Spread the love

ಬಿಸಿಬೇಳೆಬಾತ್ ಅಕ್ಕಿ ಉಪಯೋಗಿಸಿ ಮಾಡಲಾಗುವ ಕರ್ನಾಟಕದ ಪ್ರಸಿದ್ಧವಾದ ಭಕ್ಷ್ಯವಾಗಿದೆ. ಅಕ್ಕಿ, ಬೇಳೆ ಮತ್ತು ತರಕಾರಿಗಳ ಸಂಯೋಜನೆಯಿಂದ ಮಾಡುವ ಸಿರಿಧಾನ್ಯದ ಬಿಸಿಬೇಳೆಬಾತ್ ಪರಿಪೂರ್ಣವಾದ ಸಂತುಲಿತ ಬೆಳಗಿನ ಉಪಹಾರ ಅಥವಾ ಊಟಕ್ಕೆ ಉತ್ತಮವಾದ ಆಹಾರ.

ಸಿರಿಧಾನ್ಯದ ಬಿಸಿಬೇಳೆಬಾತ್ | Instant Millet Bisibelebath recipe in Kannada

Instant Millet Bisi Bele Bath Recipe with millets siridhanya kannada ಇಲ್ಲಿ ಸಿರಿಧಾನ್ಯವನ್ನು ಬಳಸಿ  ಬಿಸಿಬೇಳೆಬಾತ್ ಮಾಡಿದ್ದೇವೆ. ಸಾಮಾನ್ಯವಾಗಿ ಸಿರಿಧನ್ಯ ಬಳಸಲು ಹಲವರು ಹಿಂಜರಿಯುತ್ತಾರೆ. ಏಕೆಂದರೆ ಅದು ಎಲ್ಲ ಅದುಗೆಗಳಿಗೂ ಒಗ್ಗುವುದಿಲ್ಲ ಮತ್ತು ಮೆತ್ತಗಿನ(ಮೃದುವಾದ),  ಅಂಟಾಗಿರುವ ವಿನ್ಯಾಸವಿರುತ್ತದೆ. ಸಿರಿಧಾನ್ಯಗಳನ್ನು ಇತರ ಅಕ್ಕಿ ಭಕ್ಷ್ಯಗಳ ಜೊತೆ ಬಳಸುವುದು ಕಷ್ಟವಾಗುತ್ತದೆ. ಬಿಸಿಬೇಳೆಬಾತ್ ಇದೆ ತರಹವಾಗಿ ಮೆತ್ತಗೆ ಇರುವುದರಿಂದ ಮೂಲ ರುಚಿಗೆ ಹಾನಿಯಾಗದಂತೆ ಸುಲಭವಾಗಿ ಇಲ್ಲಿ ಸಿರಿಧಾನ್ಯವನ್ನು ಬಳಸಬಹುದು. ಸಿರಿಧಾನ್ಯಗಳು ಸತ್ವಭರಿತವಾದ, ಪೌಷ್ಟಿಕ, ನಾರಿನಂಶವಿರುವ (fibre), ಗ್ಲುಟನ್ (gluten) ಮುಕ್ತವಾದ ಧಾನ್ಯಗಳು. ಸಿರಿಧಾನ್ಯಗಳು ಭಾರತದಲ್ಲೇ ಬೆಳೆಯಲಾಗುತ್ತದೆ ಮತ್ತು ಅತ್ಯುತ್ತಮ ರೈತಸ್ನೇಹಿ ಧಾನ್ಯಗಳು. ಸಿರಿಧಾನ್ಯಗಳಲ್ಲಿ  ಪ್ರೋಟೀನ್, ಜೀವಸತ್ವಗಳು, ಮಿನರಲ್, ಫೈಬರ್ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಸಿರಿಧಾನ್ಯಗಳು ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಆಹಾರ ಧಾನ್ಯಗಳು. ಅಕ್ಕಿಯ ಬದಲು ಉಪಯೋಗಿಸಬಹುದಾದ ಕೆಲವು ಸಿರಿಧಾನ್ಯಗಳು : (ಪಾಕವಿಧಾನಗಳನ್ನು ನೋಡಲು ಪ್ರತಿ ಕಾಳುಗಳ  ಮೇಲೆ ಕ್ಲಿಕ್ ಮಾಡಿ)

