Spread the love
  • 3
    Shares

Potato Wedges Quick Snacks under 10 minutes Potato Snacks Delicious Snacks Potato Snacks Homemade Potato Wedges

ಫ್ರೆಂಚ್ ಫ್ರೈಸ್‌ನ ನಂತರ ಆಲೂಗಡ್ಡೆ ವೆಡ್ಜೆಸ್ ಯಾವಾಗಲೂ ಮಕ್ಕಳಿಗೆ ಎರಡನೇ ನೆಚ್ಚಿನ ತಿಂಡಿಯಾಗುವುದು. ಕೈಗೆ ನೀಡುವ ಆಹಾರ ಪ್ರಾರಂಭಸಲು  ಶಿಶುಗಳಿಗೆ ನೀಡಲು ಮೃದುವಾದ ವಿನ್ಯಾಸ ಮತ್ತು ಒಳಗೆ ಮೃದು ಹೊರಗೆ ಗರಿಗರಿಯಾಗಿರುತ್ತದೆ. ಈ ಆಲೂಗಡ್ಡೆ ವೆಡ್ಜೆಸ್ ರುಚಿಗೆ ತಕ್ಕಂತೆ ಮಕ್ಕಳಿಗೆ ಸೂಕ್ತವಾದ ಸಂಜೆಯ ತಿಂಡಿ ಮತ್ತು ತಯಾರಿಸಲು ಬಹಳ  ಕಡಿಮೆ ಸಮಯ ಬೇಕಾಗುವುದು.

ಈ ಮನೆಯಲ್ಲಿ ತಯಾರಿಸಿದ ಆಲೂಗಡ್ಡೆ ವೆಡ್ಜೆಸ್ ತಯಾರಿಸುವುದು ನಿಜವಾಗಿಯೂ ಸುಲಭ.  ನಾನು  ತಡವಾಗಿ ಕಲಿತಿದ್ದೇನೆ. ನನ್ನ ಮಗಳು ಅಂಗಡಿಯಿಂದ  ಖರೀದಿಸಿದ ವೆಡ್ಜಸ್ ರುಚಿ ನೋಡಿದ್ದಳು. ಮನೆಯಲ್ಲಿ ತಯಾರಿಸಿರುವುದನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಮಕ್ಕಳಿಗೆ  ಆರೋಗ್ಯಕರ ಲಘು ಉಪಾಹಾರವನ್ನು ನೀಡುವ ತೃಪ್ತಿ ನಿಮಗೆ ಸಿಗುವುದು. ಅಂಗಡಿಯಲ್ಲಿ ಖರೀದಿಸಿದ ಜಂಕ್ ಆಹಾರಕಿಂತ  ನಾನು ಯಾವಾಗಲೂ ಹೇಳುವಂತೆ, ಆರೋಗ್ಯಕರ ತಾಜಾ ಪದಾರ್ಥಗಳೊಂದಿಗೆ ಮನೆಯಲ್ಲಿ ತಯಾರಿಸಿದಾಗ, ಯಾವುದೇ ಜಂಕ್ ಅನ್ನು ಆರೋಗ್ಯಕರ ಆಹಾರವಾಗಿ ಪರಿವರ್ತಿಸಬಹುದು

ಆಲೂಗಡ್ಡೆ ಆರೋಗ್ಯಕರವಲ್ಲ ಇದು ಗ್ಯಾಸ್ಸಿ ಅಥವಾ ವಾಯು , ಜೀರ್ಣವಾಗುವುದಿಲ್ಲ ಇಂತಹ ತಪ್ಪು ಕಲ್ಪನೆಗಳನ್ನು ಮತ್ತು ಗೊಂದಲವನ್ನು ಬಿಟ್ಟು ಸರಿಯಾದ ಮಾಹಿತಿ ತಿಳಿದು ಮಕ್ಕಳ ಜೊತೆ ನೀವು ರುಚಿಯಾದ ವೆಡ್ಜಸ್ ತಿನ್ನಿ ಆನಂದಿಸಿ.   ಶಿಶುಗಳಿಗೆ ಬಳಸುವಾಗ ವಾಯು ಯಾಗದಂತೆ ಒಂದು ಚಿಟಕೆ ಜೀರಿಗೆ ಹಾಕಿ ನೀಡಬಹುದು.  ಇತಿ ಮಿತಿಯಾಗಿ ತಿನ್ನುವುದರಿಂದ ಯಾವುದೇ ಸಮಸ್ಯೆ ಯಾಗುವುದಿಲ್ಲ . ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಮಾಣವನ್ನು ಮಿತಿಗೊಳಿಸಿ.

