Spread the love
  • 5
    Shares

ಪ್ರೂನ್ಸ್ ಪ್ಯೂರೀ | Prunes Puree recipe in KannadaPrunes Puree for Babies | Best Home Remedy for Constipation hindi kannada recipe plum benefits

ಪ್ರೂನ್ಸ್ ಅಂದರೆ ಒಣಗಿದ ಪ್ಲಮ್ ಹಣ್ಣುಗಳು.  ಆರೋಗ್ಯವನ್ನು ಸುಧಾರಿಸಲು ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಜೀರ್ಣಕಾರಿ ಹಣ್ಣು. ಪ್ರುನ್ಸ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಸಮೃದ್ಧವಾಗಿರುತ್ತದೆ. ಶಿಶುಗಳು ಮತ್ತು ಮಕ್ಕಳಲ್ಲಿ ಮಲಬದ್ಧತೆಗೆ ಸುಲಭ ಹಾಗು ಪರಿಣಾಮಕಾರಿ ಮನೆಮದ್ದು. ಇದು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪ್ರೂನ್ಸ್ ಪ್ಯೂರಿಯನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಶಿಶುಗಳು ಮತ್ತು ಮಕ್ಕಳಿಗೆ ನೀಡಬಹುದು.

ಮಗುವಿಗೆ ಪ್ರೂನ್ಸ್ ಅನ್ನು ಯಾವಾಗ ನೀಡಬಹುದು?

ಪ್ರೂನ್ಸ್ ಕಡಿಮೆ ಅಲರ್ಜಿಯನ್ನು ಉಂಟು ಮಾಡುವ ಆಹಾರ. 6 ತಿಂಗಳ ನಂತರ ಶಿಶುಗಳಿಗೆ ನೀಡಬಹುದು ಮತ್ತು ಘನಆಹಾರಗಳನ್ನು ಪರಿಚಯಿಸಿದ ನಂತರ ನೀಡಬಹುದು. ಮೊದಲು ಪ್ಯೂರಿ ರೀತಿಯಲ್ಲಿ ನೀಡಬಹುದು ನಂತರ ಹಣ್ಣನ್ನು ನೀಡಬಹುದು. ತುಂಬಾ ಮೃದುವಾದ ಹಣ್ಣು ಆಗಿರುವುದರಿಂದ ಉಸಿರುಗಟ್ಟಿಸುವ ಹಾಗು ಗಂಟಲಿಗೆ ಸಿಕ್ಕಿಹಾಕಿಕೊಳ್ಳುವ ಚಿಂತೆ ಇರುವುದಿಲ್ಲ.

6 ತಿಂಗಳ ಶಿಶುಗಳ ಆಹಾರ ಚಾರ್ಟ್ /ಪಟ್ಟಿ ಮತ್ತು ಘನ ಆಹಾರವನ್ನು ಪರಿಚಯಿಸುವುದು ಹೇಗೆ ಮತ್ತು ಯಾವಾಗ  ಹೆಚ್ಚಿನ ಮಾಹಿತಿಯನ್ನು ಪಡೆಯಲು ಲೇಖನವನ್ನು ಓದಿ ತಿಳಿಯಿರಿ

ಶಿಶುಗಳಿಗೆ ಪ್ರೂನ್ಸ್ ಅನ್ನು ಹೇಗೆ ಆಯ್ಕೆ ಮಾಡಬೇಕು ?

ಪ್ಲಮ್ ಉತ್ಪಾನೆಯಲ್ಲಿ ಚೀನಾವು ಮೊದಲ ಸ್ಥಾನದಲ್ಲಿದೆ. ಆದರೆ ಅಮೇರಿಕಾ ಮತ್ತು ಇಟಲಿಯಲ್ಲಿ ಬೆಳೆದ ಪ್ಲಮ್ ಗಳು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ ಹಾಗು ದುಬಾರಿಯಾಗಿರುವುದು. ಶಿಶುಗಳಿಗೆ ಸಾವಯವ ಮತ್ತು ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಪ್ರೂನ್ಸ್ ಖರೀದಿಸುವುದು ಒಳ್ಳೆಯದು. ಪ್ರೂನ್ಸ್ ಆನ್ಲೈನ್ನಲ್ಲಿ ಖರೀದಿಸಲು ಕೆಳಗೆ ಕ್ಲಿಕ್ ಮಾಡಿ.