ಇಲ್ಲಿ ನಾವು ಊದಲು(ಬಾರ್ನ್ಯಾರ್ಡ್) ಮಿಲೆಟ್ ಬಳಸಿ ತ್ವರಿತವಾಗಿ ಸಿರಿಧಾನ್ಯದ ಬಿಸಿಬೇಳೆಬಾತ್ ಅನ್ನು ಮಾಡುತ್ತಿದ್ದೇವೆ. ಸಿರಿಧಾನ್ಯದ ಬಿಸಿಬೇಳೆಬಾತ್ ಹಲವಾರು ತರಕಾರಿಗಳು ಮತ್ತು ಬೇಳೆ ಕಾಳುಗಳನ್ನು ಬಳಸಿ ಮಾಡುವ ಪೌಷ್ಟಿಕ ಪಾಕವಿಧಾನವಾಗಿದೆ. ಇದು ಸಂಪೂರ್ಣ ಸಂತುಲಿತ ಆಹಾರಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶ  ಹೊಂದಿದೆ. ಬಾರ್ನ್ಯಾರ್ಡ್ ಮಿಲೆಟ್/ಊದಲು ಅತಿ ವೇಗವಾಗಿ ಕೇವಲ 45 ದಿನಗಳಲ್ಲಿ ಬೆಳೆಯಬಹುದಾದ ರಾಗಿ ಜಾತಿಯ ಒಂದು ಧಾನ್ಯ. ಭಾರತದ ಉತ್ತರಾಂಚಲ್ ಬೆಟ್ಟಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬಾರ್ನ್ಯಾರ್ಡ್ ಮಿಲ್ಲೆಟ್ ಅನ್ನು ಬಂಗಾಲಿ ಭಾಷೆಯಲ್ಲಿ ಶ್ಯಾಮ, ಗುಜರಾತಿನಲ್ಲಿ ಮೊರಿಯಾಯ್, ಹಿಂದಿ ಭಾಷೆಯಲ್ಲಿ ಸಾನ್ವಾ, ಕನ್ನಡದಲ್ಲಿ ಊದಲು, ತಮಿಳಿನಲ್ಲಿ ಕುಟಿರೈವಲಿ ಮತ್ತು ತೆಲುಗು ಭಾಷೆಯಲ್ಲಿ ಉಡಾಲು ಎಂದು ಕರೆಯುತ್ತಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಅಕ್ಕಿ, ಬೇಳೆ ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಬೇಯಿಸಿ ನಂತರ ಮಿಶ್ರಣ ಮಾಡಿ ಮಸಾಲೆಗಳನ್ನೂ ಸೇರಿಸುತ್ತೇವೆ, ನಂತರ ಒಗ್ಗರಣೆಯನ್ನು ಹಾಕುವುದು. ಹಾಗಾಗಿ, ತ್ವರಿತವಾಗಿ ಮಾಡುವ ಸಿರಿಧಾನ್ಯದ ಬಿಸಿಬೇಳೆಬಾತ್ ಪಾಕವಿಧಾನದಲ್ಲಿ  ಶೀಘ್ರವಾಗಿ ಮಾಡಬಹುದಾದ ವಿಧಾನವನ್ನು  ಬಳಸಲಾಗಿದೆ ಎಂದು ನೆನಪಿನಲ್ಲಿಡಿ. ಸುಲಭವಾಗಿ ಲಂಚ್ ಬಾಕ್ಸ್ಗೆ ಗೆ ಮಾಡಬಹುದು. ಪ್ರತಿ ವಾರ ವಿಭಿನ್ನ ರುಚಿಗೆ ಬೇರೆ ಬೇರೆ ಸಿರಿಧಾನ್ಯಗಳನ್ನು ಬಳಸಿ ಮಾಡಬಹುದು. ಪರಿವಾರದವರೆಲ್ಲ ಇಷ್ಟ ಪಟ್ಟು ಸಂತೋಷವಾಗಿ ತಿನ್ನುವ ಸಿರಿಧಾನ್ಯದ ಬಿಸಿಬೇಳೆಬಾತ್ ಪ್ರಯತ್ನಿಸಿ. ಗಮನಿಸಿ: ನಾವು ಈ ಪಾಕವಿಧಾನದಲ್ಲಿ ಊದಲು ಮತ್ತು  ಕೆಲವು ತರಕಾರಿಗಳು ಮತ್ತು ಬೇಳೆಯನ್ನು ಬಳಸಿದ್ದೇವೆ. ನೀವು ನಿಮಗೆ ಇಷ್ಟವಾಗುವ ಸಿರಿಧಾನ್ಯಗಳನ್ನು ಮತ್ತು ತರಕಾರಿಗಳನ್ನು  ಹಾಗು ಬೇಳೆಯನ್ನು  ಬಳಸಬಹುದು. ಇದರಿಂದ ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಸಿರಿಧಾನ್ಯದ ಬಿಸಿಬೇಳೆಬಾತ್ ಮಕ್ಕಳಿಗೆ ಕೊಡಬಹುದಾ?

