Spread the love
  • 109
    Shares

ನಾನು ಓಟ್ಸ್ ಅನ್ನು ತುಂಬಾ ಇಷ್ಟಪಡುತ್ತೇನೆ ಹಾಗಾಗಿ ನನ್ನ ಬ್ಲಾಗ್ ನಲ್ಲಿ ಅನೇಕ ಓಟ್ಸ್ ಪಾಕವಿಧಾನಗಳನ್ನು ನೀಡಿದ್ದೇನೆ.

ಓಟ್ಸ್ ಅನ್ನು ಪ್ರಪಂಚದಾದ್ಯಂತ  ಪೌಷ್ಟಿಕತಜ್ಞರು (nutritionists ) ಶಿಶುಗಳಿಗೆ ಮತ್ತು ವಯಸ್ಕರಿಗೆ ತಿನ್ನಲು ಶಿಫಾರಸು ಮಾಡುತ್ತಾರೆ ಮತ್ತು ಆದ್ಯತೆ ನೀಡುತ್ತಾರೆ. ಓಟ್ಸ್ ನಲ್ಲಿ ಹೆಚ್ಚು ಪೌಷ್ಟಿಕಾಂಶವಿರುರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಈ ಪಾಕವಿಧಾನದಲ್ಲಿ  ಓಟ್ಸ್ ನ ಜೊತೆ ಕುಂಬಳಕಾಯಿ ಸೇರಿಸಿ ಮಾಡಿರುವುದರಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿ ದೊರಕುತ್ತದೆ.

ಓಟ್ಸ್ ಮತ್ತು ಕುಂಬಳಕಾಯಿ ಸರಿ | Oats Pumpkin Porridge in Kannada

Oats Pumpkin Porridge for Babies, Toddlers & Kids | Hindi Kannada | Oats Recipe for Babies

ಓಟ್ಸ್ ಕುಂಬಳ ಸರಿಯನ್ನು 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಈ ಪಾಕವಿಧಾನದಲ್ಲಿ ಒಣ ಹಣ್ಣುಗಳ ಪುಡಿ ಮತ್ತು ಜೈವಿದ ಬೆಲ್ಲವನ್ನು ಉಪಯೋಗಲಾಗಿದೆ. ಪುಟ್ಟ ಮಕ್ಕಳಿಗೆ ಸರಿಯನ್ನು WonderChef Blender ಬ್ಲೆಂಡರ್ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ ನೀಡಬಹುದು.

ನಮ್ಮ ಇತರ ಓಟ್ಸ್ ಪಾಕವಿಧಾನವನ್ನು ಕೆಳಗೆ ನೀಡಲಾಗಿದೆ.ಮಕ್ಕಳಿಗೆ ಇಷ್ಟವಾಗುವ ಅನೇಕ ಪಾಕವಿಧಾನಗಳಿವೆ ದಯವಿಟ್ಟು ಮಾಡಿ ನೋಡಿ.

ಶಿಶುಗಳಿಗೆ ಓಟ್ಸ್ ಪಾಕವಿಧಾನಗಳು

3 ಓಟ್ಸ್ ಸರಿ ,  ಕ್ಯಾರೆಟ್  ಓಟ್ಸ್ ಸರಿ, ಮೊಸರು ಓಟ್ಸ್ ಖಿಚಡಿ, ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ 

೧-೨ ವರ್ಷದ ಮಕ್ಕಳಿಗೆ

ಓಟ್ಸ್ ದೋಸೆ , 3 ಸಾಮಗ್ರಿಗಳ ಓಟ್ಸ್ ದೋಸೆ, ಪಾಲಕ್ ಓಟ್ಸ್ ಪ್ಯಾನ್ ಕೇಕ್

ಮಕ್ಕಳಿಗೆ ಮತ್ತು ಕುಟುಂಬಕ್ಕೆ ಓಟ್ಸ್ ಪಾಕವಿಧಾನಗಳು

ಓಟ್ಸ್ ಮೂಲಂಗಿ ಪರಾಟ , ಹೆಸರುಬೇಳೆ ಓಟ್ಸ್ ಟೋಸ್ಟ್ , ಓಟ್ಸ್ ಕಡಲೇಕಾಯಿ ಬೆಣ್ಣೆ ಪುಡ್ಡಿಂಗ್ , ಓಟ್ಸ್ ಮದ್ದೂರ್ ವಡೆ  , ಚಾಕೊಲೇಟ್  ಓಟ್ಸ್  , ಓಟ್ಸ್ ಎಳ್ಳು ಮತ್ತು ಬೆಲ್ಲದ ಬಾರ್

