Spread the love
  • 35
    Shares

DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತDIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi

ಬಾಡಿ ಬಟರ್ ಒಂದು ಆರ್ಧಕ ಕ್ರೀಂ (moisturizer) ತ್ವಚೆಯ ರಕ್ಷಣೆಗೆ ಉಪಯುಕ್ತವಾದ ಉತ್ಪನ್ನ. ಚರ್ಮದ ಆರೈಕೆಗೆ ಬೆಣ್ಣೆ ಮತ್ತು ತೈಲಗಳನ್ನು ಬಳಸಿ ಗರ್ಭವಸ್ತೆಯಲ್ಲಿ ಆಗುವ ಚರ್ಮದ ಹಿಗ್ಗುವಿಕೆಗೆ ಆರೈಕೆಯ ಉತ್ಪನ್ನವನ್ನು ಮನೆಯಲ್ಲಿ ತಯಾರಿಸುವ ವಿಧಾನ ನೀಡಲಾಗಿದೆ. ಇವುಗಳನ್ನು ಮಮ್ಮಿ ಬಟರ್ ಎಂದೂ ಕರೆಯುತ್ತಾರೆ. ಗರ್ಭಾವಸ್ಥೆಯ ಸಮಯದಲ್ಲಿ ಬಾಡಿ ಬಟರ್ ಉತ್ಪನ್ನಗಳನ್ನು ಬಳಸಲು ಮತ್ತು ಅವುಗಳ ಸಂಶೋಧನೆ ಮಾಡುವುದರಲ್ಲಿ ಹೆಚ್ಚು ಜಾಗೃತಳಾಗಿದ್ದು ಅದರ ವಿವರವಾದ ಮಾಹಿತಿ ನಿಮಗೆ ನೀಡಿದ್ದೇನೆ. ಗರ್ಭಾವಸ್ಥೆಯ  ಸಮಯದಲ್ಲಿ ಚರ್ಮ ಹಿಗ್ಗುವಿಗೆಯ ಗುರುತುಗಳನ್ನು ಕಡಿಮೆ ಮಾಡಲು ಮತ್ತು ತಪ್ಪಿಸಲು ಸಂಶೋಧನೆ ಮಾಡುವಾಗ ನಾನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದಾದ ಈ ಅದ್ಭುತ ಉತ್ಪನ್ನದ ಬಗ್ಗೆ ತಿಳಿಯಿತು. DIY ಬಾಡಿ ಬಟರ್ ಅನ್ನು ನೈಸರ್ಗಿಕ ಪದಾರ್ಥಗಳಾದ ಕೊಕೊ ಬಟರ್ ಮತ್ತು ಶಿಯಾ ಬಟರ್ ಉಪಯೋಗಿಸಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಭಾರತದಲ್ಲಿ ಈ ತರಹದ ಉತ್ಪನ್ನಗಳು ಪ್ರಸಿದ್ಧವಾಗಿಲ್ಲ  ಈಗ ಹೆಚ್ಚಿನ ಮಹಿಳೆಯಲು ಜಾಗೃತರಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ನೀರು ಮತ್ತು ತೈಲವನ್ನು ಬಳಸಿ ಮಾಡುವ ಕ್ರೀಂ ಲೋಷನ್ ಗಳಿಗಿಂತ, ಮನೆಯಲ್ಲಿ ತಯಾರಿಸುವ ಬಾಡಿ ಬಟರ್ ಸ್ವಲ್ಪ ಗಾಢವಾಗಿರುತ್ತದೆ ಹಾಗು ಹೆಚ್ಚು ಜಿಡ್ಡಿನಿಂದ ಕೂಡಿರುತ್ತದೆ. ಬೆಣ್ಣೆ ಮತ್ತು ಎಣ್ಣೆಗಳ ಬಳಕೆಯೆ ಇದಕ್ಕೆ ಕಾರಣ. ನಾನು ಪ್ರಸ್ತುತ ಗರ್ಭಿಣಿಯಾಗಿದ್ದು, ಗರ್ಭಧಾರಣೆಯ 3 ನೇ ತಿಂಗಳಿನಿಂದ ಬಳಸುತ್ತಿದ್ದೇನೆ. ಚಳಿಗಾಲದ ಈ ಋತುವಿನಲ್ಲಿ ಒಳ್ಳೆಯ ಫಲಿತಾಂಶ ನೀಡಿರುವುದು ಸಂತೋಷವಾಗಿದೆ ಮತ್ತು ಚರ್ಮವನ್ನು ರಕ್ಷಿಸುತ್ತಿದೆ. ಈ ವೀಡಿಯೊದೊಂದಿಗೆ ನಾನು ಎರಡನೆಯ ಬಾರಿ ತಯಾರಿಸುತ್ತಿದ್ದೇನೆ, ಪ್ರಸವದ ನಂತರ ಕೂಡ ಬಳಬೇಕು, ಏಕೆಂದರೆ ಈ ಸಮಯದಲ್ಲಿ ಚರ್ಮವು ಸಾಮಾನ್ಯ ಸ್ಥಿತಿಗೆ ಮರಳಲು ಬಹಳ ಸಹಾಯಕ ಮತ್ತು ಮುಖ್ಯವಾಗಿರುತ್ತದೆ.

