Spread the love
  • 4
    Shares

ಗ್ರೆನೋಲ ಬಾರ್ ಪ್ರಯಾಣ ಮಾಡುವಾಗ ಸುಲಭ ಮತ್ತು ಆರೋಗ್ಯಕರ ತಿಂಡಿಯ ಆಯ್ಕೆ. ದೊಡ್ಡ ಮಕ್ಕಳಿಗೆ ಪೌಷ್ಟಿಕವಾದ ಲಘು ಆಹಾರ. ಹಾಲುಣಿಸುವ ತಾಯಂದಿರಿಗೆ ಬಹಳ ಉಪಯುಕ್ತ, ಸ್ತನ್ಯಪಾನಕ್ಕೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಬೆಳಗಿನ ಉಪಹಾರಕ್ಕು ನೀಡಬಹುದಾದ ಅತ್ಯುತ್ತಮ ಆಹಾರ. ಮಕ್ಕಳಿಗೆ ಇಷ್ಟವಾಗುವ ಚಾಕೋ ಚಿಪ್ಸ್ ಕೂಡ ಬಳಸಲಾಗಿದೆ. ಮನೆಯಲ್ಲೇ ಗ್ರೆನೋಲ ಬಾರ್ ತೈಯರಿಸಿದರ ನಮ್ಮ ಮಕ್ಕಳ ಅಭಿರುಚಿ ಹಾಗು ಅವರು ತುಂಬಾ ಇಷ್ಟಪಡುವ ಒಣಹಣ್ಣುಗಳನ್ನು ಬಳಸಿ ಪ್ರೀತಿಯಿಂದ ಮಾಡಿ ಕೊಡಬಹುದು.

ಗ್ರೆನೋಲ ಬಾರ್ | Protein Rich Granola Bars in Kannada

Granola Bars | No Bake Protein Rich Bar for Kids | Lactation Friendly Bars hindi kannada

ಗ್ರೆನೋಲ ಬಾರ್ ಪಾಕವಿಧಾನದಲ್ಲಿ ಓಟ್ಸ್, ಒಣ ಹಣ್ಣುಗಳು ಹಾಗು ಬೀಜಗಳನ್ನು ಬಳಸಿರುವುದರಿಂದ ಹಾಲುಣಿಸುವ ತಾಯಂದಿರಿಗೆ ಉಪಯುಕ್ತ. ನಿರೀಕ್ಷಿತ ತಾಯಂದಿರಿಗೂ ಒಳ್ಳೆಯದು. ನೈಸರ್ಗಿಕವಾಗಿ ಸ್ತನ್ಯಪಾನಕ್ಕೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಸಹಾಯಕ. ಈ ಪಾಕವಿಧಾನಕ್ಕೆ ಕುಂಬಳ ಬೀಜ, ಎಳ್ಳು, ಗಸಗಸೆ ಹಾಕಿ ತಯಾರಿಸಬಹುದು. ಬಾಣಂತಿಯರಿಗೆ ಒಳ್ಳೆಯ ಆಹಾರ.

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ ನೋಡಿ :

Video: ಗ್ರೆನೋಲ ಬಾರ್ | Protein Rich Granola Bars in Kannada

Kannada Subscribe Button TOTS AND MOMS

ಗ್ರೆನೋಲ ಬಾರ್ | Protein Rich Granola Bars in Kannada

ಗ್ರೆನೋಲ ಬಾರ್

ಪ್ರೋಟೀನ್ ಯುಕ್ತ ಗ್ರೆನೋಲ ಬಾರ್ ಪ್ರಯಾಣ ಮಾಡುವಾಗ ಸುಲಭ ಮತ್ತು ಆರೋಗ್ಯಕರ ತಿಂಡಿಯ ಆಯ್ಕೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ತಿಂಡಿ, ಸ್ನಾಕ್ಸ್, ಶಿಶು ಆಹಾರ
ತಿನಿಸು:ವಿದೇಶೀಯ

