Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Read this article in

ಜುಲಾಯಿ 16th, 2018 / Leave a Comment
Spread the love
  • 24
    Shares

Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Instant Cheese Sooji Rava Uttapam for Toddlers and Kids in Hindi kannada

ರವೆ ಉತ್ತಪಂ ದಕ್ಷಿಣ ಭಾರತದ ವಿವಿಧ ದೋಸೆಯ ಬಗೆಯಲ್ಲಿ ಒಂದಾಗಿದೆ. ದೋಸೆ ತೆಳ್ಳಗೆ ಗರಿಗರಿಯಾಗಿರುತ್ತದೆ ಮತ್ತು ಉತ್ತಪಂ ದಪ್ಪ ಪ್ಯಾನ್ ಕೇಕ್ ತರಹ ಮೃದುವಾಗಿರುತ್ತದೆ. ರವೆ ಬಳಸಿಕೊಂಡು ತ್ವರಿತವಾಗಿ ಉತ್ತಪಂ ಮಾಡಬಹುದು. ಬೆಳಗ್ಗೆ ಅಥವಾ ಸಂಜೆ ಮಾಡಬಹುದಾದ ಉತ್ತಮ ಉಪಹಾರದ ಆಯ್ಕೆ. ಕಡಿಮೆ ಸಮಯದಲ್ಲಿ ತ್ವರಿತ ಹಾಗು ಸುಲಭವಾಗಿ ಮಾಡಬಹುದಾದ ಉಪಹಾರ. ಶಾಲೆಗೆ ಸಂಜೆ ಸ್ನ್ಯಾಕ್ ಗೆ ಒಳ್ಳೆಯ ಆಯ್ಕೆ.

ಈ ಪಾಕವಿಧಾನದಲ್ಲಿ ಮಕ್ಕಳಿಗೆ ಇಷ್ಟವಾಗುವ ತರಕಾರಿಗಳನ್ನು ಉತ್ತಪಂ ಗೆ ಹಾಕಬಹುದು. ಪೌಷ್ಠಿಕಾಂಶವನ್ನು ಹೆಚ್ಚಿಸಲು ಚೀಸ್ ಅಥವಾ ಪನೀರ್ ಅನ್ನು ತುರಿದು ಹಾಕಬಹುದು.ದಪ್ಪಮೆಣಸಿನಕಾಯಿ, ಎಲೆಕೋಸು ಅಥವಾ ಮಗುವಿನ ನೆಚ್ಚಿನ ಯಾವುದೇ ತರಕಾರಿಯನ್ನು ಹಾಕಸಬಹುದು.

ಹಲವಾರು ಪ್ಯಾನ್ ಕೇಕ್ ಪಾಕವಿಧಾನಗಳನ್ನು  ನಮ್ಮ ಬ್ಲಾಗ್ ನಲ್ಲಿ ಪ್ರಸ್ತುತ ಪಡಿಸಿದ್ದೇನೆ . ಅವುಗಳನ್ನು ಪ್ರಯತ್ನಿಸಲು ಹಿಂಜರಿಯಬೇಡಿ.

  1. ಓಟ್ಸ್ ಪ್ಯಾನ್ ಕೇಕ್
  2. ಓಟ್ಸ್ ದೋಸೆ
  3. ರಾಗಿ ಪ್ಯಾನ್ ಕೇಕ್ ದೋಸೆ
  4. ಪಾಲಾಕ್ ಓಟ್ಸ್ ದೋಸೆ
  5. ಸಿಹಿ ಗೆಣಸು ದೋಸೆ
  6. ಚಾಕೊಲೇಟ್ ಪ್ಯಾನ್ ಕೇಕ್
  7. ಗೋಧಿ ಪ್ಯಾನ್ ಕೇಕ್

Video: Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Kannada Subscribe Button TOTS AND MOMS

Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Instant ಚೀಸ್ ರವೆ ಉತ್ತಪಂ

ರವೆ ಬಳಸಿ ಮಾಡುವ ಸುಲಭವಾದ ತ್ವರಿತ ಉಪಹಾರ ರವೆ ಉತ್ತಪಂ. ಉತ್ತಪಂಗೆ ತರಕಾರಿಗಳನ್ನು ಹಾಕಿ ತಯಾರಿಸಿರುವುದರಿಂದ ಪೌಷ್ಟಿಕ ಹಾಗು ರುಚಿಕರವಾಗಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಉಪಹಾರಕ್ಕೆ ಒಳ್ಳೆಯ ಆಯ್ಕೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ತಿಂಡಿ, ಸ್ನಾಕ್ಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ರವೆ (ಚಿರೋಟಿ) - 1 ಕಪ್
  2. ಗಟ್ಟಿ ಮೊಸರು - 3/4 ಕಪ್
  3. ನೀರು ಬೇಕಾಗುವಷ್ಟು
  4. ಚೀಸ್  - ಬೇಕಾಗುವಷ್ಟು  
  5. ಕ್ಯಾರಟ್- 1 ತುರಿದಿರುವ
  6. ಟೊಮೇಟೊ - 1 ಹೆಚ್ಚಿರುವುದು
  7. ಈರುಳ್ಳಿ - 1
  8. ಮೆಣಸಿನಕಾಯಿ - 2
  9. ಶುಂಟಿ ಪೇಸ್ಟ್ - 1/2 tsp
  10.  ಉಪ್ಪು – ರುಚಿಗೆ ತಕ್ಕಷ್ಟು

