10+ ರಾಗಿ ಪಾಕವಿಧಾನಗಳು । Ragi Recipes in Kannada
Read this article in
10+ ರಾಗಿ ಪಾಕವಿಧಾನಗಳು । Ragi Recipes in Kannada
ನನ್ನ ಮಗುವಿಗೆ ರಾಗಿ ನೀಡಬಹುದೇ | ರಾಗಿಯಿಂದಾಗುವ ಆರೋಗ್ಯಕರವಾದ ಪ್ರಯೋಜನಗಳು ಯಾವುವು | ರಾಗಿಯನ್ನು ಹೇಗೆ ಆಹಾರವಾಗಿ ನೀಡಬೇಕು | ಶಿಶುಗಳಿಗೆ ಆಹಾರದಲ್ಲಿ ರಾಗಿಯನ್ನು ಯಾವಾಗ ಪರಿಚಯಿಸಬೇಕು | ಶಿಶು ಆಹಾರ ರಾಗಿ | ಅಂಟು ರಹಿತವಾದ ರಾಗಿ ಹಿಟ್ಟು
ರಾಗಿ / ಫಿಂಗರ್ ಮಿಲೆಟ್ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯಕರವಾದ ಏಕದಳ. ರಾಗಿ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಾಮಾನ್ಯವಾಗಿ ರಾಗಿಯಿಂದ ದೋಸೆ, ಇಡ್ಲಿ, ರೊಟ್ಟಿ ಮುಂತಾದ ವಿವಿಧ ರೀತಿಯ ಪಾಕವಿಧಾನಗಳನ್ನು ಮಾಡಬಹುದು. 6 ತಿಂಗಳ ನಂತರ ಮಗುವಿನ ಆಹಾರದಲ್ಲಿ ರಾಗಿ ಪರಿಚಯಿಸುವುದು ಆರೋಗ್ಯಕರ ಧಾನ್ಯ. ಈ ಆರೋಗ್ಯಕರ ಏಕದಳವು ಅತ್ಯಗತ್ಯವಾದ ಎಲ್ಲ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಗುವಿಗೆ ಅತ್ಯುನತ ಆಹಾರ. ಮಗುವಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಮತ್ತು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರ ಮತ್ತು ಅಂಟು ರಹಿತ, ಗ್ಲುಟೆನ್ (ಅಂಟು) ಅಸಹಿಷ್ಣುತೆ ಹೊಂದಿರುವ ಮಕ್ಕಳಿಗೆ ರಾಗಿಯ ಆಹಾರವನ್ನು ನೀಡಬಹುದು. ಮಗುವಿನ ಆಹಾರದಲ್ಲಿ ರಾಗಿ ಸೇರಿಸುವುದರಿಂದ ಎದೆ ಹಾಲನ್ನು ಕ್ರಮೇಣ ಬಿಡಿಸಲು ಸಹಾಯವಾಗುತ್ತದೆ ಮತ್ತು ಹಾಲುಣಿಸುವ ಜೊತೆಗೆ ನೀಡಬಹುದಾದ ಆಹಾರ.ಮಗುವಿನ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಶಕ್ತಿನೀಡುವ ಸೂಕ್ತ ಆಹಾರದ ಆಯ್ಕೆಯಾಗಿದೆ.
ನನ್ನ ಮಗುವಿಗೆ ರಾಗಿಯನ್ನು ಯಾವಾಗ ಪ್ರಾರಂಭಿಸಬೇಕು?
