Spread the love
  • 5
    Shares

ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in KannadaMultigrain-Cookies_for babies kannada hindi recipe

ಕುಕೀಸ್/ ಬಿಸ್ಕೆಟ್ ಅಂದ ತಕ್ಷಣ, ಅದು ಯಾವಾಗಲೂ ಜಂಕ್ ಮತ್ತು ಅನಾರೋಗ್ಯಕರವಲ್ಲ. ಬೇಕ್ ಮಾಡಿರುವ ಪದಾರ್ಥಗಳು ತುಂಬಾ ಆರೋಗ್ಯಕರವಾಗಬಹುದು. ನಾವು ಉಪಾಯದಿಂದ ಸುಲಭವಾಗಿ ಪೌಷ್ಟಿಕ ಮತ್ತು ಆರೋಗ್ಯಕರವಾಗಿ ಮಾಡಿದ್ದೇವೆ. ಮಲ್ಟಿಗ್ರೇನ್ ಬಿಸ್ಕೆಟ್ ಸಂಪೂರ್ಣ ಗೋಧಿ ಹಿಟ್ಟು ಬಳಸಿ ಮಾಡಬಹುದು. ಮೃದು, ರುಚಿಕರವಾದ ಮತ್ತು ಅತ್ಯಂತ ಆರೋಗ್ಯಕರವಾದ ಬಿಸ್ಕೆಟ್ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಆಲ್ ಪರ್ಪಸ್ ಫ್ಲೋರ್ ಅಥವಾ ಮೈದಾವನ್ನು ಬಳಸುವುದರ ಬದಲಾಗಿ ಮೊಳಕೆಯೊಡೆದ ಆರೋಗ್ಯಕರ ಮಿಕ್ಸ್ ಮತ್ತು ಸಂಪೂರ್ಣ ಗೋಧಿ ಹಿಟ್ಟುಗಳನ್ನು ಬಳಸಿದ್ದೇವೆ. ಇದು ಖಂಡಿತವಾಗಿ ಆರೋಗ್ಯಕರವಾದ ಆಯ್ಕೆ.

ನೈಸರ್ಗಿಕ ಸಿಹಿ ನೀಡಲು ಖರ್ಜುರವನ್ನು ಮತ್ತು ಸಾವಯವ ಬೆಲ್ಲದ ಪುಡಿಯನ್ನು ಹಾಕಿ ಕುಕೀಸ್/ಬಿಸ್ಕೆಟ್  ಸಿಹಿಯಾಗಿಸಲು ಇದು ಆರೋಗ್ಯಕರ ಮತ್ತು ತುಪ್ಪವನ್ನು ಕೂಡ ಬಳಸಿಲ್ಲ. ಮೊಳಕೆಯೊಡೆದ ಆರೋಗ್ಯಕರವಾದ ಮಿಶ್ರಣ ಇಲ್ಲದಿದ್ದರೆ ಸಂಪೂರ್ಣ ಗೋಧಿಹಿಟ್ಟನ್ನು ಬಳಸಬಹುದು. ಬೆಲ್ಲ ಬಳಸಿ ಮಾಡುವ ಯಾವುದೇ ಕುಕೀಸ್/ಬಿಸ್ಕೆಟ್ ಮೃದುವಾಗಿರುತ್ತದೆ, ಆದ್ದರಿಂದ ಎರಡು ಅಥವಾ ನಾಲ್ಕು ಹಲ್ಲು ಬಂದಿರುವ ಮಕ್ಕಳಿಗೆ ಒಳ್ಳೆಯ ಆಯ್ಕೆ. 1 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ ಖಂಡಿತ ನಿಮಗೆ ಇಷ್ಟವಾಗುವುದು  

ನಮ್ಮ tots & moms ನ  ಜೈವಿಕ ಅಂಗಡಿಯಲ್ಲಿ ನೀವು ಕೆಳಗಿನ ಉತ್ಪನ್ನವನ್ನು  ಕೊಳ್ಳಬಹುದು.

