Spread the love

ಶಿಶುಗಳಲ್ಲಿ ದದ್ದುಗಳು – ಕಾರಣ ಮತ್ತು ಚಿಕಿತ್ಸೆ | Infant Rashes in Kannada

ಮಕ್ಕಳಲ್ಲಿ ದದ್ದು | ಶಿಶು ದದ್ದುಗಳಿಗೆ ಕಾರಣಗಳು | ಶಿಶು ದದ್ದುಗಳಿಗೆ ಚಿಕಿತ್ಸೆ | ಬಿಳಿ ಕಲೆಗಳು | ಶಿಶುಗಳಲ್ಲಿ ಬಿಳಿ ಕಲೆಗಳು | ನವಜಾತ ಶಿಶುಗಳಲ್ಲಿ ಮೊಡವೆಗಳು | ಶಿಶುಗಳಿಗೆ ಕೆಂಪು ಚುಕ್ಕೆಗಳು | ಶಿಶು ದದ್ದುಗಳ ಸಮಯದಲ್ಲಿ ಚರ್ಮದ ಆರೈಕೆ | ಶಿಶು ದದ್ದುಗಳಿಗಾಗಿ ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು | ಶಿಶುಗಳಲ್ಲಿ ದದ್ದುಗಳು – ಕಾರಣ ಮತ್ತು ಚಿಕಿತ್ಸೆ

Infant Rashes Rashes in Infants Causes for Infants Rashes Symptoms for Infant Rashes What are Infant Rashes Rashes for Babies Treatment for Infant Rashes

ಶಿಶುಗಳಲ್ಲಿ  ಹೆಚ್ಚಾಗಿ ಮುಖದ ಮೇಲೆ ಸಣ್ಣ ಸಣ್ಣ ಮೊಡವೆ ತರಹದ ದದ್ದುಗಳು ಕಾಣಿಸಿಕೊಳ್ಳುತ್ತದೆ. . ನವಜಾತ ಶಿಶುಗಳಲ್ಲಿ ಇದು ತುಂಬಾ ಸಾಮಾನ್ಯ, ಒಂದು ವರ್ಷದವರೆಗೆ ಆಗಾಗ ಬಂದು ಹೋಗ ಬಹುದು. ದದ್ದುಗಳು ಹೇಗಿರುತ್ತದೆ, ಅವು ಎಷ್ಟು ಭಿನ್ನವಾಗಿವೆ ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

 1. ಶಿಶು ಮಿಲಿಯ – ಬಿಳಿ ಕಲೆಗಳು 

  ಜನನವಾದ ನಂತರ  ಮೊದಲ ಕೆಲವು ವಾರಗಳಲ್ಲಿ ಮಗುವಿನ ಮೂಗು, ಕೆನ್ನೆ ಮತ್ತು ಹಣೆಯ ಮೇಲೆ ಕಾಣುವ ಸಣ್ಣ ಬಿಳಿ ಅಥವಾ ಹಳದಿ ಕಲೆಗಳನ್ನು ಬೇಬಿ ಮಿಲಿಯಾ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮುಖದ ಮೇಲೆ ಸಮಾನವಾಗಿ ಗೋಚರವಾಗುತ್ತದೆ.  ನಿರ್ಬಂಧಿತ ರಂಧ್ರಗಳ ಪರಿಣಾಮವಾಗಿ ಶಿಶುಗಳಲ್ಲಿ ಬಿಳಿ ಕಲೆಗಳು  ಕಾಣಿಸಿಕೊಳ್ಳುತ್ತದೆ  ಶಿಶುಗಳ ಬಾಯಿಯಲ್ಲಿ ಕೂಡ ಮಿಲಿಯ ಕಾಣಿಸಿಕೊಳ್ಳುತ್ತದೆ ಇದನ್ನು ಎಪ್ಸ್ಟೀನ್ ಮುತ್ತುಗಳು ಎಂದು ಕರೆಯುತ್ತಾರೆ.

  ಚಿಕಿತ್ಸೆ : ಚರ್ಮದ ರಂಧ್ರಗಳು ಬಿಳಿ ಅಥವಾ ಹಳದಿ ಬಣ್ಣದ ಗುಳ್ಳೆಗಳು ತೆರೆದ ನಂತರ ನೈಸರ್ಗಿಕವಾಗಿ ತೆರವುಗೊಳ್ಳುತ್ತವೆ. ಯಾವುದೇ ಚಿಕಿತ್ಸೆ ಅಗತ್ಯವಿಲ್ಲದೆ ಗುಣವಾಗುವುದು.

