Spread the love
  • 6
    Shares

ಮಕ್ಕಳಿಗೆ ಕೇರಳ ಬಾಳೆ ಕಾಯಿ ಪುಡಿ ಸಂಪೂರ್ಣ ನೈಸರ್ಗಿಕ ಹಾಗು ಪರಿಪೂರ್ಣವಾದ ಮೊದಲ ಆಹಾರವಾಗಿದೆ. ಕೇರಳದಲ್ಲಿ  ಇದಕ್ಕೆ  ಎಥಾಕ ಪೋಡಿ ಎಂಬ ಹೆಸರಿದೆ . ಕೇರಳ ಬಾಳೆಕಾಯಿ ಪುಡಿಯನ್ನು  ಹಸಿ  ಬಾಳೆಕಾಯಿ ಬಳಸಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾದ  ಆಹಾರವಾಗಿದೆ.  ಕೇರಳ ಬಾಳೆಕಾಯಿ ಪುಡಿಯನ್ನು  ಎಲ್ಲಾ ಋತುಗಳಲ್ಲಿ ಶಿಶುಗಳಿಗೆ ನೀಡಬಹುದು ಏಕೆಂದರೆ ಯಾವುದೇ ಕೆಮ್ಮು ಅಥವಾ ಶೀತ ಬರುವುದಿಲ್ಲ , ರೋಗ ನಿರೋಧಕ ಶಕ್ತಿಯನ್ನು ಹಾಗು ತೂಕ ಹೆಚ್ಚಿಸುತ್ತದೆ.

ಶಿಶುಗಳಿಗೆ ನೀಡಲಾಗುವ ಆಹಾರವು 100% ಶುದ್ಧ ಮತ್ತು ನೈಸರ್ಗಿಕವಾಗಿರಬೇಕು. ನೈಸರ್ಗಿಕ ಕೇರಳ ಬಾಳೆಕಾಯಿ ಪುಡಿ ಅಥವಾ ಕಣ್ಣನ್ ಕಾಯ ಪುಡಿಯಿಂದ ತಯಾರಿಸಲಾದ ಗಂಜಿ/ಅಂಬಲಿ  ಶಿಶುಗಳಿಗೆ ಸೂಕ್ತವಾದ ಆಹಾರ. ಮಕ್ಕಳು ಬಾಳೆಹಣ್ಣಿನ ರುಚಿಯನ್ನು  ಇಷ್ಟಪಡುತ್ತಾರೆ.

ಕೇರಳ  ಬಾಳೆಕಾಯಿ ಸಿಗದಿದ್ದರೆ ಅಥವಾ ಇದನ್ನು ಮನೆಯಲ್ಲಿಯೇ ಮಾಡಲು ಸಮಯದ ಅಭಾವ ವಿದ್ಧರೆ ,

ನಮ್ಮ ಅಂಗಡಿಯಲ್ಲಿ ಮನೆಯಲ್ಲಿ ತಯಾರಿಸಿದ ಸಾವಯವ ಕೇರಳ ಬನಾನಾ ಪೌಡರ್ ಅನ್ನು ನೀವು ಖರೀದಿಸಬಹುದು. “ಸ್ಟೋರ್ನಲ್ಲಿ  ಖರೀದಿಸಿದರು ಪ್ರೀತಿಯಿಂದ ಮಾಡಿದ ಅಮ್ಮನ ಕೈ ರುಚಿ ಇರುತ್ತದೆ”.

ಮಕ್ಕಳಿಗೆ ಕೇರಳ  ಬಾಳೆಕಾಯಿ ಪುಡಿ ಸಂಪೂರ್ಣ ನೈಸರ್ಗಿಕ ಹಾಗು ಪರಿಪೂರ್ಣವಾದ ಮೊದಲ ಆಹಾರವಾಗಿದೆ. ಕೇರಳದಲ್ಲಿ  ಇದಕ್ಕೆ  ಎಥಾಕ ಪೋಡಿ ಎಂಬ ಹೆಸರಿದೆ.

