Spread the love

ನಮ್ಮ ಬಿಡುವಿಲ್ಲದ ಜೀವನದಲ್ಲಿ ತಾಯಿ ಪಾತ್ರವು ಸುಲಭದ ಸಂಗತಿಯಲ್ಲ, ಮಕ್ಕಳು ಮತ್ತು ಕುಟುಂಬದವರ ಕಾಳಜಿ ವಹಿಸುತ್ತಾ ನಾವು ನಮ್ಮನ್ನು ಮರೆತುಬಿಡುತ್ತೇವೆ. ಕೂದಲ ಆರೈಕೆ, ತ್ವಚೆಯ ಆರೈಕೆ ಅಥವಾ ಸ್ವಯಂ ಕಾಳಜಿಯನ್ನು ನಾವು ಮರೆತು ಬಿಡುವುತ್ತೇವೆ. ನಮ್ಮ ಜೀವನಕ್ಕೆ ಮಗು ಬಂದ ಮೇಲಂತೂ  ನಮ್ಮ ಕೂದಲನ್ನು ಕೂಡ ಬಾಚಿಕೊಳ್ಳುವುದಿಲ್ಲ. ನಾವು ನಮ್ಮನ್ನು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇವೆ, ಯಾವಾಗ ನಮಗೆ ಇದರ ಅರಿವು ಮೂಡುತ್ತದೆಯೋ ಆಗ ನಮ್ಮ ಆರೋಗ್ಯ ಮತ್ತು ನಮ್ಮ ನೋಟವು ಹಾನಿಗೊಳಗಾಗಿರುತ್ತದೆ, ಅದು ಎಷ್ಟರ ಮಟ್ಟಗೆ ಎಂದರೆ ಹಾನಿಗಳನ್ನು ಸರಿಪಡಿಸಿಕೊಳ್ಳುಲಾಗದಷ್ಟು ತುಂಬಾ ತಡವಾಗಿ ಹೋಗಿರುತ್ತದೆ. ಈ ಲೇಖನದೊಂದಿಗೆ ನಾನು ಕಾರ್ಯ ನಿರತ ಅಮ್ಮಂದಿರಿಗೆ ಸ್ವಯಂ ಕಾಳಜಿ ಮಾಡಲು ಹಲವಾರು DIY(Do It Yourself ) ಸ್ವತಃ ಪ್ರಯತ್ನಿಸಿ ಮಾಡುವಂತಹ ಸುಲಭ ವಿಧಾನಗಳು ಪ್ರಾರಂಭಿಸಸಿದ್ದೇವೆ.

DIY Banana Face Mask for Instant Glow and Dry Skin

ನನ್ನ ಚರ್ಮರೋಗ ವೈದ್ಯರೊಂದಿಗೆ  ಯೋಗ್ಯ ಚರ್ಚೆ ಮತ್ತು ಸಂಶೋಧನೆ ನಂತರ ನಾನು ಈ ಸರಳವಾದ ಅಂಶಗಳನ್ನು ಹೊಂದಿರುವ ಹಾಗು ಸುಲಭವಾಗಿ ಮನೆಯಲ್ಲಿ ಮಾಡುವಂತಹದನ್ನು ಕಂಡುಕೊಂಡಿದ್ದೇನೆ. ಬಾಳೆಹಣ್ಣಿನ ಫೇಸ್ ಮಾಸ್ಕ್ ಮಿಶ್ರಣವನ್ನು ತಯಾರಿಸಲು 2 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಫಲಿತಾಂಶಗಳು ತುಂಬಾ ಆಶ್ಚರ್ಯಕರವಾಗಿದ್ದವು , ಎಲ್ಲರಿಗೂ ಪ್ರಯೋಜನಕಾರಿ ಎಂದು ನನ್ನ ವೈದ್ಯರು ಹೇಳುತ್ತಾರೆ. ಪಾರ್ಲರ್ಗೆ ಭೇಟಿ ನೀಡಲು ಯಾವುದೇ ಸಮಯವಿಲ್ಲದಂತಹ ತಾಯಂದಿರಿಗೆ ಇದು ಒಳ್ಳೆಯ ಫೇಸ್ ಮಾಸ್ಕ್. ಯಾವುದೇ ಸಮಾರಂಭಕ್ಕೆ ಅಥವಾ ಯಾವುದೇ ವಿಶೇಷ ಸಂದರ್ಭಕ್ಕೆ ಹೋಗುವುದಕ್ಕೂ ಮುಂಚಿತವಾಗಿ ಚರ್ಮದ ಮೇಲೆ ಹೆಚ್ಚುವರಿ ಹೊಳಪು ಅಗತ್ಯವಿರುವ ಎಲ್ಲರಿಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಈ ಫೇಸ್ ಪ್ಯಾಕ್ ನಲ್ಲಿ ಬಳಸಿರುವ ಸಾಮಗ್ರಿಗಳ ಲಾಭಗಳು :

