Spread the love
  • 2
    Shares

ಶಿಶುಗಳು ಮತ್ತು ಮಕ್ಕಳಿಗೆ ವಿಶೇಷವಾಗಿ ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿರಿಸಲು ರಾಗಿ ಅತ್ಯುತ್ತಮ ಆಹಾರ. ಅನೇಕ ಪೋಷಕರು ಈಗಾಗಲೇ ರಾಗಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಬಳಸುತ್ತಿರುತ್ತಾರೆ. ರಾಗಿ ಪಾಯಸ ಅಥವಾ ಫಿಂಗರ್ ಮಿಲೆಟ್ ಪುಡಿಂಗ್ ತಯಾರಿಸಲು ನೈಸರ್ಗಿಕ ಸಿಹಿಕಾರಕ ಬಳಸಲಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೆಲ್ಲವನ್ನು ಬಳಸದೆ ಮಾಡುವುದು ಉತ್ತಮ. ಒಣ ಹಣ್ಣುಗಳ ಪುಡಿಯನ್ನು ಬಳಸುವುದರಿಂದ ಪೌಷ್ಠಿಕಾಂಶ ಹೆಚ್ಚುವುದು.

ರಾಗಿ ಪಾಯಸ | Ragi Kheer Recipe in Kannada

Ragi Kheer Recipe Nachni Kheer Finger Millet Pudding for Babies and Kids Kannada and Hindi

ಮನೆಯಲ್ಲಿ ರಾಗಿ ಪಾಯಸ ಪಾಕವಿಧಾನವನ್ನು ಹಲವು ಬಾರಿ ಮಾಡಿದ್ದೇನೆ. ತಂಪಾಗಿರುವ ಪಾಯಸಕ್ಕೆ ಕತ್ತರಿಸಿದ ಒಣಹಣ್ಣುಗಳ ಅಲಂಕಾರ ನೋಡಲು ಸುಂದರ ಹಾಗು ಬಾಯಲ್ಲಿ ನೀರುರಿಸುತ್ತದೆ. ನಿಮಗೆ ಇಷ್ಟವಾಗುವ ಪಿಸ್ತಾ, ಬಾದಾಮಿ, ಅಂಜೂರ ಮೊದಲಾದ ಒಣ ಹಣ್ಣುಗಳನ್ನು  ಪಾಕವಿಧಾನವನ್ನು ಅಲಂಕರಿಸಲು ಬಳಸಬಹುದು. ಶಿಶುವಿಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ನೀರನ್ನು ಮಾತ್ರ ಬಳಸಿ ತಯಾರಿಸಬಹುದು. ಪಾಯಸ ಮಾಡಲು ಹಾಲು ಮತ್ತು ನೀರನ್ನು ಸಂಯೋಜಿಸಿ ಕೂಡ ಮಾಡಬಹುದು. ಉತ್ತಮ ರುಚಿ ಮತ್ತು ಪೌಷ್ಟಿಕಾಂಶಕ್ಕೆ ಬಾದಾಮಿ ಹಾಲು, ಗೋಡಂಬಿ ಹಾಲು ಅಥವಾ ತೆಂಗಿನಕಾಯಿಯ ಹಾಲಿನೊಂದಿಗೆ ತಯಾರಿಸಬಹುದು.

ಶಿಶುಗಳು ಮತ್ತು ಮಕ್ಕಳಿಗೆ ರಾಗಿಯಲ್ಲಿರುವ ಸಮೃದ್ಧವಾದ ಕ್ಯಾಲ್ಸಿಯಂ ಬಲವಾದ ಮೂಳೆಗೆ ಸಹಾಯಕ ಮತ್ತು ರಕ್ತಹೀನತೆಯನ್ನು  ತಡೆಗಟ್ಟುತ್ತದೆ. ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಬ್ಲಾಗ್ನಲ್ಲಿ ಅನೇಕ ರಾಗಿ ಪಾಕವಿಧಾನದ ವೀಡಿಯೊ ಲಿಂಕ್ ನೀಡಲಾಗಿದೆ. ವಿಭಿನ್ನ ರುಚಿಕರವಾದ ರಾಗಿ ಪಾಕವಿಧಾನಗಳನ್ನು ಪ್ರಯತ್ನಿಸಲು  ವಿನಂತಿಸುತ್ತೇನೆ.