ಎಂಟು ತಿಂಗಳು ಮೀಲ್ಪಟ್ಟ ಮಕ್ಕಳಿಗೆ ನೀಡಬಹುದು. ನಾನು Prestige Pressure Cooker ಅನ್ನು ಬಳಸಿದ್ದೇನೆ.

ಊದಲಿನ ಉಪಯೋಗದಿಂದಾಗುವ ಆರೋಗ್ಯ ಪ್ರಯೋಜನಗಳು:

 • ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿರುವುದು.
 • ಗ್ಲುಟನ್ ರಹಿತ ( ಅಂಟು ಇಲ್ಲದಿರುವುದು)
 • ಕಡಿಮೆ ಕ್ಯಾಲೋರಿಗಳಿರುತ್ತವೆ.
 • ಗ್ಲೈಸೆಮಿಕ್ ಅಂಶ ಕಡಿಮೆ ಇರುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಒಳ್ಳೆಯ ಆಯ್ಕೆ.

ಬೇಳೆ ಕಾಳುಗಳಿಂದಾಗುವ ಆರೋಗ್ಯ ಪ್ರಯೋಜನಗಳು:

 • ಹೃದಯ ಆರೋಗ್ಯಕರವಾಗಿರುತ್ತವೆ.
 • ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
 • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
 • ತ್ವರಿತ ಶಕ್ತಿಯನ್ನು ನೀಡುತ್ತದೆ.

ನಮ್ಮ ಇತರ ಸಿರಿಧಾನ್ಯಗಳ ಪಾಕವಿಧಾನಗಳು : ನವಣೆ ಫ್ರೈಡ್ ರೈಸ್ ಉದಲು ಇಡ್ಲಿ / ದೋಸೆ ಸಿರಿಧಾನ್ಯ ನವಣೆ ಖಿಚಡಿ ನವಣೆ ದೋಸೆ ಸಾಮೆ ಶ್ಯಾವಿಗೆ