ಓಟ್ಸ್ ಮತ್ತು ಕುಂಬಳಕಾಯಿ ಸರಿ | Oats Pumpkin Porridge in Kannada

Kannada Subscribe Button TOTS AND MOMS

ಓಟ್ಸ್ ಮತ್ತು ಕುಂಬಳಕಾಯಿ ಸರಿ ರೆಸಿಪಿ:

ಓಟ್ಸ್ ಮತ್ತು ಕುಂಬಳಕಾಯಿ ಸರಿ

ಈ ಪಾಕವಿಧಾನದಲ್ಲಿ ಓಟ್ಸ್ ನ ಜೊತೆ ಕುಂಬಳಕಾಯಿ ಸೇರಿಸಿ ಮಾಡಿರುವುದರಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿ ದೊರಕುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಓಟ್ಸ್ - 1/4 ಕಪ್
  2. ಕುಂಬಳಕಾಯಿ - 1/4 ಕಪ್ (ತುರಿದಿರುವ)
  3. ಹಾಲು - 1/2 ಕಪ್
  4. ಒಣ ಹಣ್ಣುಗಳ ಪುಡಿ - 2 tsp (optional)
  5. ಬೆಲ್ಲದ ಪುಡಿ - 1 tsp

ವಿಧಾನ

  1. ಪ್ಯಾನ್ / ಬಾಣಲೆಯಲ್ಲಿ ಸರಳವಾದ (plain) ಓಟ್ಸ್ ಮತ್ತು ತುರಿದಿರುವ ಕುಂಬಳಕಾಯಿ ಹಾಕಿಕೊಳ್ಳಿ.
  2. ಮಧ್ಯಮ ಉರಿಯಲ್ಲಿ ಹಾಲು ಅಥವಾ ನೀರನ್ನು ಹಾಕಿ ಮಿಶ್ರಣ ಮಾಡಿ ಬೇಯಿಸಿ.ನಂತರ ತುಪ್ಪ ಅಥವಾ ಬೆಣ್ಣೆ ಹಾಕಿ.
  3. ಅರ್ಧ ಬೆಂದ ನಂತರ ಒಣ ಹಣ್ಣುಗಳ ಪುಡಿ ಮತ್ತು ಬೆಲ್ಲದ ಪುಡಿ ಹಾಕಿ ಮಿಶ್ರಣ ಮಾಡಿ. ಬೇಕಾದರೆ ಚಕ್ಕೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣವನ್ನು ಕೆದಕಬೇಕು.
  4. 3-4 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಿಸಿ. ತಯಾರಾದ ನಂತರ ಸರಿಯನ್ನು ಆಹಾರ ವಿನ್ಯಾಸವಿರುವ ಹಾಗೆ ತಿನ್ನಬಹುದು. ಶಿಶುಗಳಿಗೆ ಘನ ಆಹಾರ ಪರಿಚಯಿಸುತ್ತಿದ್ದರೆ ತಣ್ಣಗಾದ ನಂತರ  ಬೆಂದ ಮಿಶ್ರಣವನ್ನು ಬ್ಲೆಂಡರ್ ಸಹಾಯದಿಂದ ರುಬ್ಬಿಕೊಂಡು ನಯವಾದ ಮಿಶ್ರಣ ಮಾಡಿ ನೀಡಬಹುದು.
  5. ಓಟ್ಸ್ ಮತ್ತು ಕುಂಬಳಕಾಯಿ ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಓಟ್ಸ್ ಮತ್ತು ಕುಂಬಳಕಾಯಿ ಸರಿ | Oats Pumpkin Porridge in Kannada

