Spread the love

ಪ್ರತಿ ತಾಯಿಯೂ ತನ್ನ ಮಗುವಿಗೆ ಅತ್ಯುತ್ತಮವಾದ ಆಹಾರ ನೀಡಲು ಬಯಸುತ್ತಾರೆ ಹಾಗು ನೀಡುತ್ತಾರೆ. ಮಗುವನ್ನು ಬೆಳೆಸಲು ನಾವು ಬಳಸುವ ಹಲವು ಪುರಾತನ ಸಂಪತ್ತುಗಳಲ್ಲಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗೆ ಮನೆಯ ಪರಿಹಾರೋಪಾಯಗಳಲ್ಲಿ ಬಳಕೆ ಮಾಡಬಹುದು.

ಶಿಶುಗಳಿಗೆ ತುಪ್ಪ

Ghee for Babies, When, How, Why and Benefits kannada hindi tuppa

ಶಿಶುಗಳಲ್ಲಿ ಉತ್ತಮ ಆರೋಗ್ಯ ಮತ್ತು ಪೌಷ್ಠಿಕಾಂಶದ ಸರಿಯಾದ ಪ್ರಮಾಣವನ್ನು ತುಪ್ಪದಿಂದ ಹೊಂದಬಹುದಾಗಿದೆ. ತುಪ್ಪ ಅತ್ಯುತ್ತಮ ಹಾಗು ಆರೋಗ್ಯಕರ ಆಯ್ಕೆಗಳಲ್ಲಿ ಒಂದಾಗಿದೆ. ದಿನನಿತ್ಯದ ಆಹಾರದಲ್ಲಿ ಸರಿಯಾದ ಪ್ರಮಾಣದ ತುಪ್ಪ ಬಳಸಬೇಕು. ತುಪ್ಪ ಚಿಕ್ಕ ವಯಸ್ಸಿನಿಂದ ಪ್ರಾರಂಭಿಸಿದರೆ  ಒಳ್ಳೆಯದು.

1. ತುಪ್ಪ ಎಂದರೇನು?

Ghee for Babies, When, How, Why and Benefits kannada hindi

ಹಸು ಅಥವಾ ಎಮ್ಮೆಯ ಹಾಲಿನಿಂದ ತುಪ್ಪ ತಯಾರಿಸಲಾಗುವುದು. ಕಚ್ಚಾ ಹಾಲಿನಿಂದ ಪ್ರಾರಂಭವಾಗಿ ಬೆಣ್ಣೆ, ಬೆಣ್ಣೆಯನ್ನು ಕುದಿಸಿ ತುಪ್ಪ ಮಾಡುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

2. ಮಗುವಿಗೆ ತುಪ್ಪವನ್ನು ಯಾವಾಗ ನೀಡಬಹುದು?

Ghee for Babies, When, How, Why and Benefits kannada hindi

6 ತಿಂಗಳು ಮೇಲ್ಪಟ್ಟ ವಯಸ್ಸಿನ ಶಿಶುಗಳಿಗೆ ಮತ್ತು ಮಕ್ಕಳಿಗೆ ನೀಡಬಹುದು. ದೊಡ್ಡ ವಯಸ್ಸಿನ ಮಕ್ಕಳಿಗೂ ನೀಡಬಹುದು. ಇದು ಪ್ರತಿ ಮಗುವಿನ ಮೇಲೆ ಅವಲಂಬಿತವಾಗಿರುತ್ತದೆ; ಕೆಲವು ಮಕ್ಕಳು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ ಮತ್ತು ಕೆಲವು ಮಕ್ಕಳು ಸ್ವಲ್ಪ ನಿಧಾನವಾಗಿ ಜೀರ್ಣಿಸಿಕೊಳ್ಳುತ್ತಾರೆ.

3. ಮಗುವಿಗೆ ಎಷ್ಟು ತುಪ್ಪ ನೀಡಬಹುದು?

Ghee for Babies, When, How, Why and Benefits kannada hindi

  • 6-8 ತಿಂಗಳು ವಯಸ್ಸಿನ ಮಕ್ಕಳಿಗೆ : ತುಪ್ಪದ ಕೆಲವು ಹನಿಗಳು
  • 8-10 ತಿಂಗಳುಗಳು ವಯಸ್ಸಿನ ಮಕ್ಕಳಿಗೆ  : ತುಪ್ಪ 1 tsp ತನಕ/ ಕೆಲವು ಹನಿಗಳು
  • 12-24 ತಿಂಗಳು ವಯಸ್ಸಿನ ಮಕ್ಕಳಿಗೆ: 1 ರಿಂದ 1 ½  tsp
  • 2 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ: 1 ½ ರಿಂದ 2 tsp

ತುಪ್ಪವನ್ನು 2 ಅಥವಾ 3 ಬಾರಿ ಆಹಾರದಲ್ಲಿ ವಿಂಗಡಿಸಿ ನೀಡುವುದು ಒಳ್ಳೆಯದು.

