Spread the love
  • 15
    Shares

ಹೆಸರುಕಾಳು ರಾಗಿ ಸರಿ | Moong Ragi Porridge recipe in KannadaMoong Ragi Porridge Powder for Babies and Toddlers green gram finger millet hindi kannada

ಹೆಸರುಕಾಳು ಮಗುವಿನ ಆಹಾರದಲ್ಲಿ ವ್ಯಾಪಕವಾಗಿ ಬಳಸಲಾಗುವ ಪದಾರ್ಥ. ಶಿಶುಗಳಿಗೆ ಮೊದಲ ಕೆಲವು ದಿನಗಳಲ್ಲಿ ಘನ ಆಹಾರವನ್ನು ಪರಿಚಯಿಸುವಾಗ ಹೆಸರು ಕಾಳಿನ ಬದಲು ಹೆಸರು ಬೇಳೆ ಉಪಯೋಗಿಸುವುದನ್ನು ಶಿಫಾರಸು ಮಾಡಲಾಗುತ್ತದೆ. ನಂತರ ಶಿಶುಗಳಿಗೆ ಹೆಸರು ಕಾಳು ನೀಡಲು ಪ್ರಾರಂಭಿಸಬಹುದು. ಹೆಸರು ಕಾಲಿನಲ್ಲಿ ಉತ್ತಮ ಪ್ರೋಟೀನ್ ಮತ್ತು ಆಹಾರದ ಫೈಬರ್ ಹೆಚ್ಚಾಗಿ ದೊರೆಯುತ್ತದೆ.ಒಳ್ಳೆಯ ರೋಗ ನಿರೋಧಕ ಶಕ್ತಿ ಸಹ ನೀಡುವುದು. ರಾಗಿ ಶಿಶುಗಳಿಗೆ ಬಳಸಲಾಗುವ ಮತ್ತೊಂದು ಪ್ರಸಿದ್ಧ ಶಿಶು ಆಹಾರ ಪದಾರ್ಥವಾಗಿದೆ. ರಾಗಿಯಲ್ಲಿ  ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ ಮತ್ತು ಶಿಶುಗಳಲ್ಲಿ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೆಸರುಕಾಳು ರಾಗಿ ಸರಿ ಪುಡಿ ಶಿಶುಗಳಿಗೆ ಉತ್ತಮ ಆಹಾರ. ಶಿಶುಗಳ ಮತ್ತು ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಅಗತ್ಯ ಪೂರೈಸುತ್ತದೆ. ಹೆಸರು ಕಾಳು ಮತ್ತು ರಾಗಿಯ ಸಂಯೋಜನೆ ಪ್ರೋಟೀನ್ ಯುಕ್ತ ಆಹಾರ, ಇದು ಶಿಶುಗಳು ಮತ್ತು ಪುಟ್ಟ ಮಕ್ಕಳ ಬೆಳವಣಿಗೆ ಹಾಗು ಅಭಿವೃದ್ಧಿಗೆ ಬಹಳ ಅವಶ್ಯಕವಾಗಿದೆ. ಘನ ಆಹಾರಗಳನ್ನು ಪರಿಚಯಿಸಿದ ನಂತರ ಇದನ್ನು 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.

ಈ ಪಾಕವಿಧಾನದಲ್ಲಿ ಬಳಸಿರುವ ಉಪಕರಣವನ್ನು ನೀವು ಇಲ್ಲಿ ಖರೀದಿಸಬಹುದು : Wonder Chef portable Blender on Discount

ನಮ್ಮ ಇತರ ಪಾಕವಿಧಾನಗಳು :

Video : ಹೆಸರುಕಾಳು ರಾಗಿ ಸರಿ | Moong Ragi Porridge recipe in Kannada

Kannada Subscribe Button TOTS AND MOMS

ಹೆಸರುಕಾಳು ರಾಗಿ ಸರಿ | Moong Ragi Porridge recipe in Kannada

ಹೆಸರುಕಾಳು ರಾಗಿ ಸರಿ | Moong ragi Porridge recipe in Kannada

ಹೆಸರುಕಾಳು ರಾಗಿ ಸರಿ ಪ್ರೋಟೀನ್ ನಲ್ಲಿ ಸಮೃದ್ಧವಾಗಿರುವ, ಮನೆಯಲ್ಲ ಸುಲಭವಾಗಿ ಮಾಡಬಹುದಾದ ಶಿಶು ಆಹಾರ, ಹೆಸರುಕಾಳು ರಾಗಿ ಗಂಜಿ ಪುಡಿ. ಶಿಶುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಆರೋಗ್ಯಕರವಾಗಿ ತೂಕ ಹೆಚ್ಚಿಸುವ ಆಹಾರ, ಪ್ರತಿರಕ್ಷಣಾ ಹೆಚ್ಚಿಸುವ ಸರಿ / ಗಂಜಿ. .