ಶಿಶುಗಳಿಗೆ ಮತ್ತು ಮಕ್ಕಳಿಗೆ ರಾಗಿ ಪಾಕವಿಧಾನಗಳು

(click to view the collection of recipes)

ಮೊಳಕೆಯೊಡೆದ ರಾಗಿ ಹಾಲಿನ ಸರಿ

ಸೇಬು ರಾಗಿ ಪ್ಯಾನ್ ಕೇಕ್

ರಾಗಿ ರೊಟ್ಟಿ

ಬಾಳೆಹಣ್ಣು ಮತ್ತು ಬೆಲ್ಲ ಬಳಸಿ ಮಾಡುವ ತ್ವರಿತ ರಾಗಿ ದೋಸೆ

ರಾಗಿ ಮಾಲ್ಟ್  – ಸಿಹಿ and ಖಾರದ ಗಂಜಿ / ಅಂಬಲಿ

ರಾಗಿ ಆಲುಗಡ್ಡೆ ಪರಾಟ

ರಾಗಿ ಚಕ್ಲಿ

ರಾಗಿ ಓಟ್ಸ್ ಸರಿ

ಹೆಸರು ಬೇಳೆ ರಾಗಿ ಸರಿ

ರಾಗಿ ಪಾಯಸ ವಿಡಿಯೋ ರೆಸಿಪಿ | Ragi Kheer Recipe Video in Kannada

Kannada Subscribe Button TOTS AND MOMS

ರಾಗಿ ಪಾಯಸ ರೆಸಿಪಿ | Ragi Kheer Recipe in Kannada

ರಾಗಿ ಪಾಯಸ

ಶಿಶುಗಳಿಗೆ ರಾಗಿ ಉತ್ಕೃಷ್ಟವಾದ ಆಹಾರ. ಬೆಳೆಯುವ ಮಕ್ಕಳಿಗೆ ಅಧಿಕ ಪ್ರಮಾಣದ ಕ್ಯಾಲ್ಸಿಯಂ ದೊರಕಿಸುತ್ತದೆ.ಸಿರಿಧಾನ್ಯಗಳಲ್ಲಿ ಒಂದಾದ ರಾಗಿ ಬಳಸಿ ಮಾಡಿರುವ ಆರೋಗ್ಯಕರವಾದ ಹಾಗು ಅತ್ಯುತ್ತಮವಾದ ಪಾಯಸ ಎಲ್ಲರಿಗೂ ಇಷ್ಟವಾಗುವುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸಿಹಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ರಾಗಿ ಹಿಟ್ಟು - 1/4 ಕಪ್
  2. ತುಪ್ಪ - 2 tbsp
  3. ಬೆಲ್ಲದ ಪುಡಿ - 1/4 ಕಪ್ (1 ವರ್ಷ ಮೇಲ್ಪಟ್ಟ ಮಕ್ಕಳಿಗೆ)
  4. ಬಿಸಿ ನೀರು - 2 ಕಪ್
  5. ಹಾಲು - 1 ಕಪ್
  6. ಹುರಿದ ಒಣ ಹಣ್ಣುಗಳು ಅಲಂಕಾರಕ್ಕೆ

ನೆನೆಸಿ ಪ್ಯೂರಿ ಮಾಡಲು ಬೇಕಾಗಿರುವ ಒಣ ಹಣ್ಣುಗಳು :

  1. ಒಣ ದ್ರಾಕ್ಷಿ - 10
  2. ಖರ್ಜೂರ - 5
  3. ಬಾದಾಮಿ - 2
  4. ಗೋಡಂಬಿ- 2

ವಿಧಾನ

  1. ಬಟ್ಟಲಿನಲ್ಲಿ ಮೇಲೆ ತಿಳಿಸಿರುವ ಎಲ್ಲಾ  ಒಣ ಹಣ್ಣುಗಳನ್ನು 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ. ನೆನೆಸಿದ ಒಣಹಣ್ಣುಗಳನ್ನು ಸ್ವಲ್ಪ ನೀರು ಹಾಕಿ ಮಿಕ್ಸರ್ / ಬ್ಲೆಂಡರ್ ಬಳಸಿ ಗಟ್ಟಿಯಾದ ಮಿಶ್ರಣವಾಗಿ ರುಬ್ಬಿ ಕೊಳ್ಳಬೇಕು.   
  2. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ನಂತರ ಕತ್ತರಿಸಿದ ಒಣಹಣ್ಣುಗಳಾದ ಬಾದಾಮಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹೊಂಬಣ್ಣ ಬರುವ ತನಕ ಹುರಿದುಕೊಳ್ಳಬೇಕು. ನಂತರ ಬಟ್ಟಲಿಗೆ ವರ್ಗಾಯಿಸಿಕೊಳ್ಳಿ.
  3. ಅದೇ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ರಾಗಿ ಹಿಟ್ಟನ್ನು ಹಾಕಿ 2-3 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಬೇಕು, ತದನಂತರ ಬಿಸಿ ನೀರನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಗಂಟಿಲ್ಲದಂತೆ ಮಿಶ್ರಣ ಮಾಡಿಕೊಂಡು 2 ನಿಮಿಷಗಳ ಕಾಲ ಬೀಯಿಸಿಕೊಳ್ಳಬೇಕು .  
  4. ಬೇಯಿಸಿದ ರಾಗಿ ಮಿಶ್ರಣಕ್ಕೆ ಹಾಲನ್ನು ಹಾಕಿ ನಂತರ ರುಬ್ಬಿ ಕೊಂಡಿರುವ ಒಣಹಣ್ಣುಗಳ ಪ್ಯೂರಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.
  5. ಹುರಿದಿರುವ ಗೋಡಂಬಿ ಬಾದಾಮಿ ಮತ್ತು ದ್ರಾಕ್ಷಿ ಹಾಕಿ ಮಿಶ್ರಣ ಮಾಡಿ. ಬಿಸಿ ಇಷ್ಟಪಡುವರಿಗೆ ತಕ್ಷಣ ಬಿಸಿಬಿಸಿಯಾಗಿ ನೀಡಬಹುದು. ಫ್ರಿಡ್ಜ್  ನಲ್ಲಿ ತಂಪಾದ ಪಾಯಸ ತುಂಬಾ ರುಚಿಯಾಗಿರುತ್ತದೆ.
  6. ರುಚಿಕರವಾದ ರಾಗಿ ಪಾಯಸ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ರಾಗಿ ಪಾಯಸ | Ragi Kheer Recipe in Kannada

