Spread the love
  • 2
    Shares

ಓಟ್ಸ್ ಮತ್ತು ಗೋಧಿ ನುಚ್ಚು ಸರಿ | Instant Oats & Broken Wheat Porridge in Kannada

Instant Broken Wheat Porridge for Babies Daliya sari nucchu godi shishu ahara

ಓಟ್ಸ್ ಫೈಬರ್ನಲ್ಲಿ ಸಮೃದ್ಧವಾಗಿರುವ ಜೀರ್ಣಕಾರಿ ಧಾನ್ಯ. ಇದು ವಿಶ್ವದಾದ್ಯಂತ ಶಿಶುಗಳಿಗೆ ಉತ್ತಮ ಘನ ಆಹಾರದ ಆಯ್ಕೆಯಾಗಿದೆ. ಗೋಧಿ ನುಚ್ಚು ಶುದ್ಧ ರೂಪದಲ್ಲಿರುವುದು ಹಾಗು ಯಾವುದೇ ಹೆಚ್ಚು ಸಂಸ್ಕರಣೆಗೆ ಒಳಗಾಗುವುದಿಲ್ಲ. ಶಿಶುಗಳಿಗೆ ಪೌಷ್ಟಿಕವಾದ ಈ ಎರಡು ಪ್ರಮುಖ ಪದಾರ್ಥಗಳೊಂದಿಗೆ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ತಯಾರಿಸಿದ್ದೇವೆ. ಒಂದು ವರ್ಷದ ತನಕ ಉಪ್ಪು ಅಥವಾ ಸಕ್ಕರೆ ಅಗತ್ಯವಿರುವುದಿಲ್ಲ. ಶಿಶುಗಳಿಗೆ ರುಚಿಗೆ ಜೀರಿಗೆ ಮತ್ತು ಮೆಣಸು ಪುಡಿ ಸೇರಿಸಿದ್ದೇವೆ. ಘನ ಆಹಾರವನ್ನು ಪರಿಚಯಿಸಿದ ನಂತರ ಇದನ್ನು 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.

ನಮ್ಮ ಬ್ಲಾಗ್ನಲ್ಲಿ ನಾವು ಹೆಚ್ಚು ತ್ವರಿತವಾದ ಆಹಾರ ಮಿಶ್ರಣಗಳನ್ನು ಮಾಡಿದ್ದೇವೆ. ತ್ವರಿತ ಮಿಶ್ರಣಗಳು ಅಥವಾ ಬೇಯಿಸದೆ ಮನೆಯಲ್ಲಿ ನೀವು ಮಾಡಬಹುದಾದ ತ್ವರಿತ ಖಿಚಡಿ ಮಿಕ್ಸ್, ಇನ್ಸ್ಟಂಟ್ ಸೋಯಾ ಅವಲಕ್ಕಿ ಸೇರೆಲಾಕ್, ಇನ್ಸ್ಟಂಟ್ ಮಖಾನಾ ಖಿಚಡಿ ಮತ್ತು ತ್ವರಿತ ಅವಲಕ್ಕಿ ಹಣ್ಣು ಸರಿ ಮೊದಲಾದವು ನಮ್ಮ ಈ ಬ್ಲಾಗ್ ನಲ್ಲಿ ಇವೆ.  ನಮ್ಮ ಜೈವಿಕ ಶಿಶು ಆಹಾರ – TOTS AND MOMS Store ನಲ್ಲಿ ಕೂಡ ನೀವು ತ್ವರಿತ ಶಿಶು ಆಹಾರ ಮಿಕ್ಸ್ ತೆಗೆದುಕೊಳ್ಳಬಹುದು. ನಮ್ಮಲ್ಲಿ 12 ವಿಭಿನ್ನ ವಿಧದ ತ್ವರಿತವಾಗಿ ಮಾಡಬಹುದಾದ ಸಿದ್ಧವಿರುವ ಶಿಶು ಆಹಾರಗಳ ಮಿಶ್ರಣಗಳು ಲಭ್ಯವಿದೆ.

Video: ಓಟ್ಸ್ ಮತ್ತು ಗೋಧಿ ನುಚ್ಚು ಸರಿ | Instant Oats & Broken Wheat Porridge in Kannada

Kannada Subscribe Button TOTS AND MOMS

 

ಓಟ್ಸ್ ಮತ್ತು ಗೋಧಿ ನುಚ್ಚು ಸರಿ | Instant Oats & Broken Wheat Porridge in Kannada

ಓಟ್ಸ್ ಮತ್ತು ಗೋಧಿ ನುಚ್ಚು ಸರಿ

ಮಗುವಿಗೆ ಘನ ಆಹಾರಗವನ್ನು ಪ್ರಾರಂಭಿಸಿದಾಗ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ಒಳ್ಳೆಯ ಪೌಷ್ಟಿಕ ಆಯ್ಕೆ. ಪೋಷಕರು ಮಕ್ಕಳೊಂದಿಗೆ ಪ್ರಯಾಣಿಸುವಾಗ ಯಾವಾಗಲೂ ಸುಲಭ ಮತ್ತು ಶೀಘ್ರ ಆಯ್ಕೆಗಳನ್ನು ಬಯಸುತ್ತಾರೆ. ಸುಲಭವಾಗಿ ಮನೆಯಲ್ಲಿ ರುಚಿಯಾಗಿ ತಯಾರಿಸಬಹುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

