Spread the love
  • 34
    Shares

ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in KannadaDry Fruits Sauce dip spread for Babies, Toddlers & Kids weight gaining food kannada hindi

ಡ್ರೈ ಫ್ರುಟ್ಸ್ ಸಾಸ್ ಒಂದು ಅದ್ಭುತವಾದ ಸಾಸ್. ಜಾಮ್ ಅಥವಾ ಸಾಸ್ ಆಗಿ ಬಳಸಬಹುದಾದ ಪಾಕವಿಧಾನ ನೀಡಲಾಗಿದೆ. ಡ್ರೈ ಫ್ರುಟ್ಸ್ ಸಾಸ್ ಒಣ ಹಣ್ಣುಗಳ ಸಂಯೋಜನೆಯನ್ನು ಬಳಸಿಕೊಂಡು ತಯಾರಿಸಲಾಗುತ್ತದೆ ಮತ್ತು ನಮಗೆ ಇಷ್ಟವಾಗುವ ಹಣ್ಣುಗಳನ್ನು ಬಳಸಿ ಮಾಡಲು ಅವಕಾಶವಿರುತ್ತದೆ. ಅಂಗಡಿಯಿಂದ  ಖರೀದಿಸಿದ ಸಂರಕ್ಷಕವಿರುವ (preservatives) ಜಾಮ್ ಮತ್ತು ಸಾಸ್ ಬಗ್ಗೆ ಚಿಂತೆ ಮಾಡುವ ಅಮ್ಮಂದಿರು ಈಗ ನೆಮ್ಮದಿಯಿಂದ ಡ್ರೈ ಫ್ರುಟ್ಸ್ ತಯಾರಿಸಿ ನೀಡಬಹುದು. ಆರೋಗ್ಯಕರ ಒಣ ಹಣ್ಣುಗಳೊಂದಿಗೆ ತಯಾರಿಸುವುದರಿಂದ ಇದು ಹೆಚ್ಚಿನ ತೂಕವನ್ನು ಪಡೆಯಲು ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವಾಗುವುದು.

ನಮ್ಮ ಬ್ಲಾಗ್ ನಲ್ಲಿ ಅನೇಕ ಡ್ರೈ ಫ್ರುಟ್ಸ್ ಬಳಸಿ ಮಾಡಿರುವ ಪಾಕವಿಧಾನಗಳನ್ನು ವೀಕ್ಷಿಸಬಹುದು. ಡ್ರೈ ಫ್ರುಟ್ಸ್ ಸಾಸ್ ಒಳ್ಳೆಯ ಶಕ್ತಿ ನೀಡುವ ಆಹಾರ, ಜೀರ್ಣಕಾರಿ ಮತ್ತು  ಆರೋಗ್ಯವನ್ನು ನೀಡುತ್ತದೆ. ಉತ್ತಮ ಮೆದುಳಿನ ಆರೋಗ್ಯ ಉತ್ತೇಜಿಸುವ ಆಹಾರ. ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ದೈನಂದಿನ ಆಹಾರಕ್ರಮದಲ್ಲಿ ಹೆಚ್ಚು ಬಳಸಿಕೊಳ್ಳಬಹುದು. ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಒಣ ಹಣ್ಣುಗಳ ಸಾಸ್ ದೈನಂದಿನ ಆಹಾರಕ್ರಮದಲ್ಲಿ  ಹೆಚ್ಚು ಬಳಸಿಕೊಳ್ಳಬಹುದು. 8 ತಿಂಗಳಕ್ಕಿಂತ ಮೇಲ್ಪಟ್ಟ ಶಿಶುಗಳಿಗೆ ಸರಿ /ಗಂಜಿಯಲ್ಲಿ ಸೇರಿಸಿ ನೀಡಬಹುದು ಇದರಿಂದ ಪೌಷ್ಠಿಕಾಂಶ ಹೆಚ್ಚುತ್ತದೆ. ಇದು 1 tsp ಅನ್ನು ಸ್ವಲ್ಪ ಸಮಯದ ನಂತರ ಮಗುವಿನ ಗಂಜಿಗೆ ಪೋಷಣೆ ಹೆಚ್ಚಿಸಲು ಸೇರಿಸಬಹುದು. ಮಕ್ಕಳಿಗೆ ಕೈಯಿಂದ ಸೇವಿಸುವ ಶಿಶು ಆಹಾರಗಳಿಗೆ ಅದ್ದು (ಡಿಪ್ಸ್ ) ಕೊಡಬಹುದು.  ರೊಟ್ಟಿ, ಚಪಾತಿ ಅಥವಾ ಬ್ರೆಡ್ ಗೆ ಜಾಮ್ ತರಹ ಹರಡಿ ನೀಡಬಹುದು. ಮಕ್ಕಳ ನೆಚ್ಚಿನ ಪ್ಯಾನ್ ಕೇಕ್  ಜೊತೆಯಲ್ಲಿ ನೀಡಬಹುದು. ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ಮಕ್ಕಳ ನೆಚ್ಚಿನ ಆರೋಗ್ಯಕರ  ಪಾನೀಯ ಅಥವಾ ಮಿಲ್ಕ್ ಶೇಕ್ಸ್ ಗೆ ಸೇರಿಸಬಹುದು.

