Spread the love
 • 9
  Shares

ಶಿಶು ಆಹಾರದಲ್ಲಿ ಹೆಸರು ಕಾಳಿನ ಉತ್ತಮ ಪ್ರಯೋಜನಕ್ಕಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ ಮತ್ತು ವಿವಿಧ ಪ್ರಯೋಜನಗಳಿರುವುದರಿಂದ ಭಾರತದಲ್ಲಿ ಅನೇಕ ಸಾಂಪ್ರದಾಯಿಕ ಶಿಶು ಆಹಾರ ಪಾಕವಿಧಾನಗಳಲ್ಲಿ ಬಳಸಲಾಗಿದೆ. ಹೆಸರು ಕಾಳು ಸರಿ ಪಾಕವಿಧಾನದಲ್ಲಿ ಹೆಸರು ಕಾಳು, ರಾಗಿ, ಅಕ್ಕಿ ಮತ್ತು ಗೋಧಿ ನುಚ್ಚನ್ನು ಬಳಸಿ ತಯಾರಿಸಲಾಗಿದೆ. ನಿಮ್ಮ ಮಗುವಿನ ಆಹಾರ ಮಿಶ್ರಣವನ್ನು ನೀವೇ ತಯಾರಿಸಿದರೆ, ನಿಮ್ಮ ಇಚ್ಚೆಯಂತೆ ಮಗುವಿನ ಅವಶ್ಯತೆಗಳನುಸಾರವಾಗಿ ಅನುಕೂಲಕವಾಗುವಂತೆ ಮಾಡಬಹುದು. ಒಳ್ಳೆಯ ಪರಿಮಳ ಹಾಗು ರುಚಿಗೆ ಇಲ್ಲಿ ಒಣ ಶುಂಠಿ ಪುಡಿ, ಕಾಳುಮೆಣಸಿನ ಪುಡಿ ಇತ್ಯಾದಿಗಳನ್ನು.ಬಳಸಿದ್ದೇನೆ  – 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಈ ಮಿಶ್ರಣವನ್ನು ಮಾಡಲು ನೆನೆಸಿ, ಮೊಳಕೆಕಟ್ಟಿದ ಹೆಸರು ಕಾಳು ಮತ್ತು ರಾಗಿ ಬಳಸಿ ಮಾಡಬಹುದು.

ಹೆಸರುಕಾಳು ಸರಿ | Green Gram Porridge Recipe in Kannada

Green Gram Porridge Recipe for Babies Moong Ragi Dalia Porridge Hindi Kannada

ಮಗುವಿನ ಸಮಗ್ರ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾಗಿರುವ ಆಹಾರವನ್ನು ಸಂಯೋಜಿಸಲು ಖಚಿತಪಡಿಸಿಕೊಳ್ಳಬೇಕು. ಮಗು ಆಹಾರ ಇಷ್ಟಪಡುತ್ತಿದ್ದರೂ ಸಹ ವಿವಿಧ ಬಗೆಯ ಆಹಾರವನ್ನು ಪುನರಾವರ್ತಿಸದೆ ಬೇರೆ ಬೇರೆ ಸಂಯೋಜನೆಯ ಸರಿ ನೀಡುವುದು ಸಮತೋಲಿತ ಪೌಷ್ಟಿಕಾಂಶಯುಕ್ತ ಆಹಾರ ಕ್ರಮಕ್ಕೆ ಉತ್ತಮ. ಎಲ್ಲಾ ಅಗತ್ಯ ಪೌಷ್ಠಿಕಾಂಶಗಳು ಮತ್ತು ಖನಿಜಗಳು  ದೇಹದ ಅವಶ್ಯಕತೆಯನ್ನು ಪೂರ್ಣಗೊಳಿಸುವುದು. ಬೆಳೆಯುವ ಶಿಶುಗಳಿಗೆ ಸೂಕ್ತವಾದ ಎತ್ತರ ಮತ್ತು ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ. ಮೊದಲ ಎರಡು ವಾರಗಳಲ್ಲಿ ಮೂಲ ಘನ ಆಹಾರಗಳನ್ನು ಪರಿಚಯಿಸಿದ ನಂತರ 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.