Video: ಸಿರಿಧಾನ್ಯದ ಬಿಸಿಬೇಳೆಬಾತ್ | Instant Millet Bisibelebath recipe in Kannada

https://youtu.be/9R56WHBo0HU Kannada Subscribe Button TOTS AND MOMS

ಸಿರಿಧಾನ್ಯದ ಬಿಸಿಬೇಳೆಬಾತ್ | Instant Millet Bisibelebath recipe in Kannada

ಸಿರಿಧಾನ್ಯದ ಬಿಸಿಬೇಳೆಬಾತ್ | Instant Millet Bisibelebath recipe in Kannada

ಅಕ್ಕಿ, ಬೇಳೆ ಮತ್ತು ತರಕಾರಿಗಳ ಸಂಯೋಜನೆಯಿಂದ ಮಾಡುವ ಸಿರಿಧಾನ್ಯದ ಬಿಸಿಬೇಳೆಬಾತ್ ಪರಿಪೂರ್ಣವಾದ ಸಂತುಲಿತ ಬೆಳಗಿನ ಉಪಹಾರ ಅಥವಾ ಊಟಕ್ಕೆ ಉತ್ತಮವಾದ ಆಹಾರ. ತ್ವರಿತವಾಗಿ ಮಾಡಬಹುದಾದ್ದರಿಂದ ನೀವು ಇದನ್ನು ಮಕ್ಕಳ ಡಬ್ಬಿಗೂ ಮಾಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ತಿಂಡಿ, ಭೋಜನ
ತಿನಿಸು:ಭಾರತೀಯ

ಸಾಮಗ್ರಿಗಳು

 1. ಊದಲು (ಬಾರ್ನ್ಯಾರ್ಡ್ ಮಿಲೆಟ್) -1 ಕಪ್
 2. ತೊಗರಿ ಬೇಳೆ- 1/2 ಕಪ್
 3. ಸಾಸಿವೆ - 1 tsp
 4. ತುಪ್ಪ – 2 tsp
 5. ಕರಿಬೇವಿನ ಎಲೆಗಳು – 5 ರಿಂದ 10
 6. ಇಂಗು – ಒಂದು ಚಿಟಕೆ
 7. ಈರುಳ್ಳಿ – 1 ಬೇಕಾದರೆ
 8. ಟೊಮೇಟೊ – 2
 9. ಬಟಾಣಿ – 200 gm
 10. ಕ್ಯಾರೆಟ್ - 2
 11. ಆಲುಗಡ್ಡೆ - 2
 12. ಬಿಸಿಬೇಳೆಬಾತ್ / ಸಾಂಬಾರ್ ಪುಡಿ -1 tbsp
 13. ಉಪ್ಪು – ¾ tbsp ( ರುಚಿಗೆ ತಕ್ಕಷ್ಟು )
 14. ಹುಣಸೆ ಹಣ್ಣು -1/2 ನಿಂಬೆ ಗಾತ್ರ
 15. ಬೆಲ್ಲ -1/2 ನಿಂಬೆ ಗಾತ್ರ
 16. ಬಿಸಿ ನೀರು – 6 ಕಪ್

