Spread the love
  • 34
    Shares

ಪನೀರ್ ನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಮೊಟ್ಟೆಯಲ್ಲಿ  ಕಬ್ಬಿಣ, ಪ್ರೋಟೀನ್ ಮತ್ತು ಉತ್ತಮ ಕೊಲೆಸ್ಟರಾಲ್ ದೊರಕುವುದು. ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಮತ್ತು ಆರೋಗ್ಯಕರವಾಗಿ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.ಪನೀರ್ ಆಮ್ಲೆಟ್ ಚಿಕ್ಕ ಮಕ್ಕಳಿಗೆ ಕೈಗೆ ನೀಡಬಹುದಾದ ಉತ್ತಮ ಆಹಾರದ ಆಯ್ಕೆ ಮತ್ತು ಕುಟುಂಬದ ಆಹಾರಕ್ರಮಕ್ಕೆ ಹೊಂದುಕೊಳ್ಳುತ್ತಿರುವ ಮಕ್ಕಳಿಗೆ ಸೂಕ್ತ.

ಪನೀರ್ ಆಮ್ಲೆಟ್ | Paneer Omelette for Toddlers & Kids

Paneer Omelette | Egg Recipes for Toddlers & Kids kannada hindi

ನಮ್ಮ  ಬ್ಲಾಗ್ ನಲ್ಲಿ ನಾನು ಹಲವಾರು ಪನೀರ್ ಪಾಕವಿಧಾನಗಳನ್ನು ಪೋಸ್ಟ್ ಮಾಡಿದ್ದೇನೆ, ನೋಡಿ ಪ್ರಯತ್ನಿಸಿ. ಅಲ್ಲದೆ, ಶಿಶುಗಳು ಮತ್ತು ಮಕ್ಕಳಿಗಾಗಿ 5 ಪನೀರ್ ಪಾಕವಿಧಾನಗಳನ್ನು ಮತ್ತು ಮನೆಯಲ್ಲಿ ಪನೀರ್ ಅನ್ನು ಹೇಗೆ ತಯಾರಿಸುವ ಬಗ್ಗೆ ವಿವರವಾದ ಮಾಹಿತಿ ಬ್ಲಾಗ್ ನಲ್ಲಿ  ಇದೆ. ಶಿಶುಗಳಿಗೆ ಮೊಟ್ಟೆ ಬಳಸಿ ಮಾಡಿರುವ 5 ಪಾಕವಿಧಾನಗಳನ್ನು ಕೂಡ ನೀಡಲಾಗಿದೆ.

ಮಗುವಿನ ವಯಸ್ಸಿಗೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಶಿಶು ಆಹಾರ ಚಾರ್ಟ್ ಗೆ  ಇಲ್ಲಿ ಪರಿಶೀಲಿಸಿ .

Video : ಪನೀರ್ ಆಮ್ಲೆಟ್ | Paneer Omelette for Toddlers & Kids

Kannada Subscribe Button TOTS AND MOMS

ಪನೀರ್ ಆಮ್ಲೆಟ್ | Paneer Omelette for Toddlers & Kids

ಪನೀರ್ ಆಮ್ಲೆಟ್

ಪನೀರ್ ಮತ್ತು ಮೊಟ್ಟೆ ಬಳಸಿದ ಒಂದು ವಿಶೇಷ ಆಮ್ಲೆಟ್

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ತಿಂಡಿ, ತಿನಿಸು,
ತಿನಿಸು:ಭಾರತೀಯ

ಸಾಮಗ್ರಿಗಳು

  1. ಪನೀರ್ - 1 ಕಪ್ ತುರಿದಿರುವ
  2. ಮೊಟ್ಟೆ - 4
  3. ಕರಿಬೇವಿನ ಎಲೆಗಳು - 3 ಚಿಕ್ಕದಾಗಿ ಕತ್ತರಿಸಿರುವ
  4. ಈರುಳ್ಳಿ- 1 ಕತ್ತರಿಸಿರುವ (optional)
  5. ಅಚ್ಚ ಖಾರದ ಪುಡಿ - 1/2 tsp
  6. ಕಾಳು ಮೆಣಸಿನ ಪುಡಿ – ಒಂದು ಚಿಟಕೆ
  7. ಉಪ್ಪು – ರುಚಿಗೆ ತಕ್ಕಷ್ಟು
  8. ತುಪ್ಪ - 1 tsp
  9. ಎಣ್ಣೆ - 2 tsp

