Spread the love

ಮಕ್ಕಳಿಗೆ ತ್ವರಿತ ಸೋಯಾ ನೂಡಲ್ಸ್ | ಮಕ್ಕಳಿಗೆ ಸೋಯಾವನ್ನು ಪರಿಚಯಿಸುವುದು ಹೇಗೆ,  ಖಂಡಿತವಾಗಿಯೂ ವಯಸ್ಕರು ಹೊಸ ಆಹಾರ ಮತ್ತು ಹೊಸ ರೂಪಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ, ಆದರೆ ಮಕ್ಕಳು ಸುಲಭವಾಗಿ ಸ್ವೀಕರಿಸಲು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುವುದು. ಹೊಸ ಸೋಯಾ ನೂಡಲ್ಸ್ ಅನ್ನು ಸೋಯಾಬೀನ್ ಹಿಟ್ಟನ್ನು ಬಳಸಿ ತಯಾರಿಸಲಾಗಿದೆ.  ಸಸ್ಯಾಹಾರಿಗಳಿಗೆ ಪ್ರೋಟೀನ್ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಚೆನ್ನಾಗಿ ಯೋಚಿಸಿ ತಯಾರಿಸಲಾಗಿರುವ  ಉತ್ಪನ್ನ. ಪ್ರೋಟೀನ್ ಅಗತ್ಯಗಳನ್ನು ಪೂರೈಸುವಲ್ಲಿ ಸೋಯಾ ಸಹಾಯಕ ಮತ್ತು ತರಕಾರಿಗಳು ಬಳಸಿ ಮಾಡಿರುವ ಸಮತೋಲಿತ  ಆಹಾರ ವರದಾನವಾಗಿದೆ.

ತ್ವರಿತ ಸೋಯಾ ನೂಡಲ್ಸ್ | Instant Soya Noodles recipe in Kannada

INSTANT SOYA NOODLES WITH VEGETABLES for Toddlers, Kids & Family Benefits of soya noodles with veggies for kids

ತರಕಾರಿಗಳ ಜೊತೆ ಬೇಯಿಸಿದ ಸೋಯಾ ನೂಡಲ್ಸ್ ಶಕ್ತಿಯುತ ಪ್ರೋಟೀನ್ ಭರಿತವಾದ ನೂಡಲ್ಸ್ . ದಿನಕ್ಕೆ ಬೇಕಾಗುವ ಪೋಷಕಾಂಶಗಳು ಮತ್ತು ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. ಸಿರಿಧಾನ್ಯಗಳ ಸಂಯೋಜನೆಯಿಂದ  ನಾರಿನ ಅಂಶ  ಮತ್ತು ಪೌಷ್ಟಿಕಾಂಶ ದೊರೆಯುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ಹಸಿವನ್ನು ಪೂರೈಸುತ್ತದೆ. 1 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ತ್ವರಿತ ಸೋಯಾ ನೂಡಲ್ಸ್ | Instant Soya Noodles recipe in Kannada

ತ್ವರಿತ ಸೋಯಾ ನೂಡಲ್ಸ್ | Instant Soya Noodles recipe in Kannada

ಬೆಳಗಿನ ಉಪಾಹಾರವನ್ನು ಹೆಚ್ಚು ಆಕರ್ಷಕ ಮತ್ತು ರುಚಿಯಾಗಿ ಮಾಡಲು ಹಾಗೂ ಮಕ್ಕಳ ದೈನಂದಿನ ಆಹಾರ ಪದ್ಧತಿಯಲ್ಲಿ ಸ್ವತಂತ್ರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬಹುದು. ತರಕಾರಿಗ ಜೊತೆ ಪೌಷ್ಟಿಕವಾಗಿರುತ್ತದೆ. ಸೋಯಾ ನೂಡಲ್ಸ್ ಅನ್ನು ಕೈಯಲ್ಲಿ ಹಿಡಿದು ತಿನ್ನುವ ಆಹಾರವಾಗಿ ಪರಿಚಯಿಸಬಹುದು. ನೈಸರ್ಗಿಕವಾಗಿ ವರ್ಣಮಯವಾಗಿ ಮತ್ತು ಸುಲಭವಾಗಿ ಸ್ವೀಕರಿಸಲು ಪೌಷ್ಠಿಕಾಂಶವನ್ನು ನೀಡುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಬೆಳಗಿನ ಉಪಾಹಾರ, ಸಂಜೆ ತಿಂಡಿ,
ತಿನಿಸು:ಭಾರತೀಯ

ಸಾಮಗ್ರಿಗಳು

 1. ಸೋಯಾ ನೂಡಲ್ಸ್ ಮತ್ತು ಮಸಾಲೆ ಪುಡಿ Soya Noodles and Tastemaker pack
 2. ಈರುಳ್ಳಿ - ½ ಕತ್ತರಿಸಿದ Onion – ½ chopped
 3. ಕ್ಯಾರೆಟ್ – ಸಣ್ಣದಾಗಿ ಹೆಚ್ಚಿರುವ Carrot – Small chopped
 4. ಬಟಾಣಿ - ½ ಕಪ್ Peas – ½ cup
 5. ಹಸಿರು ಬೀನ್ಸ್ - 10 Green Beans – 10 numbers chopped
 6. ತುಪ್ಪ / ಎಣ್ಣೆ Ghee/ Oil