Video: ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in Kannada

Kannada Subscribe Button TOTS AND MOMS

ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in Kannada

ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in Kannada

ಮಲ್ಟಿಗ್ರೈನ್ ಬಿಸ್ಕೆಟ್ ಬಹಳ ಮೃದುವಾಗಿರುತ್ತದೆ ,ಅಗಿಯಲು ಸುಲಭ, ಸಕ್ಕರೆರಹಿತ ಬಿಸ್ಕೆಟ್ ಗಳನ್ನು ಬೆಲ್ಲ ಮತ್ತು ಖರ್ಜುರವನ್ನು ಬಳಸಿ ಮಾಡಲಾಗಿದೆ. ಮಲ್ಟಿಗ್ರೈನ್ ಬಿಸ್ಕೆಟ್ ಅನ್ನು ಕನಿಷ್ಟ ಪದಾರ್ಥಗಳನ್ನು ಬಳಸಿ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಆರೋಗ್ಯಕರವಾಗಿ ಬೇಕ್ ಮಾಡುವುದು, ಕುಕೀಸ್, ಬಿಸ್ಕೆಟ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಗೋಧಿ ಹಿಟ್ಟು - 2 ಕಪ್
  2. ಮೊಳಕೆ ಕಾಳುಗಳ ಆರೋಗ್ಯ ಮಿಶ್ರಣ  - 1 ಕಪ್
  3. ಬೆಲ್ಲ  - 200 gms
  4. ಖರ್ಜೂರದ ಪುಡಿ - 100 gms
  5. ಬೆಣ್ಣೆ  – 200gms
  6. ಹಾಲು  - ¼ ಕಪ್ / ಬೀಕಗುವಷ್ಟು

ವಿಧಾನ

  1. ಒಂದು ಸ್ವಚ್ಚವಾದ ದೊಡ್ಡ ಬಟ್ಟಲಿಗೆ ಬೆಣ್ಣೆ ಹಾಕಿ, ಬೆಣ್ಣೆ ತಣ್ಣಗಿರಬೇಕು, ಕೊಠಡಿಯ ತಾಪಮಾನದಲ್ಲಿರಬಾರದು. ಬ್ಲೆಂಡರ್  ಉಪಯೋಗಿಸಿ, ಅಥವಾ ಕೈ ಯಿಂದ ಕೆಳಗೆ ತೋರಿಸಿರುವ ತರಹ ಕಲಸುತ್ತಿರಬೇಕು. ಬೆಣ್ಣೆ ಮೃದುವಾಗಿ  ಹಗುರವಾಗುವ ತನಕ ಮಾಡಬೇಕು.
  2. . ನಂತರ ಬೆಣ್ಣೆಗೆ ಬೆಲ್ಲದ ಪುಡಿ (ಅಥವ ಸಕ್ಕರೆ ಪುಡಿ) ಹಾಕಿ ಗೋಲಾಕಾರವಾಗಿ ಕೈಯಿಂದ / ಬ್ಲೆಂಡರ್ ನಿಂದ ಮಿಶ್ರಣ ಮಾಡಿ.
  3. ಈಗ ಗೋಧಿ ಹಿಟ್ಟು ಮತ್ತು ಮೊಳಕೆ ಕಾಳುಗಳ ಸರಿ ಮಿಶ್ರಣವನ್ನು ಹಾಕಿ.
  4.  ಕೆಳಗೆ ತೋರಿಸಿರುವ ತರಹ ಕೈಯಿಂದ ಕಲಸಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮೃದುವಾಗಿ ಹಿಟ್ಟನ್ನು   ಕಲಸಿಕೊಳ್ಳಿ.
  5.  ಕೆಳಗೆ ತೋರಿಸಿರುವ ತರಹ ಕಲಸಿದ ಬಿಸ್ಕೆಟ್ ಹಿಟ್ಟನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ, ಫ್ರಿಡ್ಜ್ ನಲ್ಲಿ 30 ನಿಮಿಷ ಇಡಬೇಕು.
  6.  30 ನಿಮಿಷದ ನಂತರ ಹಿಟ್ಟನ್ನು ಫ್ರಿಡ್ಜ್ ನಿಂದ ತೆಗೆದು ಮಣೆಯ ಮೇಲೆ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿಕೊಂಡು ಲಟ್ಟಿಸಿ ಕುಕೀ ಕಟರ್ ನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ.
  7.  ಒಂದು ಬೇಕಿಂಗ್ ಟ್ರೇ ಮೇಲೆ ಬಟರ್ ಪೇಪರ್ ಹಾಕಿ 180 ಡಿಗ್ರಿ ಮೊದಲೇ ಓವೆನ್ ಬಿಸಿ ಮಾಕಿಕೊಲ್ಲಿ (preheat). ಕತ್ತರಿಸಿರುವ ಬಿಸ್ಕೆಟ್ ಗಳನ್ನೂ ಟ್ರೇ ನಲ್ಲಿ ಸ್ವಲ್ಪ ಅಂತರದಲ್ಲಿ ಇಟ್ಟು 180 ಡಿಗ್ರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಕ್ ಮಾಡಬೇಕು. ಬಿಸ್ಕೆಟ್ ದಪ್ಪದ ಮೇಲೆ ಅವಲಂಬಿತವಾಗಿರುತ್ತದೆ.
  8.  ಬೇಕ್ ಮಾಡಿದ ನಂತರ ಕುಕೀ ಟ್ರೇ ನಿಂದ ತೆಗೆದು ವೈರ್ ಟ್ರೇ ಮೇಲೆ ತಣ್ಣಗಾಗಲು ಬಿಡಿ. ತಣ್ಣಗಾದ ಬಿಸ್ಕೆಟ್ ಗಳನ್ನೂ ಏರ್ ಟೈಟ್ ಡಬ್ಬದಲ್ಲಿ  ಶೇಖರಿಸಿ ಒಂದು ವಾರದ ತನಕ ಉಪಯೋಗಿಸಬಹುದು.
  9.  ಮಲ್ಟಿಗ್ರೈನ್ ಬಿಸ್ಕೆಟ್ ತಯಾರಾಗಿದೆ .