ಬಾಡಿ ಬಟರ್ ಮಾಡಲು ಬೇಕಾಗುವ ಪದಾರ್ಥಗಳು : ಉತಪನ್ನವನ್ನು ಖರೀದಿಸಲು ಲಿಂಕ್ ಕ್ಲಿಕ್ ಮಾಡಿ

  • ಶೀಯ ಬಟರ್ /ಬೆಣ್ಣೆ ಚರ್ಮದ ನೈಸರ್ಗಿಕ ತೈಲಗಳನ್ನು ರಕ್ಷಿಸುತ್ತದೆ. ಶಿಯಾ ಬಟರ್ ನಲ್ಲಿ ತೇವಾಂಶವಿರುತ್ತದೆ ಮತ್ತು  ವಿಟಮಿನ್ ಗಳು ಮತ್ತು ಕೊಬ್ಬಿನಾಮ್ಲಗಳು ಚರ್ಮವನ್ನು ಪೋಷಿಸುತ್ತವೆ.
  • ಕೊಕೊ ಬಟರ್Cocoa Butter
    ಕೊಕೊ ಬಟರ್ ನಲ್ಲಿ ಕೊಬ್ಬಿನ ಆಮ್ಲಗಳ ಸಮೃದ್ಧವಾಗಿರುತ್ತದ. ಕೊಕೊ ಬೆಣ್ಣೆಯು ಚರ್ಮದಲ್ಲಿ ನೀರಿನಂಶವನ್ನು ( ಹೈಡ್ರೇಟ್) ಕಾಪಾಡುತ್ತದೆ ಮತ್ತು ಪೋಷಣೆ ಸಾಮರ್ಥ್ಯವನ್ನು ಹೊಂದಿದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ( elasticity).
  • ತೆಂಗಿನ ಎಣ್ಣೆ -ಕೊಕೊನಟ್ ಆಯಿಲ್ ಎಲ್ಲಾ ಚರ್ಮದ ವಿಧಗಳಿಗೆ  ಮಸಾಜ್ ಮಾಡಲು ಬಳಸಲಾಗುತ್ತದೆ. ತೆಂಗಿನ ಎಣ್ಣೆಯು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ಚರ್ಮ ಕೋಶವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ. ಚರ್ಮದ ಹಿಗ್ಗುವಿಕೆಯನ್ನು ತಡೆಗಟ್ಟುತ್ತದೆ ಮತ್ತು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ.
  • ಬಾದಾಮಿ ಎಣ್ಣೆAlmond Oil – ವಿಟಮಿನ್ ಇ ಚರ್ಮದ ಚಿಕಿತ್ಸೆಯಲ್ಲಿ ಬಹಳ ಮುಖ್ಯ. UV ವಿಕಿರಣದಿಂದ ಚರ್ಮದ ಹಾನಿ ಕಡಿಮೆ ಮಾಡುತ್ತದೆ.  ಮೃದುವಾದ ಮತ್ತು ಹಿಗ್ಗಿರುವ ಚರ್ಮದ ಗುರುತುಗಳನ್ನು ಕಡೆಮೆ ಮಾಡುತ್ತದೆ.
  • ಅವಶ್ಯಕ  ಎಣ್ಣೆ  – Essential Oil