4. ಶಿಶುಗಳಿಗೆ ಮತ್ತು ಮಕ್ಕಳಿಗೆ ತುಪ್ಪವನ್ನು ಏಕೆ ನೀಡಬೇಕು?

Ghee for Babies, When, How, Why and Benefits kannada hindi

ವಿಟಮಿನ್ ಗಳನ್ನು  ಕರಗುವ ರೂಪಕ್ಕೆ ಕೊಬ್ಬು (fat) ಮಾಡುವಲ್ಲಿ ತುಪ್ಪ ಸಹಾಯ ಮಾಡುತ್ತದೆ. ಕೊಬ್ಬಿನ ಅನುಪಸ್ಥಿತಿಯಲ್ಲಿ ವಿಟಮಿನ್-ಎ, ಡಿ, ಇ ಮತ್ತು ಕೆ ನಂತಹ ಅನೇಕ ವಿಟಮಿನ್ ಗಳ ಹೀರಿಕೊಳ್ಳುವಿಕೆಯನ್ನು ಕಡಿತಗೊಳಿಸಬಹುದು. ಆದ್ದರಿಂದ ಮಗುವಿನ ಆಹಾರದಲ್ಲಿ ತುಪ್ಪವನ್ನು ಬಳಸುವ ಅವಶ್ಯಕತೆಯಿದೆ.

5. ಶಿಶುಗಳಲ್ಲಿ ತೂಕ ಹೆಚ್ಚಾಗುವುದಕ್ಕೆ ತುಪ್ಪ ನೆರವಾಗುತ್ತದೆಯೇ?

Ghee for Babies, When, How, Why and Benefits kannada hindi

ತುಪ್ಪ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಶಿಶುಗಳಲ್ಲಿ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಮಕ್ಕಳ ಬೆಳವಣಿಗೆ ಪ್ರಾರಂಭಿಕ ವರ್ಷಗಳಲ್ಲಿ ಪ್ರತಿ ಮೈಲಿಗಲ್ಲುಗೂ ಸಹ ಸಹಾಯ ಮಾಡುತ್ತದೆ.

ಓದಿ ತೂಕ ಹೆಚ್ಚಿಸುವ ಆಹಾರಗಳು, ಮೊಳಕೆ ಕಾಳುಗಳ ಸರಿ

6. ಶಿಶು ಆಹಾರದಲ್ಲಿ ತುಪ್ಪವನ್ನು ಬಳಸುವುದರಿಂದ ಇತರ ಪ್ರಯೋಜನಗಳು:

Ghee for Babies, When, How, Why and Benefits kannada hindi

  • ಮೂಳೆ ಮತ್ತು ಮೆದುಳಿನ ಅಭಿವೃದ್ಧಿಯಲ್ಲಿ ಸಹಾಯ ಮಾಡುವುದು.
  • ಚಯಾಪಚಯನವನ್ನು ಸಮತೋಲನಗೊಳಿಸುತ್ತದೆ.
  • ತುಪ್ಪದಲ್ಲಿ ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುತ್ತದೆ.
  • ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೂ ನೀಡಬಹುದು.
  • ಶಕ್ತಿಯನ್ನು ನೀಡುವುದು.

ಓದಿ 8 ವಿವರ – ಲ್ಯಾಕ್ಟೋಸ್ ಅಸಹಿಷ್ಣುತೆ ಬಗ್ಗೆ

7. ಶಿಶು ಆಹಾರದಲ್ಲಿ ತುಪ್ಪವನ್ನು ಹೇಗೆ ಬಳಸಬಹುದು?

