Spread the love
  • 11
    Shares

ಗರ್ಭದಾರಣೆಗೆ ಮೊದಲು ತಿಳಿದುಕೊಳ್ಳಿ | Pregnancy Tips in Kannada

Getting Pregnant | All you need to know before you plan one conceiving garbhadharan hindi kannada

ಮಹಿಳೆಯರ ಜೀವನದಲ್ಲಿ ಅನೇಕ ಹಂತಗಳು ಇರುವುದು ಅವುಗಳಲ್ಲಿ ಗರ್ಭಾವಸ್ಥೆಯು ಒಂದಾಗಿದೆ. ಮಾತೃತ್ವದ ಅನುಭವವು ಯಾವಾಗಲೂ ಆನಂದದಾಯಕ ಮತ್ತು ಶಾಶ್ವತವಾಗಿರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟೇ ಕಷ್ಟವಾಗಿದ್ದರೂ, ಮೊದಲ ಬಾರಿಗೆ ಮಗುವಿನ ಮುಖ ನೋಡಿದ ಕ್ಷಣವೇ ಮರೆಯಾಗುತ್ತದೆ. ಕೆಲವೊಮ್ಮೆ ಅನೇಕ ಮಹಿಳೆಯರಿಗೆ ನೈಸರ್ಗಿಕ ಪ್ರಕ್ರಿಯೆಯಲ್ಲಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಜೀವನಶೈಲಿ, ಹಾರ್ಮೋನಿನ ಬದಲಾವಣೆಗಳು, ಫೈಬ್ರಾಯಡ್ ಗಳು, ಒತ್ತಡದ ಅಂಶಗಳು ಮಹಿಳೆಯ ಆರೋಗ್ಯದ ಮೇಲೆ ಹಾಗು ಗರ್ಭಿಣಿಯಾಗಲು ಗಂಭೀರ ಪರಿಣಾಮ ಬೀರುವುದು. ಅಂತಹ ಸನ್ನಿವೇಶಗಳನ್ನು ತಪ್ಪಿಸಲು ಮತ್ತು ಆರೋಗ್ಯಕರವಾಗಿ ಗರ್ಭಧಾರಣೆಯ ಯೋಜನೆಗಾಗಿ ನಿಮಗೆ ಸಹಾಯ ಮಾಡಲು ಈ ಲೇಖನ ಓದಿ.

ಗರ್ಭದಾರಣೆಗೆ ಮೊದಲು ತಿಳಿದುಕೊಳ್ಳಿ | Pregnancy Tips in Kannada

ಈ ಲೇಖನದ ಅಂತ್ಯದಲ್ಲಿರುವ ವೀಡಿಯೊ ನೋಡಲು ಮರೆಯದಿರಿ
Getting Pregnant | All you need to know before you plan one conceiving garbhadharan hindi kannada

1. ಚರ್ಚೆಮಾಡಿ ಮತ್ತು ಮಾನಸಿಕ ಹಾಗು ದೈಹಿಕವಾಗಿ ಸಿದ್ಧರಾಗ- Talk and be prepared

ಕುಟುಂಬದಲ್ಲಿ ಪುಟ್ಟ ಸದಸ್ಯನ ಆಗಮನವು ಜೀವನದಲ್ಲಿ ಬಹಳಷ್ಟು ಬದಲಾವಣೆಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದೆ. ಹಾಗಾಗಿ ಹೊಸ ಸದಸ್ಯರನ್ನು ಸೇರಿಸಲು ನಿರ್ಧರಿಸಿದ್ದರೆ ಮಗುವಿನ ಆರೈಕೆಗಾಗಿ ನಮ್ಮ ವೈಯಕ್ತಿಕ ಸಮಯವನ್ನು ಹಂಚಿಕೊಳ್ಳಬೇಕಾಗುತ್ತದೆ. ಗರ್ಭಧಾರಣೆ ಮತ್ತು ಮಗುವಿನ ಪಾಲನೆ ಪರಸ್ಪರ ಜವಾಬ್ದಾರಿಯಾಗುವುದರಿಂದ ಸಂಗಾತಿಯೋಡನೆ ಚರ್ಚಿಸುವುದು ಬಹಳ ಮುಖ್ಯ ಮತ್ತು ಮಹಿಳೆಯರಿಗೆ ಮಾತ್ರ ಈ ಜವಾಬ್ದಾರಿ ಸೀಮಿತವಾಗಿರುವುದಿಲ್ಲ.

