Spread the love
 • 1
  Share

ಪುಟ್ಟ ಮಕ್ಕಳು ಮತ್ತು ಕುಟುಂಬಕ್ಕೆ ಮನೆಯಲ್ಲೇ ತಯಾರಿಸಿದ ಮೊಳಕೆ ರಾಗಿ ಸರಿ ಪುಡಿ :

ರಾಗಿ ಅಥವಾ ನಾಚ್ನಿ ಅಥವಾ ಫಿಂಗರ್ ಮಿಲೆಟ್ ಅನ್ನು ಆರಂಭಿಕ ಪೀಳಿಗೆಗಳಲ್ಲಿ ಮಕ್ಕಳಿಗೆ ಮೊದಲ ಘನ ಆಹಾರವಾಗಿ ತಲೆಮಾರುಗಳಿಂದ ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮೊಳಕೆಯೊಡೆಯದ ರಾಗಿ ಸರಿ ಪುಡಿ ಇಂದಿಗೂ ಸಹ ಪ್ರಚಲಿತವಾಗಿದೆ ತಾಯಿ ಹಾಲಿನ ನಂತರ ರಾಗಿ ಸರಿ ಪುಡಿಯನ್ನೆ ಎಲ್ಲರು ಉಪಯೋಗಿಸುವುದು. ಇದು ಎಲ್ಲಾ ವಯಸ್ಸಿನವರಿಗೆ ನೀಡಬಹುದಾದ ಆರೋಗ್ಯಕರ ಮತ್ತು ಪೌಷ್ಠಿಕಾಂಶದ ಮೊಳಕೆಯ ಪುಡಿ ಆಗಿದೆ. ಇದು ಬೇಯಿಸಿದಲ್ಲಿ ಶೀತವನ್ನು ಉಂಟುಮಾಡುತ್ತದೆ ಅಥವಾ ತೂಕ ಕಡಿಮೆಗೊಳಿಸುತ್ತದೆ ಎಂಬುದು ಸುಳ್ಳು ನಂಬಿಕೆ.

HOMEMADE SPROUTED RAGI POWDER for Babies, Toddlers, Kids & Family

ನಾವು ಈ ಮೊಳಕೆ ರಾಗಿ ಸರಿ ಪುಡಿಯನ್ನು  ಸುಲಭವಾಗಿ ಮನೆಯಲ್ಲಿ ತಯಾರಿಸಲು ಸಹಾಯವಾಗುವಂತಹ  ವೀಡಿಯೊ ಪಾಕವಿಧಾನ  ಮಾಡಿದ್ದೇವೆ.

ರಾಗಿ ಗಂಜಿ 6 ತಿಂಗಳ ಮೇಲ್ಪಟ್ಟ ಮಕ್ಕಳಿಗೆ  ನೀಡಬಹುದು. ಇಡ್ಲಿ, ಪ್ಯಾನ್ಕೇಕ್, ಕುಕೀಸ್, ಕೇಕ್ಸ್ ಮುಂತಾದ ಪಾಕವಿಧಾನಗಳಲ್ಲಿ ಇದನ್ನು ಬಳಸಬಹುದು. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ತಯಾರಿಸುವಾಗ ರಾಗಿ ಆಲೂಗಡ್ಡೆ ಪರಾಟ, ರಾಗಿ ರೊಟ್ಟಿ, ಬಾಳೆ ಹಣ್ಣು  ಮತ್ತು ಬೆಲ್ಲದೊಂದಿಗೆ ತತ್ಕ್ಷಣದ ರಾಗಿ ದೋಸೆಯನ್ನು ತಯಾರಿಸಬಹುದು.