ಸಾಮಗ್ರಿಗಳು

  1. ತ್ವರಿತ ಅಡಿಗೆ ಓಟ್ಸ್ - 2 ಕಪ್
  2. ಬಾದಾಮಿ - 1/4 ಕಪ್
  3. ಗೋಡಂಬಿ - 1/4 ಕಪ್
  4. ಖರ್ಜೂರ - 1/2 ಕಪ್ ಹೆಚ್ಚಿರುವ
  5. ಒಣದ್ರಾಕ್ಷಿ - 1/4 ಕಪ್
  6. ಗಸಗಸೆ - 2 tsp(optional)
  7. ಜೇನು ತುಪ್ಪ /ಬೆಲ್ಲದ ಸಿರಪ್ - 1/4 ಕಪ್
  8. ಚಾಕೋ ಚಿಪ್ಸ್ - 1/4 ಕಪ್
  9. ಬೆಣ್ಣೆ - 100 gm

ವಿಧಾನ

  1. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ನಲ್ಲಿ ಕೆಳಗೆ ತೋರಿಸಿರುವ ತರಹ ಎನ್ನನ್ನು ಹಾಕದೆ ಬಾದಾಮಿ ಹುರಿದು ಪಕ್ಕಕೆ ಇಡಿ.ಅದೇ ರೀತಿ ಗೋಡಂಬಿ ಹುರಿದುಕೊಳ್ಳಬೇಕು.
  2. ತಣ್ಣಗಾದ ನಂತರ ಗೋಡಂಬಿ ಮತ್ತು ಬಾದಾಮಿಯನ್ನು ಬ್ಲೆಂಡರ್ ಜಾರ್ ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಅಥವಾ ಹಾಗೆ ಕುಟ್ಟಿ ಪುಡಿ ಮಾಡಿ ಉಪಯೋಗಿಸಿದರೆ ಗ್ರೆನೋಲ ಬಾರ್ ಗೆ ಗರಿಗರಿ ಕ್ರಂಚಿ ವಿನ್ಯಾಸವನ್ನು ನೀಡುವುದು.ಅದೇ ಬಾಣಲೆಗೆ ಓಟ್ಸ್ ಹಾಕಿ.
  3. ಸ್ವಲ್ಪ ಬೆಣ್ಣೆ ಹಾಕಿ ಒಳ್ಳೆಯ ಪರಿಮಳ ಮತ್ತು ಹೊಂಬಣ್ಣ ಬರುವ ತನಕ ಓಟ್ಸ್ ಹುರಿದುಕೊಳ್ಳಿ.
  4. ತದನಂತರ ಕೊನೆಯಲ್ಲಿ ಗ್ಯಾಸ್ ಆರಿಸುವ ಮೊದಲು ಗಸಗಸೆ ಹಾಕಿ 2 ನಿಮಿಷ ಹುರಿದುಕೊಳ್ಳಿ, ಎಲ್ಲಾ ಪದಾರ್ಥಗಳನ್ನು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ. ಕತ್ತರಿಸಿರುವ ಖರ್ಜೂರ ಮತ್ತು ಒಣದ್ರಾಕ್ಷಿ ಹಾಕಿ ಬಾಣಲೆಯಲ್ಲಿ 2 ನಿಮಿಷ ಹುರಿಯಿರಿ.ತಂಪಾಗಲು ಬಿಡಿ.
  5. ಬಟ್ಟಲಿನಲ್ಲಿ ಓಟ್ಸ್ ಮಿಶ್ರಣ, ಹುರಿದಿರುವ ಖರ್ಜೂರ ಮತ್ತು ದ್ರಾಕ್ಷಿ, ಬೀಜಗಳು ಒಣಹಣ್ಣುಗಳ ಪುಡಿ ಹಾಕಿ ಇದಕ್ಕೆ ಜೇನುತುಪ್ಪ ,ಬೆಲ್ಲದ ಸಿರಪ್ ಹಾಕಿ.
  6. ಮಕ್ಕಳು ಚಾಕೋಲೇಟ್ ಇಷ್ಟಪಡುವುದರಿಂದ ಚಕೋ ಚಿಪ್ಸ್ ಬೇಕಾದರೆ ಹಾಕಬಹುದು. ಚೆನ್ನಾಗಿ ಮಿಶ್ರಣ ಮಾಡಿ. ಯಾವುದಾದರು ತಟ್ಟೆ ಅಥವಾ ಟ್ರೇ ಗೆ ತುಪ್ಪ / ಬೆಣ್ಣೆ ಹಚ್ಚಿ ಮಿಶ್ರಣವನ್ನು ಹಾಕಿ.
  7. ಮಿಶ್ರಣವನ್ನು ಚೆನ್ನಾಗಿ ತಟ್ಟಿ ಸಮ ಮಾಡಿ. ಫ್ರಿಡ್ಜ್ ನಲ್ಲಿ 2-3 ಗಂಟೆಗಳ ಕಾಲ ಇಟ್ಟು ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಗ್ರೆನೋಲ ಬಾರ್ | Protein Rich Granola Bars in Kannada