2. ಹೆರಿಗೆಯ ವಿರಾಮವನ್ನು ಯೋಜಿಸಿ- Plan your Maternity break

ಗರ್ಭಿಣಿ ಮಹಿಳೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚಿನ ಬೆಂಬಲ ಬೇಕು. ನಿರೀಕ್ಷಿತ ತಾಯಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲು ಬೆಂಬಲ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಕೆಲಸಕ್ಕೆ ಹೋಗುವ ಮಹಿಳೆಯರು  ಹೆರಿಗೆ ರಜೆಯ ಬಗ್ಗೆ ಕಂಪೆನಿಯ ನೀತಿಯನ್ನು ಪರಿಶೀಲಿಸಿ ಅಥವಾ ವಿಶ್ರಾಂತಿ ರಜೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಮನೆಯಿಂದಲೇ ಕೆಲಸವನ್ನು ಮಾಡುವ ಆಯ್ಕೆಯನ್ನು ತೆಗೆದುಕೊಳ್ಳುವುದು ಆದ್ಯತೆಯ ಆಯ್ಕೆ.


ಕೆಲವು ಪ್ರಮುಖ ಲೇಖನಗಳನ್ನು ಓದಿ :


3. ಹಣಕಾಸು ಮತ್ತು ಖರ್ಚು- Finance & Expenses

ಒಂದು ಕಾಲದಲ್ಲಿ ಕುಟುಂಬಕ್ಕೆ ಹೊಸ ಸದಸ್ಯರ ಆಗಮನ ಮತ್ತು  ಗರ್ಭಧಾರಣೆ ಹಾಗು ಬಾಣಂತನಕ್ಕೆ ಅಷ್ಟೊಂದು ಖರ್ಚುಗಳಿರುತ್ತಿರಲ್ಲಿಲ್ಲ . ಆದರೆ ಕಾಲ ಬದಲಾಗಿದೆ ಮತ್ತು ಅನೇಕ ಸುಧಾರಣೆಗಳಾಗಿರುವುದರಿಂದ, ಆಸ್ಪತ್ರೆಯ ಬಿಲ್ ಮತ್ತು ಹೆರಿಗೆ ನಂತರದ ಆರೈಕೆಯನ್ನು ಪೂರೈಸಲು ಬಹಳಷ್ಟು ಹಣವನ್ನು ಹೊಂದಿರಬೇಕು. ಗರ್ಭಾವಸ್ಥೆಯ ಹಂತದಲ್ಲಿ ವಿವಿಧ ಪರೀಕ್ಷೆಗಳು ಮತ್ತು ವ್ಯಾಕ್ಸಿನೇಷನ್ ಗಳ ಅಗತ್ಯವಿರುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ವಿಳಂಬ ಮತ್ತು ರಾಜಿ ಮಾಡುವುದಕ್ಕಾಗುವುದಿಲ್ಲ .

4. ವ್ಯಾಯಾಮ ಮತ್ತು ಆರೋಗ್ಯವಾಗಿರಬೇಕು- Exercise & Stay Fit

ಈ ಸಮಯದಲ್ಲಿ ಸೋಮಾರಿತನವನ್ನು ಬಿಟ್ಟು, ಸ್ನಾಯುಗಳನ್ನು ಹಿಗ್ಗಿಸಲು ಚಟುವಟಿಕೆಯಿಂದಿರಬೇಕು. ಬೆಳಗ್ಗೆ ಅಥವಾ ಸಂಜೆಯ ವಿರಾಮದ ನಡಿಗೆ, ಯೋಗ, ಅಥವಾ ಜಿಮ್ ಗೆ ಹೋಗಿ ಆರೋಗ್ಯವಾಗಿ ಹಾಗು ಸಂತೋಷವಾಗಿರುವುದು ಅತ್ಯಗತ್ಯವಾಗಿರುತ್ತದೆ. ಇದರಿಂದ ಗರ್ಭಾವಸ್ಥೆಯ ತೊಡಕುಗಳನ್ನು ಕಡಿಮೆ ಮಾದುವುದಕ್ಕೆ ಸಹಾಯವಾಗುದು.

