Spread the love
  • 10
    Shares

ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

Oats Sesame Bar for Toddlers and Kids | Till ke Chikki health bar hindi kannada

ಎಳ್ಳು ತುಂಬಾ ಪೌಷ್ಟಿಕಯುಕ್ತವಾದದ್ದು ಇದರಲ್ಲಿ ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿರುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಿರುವ ಉತ್ತಮ ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ಕ್ಯಾಲ್ಸಿಯಂನ ಅಂಶವಿರುವುದರಿಂದ ಮಕ್ಕಳಲ್ಲಿ ದಂತಕ್ಷಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಪಾಕವಿಧಾನದಲ್ಲಿ ಎಳ್ಳಿನ ಜೊತೆ ಓಟ್ಸ್ ಅನ್ನು ಬಳಸಲಾಗಿದೆ. ಇದು ಪಾಕವಿಧಾನಕ್ಕೆ ಉತ್ತಮ ವಿನ್ಯಾಸ ಮತ್ತು ರುಚಿಯನ್ನು ನೀಡುತ್ತದೆ.

ಓಟ್ಸ್ & ಎಳ್ಳಿನ ಚಿಕ್ಕಿ ಬಾರನ್ನು 1 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಕುಟುಂಬದ ಇತಿಹಾಸದಲ್ಲಿ ಯಾರಿಗಾದರು ಎಳ್ಳಿನ ಅಲರ್ಜಿಇದ್ದಲ್ಲಿ ಜಾಗರೂಕತೆ ವಹಿಸಬೇಕು. ಮಕ್ಕಳಿಗೆ ನೀಡಿದಾಗ ಯಾವುದೇ ಅಲರ್ಜಿ ಲಕ್ಷಣಗಳು ಅಥವಾ ಪ್ರತಿಕ್ರಿಯೆಗಳನ್ನು ಗಮನಿಸಿ. ಅಪರೂಪದ ಪ್ರಕರಣಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆರೋಗ್ಯಕರ ಎಳ್ಳನ್ನುಉಪಯೋಗಿಸಬಹುದು ಮತ್ತು ಮಕ್ಕಳಿಗೆ ನೀಡಬಹುದು.

ಓಟ್ಸ್ & ಎಳ್ಳಿನ ಚಿಕ್ಕಿಯ ಆರೋಗ್ಯಕರವಾದ ಪ್ರಯೋಜನಗಳು:

  • ಮಕ್ಕಳ ಬೆಳವಣಿಗೆಯಲ್ಲಿ ಸಹಾಯ ಮಾಡುವ ಓಟ್ಸ್ ನಲ್ಲಿ  ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಬಿ ದೊರೆಯುತ್ತದೆ.
  • ಎಳ್ಳಿನಲ್ಲಿ ಒಳ್ಳೆಯ ವಿರೋಧಿ ಆಕ್ಸಿಡೆಂಟ್ ಗಳಿರುವುದರಿಂದ  ವೇಗವಾಗಿ ಗಾಯವನ್ನು ಗುಣಪಡಿಸುವ ಗುಣ ಹೊಂದಿದೆ.
  • ಚಳಿಗಾಲದ ಸಮಯದಲ್ಲಿ ಚರ್ಮವನ್ನು ರಕ್ಷಿಸಲು ಎಳ್ಳು ತುಂಬಾ ಸಹಕಾರಿಯಾಗುತ್ತದೆ. ಕೊಬ್ಬಿನ ರೂಪದಲ್ಲಿ ವಿಟಮಿನ್ ಇ ಹೊಂದಿರುತ್ತದೆ.
  • ಓಟ್ಸ್ & ಎಳ್ಳಿನ ಚಿಕ್ಕಿ ರೋಗ ನಿರೋಧಕ ಶಕ್ತಿ ನೀಡುತ್ತದೆ ಮತ್ತು ಪಾಕವಿಧಾನದ ರುಚಿಯನ್ನು ಹೆಚ್ಚಿಸುತ್ತದೆ.

ನಮ್ಮ ಇತರ ರುಚಿಕರ ಹಾಗು ಆರೋಗ್ಯಕರವಾದ ಪಾಕವಿಧಾನ ಪ್ರಯತ್ನಿಸಿ .