ಶಿಶುಗಳು ಮತ್ತು ಮಕ್ಕಳಿಗೆ  ಆಲೂಗಡ್ಡೆಯ ಪ್ರಯೋಜನಗಳು:

1. ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುತ್ತದೆ  – ಶಕ್ತಿಯುತವಾದ ಆಹಾರ ಮತ್ತು ತೂಕವನ್ನು ಹೆಚ್ಚಿಸುವುದು. 

2. ಕೋಲೀನ್ ಅಂಶ  ಹೊಂದಿರುತ್ತದೆ – ಚಿಕ್ಕ ಮಕ್ಕಳಲ್ಲಿ ಒಳ್ಳೆಯ ನಿದ್ರೆ, ಸ್ಮರಣ ಶಕ್ತಿ ಮತ್ತು ಕಲಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

3. ವಿಟಮಿನ್ ಸಿ ಸಮೃದ್ಧವಾಗಿ ದೊರಕುವುದು  – ಕಬ್ಬಿಣದ ಹೀರಿಕೊಳ್ಳುವಿಕೆ ಮತ್ತು ಉತ್ತಮ ಚರ್ಮದ ಆರೋಗ್ಯಕ್ಕೆ ಇದು ಬಹಳ ಮುಖ್ಯ ಮತ್ತು ಅಗತ್ಯವಾಗಿ ದೇಹಕ್ಕೆ ಬೇಕಾಗುವುದು. 

ಮಕ್ಕಳಿಗೆ ತಾಜಾ ಆರೋಗ್ಯಕರವಾದ ಲಘು ಉಪಾಹಾರವನ್ನು ನೀವು ಪ್ರೀತಿಯಿಂದ ತಯಾರಿಸಿ ನಿಮ್ಮ ಕುಟುಂಬ ಜೊತೆ ಚಹಾ ಸಮಯದಲ್ಲಿ ಆನಂದಿಸಿರಿ. 

ನಿಮ್ಮ ಪುಟ್ಟ ಮಕ್ಕಳಿಗೆ ಇಷ್ಟವಾಗುವ ಇನ್ನೂ ಕೆಲವು ಪಾಕವಿಧಾನಗಳನ್ನು ಪ್ರಯತ್ನಿಸಿ. 

Video: Homemade Potato Wedges for Toddlers and Kids

Kannada Subscribe Button TOTS AND MOMS

ಆಲೂಗಡ್ಡೆ ವೆಡ್ಜಸ್ | Potato Wedges recipe in Kannada

ಮನೆಯಲ್ಲಿ ತಯಾರಿಸಿದ ಆಲೂಗಡ್ಡೆ ವೆಡ್ಜೆಸ್ ಮಕ್ಕಳಿಗೆ ಮತ್ತು ದೊಡ್ಡವರಿಗೂ ಕೂಡ ಆದರ್ಶವಾದ ಲಘು ಉಪಾಹಾರದ ಆಯ್ಕೆಗಲ್ಲಿ ಒಂದಾಗಿದೆ. ಮನೆಯಲ್ಲಿ ತಾಜಾ ಮತ್ತು ಆರೋಗ್ಯಕರ ಎಣ್ಣೆಯಲ್ಲಿ ಕರಿಯುವುದರಿಂದ ಖಂಡಿತವಾಗಿಯೂ ಇದು ಜಂಕ್ ಆಹಾರವಾಗುವುದಿಲ್ಲ ಮನೆಯಲ್ಲಿ ತಯಾರಿಸಿದ ಆಲೂಗಡ್ಡೆ ವೆಡ್ಜೆಸ್ ಬೆಳೆಯುತ್ತಿರುವ ಶಿಶುಗಳಿಗೆ ಕೈಗೆ ನೀಡುವ ಆಹಾರವಾಗಿದೆ. ಕೈಯಲ್ಲಿ ಹಿಡಿಯುವುದು ಸುಲಭ ಮತ್ತು ರುಚಿಕರವಾಗಿರುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಉಪಹಾರ , ಲಘು ಉಪಹಾರ ,ಸ್ನಾಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಉದ್ದನೆಯ ಆಲುಗಡ್ಡೆಗಳು – 2 / Long Sized Potaotes– 2
  2. ನೀರು / Water 
  3. ಎಣ್ಣೆ ಕರಿಯಲು/  Oil – for Deep Frying
  4. ಉಪ್ಪು/ Salt 
  5. ಅಚ್ಚ ಖಾರದ ಪುಡಿ  ಸ್ವಲ್ಪ/  Chilli Powder –