5. ಜೀವನಶೈಲಿ ಬದಲಾವಣೆಗಳು – Lifestyle Changes

ಮಧ್ಯಪಾನ, ಧೂಮಪಾನ, ಅನಿಯಮಿತ ಚಹಾ / ಕಾಫಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ನಿರ್ದಿಷ್ಟವಾಗಿ ಮಹಿಳೆಯರಿಗೆ ಮಾತ್ರವಲ್ಲ ಆದರೆ ಎಲ್ಲರಿಗೂ ಇದು ಒಳ್ಳೆಯದಲ್ಲ. ದೀರ್ಘಾವಧಿಯ ವ್ಯಸನದಿಂದ ಆರೋಗ್ಯಕರವಾಗಿರುವುದಕ್ಕೆ ಆಗುವುದಿಲ್ಲ ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಗರ್ಭಿಣಿಯಾಗುವುದಕ್ಕೆ  ವ್ಯಸನಗಳನ್ನು ಸಂಪೂರ್ಣವಾಗಿ ಮಿತಿಗೊಳಿಸಬೇಕು ಅಥವಾ ಬಿಡುವುದು ಸೂಕ್ತ. ಇದರಿಂದ ದೇಹದ ವ್ಯವಸ್ಥೆಯನ್ನು ನಿರ್ವಿಷಗೊಳಿಸಲು(detoxify) ಮಾಡಲು ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.

6. ಪ್ರಸವಪೂರ್ವ ಪೂರಕಗಳ ಪೂರೈಕೆ – Prenatal Supplementation

ಗರ್ಭಾವಸ್ಥೆಯಲ್ಲಿ ಸ್ತ್ರೀರೋಗತಜ್ಞರು ಶಿಫಾರಸು ಮಾಡಿದ ಫೋಲಿಕ್ ಆಮ್ಲದ ಪ್ರಸವಪೂರ್ವ ಜೀವಸತ್ವವನ್ನು ತೆಗೆದುಕೊಳ್ಳುವುದರಿಂದ ಮಗುವಿನ ಮೆದುಳಿನ ಮತ್ತು ಬೆನ್ನುಹುರಿಯ ಜನ್ಮ ದೋಷಗಳನ್ನು ತಡೆಯಬಹುದು. ವಿಟಮಿನ್ B9 ಯ ಸಂಶ್ಲೇಷಿತ ರೂಪವಾದ ಫೋಲಿಕ್ ಆಮ್ಲದಿಂದ ದೇಹದ ಅಭಿವೃದ್ಧಿ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಾದನ್ನು ಪೂರೈಸುವುದು. ಮಾತ್ರೆಗಳನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆ ತೆಗೆದುಕೊಲ್ಳುವುದು ಉತ್ತಮ.

7. ಅಂಡೋತ್ಪತ್ತಿ ಅವಧಿಯ ಬಗ್ಗೆ ಗಮನಿಸಿ  : Monitor Ovulation Period

ಸರಿಯಾದ ಅಂಡೋತ್ಪತ್ತಿಯ ಚಕ್ರವು ಗರ್ಭಧರಿಸುವುದಕ್ಕೆ ಅನುಕೂಲಕರವಾಗಿರುತ್ತದೆ. ಅಂಡೋತ್ಪತ್ತಿ ಚಕ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಗರ್ಭಿಣಿಯಾಗಲು ಇದು ಮತ್ತೊಂದು ಪ್ರಮುಖ ಅಂಶವಾಗಿದೆ. ಅಂಡಾಶಯದಿಂದ ಅಂಡಾಣು (ಮೊಟ್ಟೆ) ಬಿಡುಗಡೆ ಯಾಗುವುದು, ನಂತರ ವೀರ್ಯಾಣು ಫಲವತ್ತತೆ ಪ್ರಕ್ರಿಯೆ ನಡೆಯುವುದು.ಅನೇಕ ಅಂಡೋತ್ಪತ್ತಿ ಕಿಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಅವುಗಳ ಸಹಾಯದಿಂದ ಅತ್ಯಂತ ಫಲವತ್ತಾದ ಅವಧಿ ತಿಳಿಯಲು ಸಾಧ್ಯವಿದೆ. ಈ ಕಿಟ್ ಗಳು ಸುಲಭವಾಗಿ ಲಭ್ಯವಿವೆ ಮತ್ತು ಮಹಿಳೆಯ ಫಲವತ್ತಾದ ದಿನಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.

