Spread the love

ವಿಶೇಷ ಚೇತನ/ ಅಂಗವಿಕಲರೊಂದಿಗೆ ಹೇಗೆ ನಡೆದುಕೊಳ್ಳಬೇಕು? | Disability Etiquette in Kannada

ಅಂಗವೈಕಲ್ಯ ಸಭ್ಯಚಾರ | ವಿಕಲಚೇತನರ ಜೊತೆ  ಹೇಗೆ ನಡೆದು ಕೊಳ್ಳಬೇಕು | ಅಂಗವೈಕಲ್ಯ ಸಭ್ಯಚಾರದ ಬಗ್ಗೆ ಮಕ್ಕಳಿಗೆ ಹೇಗೆ ಕಲಿಸುವುದು | ಅಂಗವೈಕಲ್ಯ ಸಭ್ಯಚಾರದಲ್ಲಿ ಯಾ ವುದನ್ನು ಮಾಡಬೇಕು ಮತ್ತು ಮಾಡಬಾರದು  | ವಿಶೇಷವಾಗಿ ಸಮರ್ಥ ಜನರು/ಮಕ್ಕಳು  | ವಿಕಲಾಂಗರೊಂದಿಗೆ ವ್ಯವಹರಿಸುವುದನ್ನು ಮಕ್ಕಳಿಗೆ  ಕಲಿಸುವುದು

Disability Etiquette How to teach your kids about their behavior towards disabled or specially abled person How to treat people with disablities what is that we need to understand about disability before we teach our kids specially abled vikalang disabilities do and dont while treating disabled people

(ಲೇಖನದ ಕೊನೆಯಲ್ಲಿ ವಿಡಿಯೋ ನೋಡುವುದನ್ನು ಮರೆಯಬೇಡಿ) 

ನಾನು ಒಮ್ಮೆ ನನ್ನ 5 ವರ್ಷದ ಮಗುವಿನ ಜೊತೆ  ಸೋಲ್ ಸರ್ಫರ್ ಚಲನಚಿತ್ರವನ್ನು ನೋಡುತ್ತಿದ್ದೆ, ಅದು ಶಾರ್ಕ್ ದಾಳಿಗೆ ತನ್ನ ಒಂದು ಕಾಲು ಕಳೆದುಕೊಂಡ ಯುವತಿಯ ಕಥೆ. ಅವಳ ಗಾಯ ವಾಸಿಯಾದ ಮೇಲೆ  ಹಿಂತಿರುಗಿ ಮತ್ತೆ ಬರುತ್ತಾಳೆ. ಅವಳ ತಾಯಿ, ತಂದೆ, ಇಬ್ಬರು ಸಹೋದರರು ಮತ್ತು ಉತ್ತಮ ಸ್ನೇಹಿತರು  ಅವಳನ್ನು ಬೆಂಬಲಿಸಿದ ರೀತಿ ಆಶ್ಚರ್ಯಚಕಿತವಾಯಿತು . ಉತ್ತಮ ಬೆಂಬಲ ವ್ಯವಸ್ಥೆ ಬಹಳ ಮಹತ್ವವಾದದ್ದು ಎಂದು ಆಗ ಅರಿವಾಯಿದತು. ಅಂತರ್ಗತವಾಗಿರುವ ಮಾನಸಿಕ ಹಾಗೂ ದೈಹಿಕ  ವ್ಯವಸ್ಥೆಯು ಅಂತಹ ಆತ್ಮಗಳನ್ನು ಸ್ವತಂತ್ರ, ಆತ್ಮವಿಶ್ವಾಸ, ದೃಢ ಮತ್ತು ಸಕಾರಾತ್ಮಕವಾಗಿ ಪೋಷಿಸುವುದು. ಸಹಜವಾಗಿ, ಮಕ್ಕಳಿಗೆ ಸಾಕಷ್ಟು ಪ್ರಶ್ನೆಗಳಿರುತ್ತವೆ , ಅವಳ ನಷ್ಟ ಮತ್ತು ನೋವಿನ ಗುಣಪಡಿಸುವ ಅವಧಿಯನ್ನು ನೋಡಿ ಆಘಾತಕ್ಕೊಳಗಾಗುವರು. ಆದರೆ ಇಂದು ಸಾಮಾನ್ಯರನ್ನು  ಮೀರಿಸಿದ್ದಾಳೆಂದು ಅರ್ಥಮಾಡಿಕೊಂಡಿದ್ದಾರೆ  ಮತ್ತು ಹೆಚ್ಚಿನ ಆತ್ಮವಿಶ್ವಾಸ ಪಡೆದಿದ್ದಾಳೆ.