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ ಭಾರತೀಯ
ತಿನಿಸು:Indian

ಸಾಮಗ್ರಿಗಳು

  1. ಹೆಸರು ಕಾಳು - 1/2 ಕಪ್
  2. ರಾಗಿ - 1/2 ಕಪ್
  3. ಅಕ್ಕಿ - 1/2 ಕಪ್
  4. ಒಣ ಶುಂಟಿ ಪುಡಿ - 1/2 ಇಂಚು
  5. ಏಲಕ್ಕಿ  - 1

ವಿಧಾನ

  1. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ ಹೆಸರುಕಾಳನ್ನು ಹಾಕಿ ೮ ನಿಮಿಷಗಳ ಕಾಲ ಹುರಿಯಿರಿ ಅರ್ಧದಷ್ಟು ಹುರಿದ ನಂತರ ಅಕ್ಕಿ ಹಾಕಿ 4 ನಿಮಿಷ ಹುರಿಯಿರಿ.
  2. ಹೆಸರು ಕಾಳು ಮತ್ತು ಅಕ್ಕಿ ಎರಡನ್ನು ಹುರಿದ ನಂತರ ರಾಗಿ ಹಾಕಿ ಮತ್ತೆ 4 ನಿಮಿಷದ ಕಾಲ ಹುರಿಯಿರಿ. ಈ ತರಹ ಹುರಿಯುವುದರಿಂದ ಕಡಿಮೆ ಸಮಯದಲ್ಲಿ ಎಲ್ಲ ಪದಾರ್ಥಗಳನ್ನು ಹುರಿಯಬಹುದು. ಅಥವಾ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಬೇಕು.ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಒಂದು ನಿಮಿಷ ಹುರಿಯಿರಿ.
  3. ಹುರಿದ ಎಲ್ಲ ಪದಾರ್ಥಗಳನ್ನು ತಣ್ಣಗಾಗಲು ಬಿಡಿ ನಂತರ ಮಿಶ್ರಣವನ್ನು ಮಿಕ್ಸರ್ /ಬ್ಲೆಂಡರ್ ಗೆ ಹಾಕಿ ,ಒಣ ಶುಂಟಿಯನ್ನು ಹಾಕಿ.
  4. ಚೆನ್ನಾಗಿ ನಯವಾಗಿ ಪುಡಿ ಮಾಡಿಕೊಳ್ಳಿ ಗಾಜಿನ ಡಬ್ಬಿಯಲ್ಲಿ ಶೇಖರಿಸಿಡಿ.
  5. ಈಗ ನಿಮಗೆ ಬೇಕಾದಾಗ ಸರಿ ತಯಾರಿಸಬಹುದು. ಒಂದು ಚಮಚ ಹೆಸರುಕಾಳು ರಾಗಿ ಪುಡಿ ಮಿಶ್ರಣವನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಗಂಟಿಲ್ಲದಂತೆ ಮಿಶ್ರಣ ಮಾಡಿ.
  6. ಸಣ್ಣ ಉರಿಯಲ್ಲಿ ಮಿಶ್ರಣ ಮಾಡುತ್ತಿರಬೇಕು. ಸರಿ ಗಟ್ಟಿಯಾಗಿ ಸರಿಯಾದ ಸ್ಥಿರತೆ ಬಂದ ನಂತರ ತುಪ್ಪ ಹಾಕಿ..
  7.  ಹೆಸರುಕಾಳು ರಾಗಿ ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಹೆಸರುಕಾಳು ರಾಗಿ ಸರಿ | Moong Ragi Porridge recipe in Kannada