 2. ನವಜಾತ ಶಿಶುಗಳಲ್ಲಿ ಮೊಡವೆ – ಕೆಂಪು ಚುಕ್ಕೆ/ಗುಳ್ಳೆಗಳು

  ಸುಮಾರು 20 -25 ರಷ್ಟು  ನವಜಾತ ಮಕ್ಕಳು ಮೊಡವೆಗಳಿಂದ ಬಳಲುತ್ತಾರೆ. ಸಣ್ಣ ಕೆಂಪು ಗುಳ್ಳೆಗಳನ್ನು 2-6 ವಾರಗಳ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ , ಕೆಲವು ಶಿಶುಗಳು ಅದರೊಂದಿಗೆ ಜನಿಸುತ್ತಾರೆ . ಇವು ಸಾಮಾನ್ಯವಾಗಿ ಮಗುವಿನ ಮುಖದ ಮೇಲೆ ಬೆಳೆಯುತ್ತವೆ . ಎದೆ, ಬೆನ್ನು, ಕುತ್ತಿಗೆ ಮತ್ತು ನೆತ್ತಿಯಲ್ಲೂ ಮೊಡವೆಗಳು ಕಾಣಿಸಿಕೊಳ್ಳಬಹುದು.

  ಚಿಕಿತ್ಸೆ: ನವಜಾತ ಶಿಶುಗಳಲ್ಲಿ ಮೊಡವೆ ಕೆಲವು ವಾರಗಳು ಅಥವಾ ತಿಂಗಳುಗಳ ನಂತರ ಯಾವುದೇ  ಚಿಕಿತ್ಸೆಯಿಲ್ಲದೆ ಹೊರೆಟು ಹೋಗುತ್ತದೆ. ಇದು ಯಾವುದೇ ಗಾಯದ ಗುರುತನ್ನು ಬಿಡುವುದಿಲ್ಲ .ಚಿಂತೆ ಮಾಡುವ ಅವಶ್ಯಕತೆಯಿಲ್ಲ. 

 3. ಶಿಶು ಮೊಡವೆ – ಕೆಂಪು ಚುಕ್ಕೆಗಳು

  ಶಿಶು ಮೊಡವೆಗಳು ನವಜಾತ ಮೊಡವೆಗಳ ತರಹವೆ ಕಾಣುತ್ತವೆ ಮತ್ತು ಸಣ್ಣ ಕೆಂಪು ಗುಳ್ಳೆಗಳಂತೆ ಕಾಣಿಸಿಕೊಳ್ಳುತ್ತವೆ. 3 ರಿಂದ 12 ತಿಂಗಳ ವಯಸ್ಸಿನ ಶಿಶುಗಳ ಮೇಲೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ 6 ವಾರಗಳ ನಂತರ ಕಾಣಿಸಿಕೊಳ್ಳುತ್ತವೆ. ಎಸ್ಜಿಮಾ ಮತ್ತು ಇತರ ಚರ್ಮದ ಸೋಂಕುಗಳ ನಡುವಿನ ಸಾಮ್ಯತೆಯಿಂದಾಗಿ ಈ ಪರಿಸ್ಥಿತಿಗಳನ್ನು ನಿವಾರಿಸಿಕೊಳ್ಳುವುದು ಬಹಳ ಮುಖ್ಯ.

  ಚಿಕಿತ್ಸೆ: ಶಿಶು ಮೊಡವೆಗಳು ಕಾಣಿಸಿಕೊಂಡ 6-6 ತಿಂಗಳೊಳಗೆ ಸಾಮಾನ್ಯವಾಗಿ ಗುಣವಾಗುವುದು . ಸೋಂಕುಗಳನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚುವುದು ಮತ್ತು ಸರಿಯಾದ ರೋಗನಿರ್ಣಯ ಮಾಡಲು ಸೂಚಿಸಲಾಗಿದೆ ಹಾಗಾಗಿ ದಯವಿಟ್ಟು ಚರ್ಮರೋಗ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. 

ನಮ್ಮ ಬ್ಲಾಗ್ನಲ್ಲಿ ಕೆಲವು ಉಪಯುಕ್ತ ಲಿಂಕ್ ನೀಡಲಾಗಿದೆ , ಹೆಚ್ಚ್ಕಿನ ಮಾಹಿತಿಕೆ ಲೇಖನಗಳನ್ನು  ಓದಲು ಮರೆಯಬೇಡಿ.

ಶಿಶು ದದ್ದುಗಳಿಗಾಗಿ ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು? 

ಮೊದಲೇ ವಿವರಿಸಿದ ಹಾಗೆ ಎಲ್ಲ ದದ್ದುಗಳು ಹಾನಿಕಾರಕವಲ್ಲ,  ಎರಡು ಮೂರು ವಾರಗಳ ನಂತರ ಯಾವುದೇ ಚಿಕಿತ್ಸೆ ಇಲ್ಲದೆ ಹಾಗೆಯೇ ಗುಣವಾಗುತ್ತದೆ . ಆದರೆ ಕೆಲವು ಬಾರಿ ಅತಿ ಹೆಚ್ಚು ತೊಂದರೆ ಉಂಟಾದಾಗ ಕೆಲವು ಪರಿಸ್ಥಿತಿಗಳಲ್ಲಿ  ರೋಗದ ಲಕ್ಷಣಗಳಾಗಿರಬಹುದು. ಕೆಳಗೆ ನೀಡಿರುವ ರೋಗಲಕ್ಷಣಗಳು  ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ –

 1. ಜ್ವರ
 2. ನೋವು ಅಥವಾ ಕಿರಿಕಿರಿ 
 3. ಹಸಿವು ಇಲ್ಲದಿರುವಿಕೆ 
 4. ದ್ರವ / ಕೀವು ತುಂಬಿದ ಗುಳ್ಳೆಗಳು
 5. ಕೆಮ್ಮು

ಶಿಶು ದದ್ದುಗಳ ಸಮಯದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು?