6 ತಿಂಗಳ ನಂತರ ಶಿಶುಗಳಿಗೆ ಮೇಲಿನ ಆಹಾರ ಕೊಡಲು ಪ್ರಾರಂಭಿಸಿದಾಗ ಶಿಶುಗಳಿಗೆ ಕೊಡಬಹುದಾದ ಕೆಲವು ಆಹಾರಗಳು ಕೆಳಗಿವೆ :

3 ಹಣ್ಣುಗಳು ರಸ –ಸೇಬು, ಪೇರಳೆ, ಕುಂಬಳಕಾಯಿ 

3 ತರಕಾರಿಗಳ ರಸ ಕ್ಯಾರೆಟ್, ಆಲೂಗಡ್ಡೆ, ಬೀಟ್ ರೂಟ್

ಕೇರಳ ಬಾಳೆಕಾಯಿ ಪುಡಿ

ಶಿಶುಗಳಿಗೆ ರೈಸ್ ಏಕದಳ ಸೆರೆಲಾಕ್

3 ಓಟ್ಸ್ ಅಂಬಲಿ – ಸೇಬು, ಬಾಳೆಹಣ್ಣು , ಕ್ಯಾರಟ್

ಪ್ರತಿ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಇನ್ನು ವಿಭಿನ್ನ ಗಂಜಿ/ಸರಿ, ಪ್ಯೂರಿ/ರಸ, ತ್ವರಿತ ಶಿಶು ಆಹಾರ ಮಿಶ್ರಣಗಳು, ಕೈಗೆ ನೀಡುವಂತಹ ಆಹಾರಗಳು ಮತ್ತು ಆರೋಗ್ಯಕರ ತೂಕವನ್ನು ಪಡೆಯುವ ಆಹಾರಕ್ಕಾಗಿ ಇಲ್ಲಿ ಪರಿಶೀಲಿಸಿ. ನೀವು ನಮ್ಮ ಅಂಗಡಿಯಿಂದ ಪ್ರಮಾಣೀಕೃತ ಸಾವಯವ ಶಿಶು ಆಹಾರಗಳನ್ನು ಕೂಡ ಖರೀದಿಸಬಹುದು ಮತ್ತು ಪ್ರಯತ್ನಿಸಲು ವಿನಂತಿಸುತ್ತೇನೆ.

ಹೆಸರುಕಾಳು ಸರಿ | Green Gram Porridge Recipe in Kannada

Kannada Subscribe Button TOTS AND MOMS

ಹೆಸರುಕಾಳು ಸರಿ ಪಾಕವಿಧಾನ 

ಹೆಸರುಕಾಳು ಸರಿ

ಹೆಸರು ಕಾಳಲ್ಲಿ ಪ್ರೋಟೀನ್,ವಿಟಮಿನ್ ಹಾಗು ಖನಿಜಗಳಲ್ಲಿ ಸಮೃದ್ಧವಾಗಿರುತ್ತದೆ. ಭಾರತದಲ್ಲಿ ಹೆಸರು ಕಾಳಿನ ವಿವಿಧ ಪ್ರಯೋಜನಗಳನ್ನು ತಿಳಿದಿರುವುದರಿಂದ ಸಾಂಪ್ರದಾಯಿಕ ಶಿಶು ಆಹಾರದ ಪಾಕವಿಧಾನಗಳಲ್ಲಿ ಸೇರಿಸಲಾಗಿದೆ. ನಾವು ಇಲ್ಲಿ ಹೆಸರು ಕಾಳು ಸರಿ/ಅಂಬಲಿಯನ್ನು ಮನೆಯಲ್ಲಿ ಹೇಗೆ ತಯಾರಿಸಬಹುದೆಂದು ನೋಡೋಣ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

 1. ಹೆಸರು ಕಾಳು - 1/2 ಕಪ್
 2. ರಾಗಿ  - 1/2 ಕಪ್
 3. ಗೋಧಿ ನುಚ್ಚು  - 1/4 ಕಪ್
 4. ಅಕ್ಕಿ  - 1/4 ಕಪ್
 5. ಜೀರಿಗೆ - 1/4 tsp

