Spread the love
  • 1
    Share


Spread the love
  • 1
    Share

Can I give my baby Oats? Oats recipes for Babies, Toddlers & Kids shishu aahar makkalu hindi kannada

ಶಿಶುಗಳಿಗೆ ಓಟ್ಸ್ ಬಹುಮುಖ ಮೊದಲ ಶಿಶು ಆಹಾರವಾಗಿದೆ. ಇದು ಸಾಮಾನ್ಯವಾಗಿ ತೂಕ ತಗ್ಗಿಸುವ ಆಹಾರವೆಂದು ಭಾವಿಸಿರುವುದರಿಂದ ಅನೇಕ ತಾಯಂದಿರು ಶಿಶುಗಳಿಗೆ ಕೊಡಲು ಹಿಂಜರಿಯುತ್ತಾರೆ. ಆದರೆ ಓಟ್ಸ್ ಅತ್ಯುತಮ ಶಿಶು ಆಹಾರ ಮತ್ತು ಅತ್ಯಂತ ಪೌಷ್ಟಿಕ ಧಾನ್ಯಗಳಲ್ಲಿ ಒಂದು. ಓಟ್ಸ್ ಅನ್ನು ಅನೇಕ ಸಂಯೋಜನೆಗಳಲ್ಲಿ ಬಳಸಬಹುದು ಮತ್ತು ಇದರ ಆಯ್ಕೆಗಳಿಗೆ ಮಿತಿಯಿಲ್ಲ.

ಅನೇಕ ಇತರ ಧಾನ್ಯಗಳು ಮಾರುಕಟ್ಟೆ ತಲುಪುವ ಮೊದಲು ವಿಸ್ತಾರವಾದ ಮತ್ತು ಹಾನಿಕಾರಕ ಪ್ರಕ್ರಿಯೆಗೆ ಒಳಗಾಗುತ್ತದೆ ಆದರೆ ಓಟ್ಸ್  ನ ವಿವಿಧ ರೀತಿಯ- ಸ್ಟೀಲ್ ಕಟ್, ಸುರಳಿ, ತ್ವರಿತ ಅಡುಗೆ ಓಟ್ಸ್ ಯಾವಾಗಲೂ ಸಂಪೂರ್ಣವಾಗಿರುತ್ತದೆ. ಇದರಿಂದ ಜೀವಾಣು, ಎಂಡೋಸ್ಪರ್ಮ್, ಮತ್ತು ಹೊಟ್ಟು ಒಳಗೊಂಡಿರುವ ಎಲ್ಲಾ ಉತ್ತಮ ಗುಣಗಳು ಉಳಿಯುತ್ತದ. ಪೌಷ್ಠಿಕಾಂಶ ನಷ್ಟವಾಗುವುದಿಲ್ಲ . ಶಿಶುಗಳಿಗೆ ಒಳ್ಳೆಯ ಪೋಷಕತತ್ವ ಹೊಂದಿದೆ. 6 ತಿಂಗಳುಗಳ ನಂತರ ಘನ ಆಹಾರಗಳನ್ನು ಪ್ರಾರಂಭಿಸಿದಾಗ ಸರಿ/ಗಂಜಿ  ರೂಪದಲ್ಲಿ ತಿನ್ನಿಸುವುದರಿಂದ ಶಿಶುಗಳಿಗೆ ಓಟ್ಸ್ ಜೀರ್ಣಿಸಿಕೊಳ್ಳುವುದು ಸುಲಭ. ಶಿಶುಗಳು ಬೆಳೆಯಲು ಮತ್ತು ತಿನ್ನಲು ಕಲಿಯುತ್ತಾರೆ. ಶಿಶುಗಳಿಗೆ ಓಟ್ಗ  ಖಿಚಡಿ, ಪ್ಯಾನ್ ಕೇಕ್, ಪರಾಟ ಇತ್ಯಾದಿಗಳನ್ನು ತಯಾರಿಸಿ  ನೀಡಬಹುದು.

ಶಿಶುಗಳಿಗೆ ಓಟ್ಸ್ ಅನ್ನು ಯಾವಾಗ ಪರಿಚಯಿಸಬಹುದು?