ನಮ್ಮ ಬ್ಲಾಗ್‌ನಿಂದ ಕೆಳಗಿನ ಉಪಯುಕ್ತ ಲಿಂಕ್‌ಗಳನ್ನು ಪರಿಶೀಲಿಸಿ :

ಮಕ್ಕಳಿಗೆ ಅರ್ಥಮಾಡಿಸಲು ಸೂಕ್ತವಾದ  ವಿವರಣೆ ನೀಡಬೇಕು. 

ಪ್ರತಿ ಮಗು ವಿಭಿನ್ನ ಎಂದು ಅರಿವು ಮೂಡಿಸುವ ಮೂಲಕ  ಶಿಕ್ಷಣವನ್ನು ಪ್ರಾರಂಭಿಸಬೇಕು.ಪ್ರತಿಯೊಬ್ಬ ಜೀವಿಯಲ್ಲಿ  ಮಾನಸಿಕ ಸಾಮರ್ಥ್ಯ ಮತ್ತು ದೈಹಿಕ ಸಾಮರ್ಥ್ಯ ಎರಡೂ ವಿಭಿನ್ನವಾಗಿರಬಹುದು ಮತ್ತು  ಬದಲಾಗಬಹುದು. ವ್ಯಕ್ತಿಯ ಅಂಗವೈಕಲ್ಯವು ವ್ಯಕ್ತಿಯ ಗುರುತಿನ ಒಂದು ಸಣ್ಣ ಭಾಗವಾಗಿರುತ್ತದೆ ಎಂಬ ಅಂಶಕ್ಕೆ ಹೆಚ್ಚು ಒತ್ತು ನೀಡಬೇಕು. ಅವರು  ನಟ ಅಥವಾ ತಂದೆಯಾಗಿರಬಹುದು. ಕಾಳಜಿಯುಳ್ಳ ಕುಟುಂಬವೂ ಇರುವುದು. ಅವರಿಗೆ ಹವ್ಯಾಸಗಳಿರುತ್ತದೆ  ಮತ್ತು ನಮ್ಮಂತೆಯೇ ಎಲ್ಲವೂ ಇರುವುದು. ಯಾವುದೇ ದೈಹಿಕ ಸಾಮರ್ಥ್ಯವನ್ನು ನೋಡಿ ಯಾರೊಬ್ಬರನ್ನು  ಗುರುತಿಸಬಾರದು.

ಸಾಮರ್ಥ್ಯಗಳು ಮತ್ತು ಮಿತಿಗಳನ್ನು ಲೆಕ್ಕಿಸದೆ, ಪ್ರತಿಯೊಬ್ಬ ಮಾನವನಿಗೆ  ಪ್ರೀತಿ ಮತ್ತು ಸ್ವೀಕಾರ ಬೇಕಾಗುವುದು . ಪೋಷಕರಾಗಿ ನಾವು ಮಕ್ಕಳಿಗೆ ಮಾದರಿಯಾಗಿರಬೇಕು , ನಮ್ಮ ಕಾರ್ಯ/ವ್ಯವಹಾರದ ಮೂಲಕ ತೋರಿಸಲು ಪ್ರಾರಂಭಿಸಬೇಕು. ನಮ್ಮಂತಯೇ ಅವರು ಇದ್ದಾರೆ ಎಂದು ಹೇಳುವಾಗ ಬಹಳ ಜಾಗರೂಕರಾಗಿರಿಬೇಕು. ಖಂಡಿತವಾಗಿಯೂ ಅವರು ಹಲವಾರು  ಸವಾಲುಗಳನ್ನು ಎದುರಿಸಬೇಕಾಗುವುದು ಎಂದು ಅರಿವು ಮೂಡಿಸಬೇಕು.

ಕಥೆಗಳನ್ನು ಓದುವ ಮೂಲಕ ಅರಿವು ಮೂಡಿಸುವುದು 

ಯಾವಾಗಲೂ ಮಕ್ಕಳಿಗೆ ಯಾವುದೇ ವಿಷಯವನ್ನು ವಿಸ್ತಾರವಾಗಿ ಹೇಳಲು ಮತ್ತು ವಿವರಿಸಲು ಪುಸ್ತಕಗಳು ಉತ್ತಮ ಸಾಧನವಾಗಿದೆ. ವಿಶೇಷ ಸಾಮರ್ಥ್ಯವಿರುವ ಜನ /ಮಕ್ಕಳ ಜೀವನವನ್ನು ಅರ್ಥಮಾಡಿಸಲು  ಹಾಗೂ ಮಗುವಿಗೆ ಅರಿವು ಮೂಡಿಸಲು ಸಹಾಯ ಮಾಡಲು ಅತ್ಯುತ್ತಮ ಭಾರತೀಯ ಪುಸ್ತಕಗಳ ಬಗ್ಗೆ ಕೆಳಗೆ ಮಾಹಿತಿ ನೀಡಲಾಗಿದೆ ಮತ್ತು ಶಿಫಾರಸು ಇಲ್ಲಿ ನೀಡಲಾಗಿದೆ.

