Spread the love
 • 7
  Shares

ಗರ್ಭಿಣಿಯರಿಗೆ 5 ಆವಶ್ಯಕ ಪೋಶಕಾಂಶಗಳು | Nutrients and Foods during Pregnancy in Kannada
5 Important Nutrients and Foods during Pregnancy hindi kannada garbhavati garbhini


ಬೆಳವಣಿಗೆಯ ದೃಷ್ಟಿಕೋನದಿಂದ ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಆರೈಕೆಯು ಬಹಳ ಮುಖ್ಯ. ಭಾರತೀಯರಾಗಿರಲಿ ಅಥವಾ ಪ್ರಪಂಚದ ಯಾವುದೇ ಭಾಗವಾಗಲಿ ಗರ್ಭಿಣಿಯರು ಏನು ತಿನ್ನಬೇಕು ಎಂಬುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ಸಂಬಂಧಿಕರು, ನೆರೆಹೊರೆಯವರು ಮತ್ತು ಅಪರಿಚಿತರು ನೀಡುತ್ತಾರೆ. ಆದರೆ ನಿರೀಕ್ಷಿತ ತಾಯಿ ಪೋಷಕಾಂಶದ ಅವಶ್ಯಕತೆಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ . ನಾನು ಪ್ರಸ್ತುತ ನನ್ನ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಈ ಲೇಖನವನ್ನು ಸ್ತ್ರೀರೋಗತಜ್ಞರ ಸಲಹೆಯನ್ನು ಆಧರಿಸಿ ಬರೆದಿದ್ದೇನೆ.

ಈ ಲೇಖನದಲ್ಲಿ ಗರ್ಭಾವಸ್ಥೆಯಲ್ಲಿ ಅಗತ್ಯವಿರುವ ಪ್ರಮುಖ ಪೋಷಕಾಂಶಗಳನ್ನು ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೇನೆ. ಎಲ್ಲಾ ಪೋಷಕಾಂಶಗಳನ್ನು ಪೂರಕವಾಗಿ ತೆಗೆದುಕೊಳ್ಳಬೇಕಿಲ್ಲ ಆದ್ದರಿಂದ ನಾನು ಕೆಲವು ಪೌಷ್ಠಿಕಾಂಶಗಳ ನೈಸರ್ಗಿಕ ಮೂಲಗಳ ಪಟ್ಟಿಯನ್ನು ನೀಡಿದ್ದೇನೆ. ಆದ್ದರಿಂದ ಗರ್ಭಿಣಿಯರು ಇದನ್ನು  ಸುಲಭವಾಗಿ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಗರ್ಭಿಣಿಯರಿಗೆ 5 ಆವಶ್ಯಕ ಪೋಶಕಾಂಶಗಳು | Nutrients and Foods during Pregnancy in Kannada

5 Important Nutrients and Foods during Pregnancy hindi kannada garbhavati garbhini

1. ಫೋಲಿಕ್ ಆಮ್ಲ – Folic Acid

ಫೋಲಿಕ್ ಆಮ್ಲವು ವಿಟಮಿನ್ B9 ನ ಸಂಶ್ಲೇಷಿತ ರೂಪ ಇದನ್ನು ಫೋಲೇಟ್ ಎನ್ನುತ್ತಾರೆ. ಮಗುವಿನ ನರವ್ಯೂಹದ ಕೊಳವೆ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಮೆದುಳಿನ ಅಥವಾ ಬೆನ್ನುಹುರಿಯ ಯಾವುದೇ ನರ ಕೊಳವೆ ದೋಷಗಳಿಂದ ಮಗುವನ್ನು ರಕ್ಷಿಸುತ್ತದೆ. ಆದ್ದರಿಂದ ಮಗುವನ್ನು ಪಡೆಯುವ ಯೋಜನೆ ಇದ್ದಲ್ಲಿ ಗರ್ಭಾವಸ್ಥೆಯ ಮೊದಲೇ ಫೋಲಿಕ್ ಆಸಿಡ್ ಪೂರಕಗಳನ್ನು ಪ್ರಾರಂಭಿಸುವುದು ಸೂಕ್ತ.

ಫೋಲೇಟ್ ನ ನೈಸರ್ಗಿಕ ಮೂಲಗಳು:

 • ಹಸಿರು ತರಕಾರಿಗಳು
 • ಸಿಟ್ರಿಕ್ ಹಣ್ಣುಗಳು (ನಿಂಬೆ,ಕಿತ್ತಳೆ,ಚಕ್ಕೋತ..)
 • ಬೇಳೆ ಮತ್ತು ಕಾಳುಗಳು (ತೊಗರಿ,ಹೆಸರು,ಕಡಲೆ ಕಾಳು..)
 • ಬೀಜಗಳು (ಬಾದಾಮಿ,ಗೋಡಂಬಿ, ಕುಂಬಳ ..)

