Spread the love
  • 3
    Shares

ಶಿಶುಗಳಿಗೆ ಘನ ಆಹಾರ ಹೇಗೆ ಕೊಡಬೇಕು? | ಜ್ಯೂಸ್, ಬೆಳೆಕಟ್ಟು ಮತ್ತು ನೀರು ಕೊಡಬಹುದೇ?| Introducing Solids to Baby

How to introduce Solids, Can I give Juice, Water, Dal ka Pani for Babies, kannada hindi

ಶಿಶುಗಳಿಗೆ ಘನ ಆಹಾರ ಹೇಗೆ ಕೊಡಬೇಕು? | ಜ್ಯೂಸ್, ಬೆಳೆಕಟ್ಟು ಮತ್ತು ನೀರು ಕೊಡಬಹುದೇ?| Introducing Solids to Baby

ಪೋಷಕರು ಮಕ್ಕಳಿಗೆ ಘನ ಆಹಾರವನ್ನು ಪರಿಚಯಿಸುವುದು ಬೆಳವಣಿಗೆಯ ಹಂತದಲ್ಲಿ ಮತ್ತೊಂದು ಮುಖ್ಯ ಮೈಲಿಗಲ್ಲು. ಪೋಷಕರು ಯಶಸ್ವಿಯಾಗಿ ಈ ಹಂತವನ್ನು ತಲುಪಿರುವುದಕ್ಕೆ ಅಭಿನಂದನೆಗಳು!! ಹಿಂದಿನ ಲೇಖನದಲ್ಲಿ, ಘನ ಆಹಾರಗಳನ್ನು ಯಾವಾಗ ಪರಿಚಯಿಸ ಬಹುದು ಎಂಬುದನ್ನು ಕುರಿತು ಮಾಹಿತಿ ನೀಡಿದ್ದೇನೆ ಮತ್ತು ಘನ ಆಹಾರಗಳನ್ನು ಹೇಗೆ ಪರಿಚಯಿಸಬೇಕೆಂದು ತಿಳಿದುಕೊಳ್ಳುವ ಮುಂಚೆ ಈ ಲೇಖನ ಓದಲು ಸಲಹೆ ನೀಡಿದ್ದೇನೆ.

ಘನಆಹಾರಗಳನ್ನು ಪರಿಚಯಿಸುವ ಕೆಲವು ಪ್ರಮುಖ ಅಂಶಗಳಲ್ಲಿ ಕೆಲವು ವಿವಾದಾತ್ಮಕವಾಗಿರುವುದು ಮತ್ತು ಅನೇಕರು ಲಾಭಕ್ಕಾಗಿ ದಾರಿ ತಪ್ಪಿಸುವಂತಹವು ಮಾಹಿತಿಯ ಬಗ್ಗೆ ಗಮನಹರಿಸಿದ್ದೇನೆ. ಅದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೆ ದಯವಿಟ್ಟು ಓದಿ.

ಶಿಶುಗಳಿಗೆ ಘನ ಆಹಾರ ಹೇಗೆ ಕೊಡಬೇಕು? | ಜ್ಯೂಸ್, ಬೆಳೆಕಟ್ಟು ಮತ್ತು ನೀರು ಕೊಡಬಹುದೇ?| Introducing Solids to Baby

How to introduce Solids, Can I give Juice, Water, Dal ka Pani for Babies, kannada hindi