ವಿಧಾನ

 • ಒಂದು ದೊಡ್ಡ ಬಟ್ಟಲಲ್ಲಿ ಕೆಳಗೆ ತೋರಿಸಲಾಗಿರುವ ತರಹ ಹೆಸರು ಕಾಳು ಮತ್ತು ರಾಗಿಯನ್ನು ಎರಡು ಸಲ ಚೆನ್ನಾಗಿ ತೊಳೆಯಿರಿ.
 • ತೊಳೆದ ಹೆಸರು ಕಾಳು ಮತ್ತು ರಾಗಿಯನ್ನು ಬೇರೆ ಬೇರೆ ಬಿಳಿ ಮಸ್ಲಿನ್ / ಹತ್ತಿ ಬಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ½ ಗಂಟೆ ಅಥವಾ ಒಂದು ಗಂಟೆ ಒಣಗಲು ಬಿಡಬೇಕು.
 • 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಹೆಸರು ಕಾಳು ಮತ್ತು ರಾಗಿ ಕಾಳನ್ನು ನೆನೆಸಿ ನಂತರ ಮೊಳಕೆ ಕಟ್ಟಿ ಮಿಶ್ರಣ ತಯಾರಿಸಬಹುದು.
 • ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ ಬೇರೆ ಬೇರೆಯಾಗಿ ಹೆಸರು ಕಾಳು ಮತ್ತು ರಾಗಿಯನ್ನು ಶುಷ್ಕವಾಗಿ ಮಧ್ಯಮ ಉರಿಯಲ್ಲಿ ಬಣ್ಣ ಬದಲಾಗುವ ತನಕ ಹುರಿದುಕೊಳ್ಳಿ. ಇದೆ ರೀತಿ ಉಳಿದ ಎಲ್ಲಾ  ಪದಾರ್ಥಗಳಾದ ಅಕ್ಕಿ,ಗೋಧಿ ನುಚ್ಚು ಮತ್ತು ಜೀರಿಗೆ ಯನ್ನು ಹುರಿದುಕೊಳ್ಳಬೇಕು.ತದನಂತರ ಹುರಿದ ಕಾಳನ್ನು ತಟ್ಟೆಗೆ ತಂಪಾಗಲು ವರ್ಗಾಯಿಸಿ.
 • ತಂಪಾದ ನಂತರ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಿಕ್ಸರ್/ ಬ್ಲೆಂಡರ್ ಬಳಸಿ ನಯವಾದ ಪುಡಿಯಾಗಿ ಮಾಡಿಕೊಳ್ಳಬೇಕು. ಮನೆಯಲ್ಲಿ ತರಿತರಿ ಯಾಗಿ ಪುಡಿ ಮಾಡಿಕೊಳ್ಳಬಹುದು. ಗಾಜಿನ ಡಬ್ಬದಲ್ಲಿ ಶೇಖರಿಸಿ ಬೇಕಾದಾಗ ಉಪಯೋಗಿಸಬಹುದು.
 • ಸರಿ ಮಾಡಲು : ಗ್ಯಾಸ್ ಸ್ಟವ್ ಹಚ್ಚುವ ಮೊದಲು ಒಂದು ಪ್ಯಾನ್ ಗೆ 1 tbsp ಹೆಸರು ಕಾಳು ಸರಿ ಮಿಶ್ರಣ ಪುಡಿ ಮತ್ತು 1/2 ಕಪ್ ನೀರು ಹಾಕಿ ಗಂಟಿಲ್ಲದೆ ಮಿಶ್ರಣ ಮಾಡಿಕೊಳ್ಳಬೇಕು.
 • ನಂತರ ಮಧ್ಯಮ ಉರಿಯಲ್ಲಿ ಬೇಯಿಸಿ ತುಪ್ಪ ಹಾಕಿ ಮಿಶ್ರಣ ಮಾಡಿ. 2-3 ನಿಮಿಷ ಚೆನ್ನಾಗಿ ಬೆಂದ ನಂತರ ಗಟ್ಟಿಯಾದ ಸರಿ ತಯಾರಾಗುವುದು.
 • ಹೆಸರುಕಾಳು ಸರಿ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಹೆಸರುಕಾಳು ಸರಿ | Green Gram Porridge Recipe in Kannada

Green Gram Porridge Recipe for Babies Moong Ragi Dalia Porridge Hindi Kannada

ಹೆಸರು ಕಾಳು ಸರಿ ಮಾಡುವ ವಿಧಾನ :

೧. ಒಂದು ದೊಡ್ಡ ಬಟ್ಟಲಲ್ಲಿ ಕೆಳಗೆ ತೋರಿಸಲಾಗಿರುವ ತರಹ ಹೆಸರು ಕಾಳು ಮತ್ತು ರಾಗಿಯನ್ನು ಎರಡು ಸಲ ಚೆನ್ನಾಗಿ ತೊಳೆಯಿರಿ.

