ಕೊಬ್ಬಿನಾಂಶ ಮಕ್ಕಳಿಗೆ ಎಷ್ಟು ಆವಶ್ಯಕ? | Healthy Fats in Kannada
Read this article in
ಕೊಬ್ಬಿನಾಂಶ ಮಕ್ಕಳಿಗೆ ಎಷ್ಟು ಆವಶ್ಯಕ?| Healthy Fats in Kannada
ಶಿಶುಗಳು ಮತ್ತು ಮಕ್ಕಳಿಗೆ ಆರೋಗ್ಯಕರವಾದ ಕೊಬ್ಬು | ಕೊಬ್ಬು/ ಕೊಬ್ಬಿನಾಂಶ ಏಕೆ ಮುಖ್ಯ | ಕೊಬ್ಬಿನ ವಿಧಗಳು | ಶಿಶುಗಳಿಗೆ ಯಾವ ರೀತಿಯ ಕೊಬ್ಬು ಒಳ್ಳೆಯದು | ಮಗುವಿಗೆ ಎಷ್ಟು ಕೊಬ್ಬು/ ಬೇಕಾಗುವುದು | ಆರೋಗ್ಯಕರ ಕೊಬ್ಬಿನಾಂಶ ಒಳಗೊಂಡಿರುವ ಆಹಾರಗಳು|ಕೊಬ್ಬಿನಾಂಶ ಮಕ್ಕಳಿಗೆ ಎಷ್ಟು ಆವಶ್ಯಕ?
ಕೊಬ್ಬು ಮಕ್ಕಳ ದೇಹಕ್ಕೆ ಏಕೆ ಅವಶ್ಯಕವಾಗಿರುತ್ತದೆ ?
- ಶಿಶುಗಳು ಮತ್ತು ಪುಟ್ಟ ಮಕ್ಕಳ ಆರೋಗ್ಯಕರ ಒಟ್ಟಾರೆ ಬೆಳವಣಿಗೆಗೆ ಅಗತ್ಯವಾದ ಪ್ರಮುಖ ಸೂಕ್ಷ್ಮ ಪೋಷಕಾಂಶಗಳಿಗೆ ಕೊಬ್ಬು ಪ್ರಮುಖವಾಗಿ ಬೇಕಾಗುವುದು .
- ದೇಹದಲ್ಲಿನ ಕೊಬ್ಬನ್ನು ಇಂಧನವಾಗಿ ಬಳಕೆ ಯಾಗುತ್ತದೆ. ಕೊಬ್ಬು ಕರಗುವ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಉದಾ. ಉತ್ತಮ ದೃಷ್ಟಿಗೆ ಅಗತ್ಯವಾದ ವಿಟಮಿನ್ ಎ, ಮೂಳೆ ಆರೋಗ್ಯಕ್ಕೆ ವಿಟಮಿನ್ ಡಿ, ಚರ್ಮಕ್ಕೆ ವಿಟಮಿನ್ ಇ, ಗಾಯಗಳನ್ನು ಗುಣಪಡಿಸಲು ವಿಟಮಿನ್ ಕೆ.
- ಬೆಳೆಯುತ್ತಿರುವ ಮಕ್ಕಳಿಗೆ ಕೊಬ್ಬು ಶಕ್ತಿಯ ಮೂಲವಾಗುವುದು .
- ಕೊಬ್ಬು ಮೆದುಳಿನ ಬೆಳವಣಿಗೆ, ಚರ್ಮದ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಲೇಖನದ ಕೊನೆಯಲ್ಲಿ ವಿಡಿಯೋ ನೋಡಲು ಮರೆಯಬೇಡಿ
ನಮ್ಮ ಬ್ಲಾಗ್ನಲ್ಲಿ ಕೆಳಗೆ ಉಪಯುಕ್ತ ಲಿಂಕ್ಗಳನ್ನು ನೀಡಲಾಗಿದೆ, ಹೆಚ್ಚಿನ ಮಾಹಿತಿಗೆ ಲೇಖನ ಓದಿ :
- ನನ್ನ ಮಗುವಿಗೆ ನಾನು ಬಿಸ್ಕತ್ತು ನೀಡಬಹುದೇ? ಬಿಸ್ಕತ್ತು ಯಾವಾಗ ಕೊಡಬೇಕು?
- ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಸಿವುದಕ್ಕೆ 21 ಅತ್ಯುತ್ತಮ ಆಹಾರಗಳು
- ನನ್ನ ಮಗುವಿಗೆ ನಾನು ಸಾಂಪ್ರದಾಯಿಕ ಸುತ್ತು ಖಾರ ನೀಡಬಹುದೇ?
- ಸಂಸ್ಕರಿಸಿದ ಶಿಶು ಆಹಾರಗಳ ಅಪಾಯಗಳನ್ನು ತಿಳಿದುಕೊಳ್ಳಿ
ಕೊಬ್ಬಿನ ವಿಧಗಳು
ಕೊಬ್ಬುಗಳಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ – ಅಪರ್ಯಾಪ್ತ ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬು .
- Unsaturated Fats/ಅಪರ್ಯಾಪ್ತ ಕೊಬ್ಬು
ಆರೋಗ್ಯಕರ ವಾದ ಕೊಬ್ಬು – ಬೀಜಗಳು, ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ತೋಫು-ವೆಗನ್ ( (ಸಸ್ಯಮೂಲ ಆಹಾರ) ಪನೀರ್ , ಆವಕಾಡೊ, ಮೀನು, ಕಾರ್ನ್ (ಜೋಳ), ಸೋಯಾಬೀನ್, ಕಡಲೆಕಾಯಿ, ಇತ್ಯಾದಿ. - Saturated Fats/ಸ್ಯಾಚುರೇಟೆಡ್ ಕೊಬ್ಬು
ಮಿತವಾಗಿ ತೆಗೆದುಕೊಳ್ಳಬೇಕಾದದ್ದು – ಪೂರ್ಣ ಕೊಬ್ಬು ಇರುವ ಡೈರಿ ಉತ್ಪನ್ನಗಳು , ಮಾಂಸ, ತೆಂಗಿನ ಎಣ್ಣೆ, ತುಪ್ಪ (60% ಸ್ಯಾಚುರೇಟೆಡ್ ಕೊಬ್ಬು), ಇತ್ಯಾದಿ. - Transfat /ಟ್ರಾನ್ಸ್ ಕೊಬ್ಬು
ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು – ಸಂಸ್ಕರಿಸಿದ ಆಹಾರಗಳಾದ ಬಿಸ್ಕತ್ತು, ಮಿಠಾಯಿಗಳು, ನೂಡಲ್ಸ್ ಮತ್ತು ಹೆಚ್ಚಾಗಿ ಎಲ್ಲಾ ಜಂಕ್ ಆಹಾರಗಳಲ್ಲಿ ಕಂಡುಬರುತ್ತದೆ.
ಮಗುವಿಗೆ ಎಷ್ಟು ಕೊಬ್ಬು/ ಕೊಬ್ಬಿನಾಂಶ ಬೇಕು?