Ghee for Babies, When, How, Why and Benefits kannada hindi

ಭಾರತ ಅನೇಕ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಹಾಗು ಅನೇಕ ಪಾಕಪದ್ಧತಿಗಳನ್ನು ಒಳಗೊಂಡಿದೆ. ಶಿಶುಗಳಿಗೆ ಬೇಕಾದ ತುಪ್ಪವನ್ನು ಗಂಜಿ, ಅಂಬಲಿ, ಸರಿ , ಅಣ್ಣ, ರೊಟ್ಟಿ, ಇಡ್ಲಿ, ಬೇಳೆ, ದೋಸೆ ಮುಖ್ಯವಾಗಿ ಬಿಸಿಯಾಗಿ ಸೇವಿಸುವ ಆಹಾರ ಅಥವಾ ನಿಮ್ಮ ಮಗುವಿಗೆ ಪರಿಚಯಿಸಲು ನೀವು ಬಯಸುವ ಯಾವುದೇ ಪ್ರಾದೇಶಿಕ ಆಹಾರದಲ್ಲಿ ಅಥವಾ ಮುಖ್ಯ ಆಹಾರದಲ್ಲಿ ನೀಡ ಬಹುದು. ತುಪ್ಪ ಒಂದು ತಟಸ್ಥ ರುಚಿಯನ್ನು ಹೊಂದಿರುತ್ತದೆ ಮತ್ತು ಅದು ಯಾವಾಗಲೂ ರುಚಿಯನ್ನು ಹೆಚ್ಚಿಸುತ್ತದೆ!

ಓದಿ ಗಂಜಿ & ಸರಿಖಿಚಡಿ

8. ಅಂಗಡಿಯಿಂದ ಖರೀದಿಸಿದ ತುಪ್ಪದ ಶುದ್ಧತೆಯನ್ನು ಹೇಗೆ ಪರೀಕ್ಷಿಸುವುದು?

Ghee for Babies, When, How, Why and Benefits kannada hindi

ಒಂದು ಚಮಚ ತುಪ್ಪಕ್ಕೆ  ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸಕ್ಕರೆಯ ಒಂದು ಚಿಟಕೆ ಸೇರಿಸಿ, ಐದು ನಿಮಿಷ ಬಿಟ್ಟುಬಿಡಿ. ತಳದಲ್ಲಿ ಅದು ಕೆಂಪಗೆ ಕಂಡುಬಂದರೆ, ತುಪ್ಪವು ಕಲಬೆರಕೆಯಾಗಿದೆ ಅಥವಾ ಶುದ್ಧವಾಗಿಲ್ಲವೆಂದು ತಿಳಿಯುತ್ತದೆ. Organic Ghee ಇಲ್ಲಿ ಖರೀದಿಸಬಹುದು         

9. ಶಿಶುಗಳಿಗೆ ತುಪ್ಪದ ಇತರ ಉಪಯೋಗಗಳು

Ghee for Babies, When, How, Why and Benefits kannada hindi

– ತುಪ್ಪವನ್ನು ಶಿಶುಗಳಿಗೆ ಮಸಾಜ್ ನೀಡಲು ಬಳಸಬಹುದು.

– ತುಪ್ಪದ ಬಳಕೆಯಿಂದ ಚರ್ಮ ಮತ್ತು ಶುಷ್ಕ ಚರ್ಮವನ್ನು ಗುಣಪಡಿಸಬಹುದು.

  • ಶಿಶುಗಳಲ್ಲಿ ಇಸಬಿನ ಚಿಕಿತ್ಸೆ(Eczema) ಮಾಡಬಹುದು.
  • ಕೆಮ್ಮು ಅಥವಾ ನೆಗಡಿಯ ಚಿಕಿತ್ಸೆಗೆ ಸಹಾಯಕವಾಗುವುದು.

ಓದಿ ಶಿಶುಗಳ ಮಸಾಜ್ – 5 ಅದ್ಭುತ ಸಲಹೆಗಳು

10. ತುಪ್ಪ ಒಂದು ಆರೋಗ್ಯಕರ ಕೊಬ್ಬು ಹೇಗೆ?

Ghee for Babies, When, How, Why and Benefits kannada hindi

ತುಪ್ಪ ಬೊಜ್ಜು ಅಥವಾ ಅನಾರೋಗ್ಯಕರ ಆಯ್ಕೆಯಲ್ಲ. ತುಪ್ಪ ಎಣ್ಣೆ ಅಲ್ಲ, ಆದರೆ ಅನಂತ ಪೌಷ್ಟಿಕಾಂಶದ ಮೌಲ್ಯವಿದೆ ಮತ್ತು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸ್ಪಷ್ಟ ಬೆಣ್ಣೆ. ಸಂಶಯವಿಲ್ಲದೆ ಮಗುವಿನ ಆಹಾರದಲ್ಲಿ ತುಪ್ಪವನ್ನು ಬಳಸಬಹುದು.

ಶಿಶುಗಳಿಗೆ ಮತ್ತು ಮಕ್ಕಳಿಗೆ ತುಪ್ಪ- ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳು: ಈ ವೀಡಿಯೊ ನೋಡಿ 

Kannada Subscribe Button TOTS AND MOMS

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.


Spread the love