2. ಒಮೆಗಾ 3 ಫ್ಯಾಟಿ ಆಸಿಡ್ಸ್- Omega 3 Fatty Acids

ಒಮೆಗಾ 3 ಕೊಬ್ಬಿನಾಮ್ಲ ಅಗತ್ಯ ಅಪರ್ಯಾಪ್ತ unsaturated ಕೊಬ್ಬಿನಾಮ್ಲ. ಮಗುವಿನ ಬೆಳವಣಿಗೆಯಲ್ಲಿ  ಹೊಕ್ಕಳಬಲ್ಲಿ ಮೂಲಕ ಪ್ರಯಾಣಿಸುವಾಗ ಒಮೆಗಾ 3 ಫ್ಯಾಟಿ ಆಸಿಡ್ಗಳು ಮಗುವಿನ ಕಣ್ಣು, ಮಿದುಳು ಮತ್ತು ಅಂಗಾಂಶಗಳ ಬೆಳವಣಿಗೆಯನ್ನು ಬೆಂಬಲಿಸುತ್ತವೆ. ಮೆದುಳಿನ ರಚನೆಯು ಮೊದಲ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಉತ್ತಮವಾಗುತ್ತದೆ. ಗರ್ಭಾವಸ್ಥೆಯಲ್ಲಿ  ಕೊಬ್ಬಿನಾಮ್ಲ ಅತ್ಯಗತ್ಯ

ಒಮೆಗಾ 3 ಫ್ಯಾಟಿ ಆಸಿಡ್ ನ ನೈಸರ್ಗಿಗ ಮೂಲಗಳು:

 • ಮೀನು (ಸಾಲ್ಮನ್)
 • ಅಗಸೆ  ಬೀಜಗಳು
 • ಅಕ್ರೋಟ್
 • ಚಿಯಾ ಬೀಜಗಳು
 • ಸೋಯಾಬೀನ್ಸ್

ಕೆಲವು ಪ್ರಮುಖ ಲೇಖನಗಳನ್ನು ಓದಿ :


3. ಸತುವು – Zinc

ಜೀವ ಕೋಶ ಬೆಳವಣಿಗೆಗೆ, ಅಭಿವೃದ್ಧಿ ಮತ್ತು ವಿಭಿನ್ನತೆಗೆ ಸತುವು ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಸತುವು ಭ್ರೂಣದಲ್ಲಿ ಡಿಎನ್ಎ ಗೆ  ಪ್ರತಿರಕ್ಷಣೆ ಮತ್ತು ಕಾರ್ಯಚಟುವಟಿಕೆಯನ್ನು ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸತು ಕೊರತೆ ಇದ್ದಲ್ಲಿ ಭ್ರೂಣದ ಬೆಳವಣಿಗೆ ನಿರ್ಬಂಧದ ಸಮಸ್ಯೆಗಳಾಗಬಹುದು.

ಸತುವಿನ ಸೈಸರ್ಗಿಕ ಮೂಲಗಳು :

 • ಬೇಳೆ ಕಾಳುಗಳು
 • ಬೀಜಗಳು
 • ಡೈರಿ ಉತ್ಪನ್ನಗಳು
 • ಮೊಟ್ಟೆ
 • ಸಮುದ್ರದ ಆಹಾರ
 • ಡಾರ್ಕ್ ಚಾಕೊಲೇಟ್

4. ಕ್ಯಾಲ್ಸಿಯಂ – Calcium

ಸಾಮಾನ್ಯವಾಗಿ ಕ್ಯಾಲ್ಸಿಯಂ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯ. ಅಭಿವೃದ್ಧಿಯಾಗುತ್ತಿರುವ  ಭ್ರೂಣಕ್ಕೆ ಹೆಚ್ಚು ಕ್ಯಾಲ್ಸಿಯಂ ನ ಅಗತ್ಯವಿರುತ್ತದೆ. ಮಗುವಿಗೆ ಆರೋಗ್ಯಕರ ಹೃದಯ, ನರಗಳು ಮತ್ತು ಸ್ನಾಯುಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾಲ್ಸಿಯಂನ  ಕೊರತೆಯಿಂದ ತಾಯಿಗೆ ಅಧಿಕ ರಕ್ತದೊತ್ತಡ ಬರಬಹುದು, ಇದರಿಂದಾಗಿ ಪ್ರಿ-ಎಕ್ಲಾಂಪ್ಸಿಯದ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ. ದೇಹದಲ್ಲಿ  ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಗಮನಿಸ ಬೇಕು.