1-3 ವರ್ಷ ವಯಸ್ಸಿನ ಮಕ್ಕಳಿಗೆ ಕೊಬ್ಬಿನಿಂದ ಒಟ್ಟು ಕ್ಯಾಲೊರಿಗಳಲ್ಲಿ ಶೇಕಡಾ 30-40% ರಷ್ಟು ಬರಬೇಕು- ಪ್ರತಿದಿನ ಸೇವಿಸುವ ಒಟ್ಟು 1,000 ಕ್ಯಾಲೊರಿಗಳಿಗೆ ದಿನಕ್ಕೆ ಸುಮಾರು 39 ಗ್ರಾಂ ನಷ್ಟು ಕೊಬ್ಬಿನಾಂಶ ಬೇಕಾಗುತ್ತದೆ. ಇದನ್ನು ಪ್ರತಿದಿನವೂ ಲೆಕ್ಕಹಾಕುವ ಅಗತ್ಯವಿಲ್ಲ, ದೇಹಕ್ಕೆ ಸರಿಹೊಂದುವ ಅಗತ್ಯ ಪ್ರಮಾಣವನ್ನು ನಮ್ಮ ಆಹಾರದಲ್ಲಿ ಸ್ವೀಕರಿಸುವ / ನೀಡುವ ಹಾಗೆ ನೋಡಿಕೊಳ್ಳಬೇಕು.
ತೆಳ್ಳಗೆ / ಸಣ್ಣಗೆ ಕಾಣುವ ಮಕ್ಕಳಿಗೆ ಸಾಕಷ್ಟು ಕೊಬ್ಬು/ಕೊಬ್ಬಿನಾಂಶ ಸಿಗುತ್ತಿಲ್ಲವೇ ?
ನಿಜವಾಗಿಯೂ ಇದೊಂದು ತಪ್ಪು ಕಲ್ಪನೆ. ಮಕ್ಕಳು ಆರೋಗ್ಯವಾಗಿರಲು ದಪ್ಪ / ದಷ್ಟ ಪುಸ್ತವಾಗಿರಬೇಕಾಗಿಲ್ಲ. ಅವರು ಸಕ್ರಿಯರಾಗಿದ್ದರೆ, ಸಮಯಕ್ಕೆ ಬೆಳವಣಿಗೆಯ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ , ಚೆನ್ನಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂದರೆ – ಪೋಷಕರಾಗಿ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳಬೇಡಿ ಹಾಗೂ ಚಿಂತಿಸಬೇಕಾಗಿಲ್ಲ. ಮಕ್ಕಳ ದೇಹದಲ್ಲಿರುವ ಕೊಬ್ಬಿನಾಂಶವನ್ನು ಚಟುವಟಿಕೆಗಳಿಗೆ ಶಕ್ತಿಯ ರೂಪದಲ್ಲಿ ಬಳಕೆಯಾಗುವುದು. ಮಗು ಯಾವಾಗಲೂ 5% ಶೇಕಡಾವಾರು ಇದ್ದರೂ ಸಹ ಅದು ಪರವಾಗಿಲ್ಲ , ನನ್ನ ಪ್ರಕಾರ ಅವರು ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳಬಾರದು. ಯಾವಾಗಲೂ ವೈದ್ಯರು ಸರಿಯಾದ ಪರೀಕ್ಷೆಯಿಂದ ಉತ್ತಮ ಸಲಹೆ ನೀಡುವರು , ಹಾಗಾಗಿ ಅನಗತ್ಯ ಅತಿಯಾದ ಆಹಾರ ಸೇವನೆಯಿಂದ ಹೆಚ್ಚು ಹಾನಿಯಾಗುತ್ತದೆ.
ಮಿತಿಮೀರಿದ ಕೊಬ್ಬು/ ಕೊಬ್ಬಿನಾಂಶ ವಿರುವ ಜಂಕ್ ಆಹಾರ ಸೇವನೆಯಿಂದ ತೂಕ ಹೆಚ್ಚಾಗಲು ಅಥವಾ ಬೊಜ್ಜು ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಎಚ್ಚರಿಕೆ ವಹಿಸುವುದು ಉತ್ತಮ.
Video: ಕೊಬ್ಬಿನಾಂಶ ಮಕ್ಕಳಿಗೆ ಎಷ್ಟು ಆವಶ್ಯಕ? | Healthy Fats in Kannada
ಕೊಬ್ಬಿನಾಂಶ ಮಕ್ಕಳಿಗೆ ಎಷ್ಟು ಆವಶ್ಯಕ? | Healthy Fats in Kannada
ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.