Spread the love

Lactose Intolerance in Babies - Symptoms, Cure and Alternatives_kannada

ಪುಟ್ಟ ಮಕ್ಕಳು ಸಾಮಾನ್ಯವಾಗಿ ಅತಿಸಾರದಿಂದ ಬಳಲುತ್ತಿರುವುದು, ಅಳುವುದು, ಕಿರಿಕಿರಿ ಮಾಡುವುದು ಇತ್ಯಾದಿಗಳ ಬಗ್ಗೆ ನೀವು ಕೇಳಿರುತ್ತೀರ ಅಥವಾ ನೋಡಿರಬಹುದು? ಈ ಎಲ್ಲಾ ಸಮಸ್ಯೆ ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಸರಳ ಪದಗಳಲ್ಲಿ ಹಾಲಿನ ಅಲರ್ಜಿಯ ಕಾರಣದಿಂದ ಕೂಡ ಆಗಬಹುದು. ಈ ಲೇಖನದಲ್ಲಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

1. ಲ್ಯಾಕ್ಟೋಸ್ ಅಸಹಿಷ್ಣುತೆ (Lactose Intolerance) ಎಂದರೇನು?

(ಸಂಕ್ಷಿಪ್ತ ಮಾಹಿತಿಗೆ ಅಂತ್ಯದಲ್ಲಿರುವ ವೀಡಿಯೊ ನೋಡಿ)

ಮಗು ಹುಟ್ಟಿನಿಂದ ಹಾಲಿನ ಪುಡಿ ಅಥವಾ ಹಸುವಿನ ಹಾಲಿನಲ್ಲಿರುವ ಲ್ಯಾಕ್ಟೋಸ್(Lactose) ಅಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಇದನ್ನು ಲ್ಯಾಕ್ಟೋಸ್ ಅಸಹಿಷ್ಣುತೆ ಎಂದು ಕರೆಯಲಾಗುತ್ತದೆ. ಲ್ಯಾಕ್ಟೋಸ್ ಹಾಲಿನಲ್ಲಿರುವ ಗ್ಲೂಕೊಸ್(glucose) ಮತ್ತು ಗೆಲ್ಯಾಕ್ಟೋಸ್(galactose) ಸಂಯೋಗದಿಂದ ಆದ ಒಂದು ಸಕ್ಕರೆಯ ಅಂಶ, ಈ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಲ್ಯಾಕ್ಟೇಸ್ ಎನ್ಜ್ಯ್ಮೆಸ್ ಅಗತ್ಯವಿರುತ್ತದೆ, ಆದರೆ ಕೆಲವರಲ್ಲಿ ಇದು ಸ್ರವಿಸುವುದಿಲ್ಲ ಹಾಗಾಗಿ ಹಾಲು ಜೀರ್ಣವಾಗುವುದಿಲ್ಲ. ಜೀರ್ಣಕಾರಿ ವ್ಯವಸ್ಥೆಯಲ್ಲಿ(digestive system) ಸಮಸ್ಯೆಗಳಾಗುತ್ತದೆ ಏಕೆಂದರೆ ಹೊಟ್ಟೆಯೊಳಗೆ ಹಾಲು ಜೀರ್ಣವಾಗದೇ ಹಾಗೆ ಉಳಿಯುತ್ತದೆ.

2. ಮಕ್ಕಳಲ್ಲಿ ಲ್ಯಾಕ್ಟೋಸ್ ಅಸಹಿಷ್ಣುತೆಯ ಲಕ್ಷಣಗಳು ಯಾವುವು?

Lactose Intolerance in Babies - Symptoms, Cure and Alternatives

  • ಅತಿಸಾರ – ಆಗಾಗ ಭೇದಿ
  • ಸಮಾಧಾನವಿರುವುದಿಲ್ಲ – ಕಿರಿಕಿರಿಯಾಗಿರುತ್ತದೆ
  • ಹಿಂಸೆಯಿಂದ ಅಳುವುದು
  • ಹೊಟ್ಟೆಯಲ್ಲಿ ಗಾಳಿಯಿಂದ ಹಿಂಸೆ – ಇದರಿಂದ ಹೊಟ್ಟೆ ನೋವು ಜೊತೆ ತೊಳಸುವಿಕೆ
  • ಕರುಳಿನಲ್ಲಿ ಅಸಹಜವಾದ ಶಬ್ದಗಳು
  • ವಾಂತಿ

3. ಎದೆ ಹಾಲಿನಿಂದ ಲ್ಯಾಕ್ಟೋಸ್ ಅಸಹಿಷ್ಣುತೆ ಉಂಟಾಗುವುದೆ?