ಕ್ಯಾಲ್ಸಿಯಂನ ನೈಸರ್ಗಿಕ ಮೂಲಗಳು :  

 • ಒಣ ಹಣ್ಣುಗಳು
 • ಕಿತ್ತಲೆ ಹಣ್ಣು
 • ಪಾಲಾಕ್
 • ಡೈರಿ ಉತ್ಪನ್ನಗಳು
 • ಓಟ್ಸ್

Ready to use, fresh – organic – chemical free foods for Mothers from our Organic Food Store :

5 Important Nutrients and Foods during Pregnancy hindi kannada garbhavati garbhini buy health drinks for pregnant women protein mix for pregnant women


5. ಮೆಗ್ನೀಸಿಯಮ್ – Magnesium

ಮೆಗ್ನೀಸಿಯಮ್ ಗರ್ಭಾಶಯದ ಸುರಕ್ಷತೆಗೆ ಬಹಳ ಮುಖ್ಯ.  ವಾಕರಿಕೆ ಕಡಿಮೆ ಮಾಡುತ್ತದೆ  ಮತ್ತು ನೋವನ್ನು ನಿವಾರಿಸುತ್ತದೆ. ಉತ್ತಮ ಮೆಗ್ನೀಸಿಯಮ್ ಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ಗರ್ಭಿಣಿ ತಾಯಿ ಕೊಲೆಸ್ಟರಾಲ್ ಮತ್ತು ಅನಿಯಮಿತ ಹೃದಯ ಬಡಿತದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಗರ್ಭಧಾರಣೆಯ ಸಮಯದಲ್ಲಿ ಮೆಗ್ನೀಸಿಯಮ್ ನ ಸೂಕ್ತ ಮಟ್ಟವನ್ನು ತೆಗೆದುಕೊಳ್ಳುವುದರಿಂದ  ಗರ್ಭಾಶಯ ಅಕಾಲಿಕವಾಗಿ ಸಂಕುಚನವನ್ನು ತಡೆಯಲು ಸಹಾಯ ಮಾಡುತ್ತದೆ.

ಮೆಗ್ನೀಸಿಯಮ್ ನ ನೈಸರ್ಗಿಕ ಮೂಲಗಳು :

6. ಅಯೋಡಿನ್ – Iodine

ಬೆಳೆಯುತ್ತಿರುವ ಶಿಶುಗಳಲ್ಲಿ ಅಯೋಡಿನ್ ಚಯಾಪಚಯ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಗುವಿನ ಮೆದುಳಿನ ಮತ್ತು ನರಮಂಡಲದ ಬೆಳವಣಿಗೆಗೆ ಅತ್ಯಗತ್ಯ. ಅಯೋಡಿನ್ ಕೊರತೆಯಿಂದ ಮಗುವಿನ ನಂತರದ ದಿನಗಳಲ್ಲಿ ಬೌದ್ಧಿಕ ಅಸಾಮರ್ಥ್ಯಗಳಿಗೆ ಕಾರಣವಾಗಬಹುದು. ನಿರೀಕ್ಷಿತ ತಾಯಂದಿರಲ್ಲಿ ಅಯೋಡಿನ್ ಕೊರತೆ ಗರ್ಭಪಾತ ಅಥವಾ ಪೂರ್ವಭಾವಿ

ಜನನಕ್ಕೆ ಕಾರಣವಾಗಬಹುದು. ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಅಯೋಡಿನ್ ಸಹಾಯ ಮಾಡುತ್ತದೆ.ಉಪ್ಪು  ಮಾತ್ರ ಅಯೋಡಿನ್ ಮೂಲವಲ್ಲವೆಂದು ಗಮನಿಸಬೇಕು.

ಅಯೋಡಿನ್ ನ ನೈಸರ್ಗಿಕ ಮೂಲಗಳು : 

 • ಬೆರ್ರಿಗಳು
 • ಡೈರಿ ಉತ್ಪನ್ನಗಳು
 • ಸಮುದ್ರದ ಆಹಾರಗಳು
 • ಮೊಟ್ಟೆ
 • ಬಾಳೆಹಣ್ಣು

Video: ಗರ್ಭಿಣಿಯರಿಗೆ 5 ಆವಶ್ಯಕ ಪೋಶಕಾಂಶಗಳು | Nutrients and Foods during Pregnancy in Kannada

ಗಮನಿಸಿ: ಮೇಲೆ ತಿಳಿಸಿರುವ ಪಟ್ಟಿ ಪ್ರಮಾಣಿತವಾಗಿದ್ದರು ವೈಯಕ್ತಿಕವಾದ ಅಗತ್ಯತೆಗಳಿಗೆ ನಿಮ್ಮ ಸ್ತ್ರೀರೋಗತಜ್ಞರ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು.

ಮುಂದಿನ ಲೇಖನವು ಗರ್ಭಧಾರಣೆಯ ಸಮಯದಲ್ಲಿ ತಪ್ಪಿಸಬೇಕಾದ ಆಹಾರಗಳ ಬಗ್ಗೆ ಬರೆಯುತ್ತೇನೆ. ನೀರೀಕ್ಷಿಸಿ…

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
 • 7
  Shares