Spread the love
  • 12
    Shares

ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

Mashed Vegetable Rice for Babies & Toddlers hindi kannada shishu ahar 8 months baby food

ಶಿಶುಗಳಿಗೆ ಆಹಾರ ಶುರು ಮಾಡಿದ ಪ್ರಾರಂಭಿಕ ದಿನಗಳಲ್ಲಿ ವಿವಿಧ ಆಹಾರದ ವಿನ್ಯಾಸವನ್ನು ಪರಿಚಯಿಸುವುದು ಬಹಳ ಮುಖ್ಯ. ಆಹಾರದ ವಿನ್ಯಾಸವನ್ನು ಪರಿಚಯಿಸದಿದ್ದರೆ ಶಿಶುಗಳು ಪ್ಯೂರಿಯ ತರಹದ ಆಹಾರವನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ, ನಂತರ ಕುಟುಂಬದ ಸಾಮಾನ್ಯ ಆಹಾರಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹಿಸುಕಿದ ತರಕಾರಿ ಅನ್ನ ಶಿಶು ಆಹಾರದ ವಿನ್ಯಾಸ ಪರಿಚಯಿಸುವ ಒಂದು ಸುಲಭ ಮತ್ತು ಸಾಮಾನ್ಯ ಮಾರ್ಗವಾಗಿದೆ. ಈ ಪಾಕವಿಧಾನದಲ್ಲಿ ಮಿಶ್ರ ತರಕಾರಿಗಳನ್ನು ಮತ್ತು ಅಕ್ಕಿ ಬಳಸಲಾಗಿದೆ, ನಮಗೆ ಬೇಕಾದ ಯಾವುದೇ ಬೇಳೆಗಳನ್ನು ಸೇರಿಸಿ ತಯಾರಿಸಬಹುದು. ಮಗು ಘನ ಆಹಾರ ಸ್ವೀಕರಿಸಲು ಸಿದ್ಧವಾಗಿದೆಯೆಂದು ನೀವು ಭಾವಿಸಿದಾಗ 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಇದನ್ನು ನೀಡಬಹುದು.

ಬೆಳೆಯುತ್ತಿರುವ ಶಿಶುಗಳಲ್ಲಿ ತರಕಾರಿಗಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಶಿಶುಗಳ ಆರೋಗ್ಯಕರವಾದ ಬೆಳವಣಿಗೆಗೆ ಅಗತ್ಯವಿರುವ ಜೀವಸತ್ವಗಳನ್ನು ಮತ್ತು ಪೋಷಕಾಂಶಗಳನ್ನು ಒದಗಿಸುವುದಕ್ಕೆ ತರಕಾರಿಗಳು ಅತ್ಯಗತ್ಯ. ಶಿಶುಗಳಿಗೆ ಸಾವಯವ ತರಕಾರಿಗಳನ್ನು ಬಳಸುವುದು ಒಳ್ಳೆಯದು. ಈ ಪಾಕವಿಧಾನದಲ್ಲಿ ಅಕ್ಕಿ ಬಳಸಲಾಗಿದೆ  ನೀವು ನಿಮ್ಮ ಆಯ್ಕೆಯ ಯಾವುದೇ ಧಾನ್ಯಗಳನ್ನು ಬಳಸಿ ಮಾಡಬಹುದು. ಕುಕ್ಕರ್ ಉಪಯೋಗಿಸಿ ಮಾಡಬಹುದು ಅಥವಾ ಪ್ಯಾನ್ ನಲ್ಲಿ ಮಾಡಿದರೆ ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ ಹಾಗು ಮೇಲ್ವಿಚಾರಣೆ ಬೇಕಾಗುತ್ತದೆ.

ನಮ್ಮ ಇತರ ಪಾಕವಿಧಾನಗನ್ನು ಪ್ರಯತ್ನಿಸಿ :

Video: ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

Kannada Subscribe Button TOTS AND MOMS

ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

ಈ ಪಾಕವಿಧಾನ ಶಿಶುಗಳಿಗೆ ಘನ ಆಹಾರ ಪರಿಚಯಿಸಲು ಮತ್ತು ಆಹಾರದ ವಿನ್ಯಾಸವನ್ನು ಪರಿಚಯಿಸಲು ಉತ್ತಮವಾದ ಪಾಕವಿಧಾನ. ನಿಮಗೆ ಬೇಕಾದ/ ಇಷ್ಟವಾದ ಯಾವುದಾದರು ತರಕಾರಿ, ಬೇಳೆ ಹಾಗು ಧಾನ್ಯಗಳನ್ನು ಉಪಯೋಗಿಸಿ ಮಾಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಅಕ್ಕಿ - 2 tbsp
  2. ಹಸಿ ಬಟಾಣಿ - 20
  3. ಕ್ಯಾರೆಟ್- 1/2 ಸಣ್ಣಗೆ ಹೆಚ್ಚಿರುವ
  4. ಬೀನ್ಸ್ - 5
  5. ಆಲೂಗೆಡ್ಡೆ - 1/2
  6. ತುಪ್ಪ - 1 tsp
  7. ಕಾಳು ಮೆಣಸಿನ ಪುಡಿ ಒಂದು ಚಿಟಕೆ