Granola Bars | No Bake Protein Rich Bar for Kids | Lactation Friendly Bars hindi kannada

ಗ್ರೆನೋಲ ಬಾರ್ ಮಾಡಲು ಬೇಕಾಗುವ ಸಾಮಗ್ರಿಗಳು :

  1. ತ್ವರಿತ ಅಡಿಗೆ ಓಟ್ಸ್ – 2 ಕಪ್
  2. ಬಾದಾಮಿ – 1/4 ಕಪ್
  3. ಗೋಡಂಬಿ – 1/4 ಕಪ್
  4. ಖರ್ಜೂರ – 1/2 ಕಪ್ ಹೆಚ್ಚಿರುವ
  5. ಒಣದ್ರಾಕ್ಷಿ – 1/4 ಕಪ್
  6. ಗಸಗಸೆ – 2 tsp(optional)
  7. ಜೇನು ತುಪ್ಪ /ಬೆಲ್ಲದ ಸಿರಪ್ – 1/4 ಕಪ್
  8. ಚಾಕೋ ಚಿಪ್ಸ್ – 1/4 ಕಪ್
  9. ಬೆಣ್ಣೆ – 100 gm

ಗ್ರೆನೋಲ ಬಾರ್ ಮಾಡುವ ವಿಧಾನ :

1. ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ನಲ್ಲಿ ಕೆಳಗೆ ತೋರಿಸಿರುವ ತರಹ ಎನ್ನನ್ನು ಹಾಕದೆ ಬಾದಾಮಿ ಹುರಿದು ಪಕ್ಕಕೆ ಇಡಿ.ಅದೇ ರೀತಿ ಗೋಡಂಬಿ ಹುರಿದುಕೊಳ್ಳಬೇಕು.

Granola Bars | No Bake Protein Rich Bar for Kids | Lactation Friendly Bars

2. ತಣ್ಣಗಾದ ನಂತರ ಗೋಡಂಬಿ ಮತ್ತು ಬಾದಾಮಿಯನ್ನು ಬ್ಲೆಂಡರ್ ಜಾರ್ ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಅಥವಾ ಹಾಗೆ ಕುಟ್ಟಿ ಪುಡಿ ಮಾಡಿ ಉಪಯೋಗಿಸಿದರೆ ಗ್ರೆನೋಲ ಬಾರ್ ಗೆ ಗರಿಗರಿ ಕ್ರಂಚಿ ವಿನ್ಯಾಸವನ್ನು ನೀಡುವುದು.ಅದೇ ಬಾಣಲೆಗೆ ಓಟ್ಸ್ ಹಾಕಿ.

Granola Bars | No Bake Protein Rich Bar for Kids | Lactation Friendly Bars

3. ಸ್ವಲ್ಪ ಬೆಣ್ಣೆ ಹಾಕಿ ಒಳ್ಳೆಯ ಪರಿಮಳ ಮತ್ತು ಹೊಂಬಣ್ಣ ಬರುವ ತನಕ ಓಟ್ಸ್ ಹುರಿದುಕೊಳ್ಳಿ.