Lactose Intolerance in Babies - Symptoms, Cure and Alternatives

ಇಲ್ಲ, ಎದೆ ಹಾಲಿನಲ್ಲಿ ಲ್ಯಾಕ್ಟೋಸ್ ಅಂಶ ಬಹಳ ಕಡಿಮೆ ಇರುವುದರಿಂದ ಹೊಸ ಸಂಶೋಧನೆ ಪ್ರಕಾರ ಮಕ್ಕಳಿಗೆ ಎದೆ ಹಾಲಿನಿಂದ ಈ ಲ್ಯಾಕ್ಟೋಸ್ ಅಸಹಿಷ್ಣುತೆ ಆಗುವುದಿಲ್ಲ. ಲ್ಯಾಕ್ಟೋಸ್ನ ಅಸಹಿಷ್ಣುತೆ ಸಾಮಾನ್ಯವಾಗಿ ಹಸುವಿನ ಹಾಲು ಅಥವಾ ಅದರೊಂದಿಗೆ ತಯಾರಿಸಲಾದ ಪದಾರ್ಥಗಳಿಂದ ಬರುತ್ತದೆ. ಆದ್ದರಿಂದ ಮಗುವಿಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ಸ್ತನ್ಯಪಾನವನ್ನು ನಿಲ್ಲಿಸಬೇಡಿ. ಯಾವಾಗಲೂ ಫಾರ್ಮುಲಾ ಹಾಲು/ಕೃತಕ ಹಾಲಿನ ಪುಡಿಯಿಂದ ತಯಾರಿಸಿದ ಅಥವಾ ಹಸುವಿನ ಹಾಲನ್ನು ನಿಲ್ಲಿಸಬೇಕು.

4. ಲ್ಯಾಕ್ಟೋಸ್ ನ ಒತ್ತಡವಿರಬಾರದು:

Lactose Intolerance in Babies - Symptoms, Cure and Alternatives

ಮಗುವಿಗೆ ಎದೆ ಹಾಲು ಮತ್ತು ಹಸುವಿನ ಹಾಲು/ಫಾರ್ಮುಲಾ ಹಾಲನ್ನು ಅತಿಯಾಗಿ ನೀಡಬಾರದು ಇದರಿಂದ ಸೂಕ್ಷ್ಮ ವಾಗಿರುವ ಮಕ್ಕಳ ಕರಳು ಒತ್ತಡಕ್ಕೆ ಕಾರಣವಾಗಬಹುದು, ಇದು ಲ್ಯಾಕ್ಟೋಸ್ ಅಸಹಿಷ್ಣುತೆಗೆ ಕಾರಣವಾಗುತ್ತದೆ. ಆದ್ದರಿಂದ, ಹಲವು ರೀತಿಯ ಹಾಲನ್ನು ಪುಟ್ಟ ಶಿಶುಗಳಿಗೆ ನೀಡಬೇಡಿ. ಹೊಟ್ಟೆ ಭಾರ ಮಾಡಬೇಡಿ. ಮಗುವಿಗೆ ಸ್ತನಪಾನ ಸಾಕು.

5. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕಳ್ಳಿಗೆ ನೀಡಬಹುದಾದ ಪರ್ಯಾಯಗಳು

Lactose Intolerance in Babies - Symptoms, Cure and Alternatives

ಮಗುವಿಗೆ ಸಾಕಾಗುವಷ್ಟು ಎದೆ ಹಾಲು ಇರದಿದ್ದರೆ ಪರ್ಯಾಯವಾಗಿ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿಗೆ, ಹಾಲುಣಿಸುವ ಸಮಾಲೋಚಕ/ಸಲಹೆಗಾರ(lactation consultant) ರನ್ನು ಭೇಟಿ ಮಾಡಿ ಆವರ ಸಲಹೆಯಂತೆ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಗುವಿಗೆ ತಾಯಿ ನೈಸರ್ಗಿಕವಾಗಿ ಎದೆಹಾಲು ಉತ್ಪತ್ತಿಯನ್ನು ಹೆಚ್ಚಿಸಿಕೊಳ್ಳುವುದು ಒಳಿತು.

ಸೋಯಾ ಪ್ರೋಟೀನ್ ಆಧಾರಿತ ಫಾರ್ಮುಲ ಹಾಲು ಅಥವಾ ಸಿಮಿಲಾಕ್ ಅನ್ನು ಹಾಲು ಆಧಾರಿತ ಫಾರ್ಮಾಲವನ್ನು ಆಯ್ಕೆ ಮಾಡಬಹುದು. ಇದರಲ್ಲಿ ಲ್ಯಾಕ್ಟೋಸ್ ಬದಲು ಕಾರ್ನ್ ಸಿರಪ್ ಘನವಸ್ತುಗಳನ್ನು ಉಪಯೋಗಿಸಲಾಗುತ್ತದೆ.

ಸಿಮಿಲಾಕ್ ಅನ್ನು ಇಲ್ಲಿ ಖರೀದಿಸಬಹುದು.

6. ಮಕ್ಕಳಿಗೆ ಹಾಲಿನ ಬದಲು ಬೇರೆ ಏನು ನೀಡಬಹುದು?