ವಿಧಾನ

 1. ಕುಕ್ಕರ್ ನಲ್ಲಿ ತುಪ್ಪ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಸಿಡಿಯಲು ಬಿಡಿ.
 2. ನಂತರ ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ .
 3. ಈಗ ತರಕಾರಿಗಳಾದ  ಈರುಳ್ಳಿ, ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ ಮತ್ತು ಟೊಮೇಟೊವನ್ನು ಒಂದರ ನಂತರ ಒಂದನ್ನು ಹಾಕಿ ಬಾಡಿಸಿ. ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ನೀವು ಬಳಸಬಹುದು.    
 4. 2 ನಿಮಿಷಗಳ ಕಾಲ ಹಸಿ ವಾಸನೆ ಹೋಗುವವರೆಗೆ ಮಿಶ್ರಣ ಮಾಡಿ.
 5. ಈಗ ಊದಲು ಅಥವಾ ನಿಮ್ಮ ಆಯ್ಕೆಯ ಸಿರಿಧಾನ್ಯವನ್ನು ತೊಳೆದು ಹಾಕಿ.
 6. ತೊಳೆದ ತೊಗರಿ ಬೇಳೆ ಅಥವಾ ನಿಮ್ಮ ಆಯ್ಕೆಯ ಬೇಳೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 7. ಎರಡು ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿ ನಂತರ ಇದಕ್ಕೆ ಬಿಸಿ ನೀರು ಸೇರಿಸಿ.
 8. ಬಿಸಿಬೇಳೆಬಾತ್ ಪುಡಿ ಅಥವಾ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕಲಸಿ.
 9. ಉಪ್ಪು, ಬೆಲ್ಲ ಸೇರಿಸಿ ಯಾವುದೇ ಗಂಟುಗಳಾಗದಂತೆ ಕೈಯಾಡಿಸಿ ಅಥವಾ ಬಿಸಿಬೇಳೆಬಾತ್ ಪುಡಿ ಮತ್ತು ಉಪ್ಪು ಅನ್ನು ಚೆನ್ನಾಗಿ ಗಂಟಿಲ್ಲದೆ ಮಿಶ್ರಣ ಮಾಡಿ ನಂತರ ಹಾಕಿ ಬೇಯಿಸಿ.
 10. ಹುಣಿಸೇಹಣ್ಣು ರಸ ಸೇರಿಸಿ ಮಿಶ್ರಣ ಮಾಡಿ. ಜಾಸ್ತಿ ಹುಳಿ ಬಯಸಿದರೆ ಇನ್ನಷ್ಟು ಹುಣಸೆ ರಸ ಸೇರಿಸಿ.
 11. ಮುಚ್ಚಳವನ್ನು ಮುಚ್ಚಿ ಮತ್ತು 3 ಕೂಗು ಬರುವತನಕ ಬೇಯಿಸಿ
 12. ತಣ್ಣಗಾದ ಮೇಲೆ ಮುಚ್ಚಳವನ್ನು ತೆಗೆಯಿರಿ. ತ್ವರಿತ ಸಿರಿಧಾನ್ಯದ ಬಿಸಿಬೇಳೆಬಾತ್ ತಯಾರಾಗಿದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ಸಿರಿಧಾನ್ಯದ ಬಿಸಿಬೇಳೆಬಾತ್ | Instant Millet Bisibelebath recipe in Kannada

Instant Millet Bisi Bele Bath Recipe with millets siridhanya kannada

 

ತ್ವರಿತ ಸಿರಿಧಾನ್ಯದ ಬಿಸಿಬೇಳೆಬಾತ್ ಮಾಡಲು ಸಾಮಗ್ರಿಗಳು :

 1. ಊದಲು (ಬಾರ್ನ್ಯಾರ್ಡ್ ಮಿಲೆಟ್) -1 ಕಪ್
 2. ತೊಗರಿ ಬೇಳೆ- 1/2 ಕಪ್
 3. ಸಾಸಿವೆ – 1 tsp
 4. ತುಪ್ಪ – 2 tsp
 5. ಕರಿಬೇವಿನ ಎಲೆಗಳು – 5 ರಿಂದ 10
 6. ಇಂಗು – ಒಂದು ಚಿಟಕೆ
 7. ಈರುಳ್ಳಿ – 1 ಬೇಕಾದರೆ
 8. ಟೊಮೇಟೊ – 2
 9. ಬಟಾಣಿ – 200 gm
 10. ಕ್ಯಾರೆಟ್ – 2
 11. ಆಲುಗಡ್ಡೆ – 2
 12. ಬಿಸಿಬೇಳೆಬಾತ್ / ಸಾಂಬಾರ್ ಪುಡಿ -1 tbsp
 13. ಉಪ್ಪು – ¾ tbsp ( ರುಚಿಗೆ ತಕ್ಕಷ್ಟು )
 14. ಹುಣಸೆ ಹಣ್ಣು -1/2 ನಿಂಬೆ ಗಾತ್ರ
 15. ಬೆಲ್ಲ -1/2 ನಿಂಬೆ ಗಾತ್ರ
 16. ಬಿಸಿ ನೀರು – 6 ಕಪ್

