Spread the love
  • 7
    Shares

ಕೆಮ್ಮು ಮತ್ತು ಶೀತಕ್ಕೆ ನೈಸರ್ಗಿಕ ಚಿಕಿತ್ಸೆಗಾಗಿ ಮನೆಯ ಪರಿಹಾರ ಶುಂಠಿ ಕಷಾಯ ಶುಂಠಿ ಕಷಾಯ ಎಂಬುದು ಕೆಮ್ಮು ಮತ್ತು ಶೀತಕ್ಕೆ ಪರಿಪೂರ್ಣ ಮನೆ ಮದ್ದಾಗಿದೆ, ಇದನ್ನು 1 ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಪುಟ್ಟ ಮಕ್ಕಳಿಗೆ  ಹಾಗು ದೊಡ್ಡವರಿಗು ನೀಡಬಹುದು. ಇದನ್ನು ಪ್ರಸಿದ್ಧವಾಗಿ ಅಜ್ಜಿಯ ಕಷಾಯ ಎಂದು ಕರೆಯಲಾಗುತ್ತದೆ. ಕೆಮ್ಮು, ಜ್ವರ, ಶೀತ, ರೋಗಗಳಿಂದ ರಕ್ಷಣೆ  ಮತ್ತು ಅನೇಕ ಕಾಯಿಲೆಗಳ ಚಿಕಿತ್ಸೆಗೆ ಅಥವಾ ಮನೆಯಲ್ಲಿ ತಯಾರಿಸಬಹುದಾದ ಆಯುರ್ವೇದದ ನೈಸರ್ಗಿಕ ಔಷಧವಾಗಿದೆ. ತಮಿಳು ಭಾಷೆಯಲ್ಲಿ ಕಷಾಯಮ್ ಎಂದು ಖ್ಯಾತಿ ಪಡೆದಿದೆ, ಕನ್ನಡದಲ್ಲಿ ಕಷಾಯ, ಹಿಂದಿ ಭಾಷೆಯಲ್ಲಿ ಇದನ್ನು ಅದ್ರಕ್ ಕಾ ಕಾಢ ಎಂದು ಕರೆಯುತ್ತಾರೆ.

ಶುಂಠಿ ಕಷಾಯ | Ginger Kashaya – Home Remedy for Cough & Cold in Kannada
Ginger Kashaya or Ginger Tea for cough or cold_kannada ದಿನಕ್ಕೆ ಎರಡು ಬಾರಿ ಈ ಕಷಾಯವನ್ನು ಕುಡಿಯುವುದರಿಂದ ತಕ್ಷಣವೇ ಪ್ರಯೋಜನ ಸಿಗುವುದು ಮತ್ತು ವೈದ್ಯರ ನಿಯಮಿತ ಭೇಟಿ ಮತ್ತು ಅತಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ನಮ್ಮ ದೇಹದ ವ್ಯವಸ್ಥೆಯು ಆಂತರಿಕವಾಗಿ ಮತ್ತು ನೈಸರ್ಗಿಕವಾಗಿ ದೇಹವನ್ನು ರಕ್ಷಿಸುವುದು. ನೈಸರ್ಗಿಕವಾಗಿ ವಾಸಿಯಾಗಲು ಮತ್ತು ಉತ್ತಮ ಫಲಿತಾಂಶಗಳಿಗಾಗಿ ಆಯುರ್ವೇದ ಅಥವಾ ಮನೆಯ ಪರಿಹಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಶಿಫಾರಸು ಮಾಡುತ್ತೇವೆ. ನೀವು ಈ ಶುಂಠಿ ಚಹಾ ಅಥವಾ ಶುಂಠಿ ಕಷಾಯವನ್ನು ಪುಟ್ಟ ಮಕ್ಕಳಿಗೆ ನೀಡಬಹುದು.

1 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮತ್ತು ವಯಸ್ಕರಿಗೆ ಆಹಾರದ ನಂತರ ದಿನಕ್ಕೆ ಎರಡು ಬಾರಿ ನೀಡಬಹುದು.

ಶುಂಠಿ ಪ್ರಯೋಜನಗಳು:

  • ಶ್ವಾಸಕೋಶದಲ್ಲಿ ಕಫಾ ತೆಳುಗೊಳಿಸುತ್ತದೆ.
  • ತಾಪಮಾನವನ್ನು ಕಡಿಮೆ ಮಾಡುತ್ತದೆ, ಹಾಗು ಮೂಗು ಕಟ್ಟುವಿಕೆ ಸರಿಪಡಿಸುವುದಕ್ಕೆ ಸಹಾಯಕ.
  • ಶೀತ, ಗಂಟಲ ನೋವು , ಕೆಮ್ಮಿನೊಂದಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಯನ್ನು ಸರಿಪಡಿಸುವುದಕ್ಕೆ ಸಹಾಯ ಮಾಡುತ್ತದೆ.
  • ನೋವನ್ನು ಶಮನಗೊಳಿಸುತ್ತದೆ ಮತ್ತು ಶಾಂತಗೊಳಿಸುತ್ತದೆ.
  • ಶ್ವಾಸಕೋಶದ ದಟ್ಟಣೆ (congestion) ಸಡಿಲಗೊಳಿಸಲು ಸಹಾಯವಾಗುತ್ತದೆ.