Lactose Intolerance in Babies - Symptoms, Cure and Alternatives

  • ಸೋಯಾ ಹಾಲು
  • ಮೊಸರು
  • ಯೀಸ್ಟ್ ಇಂದ ತೆಗೆದ ಹಾಲು
  • ಕಡಲೆ ಕಾಯಿಯಿಂದ ತೆಗೆದ ಹಾಲು
  • ಸೋಯಾ ಹಾಲಿನಿಂದ ಮಾಡಿದ ಮೊಸರು
  • ಬಾದಾಮಿ ಹಾಲು

7. ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ಪೂರೈಕೆ ಇಂತಹ ಶಿಶುಗಳಲ್ಲಿ ಹೇಗೆ ಮಾಡಬಹುದು?

Lactose Intolerance in Babies - Symptoms, Cure and Alternatives

 

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಕ್ಯಾಲ್ಸಿಯಂ ಅನ್ನು ಸರಿದೂಗಿಸುವ ಬಗ್ಗೆ ಚಿಂತೆ ಮಾಡುತ್ತಿದ್ದರೆ ನೀವು ಕೆಳಗೆ ನೀಡಿರುವ ಆಯ್ಕೆ ಉಪಯೋಗಿಸಬಹುದು.

  • ಬೇಳೆ/ಕಾಳುಗಳು
  • ಅವಕಾಡೊ/ಬೆಣ್ಣೆ ಹಣ್ಣು
  • ಮೊಟ್ಟೆ
  • ವಿಟಮಿನ್ ಡಿ ಪೂರಕಗಳನ್ನು ನೀಡಬಹುದು.

ಲ್ಯಾಕ್ಟೋಸ್ ಅನ್ನು ಹೊಂದಿರುವ ಆಹಾರಗಳನ್ನು/ಪದಾರ್ಥಗಳನ್ನು ಹೇಗೆ ಪರೀಕ್ಷಿಸಬೇಕು:

Lactose Intolerance in Babies - Symptoms, Cure and Alternatives

ನೀವು ಮನೆಯ ಸಾಮಾನು ಖರೀದಿಸುವಾಗ ಹಾಲು, ಹಾಲಿನ ಘನ ಪದಾರ್ಥಗಳು, ಕೊಬ್ಬಿನ ಹಾಲಿನ ಘನವಸ್ತುಗಳು, ಹಾಲಿನ ಪುಡಿ, ಲ್ಯಾಕ್ಟೋಸ್ ಮತ್ತು ಕೆನೆಗಾಗಿ ಲೇಬಲ್ ಅನ್ನು ಪರೀಕ್ಷಿಸಲು ಮರೆಯದಿರಿ. ಇವು ಲ್ಯಾಕ್ಟೋಸ್ ಅನ್ನು ಒಳಗೊಂಡಿರುತ್ತವೆ, ಇಂತಹ ಪದಾರ್ಥಗಳನ್ನು ತೆಗೆದುಕೊಳ್ಳಬೇಡಿ.

ನಮ್ಮ online store ನಲ್ಲಿ ನೀವು ಲ್ಯಾಕ್ಟೋಸ್ ಫ್ರೀ / ಮಿಲ್ಕ್ ಫ್ರೀ ಸಾವಯವ ಶಿಶು ಆಹಾರ ತೆಗೆದುಕೊಳ್ಳಬಹುದು.

Lactose Intolerance in Babies - Symptoms, Cure and Alternatives_kannada

 

ನಾವು ಲ್ಯಾಕ್ಟೋಸ್ ಸಹಿಷ್ಣು ಶಿಶುಗಳನ್ನು ಚೀಸ್ ಮತ್ತು ಮೊಸರುಗಳಿಂದ ದೂರವಿಡಬೇಕಾಗಿಲ್ಲ. ಚೀಸ್ ನಲ್ಲಿ ಲ್ಯಾಕ್ಟೋಸ್ ನ ಪ್ರಮಾಣ ತುಂಬಾ ಕಡಿಮೆ. ಮಕ್ಕಳು ಸಣ್ಣ ಪ್ರಮಾಣದಲ್ಲಿ ಸಹಿಸಿಕೊಳ್ಳಬಲ್ಲರು. ಚೀಸ್ ಅತ್ಯುತ್ತಮ ಆಹಾರ, ಮತ್ತು ಎಲ್ಲ ಮಕ್ಕಳು ಪಿಜ್ಜಾ, ಟೋಸ್ಟ್, ಅಥವಾ ಡಿಪ್ ನಲ್ಲಿ ಇದನ್ನು ಬಳಸಿದರೆ ಇಷ್ಟ ಪಟ್ಟು ತಿನ್ನುತ್ತಾರೆ!!

*ನಿಮ್ಮ ಮಕ್ಕಳ ವೈದ್ಯರು(Pediatrician) ಯಾವತ್ತೂ ನಿಮಗೆ ಉತ್ತಮ ಮಾರ್ಗದರ್ಶಿಗಳು*. ಈ ಲೇಖನ ಜ್ಞಾನದ ಉದ್ದೇಶಕ್ಕಾಗಿ ಮಾತ್ರ.

 8 ವಿವರ – ಲ್ಯಾಕ್ಟೋಸ್ ಅಸಹಿಷ್ಣುತೆ ಬಗ್ಗೆ ವೀಡಿಯೊ ನೋಡಿ

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love