Spread the love

ಸಬ್ಬಕ್ಕಿ ಉಪ್ಪಿಟ್ಟು ಪೌಷ್ಠಿಕ ಉಪಹಾರ ಪಾಕವಿಧಾನವಾಗಿದೆ – ಆರೋಗ್ಯಕರ ಅಧಿಕ ಕಾರ್ಬೋಹೈಡ್ರೇಟ ಇರುವ ಉಪಾಹಾರ, ಪ್ರೋಟೀನ್ ಮತ್ತು ನಾರಿಣಾಂಶ ಅಧಿಕವಾಗಿ ದೊರಕುವುದು. ಸಬ್ಬಕಿಗೆ ಟಪಿಯೋಕಾ ಮುತ್ತುಗಳು (ಪರ್ಲೆಸ್) ಸ್ಥಳೀಯವಾಗಿ ಸಾಗೋ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಉಪವಾಸದ ದಿನಗಳಲ್ಲಿ  ಇದನ್ನು ತಯಾರಿಸುತ್ತಾರೆ, ಸಬ್ಬಕ್ಕಿ ಉಪ್ಪಿಟ್ಟು  ಶಿಶುಗಳು ಮತ್ತು ಪುಟ್ಟ ಮಕ್ಕಳಿಗೆ ಸಾಕಷ್ಟು ತರಕಾರಿಗಳನ್ನು ಹಾಕಿ ಪೌಷ್ಟಿಕವಾಗಿ ತಯಾರಿಸಿ ನೀಡಬಹುದು.

Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana

ಆಹಾರದಲ್ಲಿ ಮಕ್ಕಳು ವಿನ್ಯಾಸವನ್ನು ಇಷ್ಟಪಡುತ್ತಾರೆ. ಶಿಶುಗಳಿಗೆ ಸಬಕ್ಕಿ ಪರಿಚಯಿಸಲು ಉತ್ತಮ ಮಾರ್ಗ. 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.  ಈ ಪಾಕವಿಧಾನವನ್ನು ನಿಮ್ಮ ರುಚಿಗೆ ಅನುಗುಣವಾಗಿ ಮತ್ತು ನಿಮ್ಮ ಆಯ್ಕೆಯ ಯಾವುದೇ ಕಾಲೋಚಿತ ತರಕಾರಿ ಅಥವಾ ದ್ವಿದಳ ಧಾನ್ಯಗಳನ್ನು ಹಾಕಿ ತಯಾರಿಸಿಕೊಳ್ಳಬಹುದು. 

ಸಬ್ಬಕ್ಕಿ ಪ್ರಯೋಜನಗಳು : 

  • ಕ್ಯಾಲ್ಸಿಯಂ ಸಮೃದ್ಧವಾಗಿ ದೊರಕುವುದು – ಮೂಳೆಗಳನ್ನು ಬಲಪಡಿಸಲು ಒಳ್ಳೆಯ ಆಹಾರ.  
  • ಜೀರ್ಣಕ್ರಿಯೆಗೆ ಸಹಾಯಕ – ಪಿಷ್ಟದ ಶುದ್ಧ ರೂಪ ಮತ್ತು ಜೀರ್ಣಿಸಿಕೊಳ್ಳಲು ಸುಲಭ
  • ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಲಭಿಸುತ್ತದೆ – ಶಕ್ತಿಯುತ ಆಹಾರ 
  • ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ದೇಹವನ್ನು ತಂಪಾಗಿರಿಸುತ್ತದೆ.
  • ಸ್ನಾಯುವಿನ ಶಕ್ತಿ ಮತ್ತು ಮೂಳೆ ಆರೋಗ್ಯಕ್ಕೆ ಉತ್ತಮ.

ನಮ್ಮ ಇತರ ಸಬ್ಬಕ್ಕಿ ಪಾಕವಿಧಾನಗಳನ್ನು ಪ್ರಯತ್ನಿಸಿ :

ನಮ್ಮ ಇತರ ಬೆಳಗಿನ ಉಪಹಾರದ ಪಾಕವಿಧಾನಗಳನ್ನು ಪ್ರಯತ್ನಿಸಿ :