ಓಟ್ಸ್ ಶಿಶುಗಳಿಗೆ ಮೊಟ್ಟಮೊದಲ ಆಹಾರವಾಗಿ ಪರಿಚಯಿಸಲು ಸುರಕ್ಷಿತವಾದ ಧಾನ್ಯ. 6 ತಿಂಗಳ ನಂತರ ಹಾಲಿನ ಜೊತೆ ಪೂರಕವಾಗಿ ಓಟ್ಸ್ ಅನ್ನು ಪರಿಚಯಿಸಬಹುದು.

ಶಿಶುಗಳಿಗೆ ಓಟ್ಸ್ ಪ್ರಯೋಜನಗಳು:

  • ಓಟ್ಸ್ ಸುಲಭವಾಗಿ ಜೀರ್ಣವಾಗುತ್ತದೆ  ಮತ್ತು ಶಿಶುಗಳಿಗೆ ಉತ್ತಮ ಮೊದಲ ಆಹಾರ.
  • ಫೈಬರ್ನಲ್ಲಿ ಸಮೃದ್ಧವಾಗಿರುವುದರಿಂದ  ಶಿಶುಗಳಿಗೆ ಸರಾಗವಾಗಿ ಮಲವಿಸರ್ಜನೆ ಮಾಡಲು ಸಹಾಯವಾಗುತ್ತದೆ.
  • ಅಧಿಕ ಆಂಟಿ ಆಕ್ಸಿಡೆಂಟ್ ದೊರೆಯುತ್ತದೆ.ಮತ್ತು ಉರಿಯೂತದ ಕಾಯಿಲೆಗಳನ್ನು ತಡೆಗಟ್ಟುತ್ತದೆ .
  • ಉತ್ತಮವಾದ ಪ್ರೋಟೀನ್, ಜೀವಸತ್ವಗಳು, ಮೆಗ್ನೀಸಿಯಮ್, ಸತು, ಫಾಸ್ಫರಸ್ ಮತ್ತು ಕಬ್ಬಿಣದ ಅಂಶ ದೊರೆಯುತ್ತದೆ.
  • ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುತ್ತದೆ ಮತ್ತು ಮಗುವನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ಮತ್ತು ಶಕ್ತಿಯನ್ನು ನೀಡುತ್ತದೆ.

ಓಟ್ಸ್ ವಿವಿಧ ಪ್ರಕಾರಗಳು: Types of Oats :

Can I give my baby Oats? Oats recipes for Babies, Toddlers & Kids shishu aahar makkalu hindi kannada

1. ಓಟ್ಸ್ ಗ್ರೋಟ್ಸ್ –Oats Groats

Can I give my baby Oats? Oats recipes for Babies, Toddlers & Kids shishu aahar makkalu hindi kannada

ಇವು ಓಟ್ಸ್ ನ ಮೂಲ ರೂಪ. ಇತರ ಎಲ್ಲಾ ರೀತಿಯ ಓಟ್ಸ್ ಗಳಿಗೆ ಹೋಲಿಸಿದರೆ ಅತ್ಯಧಿಕ ಕ್ಯಾಲೋರಿ ಮಟ್ಟವನ್ನು ಹೊಂದಿರುವುದು.

2. ಸ್ಟೀಲ್ ಕಟ್ ಓಟ್ಸ್  – Steel Cut Oats

Can I give my baby Oats? Oats recipes for Babies, Toddlers & Kids shishu aahar makkalu hindi kannada

ಈ ರೀತಿಯ ಓಟ್ಸ್ ಗ್ರೋಟ್ ಗಳನ್ನು ಕತ್ತರಿಸಿ ಸಂಸ್ಕರಿಸಲಾಗುತ್ತದೆ. ಇವುಗಳು ನುಚ್ಚಿನಂತೆ ಕಾಣುತ್ತವೆ ಮತ್ತು ಓಟ್ಸ್ ಗ್ರೋಟ್ ಗಳಿಗೆ ಹೋಲಿಸಿದರೆ ತ್ವರಿತವಾಗಿ ಬೇಯಿಸಬಹುದು. ಇವುಗಳನ್ನು ಐರಿಶ್ ಅಥವಾ ಸ್ಕಾಟಿಷ್ ಓಟ್ಸ್ ಎಂದು ಕರೆಯಲಾಗುತ್ತದೆ.