ಮಕ್ಕಳಿಗೆ ಮತ್ತು ಶಿಶುಗಳಿಗೆ ರಾಗಿ ಪಾಯಸ ಮಾಡವ ವಿಧಾನ :

೧. ಬಟ್ಟಲಿನಲ್ಲಿ ಮೇಲೆ ತಿಳಿಸಿರುವ ಎಲ್ಲಾ  ಒಣ ಹಣ್ಣುಗಳನ್ನು 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ. ನೆನೆಸಿದ ಒಣಹಣ್ಣುಗಳನ್ನು ಸ್ವಲ್ಪ ನೀರು ಹಾಕಿ ಮಿಕ್ಸರ್ / ಬ್ಲೆಂಡರ್ ಬಳಸಿ ಗಟ್ಟಿಯಾದ ಮಿಶ್ರಣವಾಗಿ ರುಬ್ಬಿ ಕೊಳ್ಳಬೇಕು.  

Ragi Kheer Recipe Nachni Kheer Finger Millet Pudding for Babies and Kids Kannada and Hindi ೨.ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ನಂತರ ಕತ್ತರಿಸಿದ ಒಣಹಣ್ಣುಗಳಾದ ಬಾದಾಮಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹೊಂಬಣ್ಣ ಬರುವ ತನಕ ಹುರಿದುಕೊಳ್ಳಬೇಕು. ನಂತರ ಬಟ್ಟಲಿಗೆ ವರ್ಗಾಯಿಸಿಕೊಳ್ಳಿ.

Ragi Kheer Recipe Nachni Kheer Finger Millet Pudding for Babies and Kids Kannada and Hindi

೩.ಅದೇ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ರಾಗಿ ಹಿಟ್ಟನ್ನು ಹಾಕಿ 2-3 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಬೇಕು, ತದನಂತರ ಬಿಸಿ ನೀರನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಗಂಟಿಲ್ಲದಂತೆ ಮಿಶ್ರಣ ಮಾಡಿಕೊಂಡು 2 ನಿಮಿಷಗಳ ಕಾಲ ಬೀಯಿಸಿಕೊಳ್ಳಬೇಕು .  

Ragi Kheer Recipe Nachni Kheer Finger Millet Pudding for Babies and Kids Kannada and Hindi

೪.ಬೇಯಿಸಿದ ರಾಗಿ ಮಿಶ್ರಣಕ್ಕೆ ಹಾಲನ್ನು ಹಾಕಿ ನಂತರ ರುಬ್ಬಿ ಕೊಂಡಿರುವ ಒಣಹಣ್ಣುಗಳ ಪ್ಯೂರಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.

Ragi Kheer Recipe Nachni Kheer Finger Millet Pudding for Babies and Kids Kannada and Hindi

೫.ಹುರಿದಿರುವ ಗೋಡಂಬಿ ಬಾದಾಮಿ ಮತ್ತು ದ್ರಾಕ್ಷಿ ಹಾಕಿ ಮಿಶ್ರಣ ಮಾಡಿ. ಬಿಸಿ ಇಷ್ಟಪಡುವರಿಗೆ ತಕ್ಷಣ ಬಿಸಿಬಿಸಿಯಾಗಿ ನೀಡಬಹುದು. ಫ್ರಿಡ್ಜ್  ನಲ್ಲಿ ತಂಪಾದ ಪಾಯಸ ತುಂಬಾ ರುಚಿಯಾಗಿರುತ್ತದೆ.

Ragi Kheer Recipe Nachni Kheer Finger Millet Pudding for Babies and Kids Kannada and Hindi

೬.ರುಚಿಕರವಾದ ರಾಗಿ ಪಾಯಸ ಸಿದ್ಧವಾಗಿದೆ.

ರಾಗಿ ಪಾಯಸ | Ragi Kheer Recipe in Kannada

Ragi Kheer Recipe Nachni Kheer Finger Millet Pudding for Babies and Kids Kannada and Hindi

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 2
    Shares