ಅವಶ್ಯಕ ಎಣ್ಣೆಗಳು ಸಸ್ಯ ಸಾರ ವಿರುವ ಕೇಂದ್ರೀಕೃತವಾದ ಮತ್ತು ಹೆಚ್ಚು ಪರಿಣಾಮಕಾರಿ ತೈಲಗಳು. ಅದ್ಭುತ ಸುಗಂಧವಿರುವ ಎಣ್ಣೆಗಳು ಅರೋಮಾಥೆರಪಿಯಲ್ಲಿ ಬಳಸುತ್ತಾರೆ – ಒತ್ತಡದ ನಿವಾರಿಸಲು ಚರ್ಮವನ್ನು ಶಮನಗೊಳಿಸಲು ಉಪಯುಕ್ತ.

ಬಾಡಿ ಬಟರ್ ಉಪಯೋಗಿಸುವುದರಿನ್ದಾಗುವ ಪ್ರಯೋಜನಗಳು:

  1. ಚರ್ಮದ ತೇವಾಂಶ ಕಾಪಾಡುತ್ತದೆ ಮತ್ತು ಮೃದುವಾಗಿ ಇಡುತ್ತದೆ.
  2. ಚರ್ಮಕ್ಕೆ  ಹಾನಿಗಳಿಂದ ರಕ್ಷಿಸುತ್ತದೆ.
  3. ಗರ್ಭಾವಸ್ಥೆಯ ಸಮಯದಲ್ಲಿ ಚರ್ಮದ ಹರಡುವಿಕೆಯಿಂದ ಉಂಟಾಗುವ ತುರಿಕೆ ಕಡಿಮೆ ಮಾಡುತ್ತದೆ.
  4. ಸುವಾಸನೆ ಮತ್ತು ಪರಿಮಳ ಶಾಂತವಾಗಿರಲು ಸಹಾಯ ಮಾಡುತ್ತದೆ.

ನಮ್ಮ ಇತರ ಗರ್ಭಾವಸ್ಥೆಯ ಸಂಬಧಿತ ಉಪಯುಕ್ತ ಲೇಖನ :

ಸೂಚನೆ : DIY ಬಾಡಿ ಬಟರ್ ಎಲ್ಲರು ಉಪಯೋಗಿಸಬಹುದು, ಚಳಿಗಾಲದಲ್ಲಿ ವಿಶೇಷವಾಗಿ ಪ್ರಯೋಜನಕಾರಿ. ಮಕ್ಕಳು, ಪುರುಷರು ಮತ್ತು ಮಹಿಳೆಯರು ಎಲ್ಲರೂ ಉಪಯೋಗಿಸಬಹುದು. ಅಂಗಡಿಯಿಂದ ಖರೀದಿಸುವ ಬದಲು moisturizer ಆಗಿ ಬಳಸಬಹುದು. ಪ್ರಯೋಜನಗಳು ಅದ್ಭುತವಾಗಿರುವುದರಿಂದ ಮಗುವಿಗೆ ಇದನ್ನು ಬಳಸಲು ನಾನು ಯೋಜಿಸುತ್ತಿದ್ದೇನೆ.

ಗರ್ಭಾವಸ್ಥೆ ಮತ್ತು ಪ್ರಸವದ ನಂತರ  DIY ಬಾಡಿ ಬಟರ್ ಹೇಗೆ ಉಪಯೋಗಿಸುವುದು?

ಒಂದು ಬಟಾಣಿ ಗಾತ್ರದ ಬೆಣ್ಣೆಯನ್ನು ತೆಗೆದುಕೊಂಡು ಹೊಟ್ಟೆ ಮೇಲೆ ಹಚ್ಚಿಕೊಳ್ಳಬಹುದು. ಸ್ವಲ್ಪ ಪ್ರಮಾಣದಲ್ಲಿ ಬಳಸುವುದರಿಂದ ಹೆಚ್ಚು ಜಿಡ್ಡು ಆಗುವುದಿಲ್ಲ . ಈ ಸಮಯದಲ್ಲಿ ಚರ್ಮವು ಬಹಳಷ್ಟು ಒಣಗುವುದು, ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಇದನ್ನು ಉಪಯೋಗಿಸಬಹುದು.