ತ್ವರಿತ ಸಿರಿಧಾನ್ಯದ ಬಿಸಿಬೇಳೆಬಾತ್ ಮಾಡುವ ವಿಧಾನ:

1. ಕುಕ್ಕರ್ ನಲ್ಲಿ ತುಪ್ಪ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಸಿಡಿಯಲು ಬಿಡಿ. 2. ನಂತರ ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ . Instant Millet BisiBeleBath

3. ಈಗ ತರಕಾರಿಗಳಾದ  ಈರುಳ್ಳಿ, ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ ಮತ್ತು ಟೊಮೇಟೊವನ್ನು ಒಂದರ ನಂತರ ಒಂದನ್ನು ಹಾಕಿ ಬಾಡಿಸಿ. ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ನೀವು ಬಳಸಬಹುದು.     4. 2 ನಿಮಿಷಗಳ ಕಾಲ ಹಸಿ ವಾಸನೆ ಹೋಗುವವರೆಗೆ ಮಿಶ್ರಣ ಮಾಡಿ. Instant Millet BisiBeleBath 5. ಈಗ ಊದಲು ಅಥವಾ ನಿಮ್ಮ ಆಯ್ಕೆಯ ಸಿರಿಧಾನ್ಯವನ್ನು ತೊಳೆದು ಹಾಕಿ. 6. ತೊಳೆದ ತೊಗರಿ ಬೇಳೆ ಅಥವಾ ನಿಮ್ಮ ಆಯ್ಕೆಯ ಬೇಳೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 7. ಎರಡು ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿ ನಂತರ ಇದಕ್ಕೆ ಬಿಸಿ ನೀರು ಸೇರಿಸಿ. Instant Millet BisiBeleBath 8. ಬಿಸಿಬೇಳೆಬಾತ್ ಪುಡಿ ಅಥವಾ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕಲಸಿ. Instant Millet BisiBeleBath 9. ಉಪ್ಪು, ಬೆಲ್ಲ ಸೇರಿಸಿ ಯಾವುದೇ ಗಂಟುಗಳಾಗದಂತೆ ಕೈಯಾಡಿಸಿ ಅಥವಾ ಬಿಸಿಬೇಳೆಬಾತ್ ಪುಡಿ ಮತ್ತು ಉಪ್ಪು ಅನ್ನು ಚೆನ್ನಾಗಿ ಗಂಟಿಲ್ಲದೆ ಮಿಶ್ರಣ ಮಾಡಿ ನಂತರ ಹಾಕಿ ಬೇಯಿಸಿ. 10. ಹುಣಿಸೇಹಣ್ಣು ರಸ ಸೇರಿಸಿ ಮಿಶ್ರಣ ಮಾಡಿ. ಜಾಸ್ತಿ ಹುಳಿ ಬಯಸಿದರೆ ಇನ್ನಷ್ಟು ಹುಣಸೆ ರಸ ಸೇರಿಸಿ. Instant Millet BisiBeleBath 11. ಮುಚ್ಚಳವನ್ನು ಮುಚ್ಚಿ ಮತ್ತು 3 ಕೂಗು ಬರುವ ತನಕ ಬೇಯಿಸಿ 12. ತಣ್ಣಗಾದ ಮೇಲೆ  ಮುಚ್ಚಳವನ್ನು ತೆಗೆಯಿರಿ. ತ್ವರಿತ ಸಿರಿಧಾನ್ಯದ ಬಿಸಿಬೇಳೆಬಾತ್ ತಯಾರಾಗಿದೆ. Instant Millet BisiBeleBath

ಸಿರಿಧಾನ್ಯದ ಬಿಸಿಬೇಳೆಬಾತ್

Instant Millet Bisi Bele Bath Recipe with millets siridhanya kannada ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love