3. ಸುರಳಿಯಾಗಿರುವ  ಓಟ್ಸ್ – Rolled Oats

Can I give my baby Oats? Oats recipes for Babies, Toddlers & Kids shishu aahar makkalu hindi kannada

ಸುರಳಿಯಾಗಿರುವ  ಓಟ್ಸ್ ಹಳೆಯ ಶೈಲಿಯ ಓಟ್ಸ್ ಗಳಾಗಿರುತ್ತವೆ. ಓಟ್ಸ್ ಸುರುಳಿಗಳನ್ನು ಹಬೆಯಲ್ಲಿ ಇಡಿಸಿ ಚಪ್ಪಟೆಯಾಗಿಸುತ್ತಾರೆ ಮತ್ತು ಸುರಳಿ ಮಾಡಲಾಗುತ್ತದೆ. ಸ್ಟೀಲ್ ಕಟ್ ಓಟ್ಸ್ ಗಿಂತ ಬೇಗ ಬೇಯುತ್ತದೆ. ಇವುಗಳನ್ನು ಮುಖ್ಯವಾಗಿ ಗ್ರಾನೋಲಾ, ಮ್ಯೂಸ್ಲಿ ಅಥವಾ ಸರಿ/ಅಂಬಲಿ /ಗಂಜಿ  ತಯಾರಿಸಲು ಬಳಸಲಾಗುತ್ತದೆ.

4. ತ್ವರಿತ ಅಡುಗೆಮಾಡಲು / ತತ್ಕ್ಷಣ ಓಟ್ಸ್- Quick Cooking/ Instant Oats

Can I give my baby Oats? Oats recipes for Babies, Toddlers & Kids shishu aahar makkalu hindi kannada

ಭಾರತೀಯ ಮಳಿಗೆಗಳಲ್ಲಿ  ಕ್ವೇಕರ್ / ಹಾರ್ಲಿಕ್ಸ್ / ಸ್ಯಾಫೊಲಾ ಪ್ಯಾಕೇಜ್ಡ್ ಓಟ್ಸ್ ಗಳು ಸುಲಭವಾಗಿ ದೊರೆಯುತ್ತದೆ. ತ್ವರಿತ ಅಡುಗೆ ಓಟ್ಸ್ ಗಳನ್ನು ಮೃದುವಾಗುವ ತನಕ ಬೇಯಿಸಿ ತಯಾರಿಸಲಾಗುತ್ತದೆ ಮತ್ತು ನಂತರ ತೆಳ್ಳಗೆ ಲಟ್ಟಿಸಲಾಗುತ್ತದೆ.

ಶಿಶುಗಳಿಗೆ  ಓಟ್ಸ್ ಅನ್ನು ಹೇಗೆ ಆಯ್ಕೆಮಾಡಬೇಕು ಮತ್ತು ಸಂಗ್ರಹಿಸಿಡಬೇಕು-

  • ಶಿಶುಗಳಿಗೆ ಸಾವಯವವಾಗಿ ಬೆಳೆದ ಓಟ್ಸ್ ಅನ್ನು ನೀಡುವುದು ಒಳ್ಳೆಯದು.
  • ಪೌಷ್ಟಿಕಾಂಶಯುಕ್ತವಾದ ಸ್ಟೀಲ್ ಕಟ್ ಓಟ್ಸ್ ಅತ್ಯುತ್ತಮವಾದ ಆಯ್ಕೆ.
  • ಶಿಶುಗಳಿಗೆ ಯಾವುದೇ ಉಪ್ಪು ಅಥವಾ ಸಕ್ಕರೆ ಇಲ್ಲದೆ ಓಟ್ಸ್ ಅನ್ನು ಬಳಸಬೇಕು.
  • ಓಟ್ಸ್ ಸುಲಭವಾಗಿ ಹಾಳಾಗುವ ಕಾರಣದಿಂದಾಗಿ ಯಾವಾಗಲೂ ಸಣ್ಣ ಪ್ಯಾಕೆಟ್ ಗಳನ್ನು ಖರೀದಿಸುವುದು ಸೂಕ್ತವಾದ ಏರ್ ಟೈಟ್ ಕಂಟೇನರ್ಗಳಲ್ಲಿ ಮಾತ್ರ ಶೇಖರಿಸಿಡಬೇಕು.