Granola Bars | No Bake Protein Rich Bar for Kids | Lactation Friendly Bars

4. ತದನಂತರ ಕೊನೆಯಲ್ಲಿ ಗ್ಯಾಸ್ ಆರಿಸುವ ಮೊದಲು ಗಸಗಸೆ ಹಾಕಿ 2 ನಿಮಿಷ ಹುರಿದುಕೊಳ್ಳಿ, ಎಲ್ಲಾ ಪದಾರ್ಥಗಳನ್ನು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ. ಕತ್ತರಿಸಿರುವ ಖರ್ಜೂರ ಮತ್ತು ಒಣದ್ರಾಕ್ಷಿ ಹಾಕಿ ಬಾಣಲೆಯಲ್ಲಿ 2 ನಿಮಿಷ ಹುರಿಯಿರಿ.ತಂಪಾಗಲು ಬಿಡಿ.

Granola Bars | No Bake Protein Rich Bar for Kids | Lactation Friendly Bars

5. ಬಟ್ಟಲಿನಲ್ಲಿ ಓಟ್ಸ್ ಮಿಶ್ರಣ, ಹುರಿದಿರುವ ಖರ್ಜೂರ ಮತ್ತು ದ್ರಾಕ್ಷಿ, ಬೀಜಗಳು ಒಣಹಣ್ಣುಗಳ ಪುಡಿ ಹಾಕಿ ಇದಕ್ಕೆ ಜೇನುತುಪ್ಪ ,ಬೆಲ್ಲದ ಸಿರಪ್ ಹಾಕಿ.

Granola Bars | No Bake Protein Rich Bar for Kids | Lactation Friendly Bars

6. ಮಕ್ಕಳು ಚಾಕೋಲೇಟ್ ಇಷ್ಟಪಡುವುದರಿಂದ ಚಕೋ ಚಿಪ್ಸ್ ಬೇಕಾದರೆ ಹಾಕಬಹುದು. ಚೆನ್ನಾಗಿ ಮಿಶ್ರಣ ಮಾಡಿ. ಯಾವುದಾದರು ತಟ್ಟೆ ಅಥವಾ ಟ್ರೇ ಗೆ ತುಪ್ಪ / ಬೆಣ್ಣೆ ಹಚ್ಚಿ ಮಿಶ್ರಣವನ್ನು ಹಾಕಿ.

Granola Bars | No Bake Protein Rich Bar for Kids | Lactation Friendly Bars

7. ಮಿಶ್ರಣವನ್ನು ಚೆನ್ನಾಗಿ ತಟ್ಟಿ ಸಮ ಮಾಡಿ. ಫ್ರಿಡ್ಜ್ ನಲ್ಲಿ 2-3 ಗಂಟೆಗಳ ಕಾಲ ಇಟ್ಟು ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

Granola Bars | No Bake Protein Rich Bar for Kids | Lactation Friendly Bars

ಗ್ರೆನೋಲ ಬಾರ್ | Protein Rich Granola Bars in Kannada

Granola Bars | No Bake Protein Rich Bar for Kids | Lactation Friendly Bars hindi kannada

ಸೂಚನೆ :

  1. ಬೇಕಾದರೆ ನೀವು ಗ್ರೆನೋಲ ಬಾರ್ ಅನ್ನು ಬೇಕ್ ಮಾಡಿ ಗರಿಗರಿಯಾದ ವಿನ್ಯಾಸ ನೀಡಬಹುದು. 30 ನಿಮಿಷಗಳ ಕಾಲ 180 ಡಿಗ್ರಿ ಯಲ್ಲಿ ಬೇಕ್ ಮಾಡಿ.
  2. ಫ್ರಿಡ್ಜ್ ನಲ್ಲಿ 15 ದಿನಗಳ ತನಕ ಶೇಖರಿಸಿಡಬಹುದು.
  3. ನಿಮಗೆ ಬೇಕಾದ ಯಾವುದಾದರು ಸಾಮಗ್ರಿಯನ್ನು ಹಾಕಿ ಅಥವಾ ತೆಗೆದು ನಿಮ್ಮ ಮಕ್ಕಳ ಅಭಿರುಚಿಗೆ ತಕ್ಕಂತೆ  ಮಾಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 4
    Shares