ಮನೆಯಲ್ಲಿ ತಾಜಾ ಆಹಾರ ತಯಾರಿಸಲು ಪ್ರಾಮುಖ್ಯತೆ ನೀಡಬೇಕು

  • ಮಕ್ಕಳಿಗೆ ನೀವು ಹೊರಗೆ/ಪ್ರವಾಸಕ್ಕೆ  ಹೋಗಿದ್ದಲ್ಲಿ, ಆಹಾರ ತಯಾರಿಸಲು ಸಾಧ್ಯವಿಲ್ಲದ ಸಂದರ್ಭಗಳನ್ನು ಹೊರೆತುಪಡಿಸಿ ಶಿಶುಗಳಿಗೆ ಮನೆಯಲ್ಲಿ ತಾಜಾ ಆಹಾರವನ್ನು ತಯಾರಿಸಿ  ಪೂರೈಸುವುದು ಸೂಕ್ತ.
  • ಮನೆಯಲ್ಲಿ ತಯಾರಿಸುವುದರಿಂದ ಮಗುವಿಗೆ ಆಹಾರದ ವಿನ್ಯಾಸ, ಪ್ರಮಾಣ ಮತ್ತು ಪೋಷಣೆಯ ಬಗ್ಗೆ ತಿಳಿದುಕೊಳ್ಳುವುದು ಸುಲಭ.
  • ಮಗುವಿಗೆ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಹಾಕಿರುವ ಸಂಸ್ಕರಿಸಿದ ಆಹಾರ ತಪ್ಪಿಸಬಹುದು ಮತ್ತು ಘನ ಆಹಾರ ಆರಂಭಿಸಲು ಸಹಾಯಕವಾಗುವುದು. ಶುದ್ಧವಾಗಿ ಯಾವುದೇ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಬಳಸದೆ ಮನೆಯಲ್ಲೇ ತಯಾರಿಸಿರುವ ಜೈವಿಕ ಶಿಶು ಆಹಾರ ಕ್ಕೆ ಇಲ್ಲಿ ಪರಿಶೀಲಿಸಿ ನೀವು ಖರೀದಿಸಬಹುದು.

ಶಿಶುವಿಗೆ ಘನ ಆಹಾರಗಳನ್ನು ಪರಿಚಯಿಸುವಾಗ ಕೆಲವು ಪ್ರಮುಖ ಅಂಶಗಳು ಗಮನದಲ್ಲಿಟ್ಟು ಕೊಳ್ಳಬೇಕು  :

  • ಹಣ್ಣುಗಳು ಮತ್ತು ತರಕಾರಿ ರಸಗಳನ್ನು/ಪ್ಯೂರಿಗಳನ್ನು ಮೊದಲು ಪ್ರಾರಂಭಿಸಬೇಕು ನಂತರ ನಿಧಾನವಾಗಿ ಸರಿ/ಗಂಜಿಗಳು  , ಕೈಗೆ ನೀಡುವ ಆಹಾರಗಳು ಮತ್ತು ಸಾಮಾನ್ಯ ಕುಟುಂಬದ ಆಹಾರಗಳನ್ನು ಪರಿಚಯಿಸಬೇಕು.
  • ಮಗುವಿಗೆ ಆಹಾರ ನೀಡುವ ಮೊದಲು ಆಹಾರದ ತಾಪಮಾನವನ್ನು ಪರೀಕ್ಷಿಸಬೇಕು ಶಿಶುಗಳಿಗೆ  ಬೆಚ್ಚಗೆ ಆಹಾರವನ್ನು ನೀಡುವುದು ಒಳ್ಳೆಯದು.
  • ಮಗು ಎತ್ತವರವಾದ ಕುರ್ಚಿ– High Chair, ಬೂಸ್ಟರ್ ಕುರ್ಚಿ – Booster Chair ಅಥವಾ ಬೇಬಿ ಸೀಟ್ ಬಳಸಿ ಅನುಕೂಲಕರವಾಗಿ ಕುಳಿತುಕೊಳ್ಳುವುದಕ್ಕೆ ಸಹಾಯ ಮಾಡಬೇಕು.
  • ಮಗುವಿಗೆ ಹೊಟ್ಟೆ ಪೂರ್ಣವಾಗಿ ತುಂಬಿರುವುದನ್ನು ಗಮನಿಸಿ ನಿಲ್ಲಿಸಿ.
  • ಸ್ವಚ್ಚವಾಗಿರುವ ಪಾತ್ರೆಗಳನ್ನು (ಕ್ರಿಮಿನಾಶಕ ಪಾತ್ರೆಗಳು) ಮಾತ್ರ ಬಳಸಿ.
  • ಬೆಳಳಗ್ಗೆ ಹೊಸ ಆಹಾರವನ್ನು ಪರಿಚಯಿಸುವುದು ಒಳ್ಳೆಯದು.  ಅಲರ್ಜಿ ರೋಗಲಕ್ಷಣಗಳನ್ನು ಪರೀಕ್ಷಿಸಲು ಮತ್ತು ಗಮನಿಸಲು ಸಹಾಯಕ.
  • ಫಾರ್ಮುಲಾ ಹಾಲನ್ನು ಬಳಸಿ ಆಹಾರ ಬೇಯಿಸಬಾರದು.
  • ಒಂದು ವರ್ಷದ ತನಕ ಕೆಲವು ಆಹಾರಗಳನ್ನು ಮಕ್ಕಳಿಗೆ ನೀಡದೆ ಇರುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಶಿಶುಗಳಿಗೆ 6 ಆಹಾರಗಳು ಒಂದು ವರ್ಷ ತನಕ ನೀಡುವುದನ್ನು ತಪ್ಪಿಸಿ ಲೇಖನ ಓದಿ ಮಾಹಿತಿಯನ್ನು ಪಡೆದುಕೊಳ್ಳಿ.