 

ಲೇಖಕಿ : ಕವಿತಾ ಪ್ರಶಾಂತ್

ಪಾಕವಿಧಾನ ಪ್ರಕಾರ: ತಿಂಡಿ, ರಾತ್ರಿಯ ಆಹಾರಕ್ಕೆ

ತಿನಿಸು: ಭಾರತೀಯ

 

ಪದಾರ್ಥಗಳು

ತಾಜಾ, ಹಸಿರು ಬಾಳೇಕಾಯಿ

 

ಮಾಡುವ ವಿಧಾನ

  • ನಿಮ್ಮ ಕೈಗೆ ಸಾಕಷ್ಟು ತೈಲವನ್ನು ಲೇಪಿಸಿಕೊಳ್ಳಿ
  • ಒಂದು ಚಾಕುವಿನಿಂದ ಉದ್ದವಾಗಿ 4-5 ಸೀಳುಗಳನ್ನು ಮಾಡಿಕೊಳ್ಳಿ
  • ಸಿಪ್ಪೆ ತೆಗೆದುಕೊಳ್ಳಿ
  • ಸ್ಲೈಸ್ನರ್ ಬಳಸಿ ಸಾಧ್ಯವಾದಷ್ಟು ತೆಳುವಾದ ಬಾಳೆಕಾಯಿಗಳನ್ನು ಸ್ಲೈಸ್ ಮಾಡಿ
  • 2-3 ದಿನಗಳ ಕಾಲ ಬಿಸಿಲಿನಲ್ಲಿ ಗರಿಗರಿಯಾಗುವವರೆಗೂ  ಶುಷ್ಕಗೊಳ್ಳುವತನಕ ಒಣಗಿಸಬೇಕು.
  • ಒಣಗಿಧ ಬಾಳೆಕಾಯಿಗಳನ್ನು ಪುಡಿ ಮಾಡಿಕೊಂಡು 6 ತಿಂಗಳ ತನಕ ಬಳಸಬಹುದು.
  • ಬಾಳೆಕಾಯಿ ಪುಡಿ , ಹಾಲು, ತುಪ್ಪ  ಅಥವಾ ಬೆಲ್ಲವನ್ನು ಬಳಸಿ ಗಂಜಿ ಮಾಡಿ.

 

ಕೇರಳ ಬಾಳೆಕಾಯಿ  ಪುಡಿ ಮಾಡುವ ಮೊದಲು ನೆನಪಿಡುವ ವಿಷಯಗಳು

 

ಬಾಳೆಕಾಯಿಗಳನ್ನು ಒಣಗಿಸುವ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಯಾವಾಗಲೂ ಸಣ್ಣ ಪ್ರಮಾಣದಲ್ಲಿ  ತಯಾರಿಸಿಕೊಂಡರೆ , ಆದ್ದರಿಂದ ಪುಡಿ ದೀರ್ಘಕಾಲ ತಾಜಾ ಆಗಿರುತ್ತದೆ.

ನೀವು ಫ್ರಿಜ್ನಲ್ಲಿ  ಏರ್ ಟೈಟ್ ಡಬ್ಬದಲ್ಲಿ  ಶೇಖರಿಸಿಡಬಹುದು ಮತ್ತು 6 ತಿಂಗಳ ಕಾಲ  ಸಂಗ್ರಹಿಸಬಹುದು.

 

ಕೇರಳ ಬಾಳೆಕಾಯಿ ಪುಡಿಯ  ಪ್ರಯೋಜನಗಳು:

  • ಸುಲಭವಾಗಿ ಜೀರ್ಣವಾಗುವ  ಆಹಾರ, ಕೆಮ್ಮು ಅಥವಾ ಶೀತ ಬರುವುದಿಲ್ಲ .
  • ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಾಗುವುದು ಸಹಾಯ ಮಾಡುತ್ತದೆ.
  • ಅಜೀರ್ಣ ಚಿಕಿತ್ಸೆಗಾಗಿ ಬಳಸುತ್ತಾರೆ.
  • ಆಹಾರದ ನಾರಿನಂಶ  ಹೆಚ್ಚಿರುತ್ತದೆ.
  • ಕಾರ್ಬೋಹೈಡ್ರೇಟ್ಗಳು, ಖನಿಜಗಳು ಮತ್ತು ಜೀವಸತ್ವಗಳೊಂದಿಗೆ ತುಂಬಿರುತ್ತದೆ.