 1. ಹಾರಲು ರೆಕ್ಕೆಗಳು – ಪ್ಯಾರಾ-ಅಥ್ಲೀಟ್ ಮಾಲತಿ ಹೊಲ್ಲಾ ಅವರ ಕಥೆ
 2. ಕಾಡಿನಲ್ಲಿ ಕೊಳಲು – 13 ವರ್ಷ ವಯಸ್ಸಿನ ಪೋಲಿಯೊ ಪೀಡಿತ ಹುದಾಗಿಯ ಸಂಗೀತ-ಪ್ರೀತಿ 
 3. ಮಾನ್ಯಾ ಘರ್ಜಿಸಲು ಕಲಿಯುತ್ತಾಳೆ – ಅಸಾಮಾನ್ಯ ವಿರಾಮಗಳು ಅಥವಾ ಪುನರಾವರ್ತಿತ ಶಬ್ದಗಳೊಂದಿಗೆ  ಏನನ್ನಾದರೂ ಮಾತನಾಡಲು ಅಥವಾ ಹೇಳುವ  ಹುಡುಗಿಯ ಕಥೆ
 4. ಕ್ಯಾಚ್  ದಿ ಕ್ಯಾಟ್ – ಹುಡುಗಿಯೊಬ್ಬಳು ತನ್ನ ಸಾಕುಪ್ರಾಣಿಗಳನ್ನು ಗಾಲಿಕುರ್ಚಿಯಲ್ಲಿ ಹುಡುಕುವ ಕಥೆ

ನಾವು ಪೋಷಕರಾಗಿ ಮೊದಲು ಯಾವುದನ್ನು ಮಾಡಬೇಕು ಮತ್ತು ಮಾಡಬಾರದೆಂದು ಮೊದಲು ಕಲಿಯಬೇಕು 

 1. ದಿಟ್ಟಿಸಿ ನೋಡುವುದನ್ನು ತಪ್ಪಿಸಬೇಕು 
  ಅಗತ್ಯವಿದ್ದರೆ ಮುಗುಳು ನಗೆ ಬೀರಬಹುದು. ನಾವು ಹೊಸಬರನ್ನು ನೋಡುವ ಕ್ಷಣದಲ್ಲಿ ಅವರು ಸಾಮಾನ್ಯವಾಗಿಲ್ಲ  ವಾದರೆ ನಾವು ಅವರನ್ನು  ವಿಭಿನ್ನವಾಗಿ ನೋಡಲು ಪ್ರಾರಂಭಿಸುತ್ತೇವೆ. ಒಂದು ದಿನ ಮಾಲ್‌ನಲ್ಲಿ ಸುಮಾರು 30 ವರ್ಷ ವಯಸ್ಸಿನ ಮಹಿಳೆ ವಿಶೇಷ ಸಾಮರ್ಥ್ಯ ಹೊಂದಿರುವ ಇನ್ನೊಬ್ಬ ಮಹಿಳೆಯನ್ನು ದಿಟ್ಟಿಸಿ  ಸೋಡುತ್ತಿದ್ದ ರೀತಿ ನನಗೆ ನೆನಪಿದೆ. ಆ ಮಹಿಳೆಯ ಮುಖದಲ್ಲಿ ಮೂಡಿದ ವಿಚಿತ್ರತೆಯು ಹೃದಯ ಕದಡುವಂತಿತ್ತು.