ವಿಧಾನ

  1. ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿಯಾದ ತಕ್ಷಣ ಸಣ್ಣಗೆ ಕತ್ತರಿಸಿರುವ ಕರಿಬೇವಿನ ಎಲೆಗಳು ಮತ್ತು ಈರುಳ್ಳಿ ಹಾಕಿ ಹುರಿಯಿರಿ, ಈರುಳ್ಳಿ ಅರೆಪಾರದರ್ಶಕವಾಗುವ ತನಕ  ಹುರಿದು ನಂತರ ಗ್ಯಾಸ್ ಆರಿಸಿ ತುರಿದ ಪನೀರನ್ನು ಹಾಕಿ ಮಿಶ್ರಣ ಮಾಡಿ.ಮಿಶ್ರಣವನ್ನು ಪಕ್ಕಕ್ಕೆಇಡಿ .
  2. ಬಟ್ಟಲಿಗೆ ಮೊಟ್ಟೆ ಹಾಕಿ ಕೆಳಗೆ ತೋರಿಸಿರುವ ತರಹ ಚೆನ್ನಾಗಿ ಮಿಶ್ರಣ ಮಾಡಿ ಇದಕ್ಕೆ ಉಪ್ಪು ಮತ್ತು ಅಚ್ಚಖಾರದ ಪುಡಿ ಹಾಕಿ.
  3. ಮಿಶ್ರಣ ಮಾಡಿದ ನಂತರ ಹುರಿದ ಈರುಳ್ಳಿ ಮತ್ತು ಪನೀರ್ ಮಿಶ್ರಣವನ್ನು ಸೇರಿಸಿ ಕಲಸಿ. ಆಮ್ಲೆಟ್ ಬ್ಯಾಟರ್ (ಹಿಟ್ಟು) ಸಿದ್ಧವಾಗಿದೆ.
  4. ಕಾವಲಿ ಅಥವಾ ಪ್ಯಾನ್ ಬಿಸಿ ಮಾಡಿ ಸೌಟು ತುಂಬಾ ಹಿಟ್ಟನ್ನು ತೆಗೆದುಕೊಂಡು ಆಮ್ಲೆಟ್ ಹಿಟ್ಟನ್ನು ಪ್ಯಾನ್ ಮೇಲೆ ಹರಡಿ ತಿರುಗಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ತುಂಬಾ ತೆಳ್ಳಗೆ ಹಿಟ್ಟನ್ನು ಹರಡಬೇಡಿ.    
  5. ಆಮ್ಲೆಟ್ ನ್ನು ಮೊಗಚಿ ಎರಡು ಕಡೆ ಚೆನ್ನಾಗಿ ಬೇಯಿಸಿ ಬಿಸಿ ಬಿಸಿಯಾಗಿ ತಿನ್ನಲು ನೀಡಬಹುದು.
  6. ಪನೀರ್ ಆಮ್ಲೆಟ್ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಪನೀರ್ ಆಮ್ಲೆಟ್ | Paneer Omelette for Toddlers & Kids

Paneer Omelette | Egg Recipes for Toddlers & Kids kannada hindi

ಪನೀರ್ ಆಮ್ಲೆಟ್  ಮಾಡಲು ಬೇಕಾಗಿರುವ ಸಾಮಗ್ರಿಗಳು :

  1. ಪನೀರ್ – 1 ಕಪ್ ತುರಿದಿರುವ
  2. ಮೊಟ್ಟೆ – 4
  3. ಕರಿಬೇವಿನ ಎಲೆಗಳು – 3 ಚಿಕ್ಕದಾಗಿ ಕತ್ತರಿಸಿರುವ
  4. ಈರುಳ್ಳಿ– 1 ಕತ್ತರಿಸಿರುವ (optional)
  5. ಅಚ್ಚ ಖಾರದ ಪುಡಿ – 1/2 tsp
  6. ಕಾಳು ಮೆಣಸಿನ ಪುಡಿ ಒಂದು ಚಿಟಕೆ
  7. ಉಪ್ಪು ರುಚಿಗೆ ತಕ್ಕಷ್ಟು
  8. ತುಪ್ಪ – 1 tsp
  9. ಎಣ್ಣೆ – 2 tsp

ಪನೀರ್ ಆಮ್ಲೆಟ್  ಮಾಡುವ ವಿಧಾನ  

1. ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿಯಾದ ತಕ್ಷಣ ಸಣ್ಣಗೆ ಕತ್ತರಿಸಿರುವ ಕರಿಬೇವಿನ ಎಲೆಗಳು ಮತ್ತು ಈರುಳ್ಳಿ ಹಾಕಿ ಹುರಿಯಿರಿ, ಈರುಳ್ಳಿ ಅರೆಪಾರದರ್ಶಕವಾಗುವ ತನಕ  ಹುರಿದು ನಂತರ ಗ್ಯಾಸ್ ಆರಿಸಿ ತುರಿದ ಪನೀರನ್ನು ಹಾಕಿ ಮಿಶ್ರಣ ಮಾಡಿ.ಮಿಶ್ರಣವನ್ನು ಪಕ್ಕಕ್ಕೆಇಡಿ .