Video: ಸಬ್ಬಕ್ಕಿ ಉಪ್ಪಿಟ್ಟು | Sabudana Upma recipe in Kannada

Kannada Subscribe Button TOTS AND MOMS

ಸಬ್ಬಕ್ಕಿ ಉಪ್ಪಿಟ್ಟು | Sabudana Upma recipe in Kannada

ಸಬ್ಬಕ್ಕಿ ಉಪ್ಪಿಟ್ಟು ಪೌಷ್ಟಿಕವಾದ ಬೆಳಗಿನ ಉಪಾಹಾರದ ಪಾಕವಿಧಾನ- ಆರೋದ್ಯಕರ ಮತ್ತು ಅಧಿಕ ಪ್ರೊಟೀನ್ ಮತ್ತು ನಾರಿಣಾಂಶ ದೊರಕುವುದು. ಸಾಮಾನ್ಯವಾಗಿ ಉಪವಾಸದ ದಿನಗಳಲ್ಲಿ ಈ ಪಾಕ ವಿಧಾನವನ್ನು ಮಾಡಲಾಗುವುದು. ಸಬ್ಬಕ್ಕಿ ಉಪ್ಪಿಟ್ಟನ್ನು ಕಡಲೆಕಾಯಿ ಬೀಜ ಮತ್ತು ಆಲೂಗಡ್ಡೆ ಬಳಸಿ ತಯಾರಿಸಲಾಗುವುದು. ಶಿಶುಗಳಿಗೆ ಮತ್ತು ಕುಟುಂಬಕ್ಕೆ ಒಳ್ಳೆಯ ಪೋಷಣೆ ನೀಡುವ ಬೆಳಗಿನ ಉಪಾಹಾರ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಉಪಹಾರ ,ತಿಂಡಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಎಣ್ಣೆ – 2tbsp Oil –  2 tbsp
  2. ಸಾಸಿವೆ – ಸ್ವಲ್ಪ Mustard Seeds – Little
  3. ಕರಿಬೇವಿನ ಎಲೆಗಳು – ಕೆಲವು Curry Leaves  - Few
  4. ಕೊತ್ತಂಬರಿ ಸೊಪ್ಪು - ಸ್ವಲ್ಪ Coriander – Little
  5. ತರಕಾರಿಗಳು Vegetables –
    • ಬಟಾಣಿ – 2 tbsp Peas – 2 tbsp
    • ಆಲೂಗೆಡ್ಡೆ- ½ Potato – ½
    • ಹುರಳಿಕಾಯಿ – 10 French beans – 10
    • ಕ್ಯಾರೆಟ್ – 1 ಚಿಕ್ಕದು Carrot – 1 small
  6.  ನಿಂಬೆಹಣ್ಣು – ಅರ್ಧ ಹೋಳು Lemon – ½
  7. ಅರಿಶಿನ  – 1 tsp Turmeric – 1 tsp
  8. ಅಚ್ಚ ಖಾರದ ಪುಡಿ= 2 tsp Chilli Powder – 2 tsp
  9. ಉಪ್ಪು- ರುಚಿಗೆ ತಕ್ಕಷ್ಟು Salt – As needed

ವಿಧಾನ

  1. ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ 2-3 ಬಾರಿ ತೊಳೆದು ಒಂದು ಗಂಟೆಗಳ ಕಾಲ ನೆನೆಸಿ. ನಂತರ ಹೆಚ್ಚಿನ ನೀರನ್ನು ಶೋಧಿಸಿ ತೆಗೆದುಬಿಡಿ. 3-4 ಗಂಟೆಗಳ ಕಾಲ ಹಾಗೆ ಇಡಬೇಕು. ಸಬ್ಬಕ್ಕಿ ಉದುರುದುರಾಗಿ ಒಂದಕ್ಕೆ ಒಂದು ಅಂಟದೆ ಇರುತ್ತದೆ. ಹೆಚ್ಚು ಹೊತ್ತು ನೆನೆಸಿದರೆ ಎಲ್ಲ ಸೇರಿಕೊಳ್ಳುವುದು ಮತ್ತು ಮುದ್ದೆಯಾಗುವುದು. 
  2. ಅಗಲವಾದ ಪ್ಯಾನ್ಗೆ / ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಅದು ಸಿಡಿದ ನಂತರ ಕರಿಬೇವಿನ ಎಲೆ, ನಿಮಗೆ ಇಷ್ಟವಿರುವ ಹೆಚ್ಚಿದ ತರಕಾರಿಗಳು ಹಾಕಿ ಹುರಿದುಕೊಳ್ಳಿ. ಇಲ್ಲಿ ಈರುಳ್ಳಿ , ಕ್ಯಾರೆಟ್, ಬಟಾಣಿ ಮತ್ತು ಆಲೂಗಡ್ಡೆ ಬಳಸಿದ್ದೇನೆ. ಪ್ಯಾನ್ ಮುಚ್ಚಳ ಮುಚ್ಚಿ ಬೇಯಿಸಿ. ತರಕಾರಿಗಳು ಸರಿಯಾಗಿ ಬೇಯುವುದು. ನಿಮಗೆ ಬೇಕಾದರೆ ಒಂದು ಚಿಟಕೆ ಉಪ್ಪ ಹಾಕಬಹುದು.      
  3. ತರಕಾರಿಗಳು ಬೆಂದ ನಂತರ ಒಂದು ಚಿಟಕೆ ಅರಿಶಿನ, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಇದಕ್ಕೆ ನೆಂದಿರುವ ಸಬ್ಬಕ್ಕಿ ಹಾಕಿ ಬೆರಸಿ.
  4. ಈಗ ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಕೆದಕಿ. ಎಲ್ಲ ಪದಾರ್ಥಗಳು ಚೆನ್ನಾಗಿ ಹೊಂದಿಕೊಳ್ಳಲು ಪ್ಯಾನ್ ಮುಚ್ಚಳ ಮುಚ್ಚಿ 2-3 ನಿಮಿಸ ಬೇಯಿಸಿ.
  5. ಮೃದುವಾದ ಮತ್ತು ರುಚಿಯಾದ ಸಬ್ಬಕ್ಕಿ ಉಪ್ಪಿಟ್ಟು ತಯಾರಾಗಿದೆ!