Video: DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತ

Kannada Subscribe Button TOTS AND MOMS

 

DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತ

DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತ

ಬಾಡಿ ಬಟರ್ ಚರ್ಮದ ಆರೈಕೆಗೆ ಬೆಣ್ಣೆ ಮತ್ತು ತೈಲಗಳನ್ನು ಬಳಸಿ ಮಾಡುವ ಆರ್ಧಕ ಕ್ರೀಂ(moisturizer). ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರದ ಅವಧಿಯಲ್ಲಿ ಚರ್ಮ ಹಿಗ್ಗುವಿಕೆಯನ್ನು ತಡೆಯಲು ಬಹಳ ಉಪಯುಕ್ತ

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: DIY ಮನೆ ಮದ್ದು
ತಿನಿಸು:ವಿದೇಶೀಯ

ಸಾಮಗ್ರಿಗಳು

  1. ಶಿಯಾ ಬಟರ್ - 1/2 ಕಪ್
  2. ಕಾಕೋ ಬಟರ್ - 1/2 ಕಪ್
  3. ತೆಂಗಿನ ಎಣ್ಣೆ /ಕೊಕೊನಟ್ ಆಯಿಲ್ - 1/2 ಕಪ್
  4. ಬಾದಾಮಿ ಎಣ್ಣೆ - 1/2 ಕಪ್
  5. ಆವಶ್ಯಕ ಎಣ್ಣೆ ಲ್ಯಾವೆಂಡರ್ ಕೆಲವು ಹನಿಗಳು

ವಿಧಾನ

  1. ಬೆಣ್ಣೆಯನ್ನು ಬಿಸಿಮಾಡಲು ಡಬಲ್ ಬಾಯ್ಲರ್ ಅನ್ನು ಬಳಸಬೇಕು ನೇರವಾಗಿ ಕುದಿಸಬಾರದು. ಒಂದು ಪಾತ್ರೆ ತೆಗೆದುಕೊಂಡು ಸ್ವಲ್ಪ ನೀರು ಕುದಿಸಿ. ದೊಡ್ಡದಾದ ಪಾತ್ರೆ ಅಥವಾ ಗ್ಲಾಸ್ ಬೌಲ್ ಅನ್ನು ಅದರ ಮೇಲೆ ಇರಿಸಿ, ಇದರಿಂದಾಗಿ ಡಬಲ್ ಬಾಯ್ಲರ್ ಅನ್ನು ರಚಿಸಬಹುದು. ಬೇಯಿಸುವ ಅಗತ್ಯವಿರುವುದಿಲ್ಲ ,ಕರಗಿಸಬೇಕಾದ ಅಗತ್ಯವಿರುತ್ತದೆ.
  2. 1/2 ಕಪ್ ಶೀಯ ಬಟರ್ , ಕೋಕೋ ಬಟರ್ ಮತ್ತು ತೆಂಗಿನ ಎಣ್ಣೆ ಬಳಸಿದ್ದೇನೆ.
  3. ಜೊತೆಯಾಗಿ ಎರಡು ಬೆಣ್ಣೆಯನ್ನು ಕರಗಿಸಿ. ಕಡಿಮೆ ಉರಿಯಲ್ಲಿ ಕರಗಿಸಬೇಕು.
  4. ಎಣ್ಣೆ ಮತ್ತು ಬೆಣ್ಣೆ ಕರಗಿದ ನಂತರ ಕೆಳಗೆ ತೋರಿಸಿರುವ ತರಹ ಕಾಣಿಸುವುದು ಈಗ 1/2 ಕಪ್ ಬಾದಾಮಿ ಎಣ್ಣೆ ಹಾಕಬೇಕು ಬಿಸಿ ಮಾಡುವ ಆವಶ್ಯಕತೆ ಇಲ್ಲ .
  5. ಎಣ್ಣೆ ಮತ್ತು ಬೆಣ್ಣೆ  ಕರಗಿದ ನಂತರ ಫ್ರಿಡ್ಜ್ ನಲ್ಲಿ ಮಿಶ್ರಣವನ್ನು ಒಂದು ಅಥವಾ ಎರಡು ಗಂಟೆ ಇಡಬೇಕು. ತುಂಬಾ ಗಟ್ಟಿಯಾಗವಾರದು.ಚೆನ್ನಾಗಿ ಮಿಶ್ರಣ (ವಿಪ್ )ಮಾಡಿದರೆ ಬಟರ್ ತಯಾರಾಗುವುದು.
  6. ಈ ಹಂತದಲ್ಲಿ ಕೆಲವು ಹನಿಗಳು ಲವೆಂದರ್ ಎಣ್ಣೆ ಹಾಕಬೇಕು, ಕೆಳಗೆ ತೋರಿಸಿರುವ ತರಹ ಐಸಿಂಗ್ ಮಾಡುವ ತರಹ ವಿಪ್ ಮಾಡಬೇಕು . ವಿಪ್ ಮಾಡಿದ ನಂತರ ಗಾಜಿನ ಡಬ್ಬದಲ್ಲಿ ಶೇಕರಿಸಬೇಕು. ಬೇಕಾದಾಗ ಉಪಯೋಗಿಸಬಹುದು.
  7. ಬಾಡಿ ಬಟರ್ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತDIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi
 