ಹೆಸರುಕಾಳು ರಾಗಿ ಸರಿ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು

  1. ಹೆಸರು ಕಾಳು – 1/2 ಕಪ್
  2. ರಾಗಿ – 1/2 ಕಪ್
  3. ಅಕ್ಕಿ – 1/2 ಕಪ್
  4. ಒಣ ಶುಂಟಿ ಪುಡಿ – 1/2 ಇಂಚು
  5. ಏಲಕ್ಕಿ  – 1

ಹೆಸರುಕಾಳು ರಾಗಿ ಸರಿ ಪುಡಿ ಮಾಡುವ ವಿಧಾನ

1.ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ಗೆ ಹೆಸರುಕಾಳನ್ನು ಹಾಕಿ ೮ ನಿಮಿಷಗಳ ಕಾಲ ಹುರಿಯಿರಿ ಅರ್ಧದಷ್ಟು ಹುರಿದ ನಂತರ ಅಕ್ಕಿ ಹಾಕಿ 4 ನಿಮಿಷ ಹುರಿಯಿರಿ.Moong Ragi Porridge Powder for Babies and Toddlers green gram finger millet hindi kannada

2. ಹೆಸರು ಕಾಳು ಮತ್ತು ಅಕ್ಕಿ ಎರಡನ್ನು ಹುರಿದ ನಂತರ ರಾಗಿ ಹಾಕಿ ಮತ್ತೆ 4 ನಿಮಿಷದ ಕಾಲ ಹುರಿಯಿರಿ. ಈ ತರಹ ಹುರಿಯುವುದರಿಂದ ಕಡಿಮೆ ಸಮಯದಲ್ಲಿ ಎಲ್ಲ ಪದಾರ್ಥಗಳನ್ನು ಹುರಿಯಬಹುದು. ಅಥವಾ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಬೇಕು.ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಒಂದು ನಿಮಿಷ ಹುರಿಯಿರಿ.Moong Ragi Porridge Powder for Babies and Toddlers green gram finger millet hindi kannada

3. ಹುರಿದ ಎಲ್ಲ ಪದಾರ್ಥಗಳನ್ನು ತಣ್ಣಗಾಗಲು ಬಿಡಿ ನಂತರ ಮಿಶ್ರಣವನ್ನು ಮಿಕ್ಸರ್ /ಬ್ಲೆಂಡರ್ ಗೆ ಹಾಕಿ ,ಒಣ ಶುಂಟಿಯನ್ನು ಹಾಕಿ.Moong Ragi Porridge Powder for Babies and Toddlers green gram finger millet hindi kannada

4. ಚೆನ್ನಾಗಿ ನಯವಾಗಿ ಪುಡಿ ಮಾಡಿಕೊಳ್ಳಿ ಗಾಜಿನ ಡಬ್ಬಿಯಲ್ಲಿ ಶೇಖರಿಸಿಡಿ.Moong Ragi Porridge Powder for Babies and Toddlers green gram finger millet hindi kannada

5. ಈಗ ನಿಮಗೆ ಬೇಕಾದಾಗ ಸರಿ ತಯಾರಿಸಬಹುದು. ಒಂದು ಚಮಚ ಹೆಸರುಕಾಳು ರಾಗಿ ಪುಡಿ ಮಿಶ್ರಣವನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಗಂಟಿಲ್ಲದಂತೆ ಮಿಶ್ರಣ ಮಾಡಿ.Moong Ragi Porridge Powder for Babies and Toddlers green gram finger millet hindi kannada

6. ಸಣ್ಣ ಉರಿಯಲ್ಲಿ ಮಿಶ್ರಣ ಮಾಡುತ್ತಿರಬೇಕು. ಸರಿ ಗಟ್ಟಿಯಾಗಿ ಸರಿಯಾದ ಸ್ಥಿರತೆ ಬಂದ ನಂತರ ತುಪ್ಪ ಹಾಕಿ..Moong Ragi Porridge Powder for Babies and Toddlers green gram finger millet hindi kannada

7 ಹೆಸರುಕಾಳು ರಾಗಿ ಸರಿ ತಯಾರಾಗಿದೆ.

ಹೆಸರುಕಾಳು ರಾಗಿ ಸರಿ | Moong Ragi Porridge recipe in KannadaMoong Ragi Porridge Powder for Babies and Toddlers green gram finger millet hindi kannada

 

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 15
    Shares