ಶಿಶುಗಳಿಗೆ ಮತ್ತು ಮಕ್ಕಳಿಗೆ ಹೇಗೆ ಓಟ್ಸ್ ತಿನ್ನಿಸಬೇಕು :

  • ಶಿಶುಗಳಿಗೆ ಸಾಕಷ್ಟು ಸುಲಭವಾಗಿ ಮಾಡಬಹುದಾದ ಪಾಕವಿಧಾನಗಳನ್ನು ಕೆಳಗೆ ನೀಡಲಾಗಿದೆ. ಪೌಷ್ಟಿಕ ಮತ್ತು ಸ್ವಾದಿಷ್ಟವಾಗಿ ಮಾಡಲು ಕೆಲವು ಪ್ರಮುಖ ಅಂಶ ನೀಡಲಾಗಿದೆ.
  • ಘನ ಆಹಾರಗಳನ್ನು ಪರಿಚಯಿಸಿದ ನಂತರ ಹಣ್ಣು ಮತ್ತು ತರಕಾರಿಗಳ ಪ್ಯೂರಿಯ ಜೊತೆ ಓಟ್ಸ್ ತಿನ್ನಿಸಲು ಪ್ರಾರಂಭಿಸಬಹುದು.
  • ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿಯ ಮಸಾಲೆಗಳನ್ನು ಸೇರಿಸಿ ಖಾರದ ಓಟ್ಸ್ ಗಳನ್ನು ತಯಾರಿಸಬಹುದು
  • ಸರಿಯನ್ನು ಸಿಹಿಗೊಳಿಸುವುದಕ್ಕೆ  ನೈಸರ್ಗಿಕವಾಗಿ ಹಣ್ಣಿನ ಪ್ಯೂರಿ/ರಸವನ್ನು ಸೇರಿಸಬಹುದು. ಖರ್ಜೂರದ ಸಿರಪ್ ,ಒಣ ದ್ರಾಕ್ಷಿ ಸಿರಪ್ ಖರ್ಜೂರದ ಪುಡಿ ಅಥವಾ ಉಪಯೋಗಿಸಬಹುದು.

ನಮ್ಮ ಇತರ ಶಿಶು ಆಹಾರ  ಪಾಕವಿಧಾನಗಳನ್ನು ಪ್ರಯತ್ನಿಸಿ :

ಶಿಶುಗಳಿಗೆ ಓಟ್ಸ್ ಆಹಾರಗಳು | Oats recipes for Babies and Kids in Kannada

Can I give my baby Oats? Oats recipes for Babies, Toddlers & Kids shishu aahar makkalu hindi kannada

ಹೊಸ ಪಾಕವಿಧಾನಗಳನ್ನು ಸಿದ್ಧಪಡಿಸಿದಾಗ ನವೀಕರಿಲಾಗುವುದು. ಮಕ್ಕಳಿಗೆ ಸೂಕ್ತ ವಾದ ಈ ಪಾಕವಿಧಾನಗಳು ಸರಳ, ತ್ವರಿತ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಸಂಪೂರ್ಣ ಸಮತೋಲನದ ಪಾಕವಿಧಾನಗಳಾಗಿವೆ.

ಶಿಶುಗಳಿಗೆ ಓಟ್ಸ್ ಆಹಾರಗಳು | Oats recipes for Babies and Kids in Kannada

 

ನಮ್ಮ ಇತರ ಜೈವಿಕ ಶಿಶು ಆಹಾರಗಳನ್ನು ಸಾವಯವ ಶಿಶು ಆಹಾರ ಅಂಗಡಿ TOTS AND MOMS FOODS ನಲ್ಲಿ ಕೊಳ್ಳಬಹುದು.  ಅತ್ಯುತ್ತಮವಾಗಿ  ಮಾರಾಟವಾಗುತ್ತಿರುವ ಉತ್ಪನ್ನ  ಬಾಳೆ ಓಟ್ಸ್ ಸಿರೆಯಲ್ ಕೂಡ ಕೊಳ್ಳಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.

Spread the love