 ಸಾಮಗ್ರಿಗಳು  

  1. ಶಿಯಾ ಬಟರ್ – 1/2 ಕಪ್
  2. ಕಾಕೋ ಬಟರ್ – 1/2 ಕಪ್
  3. ತೆಂಗಿನ ಎಣ್ಣೆ /ಕೊಕೊನಟ್ ಆಯಿಲ್ – 1/2 ಕಪ್
  4. ಬಾದಾಮಿ ಎಣ್ಣೆ – 1/2 ಕಪ್
  5. ಆವಶ್ಯಕ ಎಣ್ಣೆ ಲ್ಯಾವೆಂಡರ್ ಕೆಲವು ಹನಿಗಳು

DIY ಬಾಡಿ ಬಟರ್ ಮಾಡುವ ವಿಧಾನ :

1. ಬೆಣ್ಣೆಯನ್ನು ಬಿಸಿಮಾಡಲು ಡಬಲ್ ಬಾಯ್ಲರ್ ಅನ್ನು ಬಳಸಬೇಕು ನೇರವಾಗಿ ಕುದಿಸಬಾರದು. ಒಂದು ಪಾತ್ರೆ ತೆಗೆದುಕೊಂಡು ಸ್ವಲ್ಪ ನೀರು ಕುದಿಸಿ. ದೊಡ್ಡದಾದ ಪಾತ್ರೆ ಅಥವಾ ಗ್ಲಾಸ್ ಬೌಲ್ ಅನ್ನು ಅದರ ಮೇಲೆ ಇರಿಸಿ, ಇದರಿಂದಾಗಿ ಡಬಲ್ ಬಾಯ್ಲರ್ ಅನ್ನು ರಚಿಸಬಹುದು. ಬೇಯಿಸುವ ಅಗತ್ಯವಿರುವುದಿಲ್ಲ ,ಕರಗಿಸಬೇಕಾದ ಅಗತ್ಯವಿರುತ್ತದೆ.DIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi

2. 1/2 ಕಪ್ ಶೀಯ ಬಟರ್ , ಕೋಕೋ ಬಟರ್ ಮತ್ತು ತೆಂಗಿನ ಎಣ್ಣೆ ಬಳಸಿದ್ದೇನೆ.DIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi

3. ಜೊತೆಯಾಗಿ ಎರಡು ಬೆಣ್ಣೆಯನ್ನು ಕರಗಿಸಿ. ಕಡಿಮೆ ಉರಿಯಲ್ಲಿ ಕರಗಿಸಬೇಕು.DIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi

4. ಎಣ್ಣೆ ಮತ್ತು ಬೆಣ್ಣೆ ಕರಗಿದ ನಂತರ ಕೆಳಗೆ ತೋರಿಸಿರುವ ತರಹ ಕಾಣಿಸುವುದು ಈಗ 1/2 ಕಪ್ ಬಾದಾಮಿ ಎಣ್ಣೆ ಹಾಕಬೇಕು ಬಿಸಿ ಮಾಡುವ ಆವಶ್ಯಕತೆ ಇಲ್ಲ .