Oats Pumpkin Porridge for Babies, Toddlers & Kids | Hindi Kannada | Oats Recipe for Babies

ಓಟ್ಸ್ ಮತ್ತು ಕುಂಬಳಕಾಯಿ ಸರಿ ಮಾಡಲು ಬೇಕಾಗುವ ಪದಾರ್ಥಗಳು :

  1. ಓಟ್ಸ್ – 1/4 ಕಪ್
  2. ಕುಂಬಳಕಾಯಿ – 1/4 ಕಪ್ (ತುರಿದಿರುವ)
  3. ಹಾಲು – 1/2 ಕಪ್
  4. ಒಣ ಹಣ್ಣುಗಳ ಪುಡಿ – 2 tsp (optional)
  5. ಬೆಲ್ಲದ ಪುಡಿ – 1 tsp

ಓಟ್ಸ್ ಮತ್ತು ಕುಂಬಳಕಾಯಿ ಸರಿ ಮಾಡುವ ವಿಧಾನ  :

1.ಪ್ಯಾನ್ / ಬಾಣಲೆಯಲ್ಲಿ ಸರಳವಾದ (plain) ಓಟ್ಸ್ ಮತ್ತು ತುರಿದಿರುವ ಕುಂಬಳಕಾಯಿ ಹಾಕಿಕೊಳ್ಳಿ.

Oats Pumpkin Porridge for Babies, Toddlers & Kids | Hindi Kannada | Oats Recipe for Babies

2.ಮಧ್ಯಮ ಉರಿಯಲ್ಲಿ ಹಾಲು ಅಥವಾ ನೀರನ್ನು ಹಾಕಿ ಮಿಶ್ರಣ ಮಾಡಿ ಬೇಯಿಸಿ.ನಂತರ ತುಪ್ಪ ಅಥವಾ ಬೆಣ್ಣೆ ಹಾಕಿ.

Oats Pumpkin Porridge for Babies, Toddlers & Kids | Hindi Kannada | Oats Recipe for Babies

3.ಅರ್ಧ ಬೆಂದ ನಂತರ ಒಣ ಹಣ್ಣುಗಳ ಪುಡಿ ಮತ್ತು ಬೆಲ್ಲದ ಪುಡಿ ಹಾಕಿ ಮಿಶ್ರಣ ಮಾಡಿ. ಬೇಕಾದರೆ ಚಕ್ಕೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣವನ್ನು ಕೆದಕಬೇಕು.

Oats Pumpkin Porridge for Babies, Toddlers & Kids | Hindi Kannada | Oats Recipe for Babies

4.3-4 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಿಸಿ. ತಯಾರಾದ ನಂತರ ಸರಿಯನ್ನು ಆಹಾರ ವಿನ್ಯಾಸವಿರುವ ಹಾಗೆ ತಿನ್ನಬಹುದು. ಶಿಶುಗಳಿಗೆ ಘನ ಆಹಾರ ಪರಿಚಯಿಸುತ್ತಿದ್ದರೆ ತಣ್ಣಗಾದ ನಂತರ  ಬೆಂದ ಮಿಶ್ರಣವನ್ನು ಬ್ಲೆಂಡರ್ ಸಹಾಯದಿಂದ ರುಬ್ಬಿಕೊಂಡು ನಯವಾದ ಮಿಶ್ರಣ ಮಾಡಿ ನೀಡಬಹುದು.

Oats Pumpkin Porridge for Babies, Toddlers & Kids | Hindi Kannada | Oats Recipe for Babies

5. ಓಟ್ಸ್ ಮತ್ತು ಕುಂಬಳಕಾಯಿ ಸರಿ ತಯಾರಾಗಿದೆ.

ಓಟ್ಸ್ ಮತ್ತು ಕುಂಬಳಕಾಯಿ ಸರಿ | Oats Pumpkin Porridge in Kannada

Oats Pumpkin Porridge for Babies, Toddlers & Kids | Hindi Kannada | Oats Recipe for Babies

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 109
    Shares