ವಿಧಾನ

  1. ಕುಕ್ಕರ್ ನ ಪ್ಯಾನ್ ನಲ್ಲಿ ತೊಳೆದ ಅಕ್ಕಿ ಮತ್ತು ತರಕಾರಿಗಳನ್ನು ಹಾಕಿ.I
  2. ತರಕಾರಿ , ಅಕ್ಕಿ ಬೇಯಲು ಬೇಕಾಗುವಷ್ಟು ನೀರನ್ನು ಹಾಕಿ ಕುಕ್ಕರ್ ನ ಮುಚ್ಚಳ ಮುಚ್ಚಿ 3-4 ಸೀಟಿ ಬರುವ ತನಕ 20 ನಿಮಿಷ ಬೇಯಿಸಿ.
  3. ಕುಕ್ಕರ್ ತಣ್ಣಗಾದ ನಂತರ ಬೆಂದ ಅನ್ನ ಮತ್ತು ತರಕಾರಿಯನ್ನು ಚೆನ್ನಾಗಿ ಸೌಟಿನಿಂದ ಹಿಸುಕಿ. ಹ್ಯಾಂಡ್ ಬ್ಲೆಂಡರ್ ಉಪಯೋಗಿಸಬಹುದು, ಆದರೆ ತುಂಬಾ ನುಣ್ಣಗೆ ರುಬ್ಬಿಕೊಳ್ಳಬಾರದು.
  4. ತುಪ್ಪ ಮತ್ತು ಒಂದು ಚಿಟಕೆ ಕಾಳು ಮೆಣಸು ಹಾಕಿ.
  5. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಶಿಶುಗಳಿಗೆ ನೀಡಬಹುದು.
  6. ಹಿಸುಕಿದ ತರಕಾರಿ ಅನ್ನ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

Mashed Vegetable Rice for Babies & Toddlers hindi kannada shishu ahar 8 months baby food

ತರಕಾರಿ ಅನ್ನ ಮಾಡಲು ಬೇಕಾಗುವ ಸಾಮಗ್ರಿಗಳು:

  1. ಅಕ್ಕಿ – 2 tbsp
  2. ಹಸಿ ಬಟಾಣಿ – 20
  3. ಕ್ಯಾರೆಟ್– 1/2 ಸಣ್ಣಗೆ ಹೆಚ್ಚಿರುವ
  4. ಬೀನ್ಸ್ – 5
  5. ಆಲೂಗೆಡ್ಡೆ – 1/2
  6. ತುಪ್ಪ – 1 tsp
  7. ಕಾಳು ಮೆಣಸಿನ ಪುಡಿ ಒಂದು ಚಿಟಕೆ

ತರಕಾರಿ ಅನ್ನ ಮಾಡುವ ವಿಧಾನ :

1. ಕುಕ್ಕರ್ ನ ಪ್ಯಾನ್ ನಲ್ಲಿ ತೊಳೆದ ಅಕ್ಕಿ ಮತ್ತು ತರಕಾರಿಗಳನ್ನು ಹಾಕಿ.

Mashed Vegetable Rice for babies and toddlers weaning first food kannada hindi

2. ತರಕಾರಿ , ಅಕ್ಕಿ ಬೇಯಲು ಬೇಕಾಗುವಷ್ಟು ನೀರನ್ನು ಹಾಕಿ ಕುಕ್ಕರ್ ನ ಮುಚ್ಚಳ ಮುಚ್ಚಿ 3-4 ಸೀಟಿ ಬರುವ ತನಕ 20 ನಿಮಿಷ ಬೇಯಿಸಿ.

Mashed Vegetable Rice for babies and toddlers weaning first food kannada hindi

3. ಕುಕ್ಕರ್ ತಣ್ಣಗಾದ ನಂತರ ಬೆಂದ ಅನ್ನ ಮತ್ತು ತರಕಾರಿಯನ್ನು ಚೆನ್ನಾಗಿ ಸೌಟಿನಿಂದ ಹಿಸುಕಿ. ಹ್ಯಾಂಡ್ ಬ್ಲೆಂಡರ್ ಉಪಯೋಗಿಸಬಹುದು, ಆದರೆ ತುಂಬಾ ನುಣ್ಣಗೆ ರುಬ್ಬಿಕೊಳ್ಳಬಾರದು.

Mashed Vegetable Rice for babies and toddlers weaning first food kannada hindi

4. ತುಪ್ಪ ಮತ್ತು ಒಂದು ಚಿಟಕೆ ಕಾಳು ಮೆಣಸು ಹಾಕಿ.

Mashed Vegetable Rice for babies and toddlers weaning first food kannada hindi

5. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಶಿಶುಗಳಿಗೆ ನೀಡಬಹುದು.

Mashed Vegetable Rice for babies and toddlers weaning first food kannada hindi

6. ಹಿಸುಕಿದ ತರಕಾರಿ ಅನ್ನ ಸಿದ್ಧವಾಗಿದೆ.

ಶಿಶುಗಳಿಗೆ ತರಕಾರಿ ಅನ್ನ | Mashed Vegetable Rice recipe in Kannada

Mashed Vegetable Rice for Babies & Toddlers hindi kannada shishu ahar 8 months baby food

ಸೂಚನೆ :

  1. ಘನ ಆಹಾರ ಪರಿಚಯಿಸುವ ಮುಂಚೆ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಸಲಹೆ ಪದಡೆಯುವುದು ಸೂಕ್ತ.
  2. ನಮಗೆ ಬೇಕಾದ ಇಷ್ಟವಾಗುವ ತರಕಾರಿಯನ್ನು ಉಪಯೋಗಿಸಬಹುದು.
  3. ಚೆನ್ನಾಗಿ ಬೇಯಿಸಿದ  (ಅಕ್ಕಿ )ಅನ್ನ ಘನ ಆಹಾರ ಪರಿಚಯಿಸಲು ಸೂಕ್ತ ಶಿಶು ಆಹಾರ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 12
    Shares