ನಮ್ಮ ಇತರ ಡ್ರೈ ಫ್ರುಟ್ಸ್ ಬಳಸಿ ಮಾಡಿರುವ ಪಾಕವಿಧಾನಗಳನ್ನು ಪ್ರಯತ್ನಿಸಿ :  

Video: ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in Kannada

 

Kannada Subscribe Button TOTS AND MOMS

ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in Kannada

ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in Kannada

ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಡ್ರೈ ಫ್ರುಟ್ಸ್ ಸಾಸ್ ಯಾವುದೇ ಸಂರಕ್ಷಕವನ್ನು ಬಳಸಬೇಕಿಲ್ಲ ,ಶಿಶುಗಳು ಮತ್ತು ಮಕ್ಕಳಿಗೆ ಸಾಸ್, ಜ್ಯಾಮ್ ಆಗಿ ಬಳಸಬಹುದು. ಉತ್ತಮ ಪ್ರತಿರಕ್ಷಣಾ ವರ್ಧಕವಾಗುತ್ತದೆ ಮತ್ತು ತೂಕವನ್ನು ಕೂಡ ಹೆಚ್ಚಿಸುವ ಸಾಸ್.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸಾಸ್ ಅಥವಾ ಡಿಪ್
ತಿನಿಸು:International

ಸಾಮಗ್ರಿಗಳು

  1. ಖರ್ಜೂರ್ - 10
  2. ಒಣ ದ್ರಾಕ್ಷಿ - 30
  3. ಒಣ ಕರಿ ದ್ರಾಕ್ಷಿ - 10
  4. ಗೋಡಂಬಿ - 20
  5. ಬಾದಾಮಿ - 10
  6. ನೀರು - 1 ಕಪ್

ವಿಧಾನ

  1. ಅಗಲವಾದ ಬಾಣಲೆಗೆ ಒಂದು ಕಪ್ ನೀರನ್ನು ಹಾಕಿ ಕುದಿಸಿ ಇದಕ್ಕೆ ಖರ್ಜೂರ, ಒಣ ದ್ರಾಕ್ಷಿ, ಒಣ ಕರಿ ದ್ರಾಕ್ಷಿ, ಗೋಡಂಬಿ, ಮತ್ತು ಬಾದಾಮಿ ಒಂದರ ನಂತರ ಒಂದನ್ನು ಹಾಕಿ.
  2. ಮುಚ್ಚಳ ಮುಚ್ಚಿ 20 ನಿಮಿಷ ನೆನೆಯಲು ಬಿಡಿ. ಸಮಯವಿದ್ದರೆ ಒಂದು ರಾತ್ರಿ ನೆನೆಸಿ ನಂತರ ಮಾಡಬಹುದು. ನೆನೆಸಿದ ಒಣ ಹಣ್ಣುಗಳು ಮೃದು ಮತ್ತು ನಯವಾಗುತ್ತದೆ.
  3. ಸಣ್ಣ ಉರಿಯಲ್ಲಿ 20-30 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ನೀರು ¼ ಭಾಗಕ್ಕೆ ಬರುವ ತನಕ ಕುದಿಸಿ. ಮಿಶ್ರಣ ತಣ್ಣಗಾಗಲು ಬಿಡಿ, ನಂತರ  ಮಿಕ್ಸರ್/ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
  4. ನಯಾವಾದ ಪೇಸ್ಟ್ ಮಾಡಿಕೊಳ್ಳಿ .
  5. ಡ್ರೈ ಫ್ರುಟ್ಸ್ ಸಾಸ್ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in KannadaDry Fruits Sauce dip spread for Babies, Toddlers & Kids weight gaining food kannada hindi