ವಿಧಾನ

  1. ಒಂದು ದೊಡ್ಡ ಬಟ್ಟಲಿಗೆ ಗೆ ರವೆ / ಚಿರೋಟಿ ರವೆ ಹಾಕಿ ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ.
  2. ಚೆನ್ನಾಗಿ ಗಂಟಿಲ್ಲದೆ ಸ್ವಲ್ಪ ನೀರು ಬೇಕಾದರೆ ಸೇರಿಸಿ ಮಿಶ್ರಣ ಮಾಡಿ. ಹಿಟ್ಟಿಗೆ ಜಾಸ್ತಿ ನೀರು ಹಾಕಿ ತೆಳು ಮಾಡಬೇಡಿ. ಮುಚ್ಚಳ ಮುಚ್ಚಿ 15-20 ನಿಮಿಷ ನೆನೆಯಲು ಬಿಡಿ.
  3. 20 ನಿಮಿಷದ ನಂತರ ದೋಸೆ / ಪ್ಯಾನ್ ಕೇಕ್ ಹಿಟ್ಟಿನ ಹದಕ್ಕೆಬೇಕಾಗುವಷ್ಟು ನೀರು ಸೇರಿಸಿ ಗಟ್ಟಿಯಾಗಿ ಬ್ಯಾಟರ್ ಮಾಡಿಕೊಳ್ಳಿ . ಬ್ಯಾಟರ್ / ದೋಸೆ ಹಿಟ್ಟು ನೀರಾಗಿರಬಾರದು.ದಪ್ಪ ರವ ಉಪಯೋಗಿಸಿದರೆ ಬ್ಲೆಂಡರ್ ಜಾರ್ ಗೆ ಹಾಕಿ ರುಬ್ಬಿಕೊಂಡು ಮಿಶ್ರಣ ನಯಾವಾಗಿ ಮಾಡಿಕೊಳ್ಳಿ.
  4. ಮತ್ತೊಂದು ಬಟ್ಟಲಿಗೆ ದೋಸೆ ಮೇಲೆ ತರಕಾರಿಗಳನ್ನು ಹಾಕಲು ಕ್ಯಾರಟ್, ಟೊಮೇಟೊ,ಈರುಳ್ಳಿ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ.
  5. ತವ/ಕಾವಲಿ  ಬಿಸಿ ಮಾಡಿ ಒಂದು ಸೌಟು ಬ್ಯಾಟರ್ / ಹಿಟ್ಟನ್ನು ಹಾಕಿ ದಪ್ಪಕ್ಕೆ ಹರಡಿ ಮೇಲೆ ತರಕಾರಿ ಮಿಶ್ರಣ ಹಾಕಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ.
  6. ಮುಚ್ಚಳ ಮುಚ್ಚಿ ರವೆ ಉತ್ತಪಂ ಬೇಯಿಸಿ. ಸ್ವಲ್ಪ ಬೆಂದ ನಂತರ ಮೊಗಚಿ ಎರಡು ಕಡೆ ಬೇಯಿಸಿ.
  7. ಮತ್ತೆ ದೋಸೆ ಮೊಗಚಿ ಚೀಸ್ ತುರಿದು ಹಾಕಿ. ಬಿಸಿ ಬಿಸಿ ದೋಸೆ ಉತ್ತಪಂ ತಯಾರಾಗಿದೆ.
  8. ತ್ವರಿತ ರವೆ ಉತ್ತಪಂ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Instant Cheese Sooji Rava Uttapam for Toddlers and Kids in Hindi kannada

ರವೆ ಉತ್ತಪಂ ಮಾಡಲು ಬೇಕಾಗುವ ಸಾಮಗ್ರಿಗಳು :

  1. ರವೆ (ಚಿರೋಟಿ) – 1 ಕಪ್
  2. ಗಟ್ಟಿ ಮೊಸರು – 3/4 ಕಪ್
  3. ನೀರು ಬೇಕಾಗುವಷ್ಟು
  4. ಚೀಸ್  – ಬೇಕಾಗುವಷ್ಟು  
  5. ಕ್ಯಾರಟ್– 1 ತುರಿದಿರುವ
  6. ಟೊಮೇಟೊ – 1 ಹೆಚ್ಚಿರುವುದು
  7. ಈರುಳ್ಳಿ – 1
  8. ಮೆಣಸಿನಕಾಯಿ – 2
  9. ಶುಂಟಿ ಪೇಸ್ಟ್ – 1/2 tsp
  10. ಉಪ್ಪು ರುಚಿಗೆ ತಕ್ಕಷ್ಟು

ರವೆ ಉತ್ತಪಂ ಮಾಡುವ ವಿಧಾನ :

1. ಒಂದು ದೊಡ್ಡ ಬಟ್ಟಲಿಗೆ ಗೆ ರವೆ / ಚಿರೋಟಿ ರವೆ ಹಾಕಿ ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ.