ಮಲಬದ್ಧತೆಯನ್ನು ನಿವಾರಿಸಲು ಪ್ರೂನ್ಸ್ ಪ್ಯೂರಿ ಹೇಗೆ ಸಹಾಯಕವಾಗುತ್ತದೆ?

  • 6 ತಿಂಗಳ ಮೇಲ್ಪಟ್ಟ ಶಿಶುಗಳು – ದಿನಕ್ಕೆ 1/2 tsp
  • ಪುಟ್ಟ ಮಕ್ಕಳಿಗೆ  – ದಿನಕ್ಕೆ 2 ಬಾರಿ 1 tsp ನೀಡಬಹುದು.
  • ದೊಡ್ಡ ಮಕ್ಕಳು – ದಿನಕ್ಕೆ 2 ಬಾರಿ 2 tsp ನೀಡಬಹುದು.

ಪ್ರೂನ್ಸ್ ಪ್ಯೂರಿಯನ್ನು ತುಂಬಾ ನೀರುಹಾಕದೆ ನೇರವಾಗಿ ಶಿಶುಗಳಿಗೆ ನೀಡುವುದು ಅತ್ಯುತ್ತಮ. ಶಿಶುಗಳಿಗೆ ಅದರ ರುಚಿ ಇಷ್ಟವಾಗದಿದ್ದರೆ ಯಾವುದೇ ಗಂಜಿ/ಸರಿ ಮಿಶ್ರಣಕ್ಕೆ ಹಾಕಿ ತಯಾರಿಸಬಹುದು. ಮಲಬದ್ಧತೆ ನಿವಾರಣೆಗೆ ನಿಯಮಿತವಾಗಿ ನೀಡಬಹುದು. ಪ್ರಸ್ತಾಪಿಸಿದ ಪ್ರಮಾಣಕ್ಕಿಂತಲೂ ಹೆಚ್ಚು ನೀಡುವುದು ಒಳ್ಳೆಯದಲ್ಲ. ವೈದ್ಯರ ಸಲಹೆಯನ್ನು ಪರಿಗಣಿಸಲೇಬೇಕು.

ನಮ್ಮ ಇತರ ಉಪಯುಕ್ತ ಲೇಖನಗಳು : 

Video : ಪ್ರೂನ್ಸ್ ಪ್ಯೂರೀ | Prunes Puree recipe in Kannada

ಪ್ರೂನ್ಸ್ ಪ್ಯೂರೀ | Prunes Puree recipe in Kannada

ಪ್ರೂನ್ಸ್ ಪ್ಯೂರೀ | Prunes Puree recipe in Kannada

ಮಲಬದ್ಧತೆಗೆ ಪ್ರೂನ್ಸ್ ಪ್ಯೂರಿ ಬಹಳ ಪರಿಣಾಮಕಾರಿ ಮತ್ತು ಸುಲಭವಾದ ಮನೆ ಮದ್ದು. ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾದ ಪೌಷ್ಠಿಕಾಂಶಯುಕ್ತ ಪ್ಯೂರಿ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಮನೆ ಮದ್ದು
ತಿನಿಸು:Home Remedy

ಸಾಮಗ್ರಿಗಳು

  1. ಪ್ರೂನ್ಸ್ /ಒಣಗಿದ ಪ್ಲಮ್ - 15
  2. ಬಿಸಿ ನೀರು - 1/2 ಕಪ್

ವಿಧಾನ

  1. ಒಂದು ದೊಡ್ಡ ಬಟ್ಟಲಿನಲ್ಲಿ 15 ಪ್ರೂನ್ಸ್ ತೆಗೆದುಕೊಳ್ಳಿ.
  2. ಇದಕ್ಕೆ ಬಿಸಿ ನೀರನ್ನು ಹಾಕಿ ಒಂದು ಘಂಟೆ ನೆನೆಯಲು ಬಿಡಬೇಕು.
  3. ನೆಂದಿರುವ ಪ್ಲಮ್ ಕೆಳಗೆ ತೋರಿಸಿರುವ ತರಹ ಕಾಣಿಸುವುದು. ನೆಂದ ಹಣ್ಣುಗಳನ್ನು ಬ್ಲೆಂಡರ್ ಜಾರ್ ಗೆ ಹಾಕಿ.
  4. ನಯವಾಗಿ ರುಬ್ಬಿಕೊಳ್ಳಿ .
  5. ಪ್ರೂನ್ಸ್ ಪ್ಯೂರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಪ್ರೂನ್ಸ್ ಪ್ಯೂರೀ | Prunes Puree recipe in KannadaPrunes Puree for Babies | Best Home Remedy for Constipation hindi kannada recipe plum benefits