ಓಟ್ಸ್ ಮತ್ತು ಗೋಧಿ ನುಚ್ಚು ಸರಿ ಮಿಶ್ರಣಕ್ಕೆ ಬೇಕಾಗುವ ಪದಾರ್ಥಗಳು:

  1. ಓಟ್ಸ್ - 1 ಕಪ್
  2. ಗೋಧಿ ನುಚ್ಚು  - 1/2 ಕಪ್
  3. ಕಾಳು ಮೆಣಸು ಪುಡಿ – ಒಂದು ಚಿಟಕೆ
  4. ಜೀರಿಗೆ ಪುಡಿ - ಒಂದು ಚಿಟಕೆ

ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ /ಗಂಜಿ ಮಾಡಲು ಬೇಕಾಗುವ ಪದಾರ್ಥಗಳು:

  1. ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು - 3 tbsp
  2. ಬಿಸಿ ನೀರು - 3/4 ಕಪ್
  3. ತುಪ್ಪ – ಬೇಕಾದರೆ ಉಪಯೋಗಿಸಬಹುದು.

ವಿಧಾನ

  1. ಬಾಣಲೆಯಲ್ಲಿ  ಓಟ್ಸ್ ಅನ್ನು ಒಂದು ನಿಮಿಷ ಹುರಿದುಕೊಳ್ಳಿ. ತಣ್ಣಗಾಗಲು ಒಂದು ತಟ್ಟೆಗೆ ವರ್ಗಾಯಿಸಿ.
  2. ಅದೇ ಬಾಣಲೆಗೆ / ಪ್ಯಾನ್ ಗೆ ಗೋಧಿ ನುಚ್ಚು ಹಾಕಿ ನಂತರ ತುಪ್ಪ ಹಾಕಿ 4 ನಿಮಿಷಗಳ ಕಾಲ ಅದನ್ನು ಹುರಿದುಕೊಳ್ಳಬೇಕು.
  3. ಓಟ್ಸ್ ಹಾಕಿರುವ ತಟ್ಟೆಗೆ ಹುರಿದ ಗೋಧಿ ನುಚ್ಚನ್ನು ವರ್ಗಾಯಿಸಿ ತಂಪಾಗಲು ಬಿಡಿ. ತಂಪಾದ ಮಿಶ್ರಣವನ್ನು ಬ್ಲೆಂಡರ್ /ಮಿಕ್ಸರ್ ಜಾರ್ ಗೆ ಹಾಕಿ ನಯವಾದ ಪುಡಿ ಮಾಡಿ ಕೊಳ್ಳಿ. ಒಂದು ಚಿಟಕೆ ಕಾಳು ಮೆಣಸು ಪುಡಿ ಹಾಕಿ.
  4. ಒಂದು ಚಿಟಕೆ ಜೀರಿಗೆ ಪುಡಿ ಹಾಕಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
  5. ಮನೆಯಲ್ಲಿ ತಯಾರಿಸಿದ ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ಮಿಕ್ಸ್ ಸಿದ್ಧವಾಗಿದೆ. ಇದನ್ನು ಸಾಮಾನ್ಯ ಉಷ್ಣಾಂಶದಲ್ಲಿ 2 ತಿಂಗಳ ಕಾಲ ಶೇಖರಿಸಬಹುದು ಮತ್ತು ರೆಫ್ರಿಜರೇಟರ್ ನಲ್ಲಿ 6 ತಿಂಗಳವರೆಗೆ ಶೇಖರಿಸಿಡಬಹುದು.
  6. ಅಗತ್ಯವಾದಾಗ ಅಥವಾ ಪ್ರಯಾಣ ಮಾಡುವಾಗ ತ್ವರಿತ ಮಿಕ್ಸ್ ಮತ್ತು ಬಿಸಿ ನೀರನ್ನು ಫ್ಲಾಸ್ಕ್ ನಲ್ಲಿ ತೆಗೆದುಕೊಂಡು ಹೋದರೆ ಶಿಶು ಆಹಾರವನ್ನು ನಿಮಿಷದಲ್ಲಿ ತಯಾರಿಸಿ ನೀಡಬಹುದು . ಒಂದು ಬಟ್ಟಲಿಗೆ 3 ಚಮಚ ತ್ವರಿತ ಮಿಕ್ಸ್ ಪುಡಿ ಮತ್ತು ಬಿಸಿ ನೀರಿನ್ನು ಹಾಕಿ ಮಿಶ್ರಣವನ್ನು ಗಂಟಿಲ್ಲದೆ ಕಲಸಿ.
  7. ಮಿಶ್ರಣವನ್ನು ಮುಚ್ಚಳ ಅಥವಾ ತಟ್ಟೆ ಮುಚ್ಚಿ 5 ನಿಮಿಷಗಳ ನಂತರ ನೀಡಬಹುದು. ಸರಿ ಚೆನ್ನಾಗಿ ಬೆಂದಿರುವುದನ್ನು ಖಚಿತಪಡಿಸಿಕೊಳ್ಳಿ.
  8. ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ.