ವಿಧಾನ

  1. ಉದ್ದನೆಯ ಆಲೂಗಡ್ಡೆ ಗಳನ್ನು ಆಯ್ಕೆ ಮಾಡಿಕೊಂಡು ಅದರ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ಲಂಬವಾಗಿ ಹೆಚ್ಚಿಕೊಳ್ಳಿ. ಸರಿಯಾಗಿ ಮಾಡಲು ವೀಡಿಯೋ ವೀಕ್ಷಿಸಿ.  ಈಗ ಹೆಚ್ಚಿಕೊಂಡಿರುವ ಆಲುಗಡ್ಡೆಯನ್ನು ಮತ್ತೊಂದು ಪಾತ್ರೆಗೆ ಮುಳುಗುವಷ್ಟು ನೀರು , ಉಪ್ಪು ಹಾಕಿ 3-5 ನಿಮಿಷ ಬೇಯಿಸಿಕೊಳ್ಳಿ. ಗಮನಿಸಿ ಆಲುಗಡ್ಡೆಯನ್ನು ಬೇಯಿಸುವ ಅವಶ್ಯಗತೆ ಇಲ್ಲ ಬರಿ ಸ್ವಲ್ಪ ಕುದಿಸಿ, ಎಣ್ಣೆಯಲ್ಲಿ ಕರಿದ ನಂತರ ಬೆಂದಿರುತ್ತದೆ.
  2. ಬಿಸಿ ನೀರಿನಲ್ಲಿ ಕುದಿಸಿದ ನಂತರ ಆಲೂಗಡ್ಡೆ ಗಟ್ಟಿಯಾಗಿರಬೇಕು ಮೃದುವಾಗಿ ಬೆಂದಿರಬಾರದು. ಹೆಚ್ಚುವರಿ ನೀರನ್ನು ಶೋಧಿಸಿ ತೆಗೆದುಬಿಡಿ. ಅಗಲವಾದ ಬಾಣಲೆಗೆ ಅಥವಾ ಪ್ಯಾನಿಗೆ ಎಣ್ಣೆ ಚೆನ್ನಾಗಿ ಕಾದ ನಂತರ ಹೆಚ್ಚು ಉರಿಯಲ್ಲಿ ಕರಿಯಬೇಕು. ಎಣ್ಣೆ ತುಂಬಾ ಬಿಸಿಯಾಗಿರೇಕು. ಆಗಲೇ ಸರಿಯಾದ ವಿನ್ಯಾಸ ಪಡೆಯಲು ಸಾಧ್ಯ. 
  3. ಆಲುಗಡ್ಡೆಯನ್ನು ಹೊಂಬಣ್ಣ ಬರುವ ತನಕ ಕರಿಯಬೇಕು. ಹೆಚ್ಚುವರಿ ಎಣ್ಣೆಯನ್ನು ತೆಗೆದು. ಬಟ್ಟಳಿಗೆ ಹಾಕಿ.
  4. ಕರಿದ ಆಲೂಗಡ್ಡೆ ಗಳಿಗೆ ಉಪ್ಪು ಅಚ್ಚಖಾರದ ಪುಡಿ ನಿಮ್ಮ ರುಚಿಗೆ ಅನುಗುಣವಾಗಿಯೇ ಹಾಕಿಕೊಳ್ಳಿ. ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಮಕ್ಕಳಿಗೆ ಬರಿ ಉಪ್ಪು ಹಾಕಿ ನೀಡಬಹುದು. ಇಲ್ಲವಾದರೆ ಅಚ್ಚ ಖಾರದ ಪುಡಿಯ ಬದಲು ಮೆಣಸನ್ನು ಹಾಕಬಹುದು. ನಿಮ್ಮ ಕುಟುಂಬದ ರುಚಿ ಮತ್ತು ಆಸೆಗೆ ಅನುಗುಣವಾಗಿಯೇ ಚಾಟ್ ಮಸಾಲ , ಇಟಾಲಿಯನ್ ಮಸಾಲ  ಹಾಕಿ ತಯಾರಿಸಿಕೊಳ್ಳಬಹುದು.
  5. ರುಚಿಕರವಾದ ಗರಿಗರಿಯದ ಆಲೂಗಡ್ಡೆ ವೆಡ್ಜೆಸ್ ತಯಾರಾಗಿದೆ. 

ನಮ್ಮ ನಿಯಮಿತ ನವೀಕರಣಗಳಿಗೆ ದಯವಿಟ್ಟು ನಮ್ಮ  Instagram ಮತ್ತು  Facebook ಪುಟ ಅನುಸರಿಸಿ. 

ಆಲೂಗಡ್ಡೆ ವೆಡ್ಜಸ್ | Potato Wedges recipe in Kannada

Potato Wedges Quick Snacks under 10 minutes Potato Snacks Delicious Snacks Potato Snacks Homemade Potato Wedges

ಆಲೂಗಡ್ಡೆ ವೆಡ್ಜೆಸ್  ಮಾಡುವ ವಿಧಾನ :

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
  • 3
    Shares