ಶಿಶು ಆಹಾರ ಪರಿಚಯಿಸುವಾಗ ಕೆಲವು ಮಾರ್ಗದರ್ಶಿ ಅಂಶಗಳು

  • 6 ತಿಂಗಳ ಶಿಶುಗಳಿಗೆ ರಸ ಮತ್ತು ಪ್ಯೂರಿ ಪ್ರಾರಂಭಿಸಬೇಕು.
  • ಕ್ರಮೇಣ ನೀಡಿರುವ ಆಹಾರದ ಪ್ರಮಾಣವನ್ನು ಹೆಚ್ಚಿಸಿ.
  • ಪ್ರತಿ 3-4 ವಾರಗಳ ಆಹಾರದ ಹೊಸ ವಿನ್ಯಾಸವನ್ನು ಪರಿಚಯಿಸಬೇಕು.
  • 7 ತಿಂಗಳ ಶಿಶುಗಳಿಗೆ ಹಿಸುಕಿದ ಆಹಾರದ ವಿನ್ಯಾಸವನ್ನು ಪ್ರಾರಂಭಿಸಬೇಕು.
  • 8 ತಿಂಗಳ ಶಿಶುಗಳಿಗೆ ಕೈಗೆ ನೀಡುವ ಆಹಾರದ ಜೊತೆಗೆ ಹಿಸುಕಿದ ಆಹಾರವನ್ನು ಪ್ರಾರಂಭಿಸಬೇಕು.
  • 9 ತಿಂಗಳ ಶಿಶುಗಳಿಗೆ ಕೈಯಿಂದ ಆಹಾರವನ್ನು ಸಂಪೂರ್ಣವಾಗಿ ಅವರೇ ತಿನ್ನಲು ಅವಕಾಶ ಮಾಡಿಕೊಡಬೇಕು, ಹಿಸುಕಿದ ಆಹಾರಗಳನ್ನು  ನೀಡುವುದನ್ನು ನಿಲ್ಲಿಸಬಹುದು.
  • 10 ತಿಂಗಳ ಮಕ್ಕಳಿಗೆ ಕುಟುಂಬಕ್ಕೆ ಮಾಡಿರುವ ಎಲ್ಲಾ ಆಹಾರ ಉಪ್ಪು ಮತ್ತು  ಸಕ್ಕರೆ ಹಾಕದೆ, ಕಡಿಮೆ ಮಸಾಲೆಗಳು ಉಪಯೋಗಿಸಿ  ಪ್ರಾರಂಭಿಸಬೇಕು.
  • 12 ತಿಂಗಳ ಮಕ್ಕಳಿಗೆ, ಎಲ್ಲಾ ಆಹಾರವನ್ನು ಕಡಿಮೆ ಮಸಾಲೆ ಮತ್ತು ಅಗತ್ಯವಿದ್ದರೆ ಸ್ವಲ್ಪ ಉಪ್ಪು ಹಾಕಿ ನೀಡಬಹುದು.

ಶಿಶುಗಳಿಗೆ ಹಣ್ಣಿನ ರಸ/ಜ್ಯೂಸ್ ಕೊಡಬಹುದೇ ? 

  • ಸಮಯಾನುಸಾರ ಮಗುವಿಗೆ 100 ರಿಂದ 120 ಮಿಲೀ ರಸ ಮಾತ್ರ ಕೊಡಿ.
  • ಬಾಟಲ್/ಕಪ್  ನಿಂದ ರಸವನ್ನು ಕುಡಿಸಬೇಡಿ ಮತ್ತು ಊಟದ ಜೊತೆಗೆ ನೀಡಬಾರದು ಮತ್ತು ದಿನವಿಡೀ ನೀಡುವ ಹಾಗಿಲ್ಲ .
  • ಮಗುವಿನ ಸ್ತನ್ಯಪಾನ ಸೇವನೆಯ ಜೊತೆ ರಸವನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ಕೊರತೆಯಾಗಬಹುದು.
  • ಅಧಿಕ ರಸವನ್ನು ಕುಡಿಯುವುದರಿಂದ ದಂತ ಸಮಸ್ಯೆಗಳು ಮತ್ತು ಸ್ಥೂಲಕಾಯತೆಗೆ ಕಾರಣವಾಗುವುದು.
  • ಬಾಳೆಹಣ್ಣು, ಸಪೋಟ, ಸೇಬು, ಕಿತ್ತಳೆ ಮೊದಲಾದ ಮೃದುವಾದ ಹಣ್ಣುಗಳನ್ನು ನೀಡುವುದು ಸೂಕ್ತ.