ಬಾಳೆಹಣ್ಣಿನ ಪ್ರಯೋಜನಗಳುಮೊಸರಿನ ಪ್ರಯೋಜನಗಳುಜೇನುತುಪ್ಪದ ಪ್ರಯೋಜನಗಳು
ನೈಸರ್ಗಿಕವಾಗಿ ಚರ್ಮದ ತೇವಾಂಶ ಕಾಪಾಡುತ್ತದೆಚರ್ಮಕ್ಕೆ ಹೊಳಪು ನೀಡುತ್ತದೆ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯಕಾರಿ
ಗಾಢ ಚರ್ಮದ ಪ್ರದೇಶಗಳನ್ನು ಕಡಿಮೆಗೊಳಿಸುತ್ತದೆ.ಶುಷ್ಕ ಚರ್ಮವನ್ನು ಗುಣಪಡಿಸುತ್ತದೆಆಂಟಿ ಏಜಿಂಗ್ ಗುಣಗಳನ್ನು ಹೊಂದಿದೆ
ಚರ್ಮದ ಸುಕ್ಕುಗಳು ಕಡಿಮೆಗೊಳಿಸುತ್ತದೆ.ವಿಟಮಿನ್ ಗಳ ಪೋಷಣೆ ಒಳಗೊಂಡಿದೆ.ಚರ್ಮದ ರಂದ್ರಗಳನ್ನೂ ಶುಧ್ಧಿಕರಣ ಮಾಡುತ್ತದೆ.

ಚರ್ಮದ ಆರೈಕೆ ಗೆ ನಮ್ಮ ಇತರ : ಸ್ವತಃ ಪ್ರಯತ್ನಿಸಬಹುದಾದ ಆರೈಕೆಗಳು

ಮನೆಯಲ್ಲಿ ತಯಾರಿಸಿದ ಬಾದಾಮಿ ಮತ್ತು ಕಿತ್ತಳೆ ಸಿಪ್ಪೆಯ ಸ್ನಾನದ ಪುಡಿ

ಶಿಶುಗಳು ಮತ್ತು ವಯಸ್ಕರಿಗೆ ಕಡಲೆಹಿಟ್ಟಿನ ಹರ್ಬಲ್ ಬಾತ್ ಪೌಡರ್

ಬಾಳೆ ಹಣ್ಣಿನ ಫೇಸ್ ಪ್ಯಾಕ್ ಹೇಗೆ ಮಾಡುವುದು ? ಈ ವೀಡಿಯೊ ನೋಡಿ

Kannada Subscribe Button TOTS AND MOMS

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಮುಖಕ್ಕೆ ಹೊಳಪು ಮತ್ತು ಕಾಂತಿಗಾಗಿ ಹಾಗು ಒಣ ಚರ್ಮಕ್ಕೆ ಬಾಳೆ ಹಣ್ಣಿನ ಫೇಸ್ ಪ್ಯಾಕ್ ಖಂಡಿತವಾಗಿ ಪ್ರಯತ್ನಿಸಿ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: DIY ತ್ವಚೆಯ ಆರೈಕೆ
ತಿನಿಸು:ಭಾರತೀಯ

ಸಾಮಗ್ರಿಗಳು

1. ಮಾಗಿದ ಬಾಳೆ ಹಣ್ಣು : 1/2

2. ಜೇನುತುಪ್ಪ: 1/2 tbsp

3. ಮೊಸರು: 1 tbsp

ವಿಧಾನ

1. ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣನ್ನು ಫೋರ್ಕ್ ನ ಸಹಾಯದಿಂದ ಚೆನ್ನಾಗಿ ಹಿಸುಕಿ.

2. ಹಿಸುಕಿದ ಬಾಳೆಹಣ್ಣಿಗೆ ಜೇನುತುಪ್ಪ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

3. ಮಿಶ್ರಣವು ಫೇಸ್ ಪ್ಯಾಕ್ ಆಗಿ ಬಳಸಲು ಸಿದ್ಧವಾಗಿದೆ.

4. ಮುಖಕ್ಕೆ ಹೊಳಪು ಮತ್ತು ಕಾಂತಿಗಾಗಿ ಬಾಳೆಹಣ್ಣಿನ ಫೇಸ್ ಮಾಸ್ಕ್ ಸಿದ್ಧವಾಗಿದೆ.

ಬಾಳೆಹಣ್ಣಿನ ಫೇಸ್ ಪ್ಯಾಕ್ ಅನ್ನು ಹೇಗೆ ಬಳಸುವುದು?

1. ಫೇಸ್ ಪ್ಯಾಕ್ ತಯಾರಿಸಿ.