ನಿಯಮಿತ ನವೀಕರಣಗಳಿಗೆ ನಮ್ಮ Instagram and Facebook  ಪುಟ ಅನುಸರಿಸಿ.

ಸಬ್ಬಕ್ಕಿ ಉಪ್ಪಿಟ್ಟು | Sabudana Upma recipe in Kannada

Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana

ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ :

  1. ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ 2-3 ಬಾರಿ ತೊಳೆದು ಒಂದು ಗಂಟೆಗಳ ಕಾಲ ನೆನೆಸಿ. ನಂತರ ಹೆಚ್ಚಿನ ನೀರನ್ನು ಶೋಧಿಸಿ ತೆಗೆದುಬಿಡಿ. 3-4 ಗಂಟೆಗಳ ಕಾಲ ಹಾಗೆ ಇಡಬೇಕು. ಸಬ್ಬಕ್ಕಿ ಉದುರುದುರಾಗಿ ಒಂದಕ್ಕೆ ಒಂದು ಅಂಟದೆ ಇರುತ್ತದೆ. ಹೆಚ್ಚು ಹೊತ್ತು ನೆನೆಸಿದರೆ ಎಲ್ಲ ಸೇರಿಕೊಳ್ಳುವುದು ಮತ್ತು ಮುದ್ದೆಯಾಗುವುದು. 
    Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana
  2. ಅಗಲವಾದ ಪ್ಯಾನ್ಗೆ / ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಅದು ಸಿಡಿದ ನಂತರ ಕರಿಬೇವಿನ ಎಲೆ, ನಿಮಗೆ ಇಷ್ಟವಿರುವ ಹೆಚ್ಚಿದ ತರಕಾರಿಗಳು ಹಾಕಿ ಹುರಿದುಕೊಳ್ಳಿ. ಇಲ್ಲಿ ಈರುಳ್ಳಿ , ಕ್ಯಾರೆಟ್, ಬಟಾಣಿ ಮತ್ತು ಆಲೂಗಡ್ಡೆ ಬಳಸಿದ್ದೇನೆ. ಪ್ಯಾನ್ ಮುಚ್ಚಳ ಮುಚ್ಚಿ ಬೇಯಿಸಿ. ತರಕಾರಿಗಳು ಸರಿಯಾಗಿ ಬೇಯುವುದು. ನಿಮಗೆ ಬೇಕಾದರೆ ಒಂದು ಚಿಟಕೆ ಉಪ್ಪ ಹಾಕಬಹುದು.      
    Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana
  3. ತರಕಾರಿಗಳು ಬೆಂದ ನಂತರ ಒಂದು ಚಿಟಕೆ ಅರಿಶಿನ, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಇದಕ್ಕೆ ನೆಂದಿರುವ ಸಬ್ಬಕ್ಕಿ ಹಾಕಿ ಬೆರಸಿ.
    Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana
  4. ಈಗ ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಕೆದಕಿ. ಎಲ್ಲ ಪದಾರ್ಥಗಳು ಚೆನ್ನಾಗಿ ಹೊಂದಿಕೊಳ್ಳಲು ಪ್ಯಾನ್ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ.
    Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana
  5. ಮೃದುವಾದ ಮತ್ತು ರುಚಿಯಾದ ಸಬ್ಬಕ್ಕಿ ಉಪ್ಪಿಟ್ಟು ತಯಾರಾಗಿದೆ!
    Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana

ಸಬ್ಬಕ್ಕಿ ಉಪ್ಪಿಟ್ಟು | Sabudana Upma recipe in Kannada

Sabudana Upma for babies healthy homemade breakfast for toddlers and kids tapioca pearls recipe breakfast recipes 8 months baby food recipe easy breakfast recipes vegetable upma with sabudana

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love