 2. ಕರುಣೆ ಅಥವಾ ಕಡೆಗೆಣಿಸಬೇಡಿ 
  ಅವರು ಬದುಕಲು ಕಲಿತಿರುತ್ತಾರೆ ಮತ್ತು ಅದರೊಂದಿಗೆ ಅವರ ಜೀವನ ಉತ್ಕೃಷ್ಟವಾಗಿರುತ್ತದೆ. ನಿಮ್ಮ ಮಾತುಗಳ ಮೂಲಕ ಮತ್ತು ಕಾರ್ಯದಲ್ಲಿ  ಎಂದಿಗೂ ಅವರನ್ನು ಕರುಣೆ ಇಂದ ನೋಡಬೇಡಿ . ಒಂದು ಅಂಗವನ್ನು ಕಳೆದುಕೊಳ್ಳುವುದರಿಂದ ಇತರ ಅನೇಕ ಇಂದ್ರಿಯಗಳು ಅಥವಾ ಅಂಗಗಳು ಅವರಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುವುದು. ಉದಾಹರಣೆಗೆ, ನೋಡಲು ಸಾಧ್ಯವಾಗದ ಜನರು ಉತ್ತಮ ಶ್ರವಣ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದು ಅವರ ಜೀವನವನ್ನು ಉತ್ತಮವಾಗಿ ನಡೆಸಲು ಸಹಾಯ ಮಾಡುತ್ತದೆ. ನಾವು ಎಷ್ಟು ಪರಿಪೂರ್ಣರು?  ಎಂಬುದರ ಬಗ್ಗೆ ಯಾವತ್ತಾದರೂ ಪ್ರಯತ್ನಿಸಿ ಯೋಚಿಸಿದ್ದೀರ.  ಅಂಗವೈಕಲ್ಯವನ್ನು ವಿವರಿಸುವಾಗ ಭಾವನೆಗಳನ್ನು ಎಂದಿಗೂ ತರಬಾರದು. ಕೆಟ್ಟ, ಭೀಕರವಾದ, ದುಃಖದಂತಹ ಪದಗಳು ಮತ್ತೆ ಕರುಣಾ ಜನಕ ಎಂಬ ಭಾವನೆ ಮೂಡಿಸುವುದು. ಹಾಗಾಗಿ ಇದನ್ನು ತಪ್ಪಿಸಬೇಕು. 

 3.  ಅಂಗವೈಕಲ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ.
  “ನಿಮಗೆ ಒಳ್ಳೆಯದನ್ನು ಹೇಳಲು ಮತ್ತು ಮಾಡಲು ಆಗದಿದ್ದರೆ, ಕೆಟ್ಟದ್ದನ್ನು ಮಾತ್ರ ಎಂದಿಗೂ ಮಾಡಬೇಡಿ ಅಥವಾ ಹೇಳಬೇಡಿ” ಎಂಬ ಮಾತಿದೆ. ಅದೇ ರೀತಿ  ನಾವು ಇದನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವುದು  ಒಳ್ಳೆಯದು ಮತ್ತು ಸುಲಭ.

 4. ಕ್ರೂರ/ಕಠೋರವಾದ  ಪದಗಳನ್ನು ಬಳಸಬೇಡಿ 
  ಅಂಗವೈಕಲ್ಯ ಅಲ್ಲ ಆದರೆ ವಿಶೇಷವಾಗಿ ಸಮರ್ಥ ಎಂದು ಹೇಳುವುದು ಸೂಕ್ತ.  ಅವರು ಕುರುಡರು, ಮೂಕರು ಅಥವಾ ಕಿವುಡರು ಎಂಬುದು ಸತ್ಯ, ಆದರೆ ಯಾವತ್ತೂ ಕೂಗಿ ಹೇಳಬಾರದು – ಅವರಿಗೂ  ಹೆಸರು ಇರುವುದು. ಕೆಲವೊಮ್ಮೆ ಆಕಸ್ಮಿಕವಾಗಿ, ನಾವು ಆ ಕುರುಡು ಸಹೋದ್ಯೋಗಿ, ಮೂಕ ಇತ್ಯಾದಿ ಮಾತನಾಡುತ್ತೇವೆ.

 5. ಸಹಾಯ ಮಾಡಲು ಜಿಗಿಯಬೇಡಿ
  ಅವರಿಗೆ ನಿಜವಾಗಿಯೂ ಸಹಾಯ ಬೇಕಾ ಎಂದು ಕೇಳಿ ನಂತರ ಮಾಡುವುದು ಒಳ್ಳೆಯದು . ಗೌರವಾನ್ವಿತ ಜೀವನವನ್ನು ನಡೆಸುವ ಮೂಲಭೂತ  ಅಂಶಗಳನ್ನು ಈಗಾಗಲೇ ಕಲಿತಿರುತ್ತಾರೆ, ಎಂದಿಗೂ ಅತಿರೇಕಕ್ಕೆ ಹೋಗಿ ಅವರನ್ನು ಮುಜುಗರಕ್ಕೀಡು ಮಾಡಬಾರದು. 

Video: ವಿಶೇಷ ಚೇತನ/ ಅಂಗವಿಕಲರೊಂದಿಗೆ ಹೇಗೆ ನಡೆದುಕೊಳ್ಳಬೇಕು? | Disability Etiquette in Kannada

Kannada Subscribe Button TOTS AND MOMS

ವಿಶೇಷ ಚೇತನ/ ಅಂಗವಿಕಲರೊಂದಿಗೆ ಹೇಗೆ ನಡೆದುಕೊಳ್ಳಬೇಕು? | Disability Etiquette in Kannada

Disability Etiquette How to teach your kids about their behavior towards disabled or specially abled person How to treat people with disablities what is that we need to understand about disability before we teach our kids specially abled vikalang disabilities do and dont while treating disabled people

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ


Spread the love