2. ಶುಚಿಯಾದ ಒಣ ಮುಖದ ಮೇಲೆ ಅದನ್ನು ಲೇಪಿಸಿಕೊಳ್ಳಿ 15-20 ನಿಮಿಷಗಳ ಕಾಲ ಒಣಗಲು ಬಿಡಿ.

3. ಮುಖಕ್ಕೆ ಹಬೆ ತೆಗೆದುಕೊಂಡರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

4. ತಣ್ಣಗಿರುವ ನೀರಿನಿಂದ ಮುಖ ತೊಳೆಯಬೇಕು.

5. ಕೇವಲ ಹತ್ತಿ ಬಟ್ಟೆಯನ್ನು ಮುಖದ ಮೇಲೆ ಲಘುವಾಗಿ ಒರೆಸಿಕೊಳ್ಳಿ ಮತ್ತು ಗಟ್ಟಿಯಾಗಿ ಉಜ್ಜಬೇಡಿ.

6. ತಕ್ಷಣವೇ ಯಾವುದೇ ಕ್ರೀಮ್ ಅನ್ನು ಬಳಸಬೇಡಿ. 1 ಗಂಟೆ ನಂತರ ಬಳಸುವುದು ಉತ್ತಮ.

7. ನೀವು ವಾರಕ್ಕೆ ಎರಡು ಬಾರಿ ಇದನ್ನು ಮಾಡಬಹುದು. ಆಂಟಿ ಏಜಿಂಗ್ ಆಗಿ ಕೆಲಸ ಮಾಡುವುದು.( ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.)

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

DIY Banana Face Mask for Instant Glow and Dry Skin

 ಬಾಳೆ ಹಣ್ಣಿನ ಫೇಸ್ ಪ್ಯಾಕ್ ಮಾಡುವ ವಿಧಾನ

1. ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣನ್ನು ಫೋರ್ಕ್ ನ ಸಹಾಯದಿಂದ ಚೆನ್ನಾಗಿ ಹಿಸುಕಿ.

DIY Banana Face Mask for Instant Glow and Dry Skin

2. ಹಿಸುಕಿದ ಬಾಳೆಹಣ್ಣಿಗೆ ಜೇನುತುಪ್ಪ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

DIY Banana Face Mask for Instant Glow and Dry Skin

3. ಮಿಶ್ರಣವು ಫೇಸ್ ಪ್ಯಾಕ್ ಆಗಿ ಬಳಸಲು ಸಿದ್ಧವಾಗಿದೆ.

DIY Banana Face Mask for Instant Glow and Dry Skin

4. ಮುಖಕ್ಕೆ ಹೊಳಪು ಮತ್ತು ಕಾಂತಿಗಾಗಿ ಬಾಳೆಹಣ್ಣಿನ ಫೇಸ್ ಪ್ಯಾಕ್.

DIY Banana Face Mask for Instant Glow and Dry Skin

ಬಾಳೆಹಣ್ಣಿನ ಫೇಸ್ ಪ್ಯಾಕ್ ಅನ್ನು ಹೇಗೆ ಬಳಸುವುದು?

1. ಫೇಸ್ ಪ್ಯಾಕ್ ತಯಾರಿಸಿ.

2. ಶುಚಿಯಾದ ಒಣ ಮುಖದ ಮೇಲೆ ಅದನ್ನು ಲೇಪಿಸಿಕೊಳ್ಳಿ 15-20 ನಿಮಿಷಗಳ ಕಾಲ ಒಣಗಲು ಬಿಡಿ.

3  ಮುಖಕ್ಕೆ ಹಬೆ ತೆಗೆದುಕೊಂಡರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

4. ತಣ್ಣಗಿರುವ ನೀರಿನಿಂದ ಮುಖ ತೊಳೆಯಬೇಕು.

5. ಕೇವಲ ಹತ್ತಿ ಬಟ್ಟೆಯನ್ನು ಮುಖದ ಮೇಲೆ ಲಘುವಾಗಿ ಒರೆಸಿಕೊಳ್ಳಿ ಮತ್ತು ಗಟ್ಟಿಯಾಗಿ ಉಜ್ಜಬೇಡಿ.

6. ತಕ್ಷಣವೇ ಯಾವುದೇ ಕ್ರೀಮ್ ಅನ್ನು ಬಳಸಬೇಡಿ. 1 ಗಂಟೆ ನಂತರ ಬಳಸುವುದು ಉತ್ತಮ.

7. ನೀವು ವಾರಕ್ಕೆ ಎರಡು ಬಾರಿ ಇದನ್ನು ಮಾಡಬಹುದು. ಆಂಟಿ ಏಜಿಂಗ್ ಆಗಿ ಕೆಲಸ ಮಾಡುವುದು.( ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.)

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.

Spread the love