ಶಿಶುಗಳಿಗೆ 6 ತಿಂಗಳ ನಂತರ ರಾಗಿಯನ್ನು ಪರಿಚಯಿಸಬಹುದು.ಡಬ್ಲ್ಯುಎಚ್ಒ ಶಿಫಾರಸಿನ ಪ್ರಕಾರ 6 ತಿಂಗಳ ನಂತರ ಯಾವುದೇ ಘನ ಆಹಾರವನ್ನು ಪ್ರಾರಂಭ ಮಾಡುವುದು ಒಳ್ಳೆಯದು. ಶಿಶುಗಳಿಗೆ, ಗಾಢ ಸ್ಥಿರತೆಯಿರುವ ಮೊಳಕೆಯೊಡೆದ ರಾಗಿ ಗಂಜಿಯನ್ನು ಆಹಾರವಾಗಿ ನೀಡಲು ಸೂಕ್ತವಾಗಿರುತ್ತದೆ. ರಾಗಿಯನ್ನು ಹಲವು ವರ್ಷಗಳವರೆಗೆ ನೀಡಬಹುದು. ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಮಗುವಿನ ಮೊಟ್ಟಮೊದಲ ಆಹಾರಕ್ಕೆ ರಾಗಿಯು ಉನ್ನತ ಆಯ್ಕೆಯ ಆಹಾರಗಳಲ್ಲಿ ಒಂದಾಗಿದೆ.
ಮಗುವಿಗೆ ರಾಗಿಯನ್ನು ಹೇಗೆ ನೀಡಬಹುದು ?
ರಾಗಿ ಅತ್ಯಗತ್ಯ ಪೋಷಕಾಂಶಗಳಿಂದ ತುಂಬಿದ ಏಕದಳ ಮತ್ತು ಆಹಾರ ಪಟ್ಟಿಯಲ್ಲಿ ಕೂಡ ಸೇರಿಸಬಹುದು. ರಾಗಿ ಪುಡಿಯ ರೂಪದಲ್ಲಿ (ಹಿಟ್ಟು) ಮತ್ತು ಬೀಜಗಳ ರೂಪದಲ್ಲಿ ಲಭ್ಯವಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮಕ್ಕಳಿಗೆ ಹಾಗೂ ವೃಧ್ಧರಿಗೆ ರಾಗಿಯನ್ನು ರಾಗಿ ಮುದ್ದೆಯನ್ನು ತಯಾರಿಸಲಾಗುತ್ತದೆ. ದೋಸೆ ರೂಪದಲ್ಲಿ ಕೂಡ ಮಾಡಬಹುದು. ರಾಗಿ ಪ್ಯಾನ್ಕೇಕ್ಗಳು, ಚಕ್ಲಿ, ಬಿಸ್ಕತ್ತುಗಳು ಮುಂತಾದ ವಿವಿಧ ಲಘು ಉಫಹಾರ ಮಾಡಬಹುದು. ರಾಗಿ ಬೆಳೆಯುವ ಮಕ್ಕಳಲ್ಲಿ ವಿಶೇಷವಾಗಿ ರೂಪುಗೊಳ್ಳುವ ವರ್ಷಗಳಲ್ಲಿ ನೀಡಬಹುದಾದ ಅತ್ಯುತ್ತಮ ಸೂಕ್ತವಾದ ಆಹಾರ. ಶಿಶುಗಳಿಗೆ ತೂಕವನ್ನು ಹೆಚ್ಚಿಸಲು ಮತ್ತು ಪ್ರತಿರಕ್ಷೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ರಾಗಿ ಶಿಶುಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ರಾಗಿಯಿಂದ ಮಾಡಿರುವ ಆಹಾರವನ್ನು ನಿಯಮಿತ ಹಾಗು ಸುಲಭವಾಗಿ ಪರಿಚಯಿಸಬಹುದು.
ರಾಗಿಯ ಪೌಷ್ಟಿಕಾಂಶದ ಮೌಲ್ಯ
ಶಿಶುಗಳಿಗೆ ರಾಗಿಯ ಆರೋಗ್ಯಕರವಾದ ಪ್ರಯೋಜನಗಳು
- ಕ್ಯಾಲ್ಸಿಯಂ ಸಮೃದ್ಧವಾಗಿ ಲಭಿಸುತ್ತದೆ : ರಾಗಿಯನ್ನು ನಿಯಮಿತವಾಗಿ ನೀಡುವುದರಿಂದ ಸಮೃದ್ಧವಾದ ಫೈಬರ್, ಕ್ಯಾಲ್ಸಿಯಂ, ಉತ್ತಮ ಕಾರ್ಬೋಹೈಡ್ರೇಟ್, ಅಮೈನೊ ಆಮ್ಲಗಳು ಮತ್ತು ವಿಟಮಿನ್ ಡಿ ಹೊಂದಿರುತ್ತದೆ.ಕ್ಯಾಲ್ಶಿಯಂ ನ ಗುಳಿಗೆಯನ್ನು ಪರ್ಯಾಯವಾಗಿ ನೀಡುವುದನ್ನು ತಪ್ಪಿಸಬಹುದು.