 

ಕೇರಳ ಬಾಳೆಕಾಯಿ ಪುಡಿಯ ಗಂಜಿ ತಯಾಸುವ  (ಇಥಾಕ ಪಾಡಿ ಗಂಜಿ) ವಿಧಾನ:

ಪದಾರ್ಥಗಳು

ಹಸಿ  ಬಾಳೆಕಾಯಿ ಪೌಡರ್ – 2 ಟೀ ಸ್ಪೂನ್

ನೀರು / ಹಾಲು – 1 ಕಪ್

ತುಪ್ಪ – 1 ಟೀಸ್ಪೂನ್ (ಬೇಕಾದರೆ )

ಜೈವಿಕ ಬೆಲ್ಲ ಪೌಡರ್ – ಬೇಕಾದರೆ  (1 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ )

 

ವಿಧಾನ

೧ . ನೀರು ಅಥವಾ ಹಾಲಿನೊಂದಿಗೆ 2 ಚಮಚ ಬಾಳೆಕಾಯಿ ಪುಡಿ ಸೇರಿಸಿ,  ಗಂಟಿಲ್ಲದೆ  ಮಿಶ್ರಣ ಮಾಡಿ (1 ಕಪ್)

೨   ಈ ಮಿಶ್ರಣವನ್ನು ಕಡಿಮೆ ಜ್ವಾಲೆಯ ನಿರಂತರವಾಗಿ ಬಿಸಿ ಮಾಡಿ. ಒಮ್ಮೆ ಕುದಿಯಲು ಆರಂಭವಾದ ಕೂಡಲೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ.

೩ .  ಪ್ಯಾನ್ನ ನಲ್ಲಿ ಅಂಚು ಬಿಡುತ್ತ ಬಂದಾಗ , ಗಂಜಿ ಚೆನ್ನಾಗಿ ಬೆಂದಿದೆ  ಎಂದರ್ಥ.

೪ .  ಒಲೆ ಆರಿಸಿ ಸಿದ್ಧ ವಿರುವ ಗಂಜಿಗೆ   1/2 ಟೀಸ್ಪೂನ್ ಶುದ್ಧ ತುಪ್ಪ ಸೇರಿಸಿ, ಕೇರಳ ಬಾಳೆಕಾಯಿ ಗಂಜಿ ಬಳಸಲು ಸಿದ್ಧವಾಗಿದೆ

ಕಾರ್ಯನಿರತರಾಗಿದ್ದರು ನಿಮ್ಮ ಮಕ್ಕಳಿಗೆ  ಒಂದು ಉತ್ತಮ ಮನೆಯಲ್ಲಿ  ಶುದ್ಧವಾಗಿ ತಯಾರಿಸಿರುವ   ಉತ್ಪನ್ನಗಳನ್ನು ನೀಡಲು ಬಯಸುವೆವು  ?

 

ಫ್ರೆಶ್ ಬೇಬಿ ಫುಡ್ಸ್, ಎಫ್ಎಸ್ಎಸ್ಎಐ ಸರ್ಟಿಫೈಡ್ ಮತ್ತು ಪೋಷಕರು ಖರೀದಿಸಿ ಉಪಯೋಗಿಸಿರುವ ವಿಶ್ವಾಸಾರ್ಹ ಉತ್ಪನ್ನ ತಯಾರಿಸುತ್ತೇವೆ.

( ಸಂರಕ್ಷಕ ಮತ್ತು ಸೇರ್ಪಡೆ ಮುಕ್ತವಾಗಿರುತ್ತದೆ )

ಸಾವಯವ ಬೇಬಿ ಫುಡ್ಸ್ ಖರೀದಿ

 


Spread the love
  • 6
    Shares