 1. ದದ್ದುಗಳು ಸಾಮಾನ್ಯವಾಗಿದ್ದು ಯಾವುದೇ ತೊಂದರೆ ಇಲ್ಲದಿದ್ದರೂ ಹೆಚ್ಚು ಉಲ್ಬಣವಾಗದಂತೆ    ನೋಡಿಕೊಳ್ಳಬೇಕು.   
 2. ದದ್ದುಗಲಿರುವ ತ್ವಚೆಯನ್ನು ಉಜ್ಜುವುದನ್ನು ಹಾಗೂ ಕೆರೆಯುವುದನ್ನು ತಪ್ಪಿಸಬೇಕು ಮತ್ತು ಚರ್ಮವನ್ನು ಒರೆಸಲು ಅಥವಾ ಸ್ವಚ್ಚ  ಮಾಡಲು ಮೃದುವಾದ ಹತ್ತಿಯ ಬಟ್ಟೆಯನ್ನು ಬಳಸಿ.
 3. ಎಣ್ಣೆಯುಕ್ತ ಅಥವಾ ಜಿಡ್ಡಿನ ಚರ್ಮದ ರಕ್ಷಣೆಯ ಕ್ರೀಮ್ ಅಥವಾ ಉತ್ಪನ್ನಗಳನ್ನು ಬಳಸಬೇಡಿ..
 4. ಮಗುವನ್ನು ಬೆಚ್ಚಗಿರುವ ನೀರಿನಿಂದ ಸ್ನಾನ ಮಾಡಿಸಿ  ಅಥವಾ ಸ್ವಚ್ಛ ಮಾಡಿ .
 5. ಶಿಶುಗಳಿಗೆ ದದ್ದುಗಳು ಕಾಣಿಸಿಕೊಂಡಾಗ ಪೌಡರ್ ಗಳನ್ನು  ಬಲಸಬೇಡಿ.
 6. ತೇವಾಂಶವು ಇರದಂತೆ ಚರ್ಮದ ಮಡಿಕೆಗಳನ್ನು ಒರೆಸಿ ಆರೈಕೆ ಮಾಡಿ.
 7. ದಿನಕ್ಕೆ ಎರಡು ಬಾರಿ ಚರ್ಮವನ್ನು ಉಸಿರಾಡಲು ಬಿಡಬೇಕು.
 8. ಅನೇಕ ಪದರಗಳ ಬಟ್ಟೆ ಹಾಕುವುದರಿಂದ ಹೆಚ್ಚುವರಿ ಶಾಖ ಹಾಗೂ ಬೆವರು ಉತ್ಪಾದನೆಯಾಗಬಹುದು ಮತ್ತು ಒಂದೇ ಪದರದ ತೆಳುವಾದ ಉಡುಪಿನಿಂದ ಮಗುವಿನ ಚರ್ಮದಿಂದ ತೇವಾಂಶ ನಷ್ಟವಾಗಬಹುದು. ಆದ್ದರಿಂದ ಇಂತಹ ಸಮಯದಲ್ಲಿ ಸರಳ ಹತ್ತಿ ಬಟ್ಟೆಗಳನ್ನು ಹಾಕಬೇಕು .
 9. ವೈದ್ಯರು ಸೂಚಿಸುವ ಯಾವುದೇ ಔಷಧಿಗಳನ್ನು ಸರಿಯಾಗಿ ಮಾಹಿತಿ ಪಡೆದು ತಪ್ಪದೆ ನೀಡಬೇಕು ಮತ್ತು ಸಾಧ್ಯವಾದಷ್ಟು ಮನೆಮದ್ದುಗಳನ್ನು ಮಾಡಬೇಡಿ.

ಅಂತಿಮವಾಗಿ, ಈ ಸಾಮಾನ್ಯ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.  ಆದರೆ ನಿಮ್ಮ ಮಗುವನ್ನು ಸುರಕ್ಷಿತವಾಗಿ ಮತ್ತು ಸಂತೋಷದಿಂದ ಇರಿಸಲು ಸೂಕ್ತವಾದ  ಕ್ರಮಗಳನ್ನು ತೆಗೆದುಕೊಳ್ಳಿ .

Video :ಶಿಶುಗಳಲ್ಲಿ ದದ್ದುಗಳು – ಕಾರಣ ಮತ್ತು ಚಿಕಿತ್ಸೆ | Infant Rashes in Kannada

Kannada Subscribe Button TOTS AND MOMS

ಶಿಶುಗಳಲ್ಲಿ ದದ್ದುಗಳು – ಕಾರಣ ಮತ್ತು ಚಿಕಿತ್ಸೆ | Infant Rashes in Kannada

Infant Rashes Rashes in Infants Causes for Infants Rashes Symptoms for Infant Rashes What are Infant Rashes Rashes for Babies Treatment for Infant Rashes

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love