ಮಕ್ಕಳಿಗೆ ರಾಗಿಯ ಉಪಯೋಗದಿಂದಾಗುವ  ಪ್ರಯೋಜನಗಳು:

 • ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತದೆ.
 • ನಾರಿನಂಶ ಹೆಚ್ಚಿರುತ್ತದೆ .
 • ಸುಲಭವಾಗಿ ಜೀರ್ಣವಾಗುತ್ತದೆ.
 • ಕಬ್ಬಿಣಾಂಶದ ಉತ್ತಮ ಮೂಲ ಮತ್ತು ರಕ್ತಹೀನತೆ ಅತ್ಯುತ್ತಮ ಆಹಾರ.
 • ಮೊಳಕೆಯೊಡೆಯುವ ಪ್ರಕ್ರಿಯೆಯು ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭಗೊಳಿಸುತ್ತದೆ.
 • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
 • ಹಾಲುಣಿಸುವ ತಾಯಂದಿರಿಗೆ ತುಂಬಾ ಪ್ರಯೋಜನಕಾರಿ

ನಮ್ಮ ಮೊಳಕೆ ರಾಗಿ ಸರಿ ಪುಡಿ ಮನೆಯಲ್ಲೇ ತಯಾರಿಸಿದ ಸುರಕ್ಷಿತವಾದ  ಪುಡಿ ಪ್ರಯತ್ನಿಸಿ

ಹೋಮ್ಮೇಡ್ ಹೆಲ್ತ್ ಮಿಕ್ಸ್ ಪೌಡರ್ ಅಥವಾ ಸಾತು ಮಾವು ಪುಡಿಗಳ ಪಾಕವಿಧಾನಕ್ಕಾಗಿ ನೀವು ಇಲ್ಲಿ ಪರಿಶೀಲಿಸಬಹುದು.

ಮೊಳಕೆ ರಾಗಿ ಸರಿ ಪುಡಿ ಹೇಗೆ ಮಾಡುವುದು ? ಈ ವೀಡಿಯೊ ನೋಡಿ

Kannada Subscribe Button TOTS AND MOMS

ಮೊಳಕೆ ರಾಗಿ ಸರಿ ಪುಡಿ

ಶಿಶುಗಳು ಹಾಗು ಅಂಬೆಗಾಲಿಡುವ ಮಕ್ಕಳಿಗಾಗಿ, ಕುಟುಂಬಕ್ಕೆ ಮನೆಯಲ್ಲಿ ತಯಾರಿಸಿದ ಮೊಳಕೆಯೊಡೆದ ರಾಗಿ ಪುಡಿ ಮಾಡಲು ಸುಲಭ.ಪರಾಟ, ಇಡ್ಲಿ, ದೋಸೆ, ಕೇಕ್ ಮತ್ತು ಕುಕೀಗಳನ್ನು ತಯಾರಿಸಲು ಬಳಸಬಹುದು