ವಿಧಾನ

 1. 180 ಗ್ರಾಂ ಸೋಯಾ ನೂಡಲ್ಸ್ (ಒಂದು ಪ್ಯಾಕ್ ಉಪಯೋಗಿಸಿ )  ಕನಿಷ್ಠ 3 ನಿಮಿಷಗಳ ಕಾಲ ಸುಮಾರು 1 ಲೀಟರ್ ನೀರಿನಲ್ಲಿ ಬೇಯಿಸಿ. ತದನನತರ ಬೆಂದಿರುವ ಸೋಯಾ ನೂಡಲ್ಸ್ ಅನ್ನು  ನೀರಿನಿಂದ ಬೇರ್ಪಡಿಸಿ (ಶೋಧನೆ ಮಾಡಿ )ಪಕ್ಕಕ್ಕೆ ಇಟ್ಟುಕೊಳ್ಳಿ.
 2. ಪ್ಯಾನ್ ಅಥವಾ ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ – ತರಕಾರಿಗಳು ಹಾಕಿ, ಕತ್ತರಿಸಿದ ಈರುಳ್ಳಿ, ಹಸಿರು ಬೀನ್ಸ್, ಕತ್ತರಿಸಿದ ಕ್ಯಾರೆಟ್, ಬಟಾಣಿ ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು (ಬ್ರೊಕೊಲಿ ಮತ್ತು ಅಣಬೆಗಳಂತಹ ವೈಯಕ್ತಿಕ ಆಯ್ಕೆಯ ಇತರ ತರಕಾರಿಗಳನ್ನು ಬಳಸಬಹುದು ). ನೂಡಲ್ಸ್ ಪಾತ್ರೆಯಲ್ಲಿ ಮಸಾಲೆಗಳನ್ನು ಹಾಕಿ ರುಚಿಯನ್ನು ನೀಡಿ. ಚೆನ್ನಾಗಿ ಮಿಶ್ರಣ ಮಾಡಿ.
 3. ಮಿಶ್ರ ತರಕಾರಿಗಳ ಹುರಿಯಲು ಪ್ಯಾನ್‌ಗೆ ಪ್ರತ್ಯೇಕವಾಗಿ ಬೇಯಿಸಿದ ಸೋಯಾ ನೂಡಲ್ಸ್ ಹಾಕಿ, ಮಿಶ್ರಣ ಮಾಡಿ ಎಲ್ಲ ಮಸಾಲೆಗಳು ಚೆನ್ನಾಗಿ ಹೊಂದಿಕೊಳ್ಳುವಂತೆ  ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ತರಕಾರಿಗಳನ್ನು ಸೋಯಾ ನೂಡಲ್ಸ್‌ನೊಂದಿಗೆ ಚೆನ್ನಾಗಿ ಬೆರಸಿದ ನಂತರ ಬಿಸಿ ಬಿಸಿಯಾಗಿ ತಿನ್ನಲು ನೀಡಿ. .ತರಕಾರಿಗಳ ಜೊತೆ ಸೋಯಾ ನೂಡಲ್ಸ್ ಆರೋಗ್ಯಕರವಾದ ತಿಂಡಿಯ ಜೊತೆ  ದಿನವನ್ನು ಪ್ರಾರಂಭ ಮಾಡಲು ಪ್ರೋಟೀನ್ ಭರಿತ ಉಪಹಾರ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ತ್ವರಿತ ಸೋಯಾ ನೂಡಲ್ಸ್ | Instant Soya Noodles recipe in Kannada

INSTANT SOYA NOODLES WITH VEGETABLES for Toddlers, Kids & Family How to introduce soya for kids

ಸೋಯಾ ನೂಡಲ್ಸ್‌ನ ಪ್ರಯೋಜನಗಳು

 1. ಮೊಟ್ಟೆ, ಗೋಧಿ ಮತ್ತು ಹಾಲುಗಿಂತ ಪೌಷ್ಟಿಕವಾದ ಆಹಾರ. ಅಧಿಕ  ಪ್ರೋಟೀನ್ ಅಂಶ ಸಿಗುವುದು. 
 2. ವಿಟಮಿನ್ ಬಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುತ್ತದೆ. 
 3. ಅವುಗಳಲ್ಲಿರುವ ಪ್ರೋಟೀನ್ ಸರಿಯಾದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. 
 4. ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿ ದೊರೆಯುವುದು. 
 5. ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳು ಇರುವುದರಿಂದ ಚಿಕ್ಕ ಮಕ್ಕಳಲ್ಲಿ  ಸ್ಥೂಲಕಾಯತೆ ತಪ್ಪಿಸಲು ಉತ್ತಮ ಆಹಾರ. 
 6. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ.

ತರಕಾರಿಗಳ ಸೇವನೆಯಿಂದಾಗುವ  ಲಭಾಗಳು :

 1. ಗ್ರೀನ್ಸ್ ಬೀನ್ಸ್, ಕ್ಯಾರೆಟ್, ಈರುಳ್ಳಿ ಮತ್ತು ಬಟಾಣಿ ಪ್ರೋಟೀನ್ ಮತ್ತು ವಿಟಮಿನ್ ಹೊಂದಿರುವ ಸಮೃದ್ಧ ತರಕಾರಿಗಳು, ಮತ್ತು ಖನಿಜಗಳು ಪೌಷ್ಠಿಕಾಂಶದ ದೈನಂದಿನ ಅವಶ್ಯಕತೆಗಳನ್ನು ಪೂರೈಸುವುದು.  ಇದು ಆರೋಗ್ಯಕರ ಪೌಷ್ಠಿಕಾಂಶವನ್ನು ನೀಡುತ್ತದೆ.
 2. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. 

ಸೂಚನೆ:

 • ಹೆಚ್ಚಿನ ಫೈಬರ್ ಇರುವ ಪ್ರೋಟೀನ್ ಸಮೃದ್ಧ ಆಹಾರವಾಗಿದೆ. 

ತ್ವರಿತ ಸೋಯಾ ನೂಡಲ್ಸ್ | Instant Soya Noodles recipe in Kannada

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love