8. ಸಮತೋಲಿತ ಆರೋಗ್ಯಕರ ಆಹಾರ- Eating Healthy

ಗರ್ಭವಸ್ಥೆಯಲ್ಲಿ ಸಮತೋಲಿತ ಆಹಾರದ ಸೇವನೆ ಬಹಳ ಮುಖ್ಯ. ಎಷ್ಟು ಆರೋಗ್ಯವಾಗಿರುವ ಆಹಾರವನ್ನು ಸೇವಿಸುವರೋ ಅಷ್ಟೇ ಆರೋಗ್ಯವಾಗಿರುತ್ತೇವೆ. ಪಾಲಕ್, ಹಸಿರು ಸೊಪ್ಪು, ಬಾಳೆಹಣ್ಣು, ಮೊಟ್ಟೆ, ಧಾನ್ಯಗಳು, ಬೀನ್ಸ್, ಕಾಳುಗಳು ಉತ್ತಮ ರೋಗ ನಿರೋಧಕ ಶಕ್ತಿ ಪಡೆಯಲು ಮತ್ತು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಹಾಯಕ. ಊಟವನ್ನು ಬಿಡುವುದು ಆರೋಗ್ಯಕ್ಕೆ ಒಳ್ಳೆಯದೆಲ್ಲ. ಸರಿಯಾದ ಸಮಯಕ್ಕೆ ಆಹಾರ ಸೇವಿಸಬೇಕು ಮತ್ತು ಜಂಕ್ ಆಹಾರವನ್ನು ಸೀಮಿತಗೊಳಿಸಬೇಕು.

9. ವೈದ್ಯಕೀಯ ಸಲಹೆಯನ್ನು ಪಡೆಯಬೇಕು – Seek Medical Advice

ಸಾಮಾನ್ಯವಾಗಿ 35 ವರ್ಷಗಳ ನಂತರ ಗರ್ಭಿಣಿಯಾಗುವುದನ್ನು  ವೈದ್ಯಕೀಯ ತಜ್ಞರು ಶಿಫಾರಸ್ಸು ಮಾಡುವುದಿಲ್ಲ ಏಕೆಂದರೆ ಅದು ಕಷ್ಟ ಮತ್ತು ತೊಡಕು ಎದುರಿಸಬೇಕಾಗುತ್ತದೆ. ಆದರೆ ಅಸಾಧ್ಯವಲ್ಲ ಎಂಬ ಅಭಿಪ್ರಾಯ ನೀಡುವರು. ಮಹಿಳೆಯ ಜೈವಿಕ ಗಡಿಯಾರವು ಸರಿಯಾದ ಗರ್ಭಾವಸ್ಥೆಯ ವಯಸ್ಸಿನಲ್ಲಿ ಯಾವಾಗಲೂ ಪ್ರಚೋದಕವಾಗಿರುತ್ತದೆ. 35 ವರ್ಷಗಳ ನಂತರ, ಗರ್ಭಿಣಿಯಾಗಲು ಸಾಧ್ಯತೆಗಳಿವೆ (ಮತ್ತು ನೀವು ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಯತ್ನಿಸುತ್ತಿದ್ದರೆ) ಸೀಮಿತಗೊಳ್ಳುವ ಸಾಧ್ಯತೆಯಿದೆ. ಆರೋಗ್ಯಕರ ಗರ್ಭಧಾರಣೆ ಹೊಂದುವುದಿಲ್ಲ ಎಂಬ ನಿಯಮವಿಲ್ಲದಿದ್ದರೂ, ನಿರ್ದಿಷ್ಟ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಸೂಕ್ತ.

10. ಒತ್ತಡವಿರಬಾರದು ಮತ್ತು ಸಂತೋಷವಾಗಿರಬೇಕು – Don’t Stress & Be Happy

ಒತ್ತಡದ ಜೀವನಶೈಲಿಯಿಂದ ಗರ್ಭಿಣಿಯಾಗಲು ಯೋಜನೆ ಮಾಡುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವನ್ನು ಕಡಿಮೆಗೊಳಿಸಬಹುದಾದ ಅನೇಕ ಮಾರ್ಗಗಳಿವೆ. ಸರಿಯಾದ ಸಮತೋಲಿತ ಆಹಾರ, ಸುಸಂಸ್ಕೃತ ಸಂವಹನ, ಧ್ಯಾನ ಮತ್ತು ಅತಿಯಾದ ಆಯಾಸದ ಕೆಲಸಗಳನ್ನು ಮಾಡುವುದು ಮೂಲಭೂತ ಶಿಸ್ತುಗಳಾಗಿವೆ. ಒತ್ತಡ-ಮುಕ್ತ ಜೀವನವು ಸಂತೋಷದ ಗರ್ಭಧಾರಣೆಗೆ ಒಳ್ಳೆಯ ಮಾರ್ಗ.

Video: ಗರ್ಭದಾರಣೆಗೆ ಮೊದಲು ತಿಳಿದುಕೊಳ್ಳಿ | Pregnancy Tips in Kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 11
    Shares