Instant Sooji Rava Uttapam Recipe

2. ಚೆನ್ನಾಗಿ ಗಂಟಿಲ್ಲದೆ ಸ್ವಲ್ಪ ನೀರು ಬೇಕಾದರೆ ಸೇರಿಸಿ ಮಿಶ್ರಣ ಮಾಡಿ. ಹಿಟ್ಟಿಗೆ ಜಾಸ್ತಿ ನೀರು ಹಾಕಿ ತೆಳು ಮಾಡಬೇಡಿ. ಮುಚ್ಚಳ ಮುಚ್ಚಿ 15-20 ನಿಮಿಷ ನೆನೆಯಲು ಬಿಡಿ.

Instant Sooji Rava Uttapam Recipe

3. 20 ನಿಮಿಷದ ನಂತರ ದೋಸೆ / ಪ್ಯಾನ್ ಕೇಕ್ ಹಿಟ್ಟಿನ ಹದಕ್ಕೆಬೇಕಾಗುವಷ್ಟು ನೀರು ಸೇರಿಸಿ ಗಟ್ಟಿಯಾಗಿ ಬ್ಯಾಟರ್ ಮಾಡಿಕೊಳ್ಳಿ . ಬ್ಯಾಟರ್ / ದೋಸೆ ಹಿಟ್ಟು ನೀರಾಗಿರಬಾರದು.ದಪ್ಪ ರವ ಉಪಯೋಗಿಸಿದರೆ ಬ್ಲೆಂಡರ್ ಜಾರ್ ಗೆ ಹಾಕಿ ರುಬ್ಬಿಕೊಂಡು ಮಿಶ್ರಣ ನಯಾವಾಗಿ ಮಾಡಿಕೊಳ್ಳಿ.

Instant Sooji Rava Uttapam Recipe

4. ಮತ್ತೊಂದು ಬಟ್ಟಲಿಗೆ ದೋಸೆ ಮೇಲೆ ತರಕಾರಿಗಳನ್ನು ಹಾಕಲು ಕ್ಯಾರಟ್, ಟೊಮೇಟೊ,ಈರುಳ್ಳಿ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ.

Instant Sooji Rava Uttapam Recipe

5. ತವ/ಕಾವಲಿ  ಬಿಸಿ ಮಾಡಿ ಒಂದು ಸೌಟು ಬ್ಯಾಟರ್ / ಹಿಟ್ಟನ್ನು ಹಾಕಿ ದಪ್ಪಕ್ಕೆ ಹರಡಿ ಮೇಲೆ ತರಕಾರಿ ಮಿಶ್ರಣ ಹಾಕಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ.

Instant Sooji Rava Uttapam Recipe

6. ಮುಚ್ಚಳ ಮುಚ್ಚಿ ರವೆ ಉತ್ತಪಂ ಬೇಯಿಸಿ. ಸ್ವಲ್ಪ ಬೆಂದ ನಂತರ ಮೊಗಚಿ ಎರಡು ಕಡೆ ಬೇಯಿಸಿ.

Instant Sooji Rava Uttapam Recipe

7. ಮತ್ತೆ ದೋಸೆ ಮೊಗಚಿ ಚೀಸ್ ತುರಿದು ಹಾಕಿ. ಬಿಸಿ ಬಿಸಿ ದೋಸೆ ಉತ್ತಪಂ ತಯಾರಾಗಿದೆ.

Instant Sooji Rava Uttapam Recipe

8. ತ್ವರಿತ ರವೆ ಉತ್ತಪಂ ಸಿದ್ಧವಾಗಿದೆ.

Instant ಚೀಸ್ ರವೆ ಉತ್ತಪಂ – Instant Cheese Rava Uttapam in Kannada

Instant Cheese Sooji Rava Uttapam for Toddlers and Kids in Hindi kannada

ಸೂಚನೆಗಳು  

  1. ಉತ್ತಪಂ ಅನ್ನು ದೋಸೆ ಹಿಟ್ಟಿನಿಂದ ಕೂಡ ಮಾಡಬಹುದು.
  2. ಪೌಷ್ಠಿಕಾಂಶ ಹೆಚ್ಚಿಸಲು ಚೀಸ್ ಅಥವಾ ಪನೀರ್ ತುರಿದು ಹಾಕಬಹುದು.
  3. ನಿಮಗೆ ಬೇಕಾದ ಇಷ್ಟವಾಗುವ ತರಕಾರಿ ಉಪಯೋಗಿಸ ಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 24
    Shares

ಈ ಲೇಖನವನ್ನು ಕೆಳಗಿನ ವರ್ಗಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ಪೋಸ್ಟ್ಗಳನ್ನು ಓದಲು ವಿಭಾಗಗಳನ್ನು ಅನುಸರಿಸಿ

Leave a Reply

Rate this recipe: *

Your email address will not be published. Required fields are marked *

Share This