Spread the love

ಮಕ್ಕಳು ಮತ್ತು ಕುಟುಂಬಕ್ಕೆ ಓಟ್ಸ್ ಮದ್ದೂರ್ ವಡೆ       

ಮದ್ದೂರ್ ವಡೆ ಕರ್ನಾಟಕದ ಮದ್ದೂರ್ ನಗರದಿಂದ ರುಚಿಕರವಾದ ಮತ್ತು ಜನಪ್ರಿಯವಾದ ಲಘು ತಿಂಡಿಯಾಗಿದೆ. ಸಂಪೂರ್ಣ ವಿಭಿನ್ನವಾಗಿ, ಹೊರಗಿನಿಂದ ಗರಿಗರಿಯಾಗಿ ಒಳಗೆ ಮೆತ್ತಗೆ ಮತ್ತು ಈರುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿಗಳೊಂದಿಗೆ ರುಚಿಯನ್ನು ಹೆಚ್ಚಿಸುತ್ತದೆ. ನಿಮ್ಮ ಬಾಯಲ್ಲಿ ನೀರೂರಿಸುತ್ತದೆ ನಿಮ್ಮ  ಬಯಕೆಯನ್ನು ಪೂರೈಸಲು ನಿಜವಾಗಿಯೂ ತ್ವರಿತ ಮತ್ತು ಸುಲಭ ಪಾಕವಿಧಾನ ಮನೆಯಲ್ಲಿ ರುಚಿಯಾಗಿ ಶುಚಿಯಾಗಿ ತಯಾರಿಸಬಹುದಾಗಿದೆ.

Oats-Maddur-Vada

ಮದ್ದೂರ್ ವಡೆ ಪಾಕವಿಧಾನದಲ್ಲಿ ಮೈದಾ ಬದಲು ಓಟ್ಸ್ ಸೇರಿಸಲಾಗಿದೆ  ಇದು ಆರೋಗ್ಯಕರವಾದ  ಸಂಜೆಯ ತಿಂಡಿಯಾಗುತ್ತದೆ. ಮದ್ದೂರ್ ವಡೆ ನಿಮ್ಮ ಪುಟ್ಟ ಮಕ್ಕಳಿಗಾಗಿ ಉತ್ತಮ ಕೈಗೆ ನೀಡುವ  ಆಹಾರವಾಗಿದೆ. ಬೆಳಗ್ಗಿನ ಉಪಹಾರ, ಊಟದ ಡಬ್ಬಿ ಅಥವಾ ನಿಮ್ಮ ಚಹಾ ಸಮಯದ ವಿರಾಮದೊಂದಿಗೆ ಸವಿಯ ಬಹುದು. 8 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಉಪ್ಪಿಲ್ಲದೆ ನೀಡಬಹುದು.

ಮಕ್ಕಳಿಗೆ ಓಟ್ಸ್  ಉಪಯೋಗದಿಂದಾಗುವ ಪ್ರಯೋಜನಗಳು:

  • ಸೋಯಾ, ಮಾಂಸ, ಹಾಲು ಮತ್ತು ಮೊಟ್ಟೆಗೆ ಸಮಾನವಾದ ಪ್ರೊಟೀನ್ಗಳನ್ನು ಒಳಗೊಂಡಿರುವ ಏಕೈಕ ಏಕದಳ
  • ನಾರಿನಂಶ  ಹೆಚ್ಚು ಮತ್ತು  ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ಮಕ್ಕಳಿಗೆ ಸಣ್ಣ ರವೆ ಉಪಯೋಗದಿಂದಾಗುವ ಪ್ರಯೋಜನಗಳು:

  • ರವೆ  ಸಂಪೂರ್ಣವಾಗಿ ಒಳ್ಳೆಯ ಆಹಾರವಾಗಿದೆ. ಮಕ್ಕಳಿಗೆ ಇಷ್ಟ ವಾಗುವುದು.
  • ಇದು ಸುಲಭವಾಗಿ ಜೀರ್ಣವಾಗ ಬಲ್ಲದು ಮತ್ತು ಅದರ ವಿಶೇಷ ಧಾನ್ಯದ ವಿನ್ಯಾಸವನ್ನು ಶಿಶುವಿಗೆ ನೀಡಲು ಸಹಾಯಕ.