Green Gram Porridge Recipe for Babies Moong Ragi Dalia Porridge Hindi Kannada

೨. ತೊಳೆದ ಹೆಸರು ಕಾಳು ಮತ್ತು ರಾಗಿಯನ್ನು ಬೇರೆ ಬೇರೆ ಬಿಳಿ ಮಸ್ಲಿನ್ / ಹತ್ತಿ ಬಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ½ ಗಂಟೆ ಅಥವಾ ಒಂದು ಗಂಟೆ ಒಣಗಲು ಬಿಡಬೇಕು.

Green Gram Porridge Recipe for Babies Moong Ragi Dalia Porridge Hindi Kannada

೩. 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಹೆಸರು ಕಾಳು ಮತ್ತು ರಾಗಿ ಕಾಳನ್ನು ನೆನೆಸಿ ನಂತರ ಮೊಳಕೆ ಕಟ್ಟಿ ಮಿಶ್ರಣ ತಯಾರಿಸಬಹುದು.

Green Gram Porridge Recipe for Babies Moong Ragi Dalia Porridge Hindi Kannada

೪.ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ ಬೇರೆ ಬೇರೆಯಾಗಿ ಹೆಸರು ಕಾಳು ಮತ್ತು ರಾಗಿಯನ್ನು ಶುಷ್ಕವಾಗಿ ಮಧ್ಯಮ ಉರಿಯಲ್ಲಿ ಬಣ್ಣ ಬದಲಾಗುವ ತನಕ ಹುರಿದುಕೊಳ್ಳಿ. ಇದೆ ರೀತಿ ಉಳಿದ ಎಲ್ಲಾ  ಪದಾರ್ಥಗಳಾದ ಅಕ್ಕಿ,ಗೋಧಿ ನುಚ್ಚು ಮತ್ತು ಜೀರಿಗೆ ಯನ್ನು ಹುರಿದುಕೊಳ್ಳಬೇಕು.ತದನಂತರ ಹುರಿದ ಕಾಳನ್ನು ತಟ್ಟೆಗೆ ತಂಪಾಗಲು ವರ್ಗಾಯಿಸಿ.

Green Gram Porridge Recipe for Babies Moong Ragi Dalia Porridge Hindi Kannada

೫. ತಂಪಾದ ನಂತರ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಿಕ್ಸರ್/ ಬ್ಲೆಂಡರ್ ಬಳಸಿ ನಯವಾದ ಪುಡಿಯಾಗಿ ಮಾಡಿಕೊಳ್ಳಬೇಕು. ಮನೆಯಲ್ಲಿ ತರಿತರಿ ಯಾಗಿ ಪುಡಿ ಮಾಡಿಕೊಳ್ಳಬಹುದು. ಗಾಜಿನ ಡಬ್ಬದಲ್ಲಿ ಶೇಖರಿಸಿ ಬೇಕಾದಾಗ ಉಪಯೋಗಿಸಬಹುದು.

೬. ಸರಿ ಮಾಡಲು : ಗ್ಯಾಸ್ ಸ್ಟವ್ ಹಚ್ಚುವ ಮೊದಲು ಒಂದು ಪ್ಯಾನ್ ಗೆ 1 tbsp ಹೆಸರು ಕಾಳು ಸರಿ ಮಿಶ್ರಣ ಪುಡಿ ಮತ್ತು 1/2 ಕಪ್ ನೀರು ಹಾಕಿ ಗಂಟಿಲ್ಲದೆ ಮಿಶ್ರಣ ಮಾಡಿಕೊಳ್ಳಬೇಕು. 

Green Gram Porridge Recipe for Babies Moong Ragi Dalia Porridge Hindi Kannada

೭. ನಂತರ ಮಧ್ಯಮ ಉರಿಯಲ್ಲಿ ಬೇಯಿಸಿ ತುಪ್ಪ ಹಾಕಿ ಮಿಶ್ರಣ ಮಾಡಿ. 2-3 ನಿಮಿಷ ಚೆನ್ನಾಗಿ ಬೆಂದ ನಂತರ ಗಟ್ಟಿಯಾದ ಸರಿ ತಯಾರಾಗುವುದು

Green Gram Porridge Recipe for Babies Moong Ragi Dalia Porridge Hindi Kannada

೮. ಹೆಸರುಕಾಳು ಸರಿ ಸಿದ್ಧವಾಗಿದೆ.

ಹೆಸರುಕಾಳು ಸರಿ | Green Gram Porridge Recipe in Kannada

Green Gram Porridge Recipe for Babies Moong Ragi Dalia Porridge Hindi Kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
 • 9
  Shares