 

ಪ್ರೂನ್ಸ್ ಪ್ಯೂರಿ ಮಾಡುವುದಕ್ಕೆ ಸಾಮಗ್ರಿಗಳು  :

  1. ಪ್ರೂನ್ಸ್ /ಒಣಗಿದ ಪ್ಲಮ್ – 15
  2. ಬಿಸಿ ನೀರು – 1/2 ಕಪ್

ಪ್ರೂನ್ಸ್ ಪ್ಯೂರಿ ಮಾಡುವ ವಿಧಾನ :

  1. ಒಂದು ದೊಡ್ಡ ಬಟ್ಟಲಿನಲ್ಲಿ 15 ಪ್ರೂನ್ಸ್ ತೆಗೆದುಕೊಳ್ಳಿ.Prunes Puree for Babies | Best Home Remedy for Constipation hindi kannada recipe plum benefits
  2. ಇದಕ್ಕೆ ಬಿಸಿ ನೀರನ್ನು ಹಾಕಿ ಒಂದು ಘಂಟೆ ನೆನೆಯಲು ಬಿಡಬೇಕು.Prunes Puree for Babies | Best Home Remedy for Constipation hindi kannada recipe plum benefits
  3. ನೆಂದಿರುವ ಪ್ಲಮ್ ಕೆಳಗೆ ತೋರಿಸಿರುವ ತರಹ ಕಾಣಿಸುವುದು. ನೆಂದ ಹಣ್ಣುಗಳನ್ನು ಬ್ಲೆಂಡರ್ ಜಾರ್ ಗೆ ಹಾಕಿ.Prunes Puree for Babies | Best Home Remedy for Constipation hindi kannada recipe plum benefits
  4. ನಯವಾಗಿ ರುಬ್ಬಿಕೊಳ್ಳಿ .Prunes Puree for Babies | Best Home Remedy for Constipation hindi kannada recipe plum benefits
  5. ಪ್ರೂನ್ಸ್ ಪ್ಯೂರಿ ತಯಾರಾಗಿದೆ.

ಪ್ರೂನ್ಸ್ ಪ್ಯೂರೀ | Prunes Puree recipe in KannadaPrunes Puree for Babies | Best Home Remedy for Constipation hindi kannada recipe plum benefits

ಸೂಚನೆ  

  1. ಯಾವುದೇ ಹೊಸ ಶಿಶು ಆಹಾರವನ್ನು ಮಕ್ಕಳಿಗೆ ಪರಿಚಯಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.
  2. ಪ್ರೂನ್ಸ್ ಪ್ಯೂರಿಯನ್ನು ಮಾಡಿದ ತಕ್ಷಣವೇ ಬಳಸಬೇಕು.ತಾಜಾ ನೀಡುವುದು ಸೂಕ್ತ .
  3. ಪ್ರೂನ್ಸ್ ನಲ್ಲಿ ಹುಳಿಯಾದ ಸ್ವಾದವಿರುತ್ತದೆ. ಸಿಹಿ ಬೇಕಾದರೆ ಸ್ವಲ್ಪ ಒಣ ದ್ರಾಕ್ಷಿ ಅಥವಾ ಖರ್ಜೂರ ಬಳಸಬಹುದು.
  4. ಅಧಿಕವಾದ ನೀರನ್ನು ಪ್ಯೂರಿಗೆ ಬಳಸಬಾರದು. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಯಾವುದೇ ದ್ರವ ಆಹಾರ ತಾಯಿಯ ಹಾಲಿಗೆ ಪರ್ಯಾಯವಾಗಿ ನೀಡಬಾರದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 5
    Shares