Video: ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

Kannada Subscribe Button TOTS AND MOMS

 ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

ಎಳ್ಳು ತುಂಬಾ ಪೌಷ್ಟಿಕಯುಕ್ತವಾದದ್ದು ಇದರಲ್ಲಿ ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿರುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಿರುವ ಉತ್ತಮ ಶಕ್ತಿಯನ್ನು ಒದಗಿಸುತ್ತದೆ. ಮಕ್ಕಳಿಗೆ ಆರೋಗ್ಯಕರವಾದ ಸ್ನ್ಯಾಕ್ / ಲಘು ಉಪಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ/ ಸ್ನಾಕ್ಕ್ಸ್/ ಲಂಚ್ ಬಾಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಓಟ್ಸ್ - 1 ಕಪ್
  2. ಎಳ್ಳು - 1 ಕಪ್
  3. ಬೆಲ್ಲ - 1 ಕಪ್
  4. ತುಪ್ಪ - 1/4 ಕಪ್
  5. ಗೋಡಂಬಿ - 10
  6. ಬಾದಾಮಿ - 10
  7. ಪಿಸ್ತಾ - 10

ವಿಧಾನ

  1. ಒಂದು ಬಾಣಲೆಗೆ ಓಟ್ಸ್ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ ನಂತರ ತಟ್ಟೆಗೆ ವರ್ಗಾಯಿಸಿ.
  2. ಅದೇ ಬಾಣಲೆಗೆ ತುಪ್ಪ ಹಾಕಿ ಎಳ್ಳನ್ನು 5 ನಿಮಿಷ ಹುರಿದು ತಟ್ಟೆಗೆ ವರ್ಗಾಯಿಸಿ.
  3. ಈಗ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಾದಾಮಿ ಮತ್ತು ಗೋಡಂಬಿ ಹುರಿದುಕೊಂಡು ಇಟ್ಟುಕೊಳ್ಳಿ.
  4. ತದನಂತರ ಬಾಣಲೆಗೆ ಸ್ವಲ್ಪ ಬೆಲ್ಲ ಮತ್ತು ನೀರು ಹಾಕಿ ಕುದಿಯಲು ಬಿಡಿ, ಒಂದು ಎಳೆ ಪಾಕ ಬರುವ ತನಕ ಕುದಿಸಿ.
  5. ಸರಿಯಾಗಿ ಪಾಕ ಆಗಿದೆ ಎಂದು ಪರೀಕ್ಷಿಸಲು ಒಂದು ಬಟ್ಟಲು ತಣ್ಣನೆಯ ನೀರಿಗೆ ಪಾಕ ಹಾಕಿ ಅದು ಕೆಳಗೆ ತೋರಿಸಿರುವ ತರಹ ಸ್ಥಿರತೆ ಇರಬೇಕು, ನೀರಿನಲ್ಲಿ ಹರಡಿಕೊಳ್ಳಬಾರದು.
  6. ಪಾಕ ಸಿದ್ಧವಾದ ತಕ್ಷಣ ಇದಕ್ಕೆ ಹುರಿದುಕೊಂಡಿರುವ ಓಟ್ಸ್, ಎಳ್ಳು, ಗೋಡಂಬಿ, ಬಾದಾಮಿ ಮತ್ತು ರುಚಿ ಹೆಚ್ಚಿಸಲು ಸ್ವಲ್ಪ ತುಪ್ಪ ಹಾಕಿ ಮಿಶ್ರಣ ಮಾಡಿ.
  7. ಚೆನ್ನಾಗಿ ಎಲ್ಲವನ್ನು  ಮಿಶ್ರಣ ಮಾಡಿ ತುಪ್ಪ ಹಚ್ಚಿದ ಟ್ರೇ / ತಟ್ಟೆಗೆ ವರ್ಗಾಯಿಸಿ.
  8. ಸಮಾವಾಗಿ ತಟ್ಟಿ ಹದ ಮಾಡಿ ಬಿಸೀರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ತಟ್ಟೆ ಮೊಗಚಿದರೆ ಚಿಕ್ಕಿ ತಯಾರಾಗಿರುತ್ತದೆ.
  9. ರುಚಿಕರವಾದ ಮತ್ತು ಸ್ವದಿಷ್ಟಕರವಾದ ಓಟ್ಸ್ & ಎಳ್ಳಿನ ಚಿಕ್ಕಿ ಬಾರ್ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

ಓಟ್ಸ್ & ಎಳ್ಳಿನ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥಗಳು :

  1. ಓಟ್ಸ್ – 1 ಕಪ್
  2. ಎಳ್ಳು – 1 ಕಪ್
  3. ಬೆಲ್ಲ – 1 ಕಪ್
  4. ತುಪ್ಪ – 1/4 ಕಪ್
  5. ಗೋಡಂಬಿ – 10
  6. ಬಾದಾಮಿ – 10
  7. ಪಿಸ್ತಾ – 10

ಓಟ್ಸ್ & ಎಳ್ಳಿನ ಚಿಕ್ಕಿ  ಮಾಡುವ ವಿಧಾನ :

1. ಒಂದು ಬಾಣಲೆಗೆ ಓಟ್ಸ್ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ ನಂತರ ತಟ್ಟೆಗೆ ವರ್ಗಾಯಿಸಿ.

Oats Sesame Bar for Toddlers and Kids

2. ಅದೇ ಬಾಣಲೆಗೆ ತುಪ್ಪ ಹಾಕಿ ಎಳ್ಳನ್ನು 5 ನಿಮಿಷ ಹುರಿದು ತಟ್ಟೆಗೆ ವರ್ಗಾಯಿಸಿ.

Oats Sesame Bar for Toddlers and Kids

3. ಈಗ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಾದಾಮಿ ಮತ್ತು ಗೋಡಂಬಿ ಹುರಿದುಕೊಂಡು ಇಟ್ಟುಕೊಳ್ಳಿ.

Oats Sesame Bar for Toddlers and Kids

4. ತದನಂತರ ಬಾಣಲೆಗೆ ಸ್ವಲ್ಪ ಬೆಲ್ಲ ಮತ್ತು ನೀರು ಹಾಕಿ ಕುದಿಯಲು ಬಿಡಿ, ಒಂದು ಎಳೆ ಪಾಕ ಬರುವ ತನಕ ಕುದಿಸಿ.

Oats Sesame Bar for Toddlers and Kids

5. ಸರಿಯಾಗಿ ಪಾಕ ಆಗಿದೆ ಎಂದು ಪರೀಕ್ಷಿಸಲು ಒಂದು ಬಟ್ಟಲು ತಣ್ಣನೆಯ ನೀರಿಗೆ ಪಾಕ ಹಾಕಿ ಅದು ಕೆಳಗೆ ತೋರಿಸಿರುವ ತರಹ ಸ್ಥಿರತೆ ಇರಬೇಕು, ನೀರಿನಲ್ಲಿ ಹರಡಿಕೊಳ್ಳಬಾರದು.

Oats Sesame Bar for Toddlers and Kids

6. ಪಾಕ ಸಿದ್ಧವಾದ ತಕ್ಷಣ ಇದಕ್ಕೆ ಹುರಿದುಕೊಂಡಿರುವ ಓಟ್ಸ್, ಎಳ್ಳು, ಗೋಡಂಬಿ, ಬಾದಾಮಿ ಮತ್ತು ರುಚಿ ಹೆಚ್ಚಿಸಲು ಸ್ವಲ್ಪ ತುಪ್ಪ ಹಾಕಿ ಮಿಶ್ರಣ ಮಾಡಿ.

Oats Sesame Bar for Toddlers and Kids

7. ಚೆನ್ನಾಗಿ ಎಲ್ಲವನ್ನು  ಮಿಶ್ರಣ ಮಾಡಿ ತುಪ್ಪ ಹಚ್ಚಿದ ಟ್ರೇ / ತಟ್ಟೆಗೆ ವರ್ಗಾಯಿಸಿ.

Oats Sesame Bar for Toddlers and Kids

8. ಸಮಾವಾಗಿ ತಟ್ಟಿ ಹದ ಮಾಡಿ ಬಿಸೀರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ತಟ್ಟೆ ಮೊಗಚಿದರೆ ಚಿಕ್ಕಿ ತಯಾರಾಗಿರುತ್ತದೆ.

Oats Sesame Bar for Toddlers and Kids

9. ರುಚಿಕರವಾದ ಮತ್ತು ಸ್ವದಿಷ್ಟಕರವಾದ ಓಟ್ಸ್ & ಎಳ್ಳಿನ ಚಿಕ್ಕಿ ಬಾರ್ ಸಿದ್ಧವಾಗಿದೆ.

ಓಟ್ಸ್ & ಎಳ್ಳಿನ ಚಿಕ್ಕಿ | Oats Sesame Bar recipe in Kannada

Oats Sesame Bar for Toddlers and Kids | Till ke Chikki health bar hindi kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 10
    Shares