ಶಿಶುಗಳಿಗೆ ಬೇಳೆ/ಅನ್ನ ಬೇಯಿಸಿದ ನೀರು ಕೊಡಬಹುದೇ?

  • ಬೇಳೆ/ಅನ್ನ ಬೇಯಿಸಿದ ನೀರಲ್ಲಿ ಕಾರ್ಬ್ಸ್, ಪ್ರೋಟೀನ್ ಇರುವುದಿಲ್ಲ ಅಥವಾ ಶಿಶುಗಳಿಗೆ ಬೇಕಾದ ಕೊಬ್ಬಿನಾಂಶ ಹೊಂದಿರುವುದಿಲ್ಲ, ಘನ ಆಹಾರವನ್ನು ಪರಿಚಯಿಸಿದಾಗ ಇವಗಳು ಬಹಳ ಅವಶ್ಯಕವಾಗಿರುತ್ತವೆ.
  • ಜೀವಸತ್ವಗಳು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತವೆ.
  • ಹಿಸುಕಿದ ಆಹಾರ ಅಥವಾ ಶುದ್ಧವಾದ ಬೇಯಿಸಿದ ಬೇಳೆ ಮತ್ತು ಮನೆಯಲ್ಲಿ ತಯಾರಿಸಿದ ಅಕ್ಕಿ ಧಾನ್ಯದ ಗಂಜಿ ಕೊಡಬಹುದು.
  • ಒಂದು ವರ್ಷದ ತನಕ ಮಗುವಿನ ಎದೆಹಾಲು ಸೇವನೆಗೆ ತೊಡಕಾಗಬಾರದು ಅದು ಮುಖ್ಯ ಆಹಾರವಾಗಿರಬೇಕು.

ಶಿಶುಗಳಿಗೆ ನೀರು ಕೊಡಬಹುದೇ?

  • ಶಿಶುಗಳಿಗೆ  ಘನ ಆಹಾರಗಳನ್ನು ಪ್ರಾರಂಭಿಸಿದಾಗ ಊಟದ ಜೊತೆಗೆ ನೀರು ನೀಡಬೇಕು.
  • ಶಿಶುಗಳಿಗೆ ದಿನಕ್ಕೆ 100 ಮಿಲಿಗಿಂತ ಹೆಚ್ಚು ನೀರನ್ನು ನೀಡಬೇಡಿ.
  • ಎದೆ ಹಾಲಿನಲ್ಲಿ 88% ನಷ್ಟು ನೀರು ಇರುತ್ತದೆ, ಶಿಶುಗಳಿಗೆ ಎದೆಹಾಲಿನಿಂದ ಬೇಕಾಗುವಷ್ಟು ನೀರು ಸಿಗುವುದು. ಬೇಸಿಗೆಯಲ್ಲೂ ಹೆಚ್ಚಿನ ನೀರಿನ ಅಗತ್ಯವಿರುವುದಿಲ್ಲ .
  • ಶಿಶುಗಳಿಗೆ ಫಾರ್ಮುಲಾ ಹಾಲನ್ನು ನೀಡುತ್ತಿದ್ದರೆ  ಬೇಸಿಗೆಯಲ್ಲಿ ಸ್ವಲ್ಪ ನೀರನ್ನು ಕುಡಿಸಬಹುದು..