ಓಟ್ಸ್ ಮದ್ದೂರ್ ವಡೆ ಹೇಗೆ ಮಾಡುವುದು ? ಈ ವೀಡಿಯೊ ನೋಡಿ 

 

 

ಓಟ್ಸ್ ಮದ್ದೂರ್ ವಡೆ

ಓಟ್ಸ್ ಸೇರಿಸಲಾಗಿರುವ ಈ ಮದ್ದೂರ್ ವಡೆ ಒಂದು ಆರೋಗ್ಯಕರ ಟ್ವಿಸ್ಟ್ ನೀಡುತ್ತದೆ. ಮದ್ದೂರ್ ವಡೆ ಮಕ್ಕಳಿಗೆ ಉತ್ತಮ ಕೈಗೆ ಕೊಡುವ ಆಹಾರವಾಗಿದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸ್ನ್ಯಾಕ್ಸ್, ಪ್ರಯಾಣ ಸ್ನೇಹಿ, ಊಟದ ಡಬ್ಬಿ ತಿಂಡಿಗಳು
ತಿನಿಸು:ಭಾರತೀಯ

ಸಾಮಗ್ರಿಗಳು

 

  • ಓಟ್ಸ್ - 1 ಕಪ್
  • ಅಕ್ಕಿ ಹಿಟ್ಟು - 1/2 ಕಪ್
  • ಚಿರೋಟಿ ರವೆ - 1/2 ಕಪ್
  • ಈರುಳ್ಳಿ - 1 ಕತ್ತರಿಸಿದ್ದು
  • ಹಸಿರು ಮೆಣಸಿನಕಾಯಿ – 4 ಸಣ್ಣಗೆ ಹೆಚ್ಚಿರುವ  
  • ಅಚ್ಚ ಖಾರದ ಪುಡಿ  - 1 ಟೀಸ್ಪೂನ್
  • ಕರಿಬೇವು  ಎಲೆಗಳು - 10 ಕತ್ತರಿಸಿ
  • ಇಂಗು  - ಚಿಟುಕೆ
  • ಎಣ್ಣೆ  (ಹಿಟ್ಟಿಗೆ ) - 2 ಟೀಸ್ಪೂನ್ ಬಿಸಿಮಾಡಿದ
  • ಕಡಲೆ ಬೀಜ  - 4 ಟೀಸ್ಪೂನ್ ಪುಡಿಮಾಡಿ
  • ಉಪ್ಪು - ರುಚಿಗೆ ತಕ್ಕಷ್ಟು