ಓಟ್ಸ್ ಮತ್ತು ಗೋಧಿ ನುಚ್ಚು ಸರಿ | Instant Oats & Broken Wheat Porridge in Kannada :

Instant Broken Wheat Porridge for Babies Daliya sari nucchu godi shishu ahara

1. ಬಾಣಲೆಯಲ್ಲಿ  ಓಟ್ಸ್ ಅನ್ನು ಒಂದು ನಿಮಿಷ ಹುರಿದುಕೊಳ್ಳಿ. ತಣ್ಣಗಾಗಲು ಒಂದು ತಟ್ಟೆಗೆ ವರ್ಗಾಯಿಸಿ.

Instant Oats & Broken Wheat

2. ಅದೇ ಬಾಣಲೆಗೆ / ಪ್ಯಾನ್ ಗೆ ಗೋಧಿ ನುಚ್ಚು ಹಾಕಿ ನಂತರ ತುಪ್ಪ ಹಾಕಿ 4 ನಿಮಿಷಗಳ ಕಾಲ ಅದನ್ನು ಹುರಿದುಕೊಳ್ಳಬೇಕು.

Instant Oats & Broken Wheat

3. ಓಟ್ಸ್ ಹಾಕಿರುವ ತಟ್ಟೆಗೆ ಹುರಿದ ಗೋಧಿ ನುಚ್ಚನ್ನು ವರ್ಗಾಯಿಸಿ ತಂಪಾಗಲು ಬಿಡಿ. ತಂಪಾದ ಮಿಶ್ರಣವನ್ನು ಬ್ಲೆಂಡರ್ /ಮಿಕ್ಸರ್ ಜಾರ್ ಗೆ ಹಾಕಿ ನಯವಾದ ಪುಡಿ ಮಾಡಿ ಕೊಳ್ಳಿ. ಒಂದು ಚಿಟಕೆ ಕಾಳು ಮೆಣಸು ಪುಡಿ ಹಾಕಿ.

Instant Oats & Broken Wheat

4. ಒಂದು ಚಿಟಕೆ ಜೀರಿಗೆ ಪುಡಿ ಹಾಕಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.

Instant Oats & Broken Wheat

5. ಮನೆಯಲ್ಲಿ ತಯಾರಿಸಿದ ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ಮಿಕ್ಸ್ ಸಿದ್ಧವಾಗಿದೆ. ಇದನ್ನು ಸಾಮಾನ್ಯ ಉಷ್ಣಾಂಶದಲ್ಲಿ 2 ತಿಂಗಳ ಕಾಲ ಶೇಖರಿಸಬಹುದು ಮತ್ತು ರೆಫ್ರಿಜರೇಟರ್ ನಲ್ಲಿ 6 ತಿಂಗಳವರೆಗೆ ಶೇಖರಿಸಿಡಬಹುದು.

Instant Oats & Broken Wheat

6. ಅಗತ್ಯವಾದಾಗ ಅಥವಾ ಪ್ರಯಾಣ ಮಾಡುವಾಗ ತ್ವರಿತ ಮಿಕ್ಸ್ ಮತ್ತು ಬಿಸಿ ನೀರನ್ನು ಫ್ಲಾಸ್ಕ್ ನಲ್ಲಿ ತೆಗೆದುಕೊಂಡು ಹೋದರೆ ಶಿಶು ಆಹಾರವನ್ನು ನಿಮಿಷದಲ್ಲಿ ತಯಾರಿಸಿ ನೀಡಬಹುದು . ಒಂದು ಬಟ್ಟಲಿಗೆ 3 ಚಮಚ ತ್ವರಿತ ಮಿಕ್ಸ್ ಪುಡಿ ಮತ್ತು ಬಿಸಿ ನೀರಿನ್ನು ಹಾಕಿ ಮಿಶ್ರಣವನ್ನು ಗಂಟಿಲ್ಲದೆ ಕಲಸಿ.

Instant Oats & Broken Wheat

7. ಮಿಶ್ರಣವನ್ನು ಮುಚ್ಚಳ ಅಥವಾ ತಟ್ಟೆ ಮುಚ್ಚಿ 5 ನಿಮಿಷಗಳ ನಂತರ ನೀಡಬಹುದು. ಸರಿ ಚೆನ್ನಾಗಿ ಬೆಂದಿರುವುದನ್ನು ಖಚಿತಪಡಿಸಿಕೊಳ್ಳಿ.

Instant Oats & Broken Wheat

8. ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚು ಸರಿ ತಯಾರಾಗಿದೆ.

ಓಟ್ಸ್ ಮತ್ತು ಗೋಧಿ ನುಚ್ಚು ಸರಿ | Instant Oats & Broken Wheat Porridge in Kannada

Instant Broken Wheat Porridge for Babies Daliya sari nucchu godi shishu ahara

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 2
    Shares