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

ಪದಾರ್ಥಗಳು :ರಾಗಿ/ ಫಿಂಗರ್ ಮಿಲೆಟ್/ ನಾಚ್ನಿ - 2 ಕಪ್

ವಿಧಾನ

 • ಎರಡು ಬಟ್ಟಲು ರಾಗಿಯನ್ನು ತೆಗೆದುಕೊಳ್ಳಿ .
 • ರಾಗಿಯನ್ನು ಎರಡು ಬಾರಿ ಚೆನ್ನಾಗಿ ನೀರಲ್ಲಿ ತೊಳೆಯಿರಿ, 8 ಗಂಟೆಗಳ ಕಾಲ ಅದನ್ನು ನೆನೆಸಿ .
 • ನೆನೆಸಿದ ರಾಗಿಯಿಂದ ಎಲ್ಲಾ ನೀರನ್ನು ಶೋಧಿಸಿಕೊಂಡು ಶುದ್ಧ ಹತ್ತಿ ಬಟ್ಟೆಗೆ ವರ್ಗಾಯಿಸಿ.ಅದನ್ನು ಬಿಗಿಯಾಗಿ ಒಂದು ಪೊಟ್ಲಿ ಯಂತೆ ಗಟ್ಟಿಯಾಗಿ ಕಟ್ಟಿ .
 • ಬೆಚ್ಚಗಿನ ಸ್ಥಳದಲ್ಲಿ ಇಡಬೇಕು ಉಷ್ಣಾಂಶ ಹೆಚ್ಚಿರುವ ಕಡೆ ಇಟ್ಟರೆ ಬೇಗ ಹಾಗು ಚೆನ್ನಾಗಿ ಮೊಳಕೆ ಬರಲು ಸಹಾಯ ವಾಗುತ್ತದೆ.
 • 8 ಗಂಟೆಗಳ ನಂತರ ಸುಂದರವಾದ ರಾಗಿ ಮೊಳಕೆಯನ್ನು ನೋಡಬಹುದು.
 • ಸೂರ್ಯನ ಶಾಖವನ್ನು ಅವಲಂಬಿಸಿ 24 ರಿಂದ 48 ಗಂಟೆಗಳವರೆಗೆ ಬಿಸಿಲಿನಲ್ಲಿ ಒಣಗಿಸಿ .
 • ಎರಡು ದಿನದ ನಂತರ ಮೊಳಕೆ ರಾಗಿ ಒಣಗಿದ್ದು ಪುಡಿ ಮಾಡಲು ಸಿದ್ಧವಾಗಿರುತ್ತದೆ .
 • ಒಣಗಿಸಿದ ಮೊಳಕೆಯೊಡದ ರಾಗಿಯನ್ನು. ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಚೆನ್ನಾಗಿ ಬಣ್ಣ ಬದಲಾಗುವ ತನಕ  ಹುರಿದುಕೊಳ್ಳ ಬೇಕು.
 • ತಂಪಾಗಿಸಿದ ನಂತರ ಅದನ್ನು ಮಿಕ್ಸರ್ ನಿಂದ ನಯವಾದ ಪುಡಿ ಮಾಡಿ. ಅಥವಾ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಿಸಬಹುದು.
 • ಮೊಳಕೆ ರಾಗಿ ಪುಡಿಯನ್ನು ಜರಡಿ ಮಾಡಬೇಕು .
 • ಪುಡಿಯನ್ನು ಒಳ್ಳೆಯ ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಿಸಿಡಿ. ಬೇಕಾದಾಗ ಉಪಯೋಗಿಸಬಹುದು.

 

ರಾಗಿ ಗಂಜಿ/ ಸರಿ ಮಾಡುವ ವಿಧಾನ

 • ಒಂದು ಪಾತ್ರೆಯಲ್ಲಿ ನೀರು ಅಥವಾ ಹಾಲಿಗೆ 2 ಟೀಸ್ಪೂನ್ ಮನೆಯಲ್ಲೇ ಮಾಡಿದ ಮೊಳಕೆ ರಾಗಿ ಸರಿ ಪುಡಿ ಗಂಟಿಲ್ಲದೆ ಕಲಿಸಬೇಕು .
 • ಮಿಶ್ರಣ ಮಾಡಿದ ನಂತರ ಅದನ್ನು ಗ್ಯಾಸ್ ನಲ್ಲಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೆರೆಸಿ ಕೈಯಾಡಿಸುತ್ತ  5 ನಿಮಿಷದ ಕಾಲ ಬೇಯಿಸಬೇಕು .
 • ಅಡುಗೆ ಮಾಡುವಾಗ ಗಂಜಿ ಬಣ್ಣ ಬದಲಾವಣೆ ವೀಕ್ಷಿಸಬಹುದು. ಈ ಸ್ಥಿರತೆ ಒಳ್ಳೆಯದು, ತಂಪಾದ ನಂತರ  ಅದು ಗಟ್ಟಿಯಾಗುತ್ತದೆ.
 • ಮೊಳಕೆಯೊಡದ ರಾಗಿ ಸರಿ ಪುಡಿ ಗಂಜಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

HOMEMADE SPROUTED RAGI POWDER for Babies, Toddlers, Kids & Family

 

 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ನಮ್ಮ ಪ್ರತಿ video ಮೊದಲಿಗೆ ನೋಡಲು ನಮ್ಮ YouTube Channel Subscribe ಮಾಡಿ.

 

 

 

 

 


Spread the love
 • 1
  Share