- ಅಧಿಕ ಕಬ್ಬಿಣದ ಅಂಶ ಸಿಗುವುದು : ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ನಿರ್ವಹಿಸಲು ಪ್ರಯೋಜನವಾಗುತ್ತದೆ.
- ನಾರಿನಾಂಶ ಹೇರಳವಾಗಿರುತ್ತದೆ : ರಾಗಿಯಲ್ಲಿ ಉತ್ತಮ ನಾರಿನ ಅಂಶ ಸಿಗುತ್ತದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ.
- ಪ್ರೋಟೀನ್ನ ಉತ್ತಮ ಮೂಲ : ರಾಗಿ ಶಿಶುಗಳಲ್ಲಿ ಸ್ನಾಯುಗಳ ರಚನೆಗೆ ಸಹಾಯ ಮಾಡುತ್ತದೆ.
- ರಾಗಿ ರೋಗ ನಿರೋಧಕ ಶಕ್ತಿ ನೀಡುತ್ತದೆ : ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಅಮೈನೊ ಆಸಿಡ್ ಮೆಥಿ ಯೋನಿನ್ ಇರುವಿಕೆಯು ನಿಮ್ಮ ಮಗುವಿನಲ್ಲಿ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
10+ ರಾಗಿ ಪಾಕವಿಧಾನಗಳು । Ragi Recipes in Kannada
ಶಿಶು ಆಹಾರ ಪಾಕವಿಧಾನ ಸಂಗ್ರಹಗಳನ್ನು ಪರಿಶೀಲಿಸಿ :
- 21 ಪ್ಯೂರಿ ಪಾಕವಿಧಾನಗಳ ಸಂಗ್ರಹಗಳು
- 15+ ಅಕ್ಕಿ ಪಾಕವಿಧಾನಗಳು
- 16+ ಓಟ್ಸ್ ಪಾಕವಿಧಾನಗಳ ಸಂಗ್ರಹ
- 4 ಬಾರ್ಲಿ ಪಾಕವಿಧಾನಗಳು
- 6 ಗೋಧಿ ನುಚ್ಚಿನ ಪಾಕವಿಧಾನಗಳನ್ನು ನೀಡಬಹುದೇ?
ರಾಗಿ ಆಧಾರಿತ ಉತ್ಪನ್ನಗಳಿಗಾಗಿ TOTS AND MOMS FOODS ನಲ್ಲಿ ನಮ್ಮ ಸಾವಯವ ಶಿಶು ಆಹಾರ ಅಂಗಡಿಯಲ್ಲಿ ಖರೀದಿಸಬಹುದು.
ಹೊಸ ಪಾಕವಿಧಾನಗಳನ್ನು ಸಿದ್ಧಪಡಿಸಿದಾಗ ಲೇಖನವನ್ನು ನವೀಕರಿಸಲಾಗುತ್ತದೆ. ನಿಮ್ಮ ಪ್ರೀತಿಯ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಅನೇಕ ಪಾಕವಿಧಾನಗಳನ್ನು ಮಾಡಿದ್ದೇವೆ . ಈ ಪಾಕವಿಧಾನಗಳು ಸರಳ, ತ್ವರಿತ, ಆರೋಗ್ಯಕರ ಮತ್ತು ಪೋಷಣೆಯಿಂದ ಕೂಡಿರುತ್ತದೆ.
10+ ರಾಗಿ ಪಾಕವಿಧಾನಗಳು । Ragi Recipes in Kannada
10+ ರಾಗಿ ಪಾಕವಿಧಾನಗಳು । Ragi Recipes in Kannada
ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.