ಶಿಶು ಆಹಾರವನ್ನು ಹೀಗೆ ರುಚಿಕರಗೊಳಿಸಬಹುದು 

  • ಮಗುವಿನ ಆಹಾರಕ್ಕೆ ರುಚಿ ಮತ್ತು ಪರಿಮಳ ನೀಡಲು ನೈಸರ್ಗಿಕವಾದ ಮಸಾಲೆಗಳನ್ನು ಬಳಸುವುದು ಉತ್ತಮ.
  • 6 ತಿಂಗಳ ಶಿಶು ಆಹಾರಕ್ಕೆ ಜೀರಿಗೆ, ಚಕ್ಕೆ , ಏಲಕ್ಕಿ ಪುಡಿಗಳನ್ನು ಸೇರಿಸಬಹುದು.
  • ನಂತರ ಕಾಳುಮೆಣಸು, ಕೊತ್ತುಂಬರಿ,  ಅಚ್ಚ ಖಾರದ ಪುಡಿ ಮತ್ತು ಇತರ ಮಸಾಲೆಯನ್ನು ನಿಧಾನವಾಗಿ ಪರಿಚಯಿಸಬಹುದು.
  • ಶುಂಠಿ, ನಿಂಬೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ಕೂಡ ಸೇರಿಸಬಹುದು.
  • ಹಣ್ಣುಗಳ ರಸ / ಪ್ಯೂರಿಗಳಲ್ಲಿ ನೈಸರ್ಗಿಕ ಸಿಹಿಕಾರಕಗಳಿರುವುದು, ಖರ್ಜೂರದ ಸಿರಪ್  ಅಥವಾ ಖರ್ಜೂರದ ಪುಡಿ ಮತ್ತು ಒಣದ್ರಾಕ್ಷಿ ಸಿರಪ್ ಅನ್ನು ನೈಸರ್ಗಿಕ ಸಿಹಿ ನೀಡಲು ಬಳಸಬಹುದು.
  • ಶಿಶು ಆಹಾರದಲ್ಲಿ ನಿಯಮಿತ ಸಿಹಿತಿನಿಸುಗಳು ನೀಡುವುದರಿಂದ ಹೆಚ್ಚು ಸಿಹಿ ತಿನ್ನಲು ಬಯಸುತ್ತಾರೆ ಮತ್ತು ಭವಿಷ್ಯದಲ್ಲಿ ಸಾಮಾನ್ಯ ಆಹಾರವನ್ನು ತಿನ್ನಲು ನಿರಾಕರಿಸುತ್ತಾರೆ.

ಮೊದಲೇ ಲೇಖನದ ತಿಳಿಸಿದಂತೆ ಕೆಲವು ಮಕ್ಕಳ ತಜ್ಞರು ಮತ್ತು ಆನ್ಲೈನ್ ​​ವೆಬ್ಸೈಟ್ಗಳಿಂದ (ಅಂತರ್ಜಾಲದಲ್ಲಿ) ತಪ್ಪು ಮಾಹಿತಿ ನೀಡಿರಬಹುದು

“ಅನೇಕ ಆರೋಗ್ಯ ವೃತ್ತಿಪರರು ನೀಡುವ  ಅಸಮರ್ಪಕ ಸಲಹೆಗಳು ಎದೆ ಹಾಲಿನ ಜೊತೆ ನೀಡುವ ಪೂರಕ ಆಹಾರದ ಸಲಹೆಗಳು  ಹಾನಿಕಾರಕವಾಗುತ್ತಿವೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಹಾಗು ಆರೋಗ್ಯ ವೃತ್ತಿಪರರ ತರಬೇತಿಯ ಬಗ್ಗೆ ಪ್ರಮುಖ ಪ್ರಶ್ನೆ ಮತ್ತು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಅಂತರ್ಜಾಲದಲ್ಲಿ ಹಲವಾರು ವೆಬ್ಸೈಟ್ಗಳಿವೆ. ಹಾಲುಣಿಸುವ ಆಹಾರವಾಗಿ ಬೇಳೆ ಬೇಯಿಸಿದ ನೀರನ್ನು ತಪ್ಪಾಗಿ ಸಿಫಾರಸ್ಸು ಮಾಡುವರು ಮತ್ತು ಜನರಿಗೆ ವಿಶೇಷವಾಗಿ ಪೋಷಕರಿಗೆ ತಪ್ಪು ಮಾಹಿತಿ ನೀಡುತ್ತದೆ. “

ಪ್ರಮುಖ ಉಲ್ಲೇಖ ಮತ್ತು ಹೆಚ್ಚಿನ ಮಾಹಿತಿಗೆ : http://medind.nic.in/icb/t07/i10/icbt07i10p962.pdf.

Video: ಶಿಶುಗಳಿಗೆ ಘನ ಆಹಾರ ಹೇಗೆ ಕೊಡಬೇಕು? | ಜ್ಯೂಸ್, ಬೆಳೆಕಟ್ಟು ಮತ್ತು ನೀರು ಕೊಡಬಹುದೇ?| Introducing Solids to Baby

ನಿಯಮಿತ ಅಪ್ಡೇಟ್ ಗೆ  Facebook Page ಮತ್ತು YouTube Channel ಗೆ subscribe ಮಾಡಿ.


Spread the love
  • 3
    Shares