Paneer Omelette | Egg Recipes for Toddlers & Kids kannada hindi

2. ಬಟ್ಟಲಿಗೆ ಮೊಟ್ಟೆ ಹಾಕಿ ಕೆಳಗೆ ತೋರಿಸಿರುವ ತರಹ ಚೆನ್ನಾಗಿ ಮಿಶ್ರಣ ಮಾಡಿ ಇದಕ್ಕೆ ಉಪ್ಪು ಮತ್ತು ಅಚ್ಚಖಾರದ ಪುಡಿ ಹಾಕಿ.

Paneer Omelette | Egg Recipes for Toddlers & Kids kannada hindi

3. ಮಿಶ್ರಣ ಮಾಡಿದ ನಂತರ ಹುರಿದ ಈರುಳ್ಳಿ ಮತ್ತು ಪನೀರ್ ಮಿಶ್ರಣವನ್ನು ಸೇರಿಸಿ ಕಲಸಿ. ಆಮ್ಲೆಟ್ ಬ್ಯಾಟರ್ (ಹಿಟ್ಟು) ಸಿದ್ಧವಾಗಿದೆ.

Paneer Omelette | Egg Recipes for Toddlers & Kids kannada hindi

4. ಕಾವಲಿ ಅಥವಾ ಪ್ಯಾನ್ ಬಿಸಿ ಮಾಡಿ ಸೌಟು ತುಂಬಾ ಹಿಟ್ಟನ್ನು ತೆಗೆದುಕೊಂಡು ಆಮ್ಲೆಟ್ ಹಿಟ್ಟನ್ನು ಪ್ಯಾನ್ ಮೇಲೆ ಹರಡಿ ತಿರುಗಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ತುಂಬಾ ತೆಳ್ಳಗೆ ಹಿಟ್ಟನ್ನು ಹರಡಬೇಡಿ.    

Paneer Omelette | Egg Recipes for Toddlers & Kids kannada hindi

5. ಆಮ್ಲೆಟ್ ನ್ನು ಮೊಗಚಿ ಎರಡು ಕಡೆ ಚೆನ್ನಾಗಿ ಬೇಯಿಸಿ ಬಿಸಿ ಬಿಸಿಯಾಗಿ ತಿನ್ನಲು ನೀಡಬಹುದು.

Paneer Omelette | Egg Recipes for Toddlers & Kids kannada hindi

ಪನೀರ್ ಆಮ್ಲೆಟ್ ಸಿದ್ಧವಾಗಿದೆ.

ಪನೀರ್ ಆಮ್ಲೆಟ್ | Paneer Omelette for Toddlers & Kids

Paneer Omelette | Egg Recipes for Toddlers & Kids kannada hindi

ಸೂಚನೆ :

1. ಬೇಕಿದ್ದಲ್ಲಿ ಹುರಿದ ಈರುಳ್ಳಿ ಬಳಸಿ, ಮೊಟ್ಟೆಯ ಜೊತೆ ಪನೀರ್ ಮತ್ತು ಮಸಾಲೆ ಹಾಕಿ ಮಿಶ್ರಣ ಮಾಡಿ ಆಮ್ಲೆಟ್ ತಯಾರಿಸಬಹುದು.

2. ಶಿಶುಗಳಿಗೆ ಮೊಟ್ಟೆಯ ಹಳದಿ ಭಾಗ ಮಾತ್ರ ಬಳಸಿ ಮಾಡಿ.

3. ಮಗುವಿಗೆ ಯಾವುದೇ ಹೊಸ ಆಹಾರವನ್ನು ಪ್ರಾರಂಭಿಸುವ ಮೊದಲು ಮಕ್ಕಳ ವೈದ್ಯರ ಸಲಹೆ ತೆಗೆದುಕೊಳ್ಳುವುದು ಸೂಕ್ತ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 34
    Shares