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in Kannada

ಮಲ್ಟಿಗ್ರೈನ್ ಬಿಸ್ಕೆಟ್ ಮಾಡಲು ಬೇಕಾಗುವ ಪದಾರ್ಥಗಳು :

  1. ಗೋಧಿ ಹಿಟ್ಟು – 2 ಕಪ್
  2. ಮೊಳಕೆ ಕಾಳುಗಳ ಆರೋಗ್ಯ ಮಿಶ್ರಣ  – 1 ಕಪ್
  3. ಬೆಲ್ಲ  – 200 gms
  4. ಖರ್ಜೂರದ ಪುಡಿ – 100 gms
  5. ಬೆಣ್ಣೆ  – 200gms
  6. ಹಾಲು  – ¼ ಕಪ್ / ಬೀಕಗುವಷ್ಟು

ಮಲ್ಟಿಗ್ರೈನ್ ಬಿಸ್ಕೆಟ್  ಮಾಡುವ ವಿಧಾನ :

1. ಒಂದು ಸ್ವಚ್ಚವಾದ ದೊಡ್ಡ ಬಟ್ಟಲಿಗೆ ಬೆಣ್ಣೆ ಹಾಕಿ, ಬೆಣ್ಣೆ ತಣ್ಣಗಿರಬೇಕು, ಕೊಠಡಿಯ ತಾಪಮಾನದಲ್ಲಿರಬಾರದು. ಬ್ಲೆಂಡರ್  ಉಪಯೋಗಿಸಿ, ಅಥವಾ ಕೈ ಯಿಂದ ಕೆಳಗೆ ತೋರಿಸಿರುವ ತರಹ ಕಲಸುತ್ತಿರಬೇಕು. ಬೆಣ್ಣೆ ಮೃದುವಾಗಿ  ಹಗುರವಾಗುವ ತನಕ ಮಾಡಬೇಕು.Multigrain Cookies for Toddlers & Kids hindi kannada finger food