ನಿಂಬೆಯ ಲಾಭಗಳು :

  • ಶೀತ ಮತ್ತು ಜ್ವರಕ್ಕೆ ಪ್ರತಿರೋಧವನ್ನು ನಿರ್ಮಿಸುತ್ತದೆ.
  • ಬೇಗ ಗುಣವಾಗಲು ಅರಿವು ಮಾಡಿಕೊಡುತ್ತದೆ.

ಜೀನು ತುಪ್ಪದ ಹಿತಕರ ಪ್ರಯೋಜನಗಳು :

  • ಶ್ವಾಸಕೋಶದ ದಟ್ಟಣೆ ಕಡಿಮೆಯಾಗುವುದು.
  • ನಿರ್ಜಲೀಕರಣವನ್ನು ತಡೆಗಟ್ಟುತ್ತದೆ.

Video : ಶುಂಠಿ ಕಷಾಯ | Ginger Kashaya – Home Remedy for Cough & Cold in Kannada

Kannada Subscribe Button TOTS AND MOMS

ಶುಂಠಿ ಕಷಾಯ | Ginger Kashaya - Home Remedy for Cough & Cold in Kannada

ಮಕ್ಕಳು ಮತ್ತು ವಯಸ್ಕರಿಗೆ ಶುಂಠಿ ಚಹಾ ಅಥವಾ ಶುಂಠಿ ಕಷಾಯ ಮೊದಲ ಹಂತದ ಶೀತ ಮತ್ತು ಕೆಮ್ಮು ನಿವಾರಿಸಲು ಒಳ್ಳೆಯ ಮನೆ ಮದ್ದು. ಕೆಲವು ನಿಮಿಷಗಳಲ್ಲಿಯೇ ತಯಾರಿಸಬಹುದು. ಇದು ಸಿರಪ್ ನ ಬದಲು ಉಪಯೋಗಿಸಬಹುದಾದ ಉತ್ತಮ ಪರ್ಯಾಯವಾಗಿದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಮನೆ ಪರಿಹಾರಗಳು/ಮದ್ದು /ಉಪಾಯಗಳು
ತಿನಿಸು:ಭಾರತೀಯ

ಸಾಮಗ್ರಿಗಳು

1. ಶುಂಠಿ - 1/2 ಇಂಚು  (ತುರಿದದ್ದು )

2. ನೀರು - 1 ಕಪ್

3. ಜೇನು ತುಪ್ಪ - 1 tsp

4. ನಿಂಬೆ – ರಸ  1/2 tsp

ವಿಧಾನ

1. ಪಾತ್ರೆಗೆ ನೀರು, ತುರಿದ ಶುಂಠಿ ಸೇರಿಸಿ.

2. ನೀರಿನ  ಬಣ್ಣ ಬದಲಾಗುವ ತನಕ ಮಿಶ್ರಣವನ್ನು 5 -10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.

3. ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಬೇಕು ನಂತರ ಶೋಧಿಸಬೇಕು .

4. ಇದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಸ್ವಲ್ಪ ಬಿಸಿ ಇರುವಂತೆಯೇ ಸೇವಿಸಬೇಕು.

5. ಶುಂಠಿ ಕಷಾಯ ಸಿದ್ಧವಾಗಿದೆ.

ಇತರ ಪಾಕವಿಧನಗಳಿಗೆ ನಮ್ಮ Facebook Page ನೋಡಿ.

ಶುಂಠಿ ಕಷಾಯ | Ginger Kashaya – Home Remedy for Cough & Cold in Kannada

  Ginger Kashaya or Ginger Tea for cough or cold_kannada

ಶುಂಠಿ ಕಷಾಯ ಮಾಡುವ ವಿಧಾನ :

1. ಪಾತ್ರೆಗೆ ನೀರು, ತುರಿದ ಶುಂಠಿ ಸೇರಿಸಿ. Ginger Kashaya Recipe for cough or cold 2. ನೀರಿನ ಬಣ್ಣ ಬದಲಾಗುವ ತನಕ  ಮಿಶ್ರಣವನ್ನು 5 -10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. Ginger Kashaya Recipe for cough or cold 3. ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಬೇಕು ನಂತರ ಶೋಧಿಸಬೇಕು. Ginger Kashaya Recipe for cough or cold 4. ಇದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಸ್ವಲ್ಪ ಬಿಸಿ ಇರುವಂತೆಯೇ ಸೇವಿಸಬೇಕು. Ginger Kashaya Recipe for cough or cold 5. ಶುಂಠಿ ಕಷಾಯ ಸಿದ್ಧವಾಗಿದೆ.

ಶುಂಠಿ ಕಷಾಯ | Ginger Kashaya – Home Remedy for Cough & Cold in Kannada
Ginger Kashaya or Ginger Tea for cough or cold_kannada ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 7
    Shares