ಡ್ರೈ ಫ್ರುಟ್ಸ್ ಸಾಸ್  ಮಾಡಲು ಬೇಕಾಗುವ ಸಾಮಗ್ರಿಗಳು :

  1. ಖರ್ಜೂರ್ – 10
  2. ಒಣ ದ್ರಾಕ್ಷಿ – 30
  3. ಒಣ ಕರಿ ದ್ರಾಕ್ಷಿ – 10
  4. ಗೋಡಂಬಿ – 20
  5. ಬಾದಾಮಿ – 10
  6. ನೀರು – 1 ಕಪ್

ಡ್ರೈ ಫ್ರುಟ್ಸ್ ಸಾಸ್ ಮಾಡುವ ವಿಧಾನ :

1. ಅಗಲವಾದ ಬಾಣಲೆಗೆ ಒಂದು ಕಪ್ ನೀರನ್ನು ಹಾಕಿ ಕುದಿಸಿ ಇದಕ್ಕೆ ಖರ್ಜೂರ, ಒಣ ದ್ರಾಕ್ಷಿ, ಒಣ ಕರಿ ದ್ರಾಕ್ಷಿ, ಗೋಡಂಬಿ, ಮತ್ತು ಬಾದಾಮಿ ಒಂದರ ನಂತರ ಒಂದನ್ನು ಹಾಕಿ.Dry Fruits Sauce dip spread for Babies, Toddlers & Kids weight gaining food kannada hindi

2. ಮುಚ್ಚಳ ಮುಚ್ಚಿ 20 ನಿಮಿಷ ನೆನೆಯಲು ಬಿಡಿ. ಸಮಯವಿದ್ದರೆ ಒಂದು ರಾತ್ರಿ ನೆನೆಸಿ ನಂತರ ಮಾಡಬಹುದು. ನೆನೆಸಿದ ಒಣ ಹಣ್ಣುಗಳು ಮೃದು ಮತ್ತು ನಯವಾಗುತ್ತದೆ.Dry Fruits Sauce dip spread for Babies, Toddlers & Kids weight gaining food kannada hindi

3. ಸಣ್ಣ ಉರಿಯಲ್ಲಿ 20-30 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ನೀರು ¼ ಭಾಗಕ್ಕೆ ಬರುವ ತನಕ ಕುದಿಸಿ. ಮಿಶ್ರಣ ತಣ್ಣಗಾಗಲು ಬಿಡಿ, ನಂತರ  ಮಿಕ್ಸರ್/ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.Dry Fruits Sauce dip spread for Babies, Toddlers & Kids weight gaining food kannada hindi

4. ನಯಾವಾದ ಪೇಸ್ಟ್ ಮಾಡಿಕೊಳ್ಳಿ .Dry Fruits Sauce dip spread for Babies, Toddlers & Kids weight gaining food kannada hindi

5. ಡ್ರೈ ಫ್ರುಟ್ಸ್ ಸಾಸ್ ತಯಾರಾಗಿದೆ.

ಡ್ರೈ ಫ್ರೂಟ್ಸ್ ಸಾಸ್ | Dry Fruits Sauce recipe in KannadaDry Fruits Sauce dip spread for Babies, Toddlers & Kids weight gaining food kannada hindi

ಸೂಚನೆ :

  • ಡ್ರೈ ಫ್ರುಟ್ಸ್ ಸಾಸ್ ನಮಗೆ ಬೇಕಾದ ಒಣ ಹಣ್ಣುಗಳನ್ನು ಬಳಸಿ ಮಾಡಿಕೊಳ್ಳಬಹುದು.
  • ಒಣ ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿ ಸಿಹಿ ಮತ್ತು ಹುಳಿ ರುಚಿಯನ್ನು ನೀಡುವುದು. ಹುಳಿಯ ರುಚಿ ಬೇಡವಾದರೆ ಜಾಸ್ತಿ ಖರ್ಜೂರ್ ಬಳಸಿ ಸಿಹಿ ಹೆಚ್ಚಿಸಬಹುದು.
  • ಒಂದು ವಾರದ ತನಕ ಫ್ರಿಡ್ಜ್ ನಲ್ಲಿ ಶೇಖರಿಸಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 34
    Shares