5. ಎಣ್ಣೆ ಮತ್ತು ಬೆಣ್ಣೆ  ಕರಗಿದ ನಂತರ ಫ್ರಿಡ್ಜ್ ನಲ್ಲಿ ಮಿಶ್ರಣವನ್ನು ಒಂದು ಅಥವಾ ಎರಡು ಗಂಟೆ ಇಡಬೇಕು. ತುಂಬಾ ಗಟ್ಟಿಯಾಗವಾರದು.ಚೆನ್ನಾಗಿ ಮಿಶ್ರಣ (ವಿಪ್ )ಮಾಡಿದರೆ ಬಟರ್ ತಯಾರಾಗುವುದು.

6. ಈ ಹಂತದಲ್ಲಿ ಕೆಲವು ಹನಿಗಳು ಲವೆಂದರ್ ಎಣ್ಣೆ ಹಾಕಬೇಕು, ಕೆಳಗೆ ತೋರಿಸಿರುವ ತರಹ ಐಸಿಂಗ್ ಮಾಡುವ ತರಹ ವಿಪ್ ಮಾಡಬೇಕು . ವಿಪ್ ಮಾಡಿದ ನಂತರ ಗಾಜಿನ ಡಬ್ಬದಲ್ಲಿ ಶೇಕರಿಸಬೇಕು. ಬೇಕಾದಾಗ ಉಪಯೋಗಿಸಬಹುದು.DIY Body Butter - Stretchmark control during Pregnancy whipped butter postpartum cocoa butter skin treatment home remedy kannada hindi

7. ಬಾಡಿ ಬಟರ್ ತಯಾರಾಗಿದೆ.

DIY Body Butter – ಚರ್ಮ ಹಿಗ್ಗುವಿಕೆಯ ನಿವಾರಣೆಗೆ ಉಪಯುಕ್ತRice Halwa with Coconut Sugar for babies, toddlers and kids, dessert kannada hindi recipe
 

ಸೂಚನೆ :

  1. ಸ್ವಲ್ಪ ಪ್ರಮಾಣದಲ್ಲಿ ಬೆಣ್ಣೆಯನ್ನು ಬಳಸುವುದರಿಂದ, ಇದು ಸಂಪೂರ್ಣ ದೇಹಕ್ಕೆ ಕನಿಷ್ಠ 4 ತಿಂಗಳುಗಳವರೆಗೆ ಅನ್ವಯಿಸಲು ಸಾಕಾಗುತ್ತದೆ.
  1. ರೀತಿ ಪದಾರ್ಥಗಳು ದುಬಾರಿಯಾದರೂ, ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ನೀವು ಮನೆಯಲ್ಲಿ ಮಾಡುವುದರಿಂದ

          ಬಹಳಷ್ಟು ದುಡ್ಡು ಉಳಿಸಬಹುದು.

  1. ಎಣ್ಣೆ ಚರ್ಮವನ್ನು ಹೊಂದಿದ್ದರೆ ಮುಖದ ಮೇಲೆ ಹಚ್ಚ ಬೇಡಿ, ಸಾಮಾನ್ಯ ಚರ್ಮ ವಿರುವರು ರಾತ್ರಿ moisturizerಆಗಿ

           ಬಳಸಬಹುದು.

  1. ಮಕ್ಕಳಿಗೆ ಮತ್ತು ಶಿಶುಗಳಿಗೆ ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಮತ್ತು ಕಠಿಣ ಹವಾಮಾನ ಪರಿಣಾಮಗಳಿಂದ ರಕ್ಷಿಸಲು

           ಬಳಸಬಹುದು.

     5 DIY ಬಾಡಿ ಬಟರ್ ಅನ್ನು ಕೊಠಡಿಯ ಉಷ್ಣಾಂಶದಲ್ಲಿ ಇರಿಸಬಹುದು. ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿ ಶೇಕರಿಸಿದರೆ ಒಂದು ವರ್ಷ   

           ಇಡಬಹುದು.

  1. ಲವೆಂದರ್ ಎಣ್ಣೆ ಬದಲು ನಮಗೆ ಬೇಕಾದ ಅವಶ್ಯಕ ಎಣ್ಣೆ ಬಳಸಬಹುದು.
  2. ಗಾಯದ ಗುರುತುಗಳನ್ನು ಕಡಿಮೆ ಮಾಡಲು ಬಳಸಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 35
    Shares