2. ನಂತರ ಬೆಣ್ಣೆಗೆ ಬೆಲ್ಲದ ಪುಡಿ (ಅಥವ ಸಕ್ಕರೆ ಪುಡಿ) ಹಾಕಿ ಗೋಲಾಕಾರವಾಗಿ ಕೈಯಿಂದ / ಬ್ಲೆಂಡರ್ ನಿಂದ ಮಿಶ್ರಣ ಮಾಡಿ.Multigrain Cookies for Toddlers & Kids hindi kannada finger food

3. ಈಗ ಗೋಧಿ ಹಿಟ್ಟು ಮತ್ತು ಮೊಳಕೆ ಕಾಳುಗಳ ಸರಿ ಮಿಶ್ರಣವನ್ನು ಹಾಕಿ.

 4. ಕೆಳಗೆ ತೋರಿಸಿರುವ ತರಹ ಕೈಯಿಂದ ಕಲಸಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮೃದುವಾಗಿ ಹಿಟ್ಟನ್ನು   ಕಲಸಿಕೊಳ್ಳಿ.Multigrain Cookies for Toddlers & Kids hindi kannada finger food

 5. ಕೆಳಗೆ ತೋರಿಸಿರುವ ತರಹ ಕಲಸಿದ ಬಿಸ್ಕೆಟ್ ಹಿಟ್ಟನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ, ಫ್ರಿಡ್ಜ್ ನಲ್ಲಿ 30 ನಿಮಿಷ ಇಡಬೇಕು.Multigrain Cookies for Toddlers & Kids hindi kannada finger food

 6. 30 ನಿಮಿಷದ ನಂತರ ಹಿಟ್ಟನ್ನು ಫ್ರಿಡ್ಜ್ ನಿಂದ ತೆಗೆದು ಮಣೆಯ ಮೇಲೆ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿಕೊಂಡು ಲಟ್ಟಿಸಿ ಕುಕೀ ಕಟರ್ ನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ.Multigrain Cookies for Toddlers & Kids hindi kannada finger food

 7. ಒಂದು ಬೇಕಿಂಗ್ ಟ್ರೇ ಮೇಲೆ ಬಟರ್ ಪೇಪರ್ ಹಾಕಿ 180 ಡಿಗ್ರಿ ಮೊದಲೇ ಓವೆನ್ ಬಿಸಿ ಮಾಕಿಕೊಲ್ಲಿ (preheat). ಕತ್ತರಿಸಿರುವ ಬಿಸ್ಕೆಟ್ ಗಳನ್ನೂ ಟ್ರೇ ನಲ್ಲಿ ಸ್ವಲ್ಪ ಅಂತರದಲ್ಲಿ ಇಟ್ಟು 180 ಡಿಗ್ರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಕ್ ಮಾಡಬೇಕು. ಬಿಸ್ಕೆಟ್ ದಪ್ಪದ ಮೇಲೆ ಅವಲಂಬಿತವಾಗಿರುತ್ತದೆ.

8. ಬೇಕ್ ಮಾಡಿದ ನಂತರ ಕುಕೀ ಟ್ರೇ ನಿಂದ ತೆಗೆದು ವೈರ್ ಟ್ರೇ ಮೇಲೆ ತಣ್ಣಗಾಗಲು ಬಿಡಿ. ತಣ್ಣಗಾದ ಬಿಸ್ಕೆಟ್ ಗಳನ್ನೂ ಏರ್ ಟೈಟ್ ಡಬ್ಬದಲ್ಲಿ  ಶೇಖರಿಸಿ ಒಂದು ವಾರದ ತನಕ ಉಪಯೋಗಿಸಬಹುದು.

Multigrain Cookies for Toddlers & Kids hindi kannada finger food

 9. ಮಲ್ಟಿಗ್ರೈನ್ ಬಿಸ್ಕೆಟ್ ತಯಾರಾಗಿದೆ .

ಮಲ್ಟಿಗ್ರೈನ್ ಬಿಸ್ಕೆಟ್ | Multigrain Cookies recipe in KannadaMultigrain-Cookies_for babies kannada hindi recipe

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 5
    Shares