ. 
  • ಅತಿಸಾರಕ್ಕೆ ಒಳ್ಳೆಯ ಮನೆ ಪರಿಹಾರ
  • ಕರುಳಿನ ಹುಳುಗಳ ವಿರುದ್ಧ ಹೊರಾಡುವುದು. ಆಹಾರದ ನಾರಿನ ಅಂಶ ನೈಸರ್ಗಿಕ ವಿರೇಚಕವಾಗಿ ವರ್ತಿಸುತ್ತದೆ.
  • ಕ್ಯಾರೆಟ್ ಅನ್ನು 6-7 ತಿಂಗಳು ಮೇಲ್ಪಟ್ಟ ಮಕ್ಕಳಿಗೆ  ಪರಿಚಯಿಸಬಹುದು.
  • ಬಲವಾದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಿತ್ತದೆ.  ಹೃದಯಕ್ಕೆ  ರಕ್ಷಣೆ ನೀಡುವುದು.
  • ಅಧಿಕ ನೀರಿನ ಅಂಶ ಸಾಮಾನ್ಯ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
  • ಕಣ್ಣುಗಳ ಆರೋಗ್ಯಕ್ಕೆ .ಉತ್ತಮ ತರಕಾರಿ. 
  • ಕ್ಯಾರೆಟ್ ನಲ್ಲಿ ವಿಟಮಿನ್ ಎ ದೊರಕುವುದು.
  • ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿ ದೊರಕುವುದು.

ಅರಿಶಿನ ಪ್ರಯೋಜನಗಳು:

  • ನಂಜುನಿರೋಧಕ ಗುಣಲಕ್ಷಣಗಳು ಹೊಂದಿರುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.
  • ನೈಸರ್ಗಿಕವಾಗಿ  ಆಹಾರಕ್ಕೆ ಹಳದಿ ಬಣ್ಣವನ್ನು ನೀಡುವುದು.
  • ಶೀತ ಮತ್ತು ಕೆಮ್ಮನ್ನು ತಡೆಗಟ್ಟುವುದಕ್ಕೆ ಒಳ್ಳೆಯ ಮನೆ ಮದ್ದು. 
  • ಔಷಧೀಯ ಗುಣಗಳನ್ನು ಹೊಂದಿರುವ ಬೇರು. 
  • ಸ್ಮರಣ ಶಕ್ತಿ ವರ್ಧನೆಗೆ  ಸಹಾಯಕ.
  • ಬಹುತೇಕ ಎಲ್ಲಾ ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ.
  • ಚರ್ಮಕ್ಕೆ ಒಳ್ಳೆಯದು.

ಜೀರಿಗೆ  ಮತ್ತು ಮೆಣಸಿನ ಪುಡಿ  ಪ್ರಯೋಜನಗಳು :

  • ಜೀರ್ಣಕ್ರಿಯೆಗೆ ಸಹಾಯಕ  ಮತ್ತು ಮಕ್ಕಳಿಗೆ ತುಂಬಾ ಪ್ರಯೋಜನಕಾರಿ ಬೇರು. ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು.

ಕ್ಯಾರಟ್ & ಓಟ್ಸ್ ಸರಿ | Savory Carrot Oats Porridge recipe in Kannada

4. Savory-Carrot-Oats-Porridge_oats recipes for babies

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love