ವಿಧಾನ

  • ದೊಡ್ಡ  ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿಕೊಳ್ಳಬೇಕು.
  • 2 ಟೀಸ್ಪೂನ್ ಬಿಸಿ ಎಣ್ಣೆಯನ್ನು ಸೇರಿಸಿ ಮೃದುವಾಗಿ  ಹಿಟ್ಟನ್ನು ಕಲಸಿಕೊಳ್ಳಿ.
  • 5 ನಿಮಿಷಗಳ ಕಾಲ ನೆನೆಯಲು ಬಿಡಿ  ಮತ್ತು ಹಿಟ್ಟಿನ ಸಣ್ಣ  ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
  • ಸಣ್ಣ ಉಂಡೆಗಳನ್ನು ಕೈಯಿಂದ ಒತ್ತುವಂತೆ ಒಂದು ವಡೆಯ ಆಕಾರವನ್ನು ರೂಪಿಸಿ
  • (ದಯವಿಟ್ಟು ಗಮನಿಸಿ, ತುಂಬಾ ತೆಳ್ಳಗೆ ಮಾಡಿದರೆ ಅದು ಕರಿದ ನಂತರ ಬಹಳ ಗಟ್ಟಿಯಾಗುತ್ತದೆ ಹಾಗು ಹಿಟ್ಟನ್ನು ತುಂಬಾ ನೆನೆಸಬೇಡಿ ಈರುಳ್ಳಿ ನೀರುಬಿಟ್ಟರೆ ವಡೆ ಗರಿಗರಿಯಾವುದಿಲ್ಲ  )
  • ಹೊಂಬಣ್ಣ (ಗೋಲ್ಡನ್ ಬ್ರೌನ್) ಬರುವ ತನಕ ವಡೆಯನ್ನು ಎಣ್ಣೆಯಲ್ಲಿ ಕರಿಯಿರಿ .
  • ಹಸಿರು ಚಟ್ನಿ ಅಥವಾ ಕೆಚಪ್ ಅಥವಾ ಬರಿ ಮದ್ದೂರ್ ವಡೆಯನ್ನು ಸವಿಯಿರಿ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ಓಟ್ಸ್ ಮದ್ದೂರ್ ವಡೆ ಮಾಡುವ ವಿಧಾನ

  • ದೊಡ್ಡ  ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿಕೊಳ್ಳಬೇಕು
  •  2 ಟೀಸ್ಪೂನ್ ಬಿಸಿ ಎಣ್ಣೆಯನ್ನು ಸೇರಿಸಿ ಮೃದುವಾಗಿ  ಹಿಟ್ಟನ್ನು ಕಲಸಿಕೊಳ್ಳಿ.

OATS MADDUR VADA for Toddlers, Kids & Family

OATS MADDUR VADA for Toddlers, Kids & Family

  • 5 ನಿಮಿಷಗಳ ಕಾಲ ನೆನೆಯಲು ಬಿಡಿ  ಮತ್ತು ಹಿಟ್ಟಿನ ಸಣ್ಣ  ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.

OATS MADDUR VADA for Toddlers, Kids & Family

  • ಸಣ್ಣ ಉಂಡೆಗಳನ್ನು ಕೈಯಿಂದ ಒತ್ತುವಂತೆ ಒಂದು ವಡೆಯ ಆಕಾರವನ್ನು ರೂಪಿಸಿ
  • (ದಯವಿಟ್ಟು ಗಮನಿಸಿ, ತುಂಬಾ ತೆಳ್ಳಗೆ ಮಾಡಿದರೆ ಅದು ಕರಿದ ನಂತರ ಬಹಳ ಗಟ್ಟಿಯಾಗುತ್ತದೆ ಹಾಗು ಹಿಟ್ಟನ್ನು ತುಂಬಾ ನೆನೆಸಬೇಡಿ ಈರುಳ್ಳಿ ನೀರುಬಿಟ್ಟರೆ ವಡೆ ಗರಿಗರಿಯಾವುದಿಲ್ಲ.
  • ಹೊಂಬಣ್ಣ (ಗೋಲ್ಡನ್ ಬ್ರೌನ್) ಬರುವ ತನಕ ವಡೆಯನ್ನು ಎಣ್ಣೆಯಲ್ಲಿ ಕರಿಯಿರಿ.

OATS MADDUR VADA for Toddlers, Kids & Family

  • ಹಸಿರು ಚಟ್ನಿ ಅಥವಾ ಕೆಚಪ್ ಅಥವಾ ಬರಿ ಮದ್ದೂರ್ ವಡೆಯನ್ನು ಸವಿಯಿರಿ.

OATS MADDUR VADA for Toddlers, Kids & Family

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ನಮ್ಮ ಪ್ರತಿ video ಮೊದಲಿಗೆ ನೋಡಲು ನಮ್ಮ YouTube Channel Subscribe ಮಾಡಿ.


Spread the love