Spread the love

ಗೋಧಿನುಚ್ಚು ಸರಿ | Dalia Porridge recipe in KannadaDalia or Broken Wheat Porridge for babies kannada hindi recipe

ಗೋಧಿ ನುಚ್ಚು ಎಲ್ಲಾ ವಯಸ್ಸಿನವರಿಗೆ ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣಿಸುವ ಆಹಾರವಾಗಿದೆ. ವಿಶೇಷವಾಗಿ ಶಿಶುಗಳಿಗೆ ಗಂಜಿ /ಸರಿ ರೂಪದಲ್ಲಿ ನೀಡಲಾಗುವುದು ಮತ್ತು ಇದನ್ನು ಭಾರತೀಯ ಅಂಬಲಿ/ಗಂಜಿ/ಸರಿ  ಎಂದು ಕರೆಯಲಾಗುತ್ತದೆ. ಇದರಲ್ಲಿ ಹೆಚ್ಚು ಪೌಷ್ಠಿಕಾಂಶವಿರುತ್ತದೆ. ಬೇಯಿಸಿದಾಗ ಒಳ್ಳೆಯ ರುಚಿ ಮತ್ತು ಪರಿಮಳ ಹಾಗು ಆಹಾರ ವಿನ್ಯಾಸವನ್ನು ನೀಡುತ್ತದೆ. ಎಲ್ಲಾ ವಯಸ್ಸಿನವರಿಗೆ ಸಿಹಿಯಾದ ಗೋಧಿ ನುಚ್ಚಿನ ಪಾಯಸ ಸೇವಿಸಿದರೆ ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ. ಶಿಶುಗಳಿಗೆ ಸುಲಭವಾಗಿ ಮಾಡಿ ಕೊಡಬಹುದು ಮತ್ತು ಜೀರ್ಣವಾಗುತ್ತದೆ.ಮನೆಯಲ್ಲೇ ಶಿಶು ಆಹಾರ ತಯಾರಿಸಬಹುದು. ಮಕ್ಕಳಿಗೆ ಗೋಧಿ ಪರಿಚಯಿಸಲು ಗೋಧಿ ನುಚ್ಚು ಸರಿ ಉತ್ತಮ ವಿಧಾನವಾಗಿದೆ.

8 ತಿಂಗಳುಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಕುಟುಂಬದಲ್ಲಿ ಗೋಧಿಯಲ್ಲಿರುವ ಅಂಟು (ಗ್ಲುಟೆನ್ ) ಅಲರ್ಜಿಯ ಯಾವುದೇ ಇತಿಹಾಸವಿಲ್ಲದಿದ್ದರೆ ನೀಡಬಹುದು. ಗೋಧಿ ನುಚ್ಚು ಸರಿಯಲ್ಲಿ ನೈಸರ್ಗಿಕವಾದ ಸುವಾಸನೆ ಮತ್ತು ರುಚಿ ಇರುವುದು. ಶಿಶುಗಳು ಕೂಡ ಇಷ್ಟವಾಗುತ್ತದೆ. ಒಂದು ವರ್ಷದ ಒಳಗಿನ ಶಿಶುಗಳಿಗೆ ಯಾವುದೇ ಸಿಹಿಕಾರಕಗಳನ್ನು ಹಾಕುವ ಅಗತ್ಯವಿರುವುದಿಲ್ಲ. ನೀವು ಬಯಸಿದರೆ ನೈಸರ್ಗಿಕವಾದ  ಮಸಾಲೆಯನ್ನು ಬಳಸಬಹುದು. ಜೀರಿಗೆ ಪುಡಿ, ಏಲಕ್ಕಿ ಪುಡಿ ಅಥವಾ ದಾಲ್ಚಿನ್ನಿ ಪುಡಿಯನ್ನು ಸೇರಿಸುವುದರಿಂದ ರುಚಿ ಮತ್ತು ಪರಿಮಳ ನೀಡುತ್ತದೆ. ಒಂದು ವರ್ಷ ಮೇಲ್ಪಟ್ಟ  ಶಿಶುಗಳಿಗೆ ಎಲ್ಲಾ ಸರಿಗೆ ಹಾಕಬಹುದು. ಪೌಷ್ಠಿಕಾಂಶವನ್ನು ಹೆಚ್ಚಿಸಲು ಮನೆಯಲ್ಲಿ ತಯಾರಿಸಿದ ಖರ್ಜೂರದ ಪುಡಿ ಮತ್ತು ಒಣ ಹಣ್ಣುಗಳ ಪುಡಿಯನ್ನು ಸೇರಿಸಬಹುದು.ಶಿಶುಗಳಿಗೆ ಹಾಗೆ ಸುಲಭವಾಗಿ ಏನನ್ನು ಹಾಕದೆ ಮಾಡಬಹುದು ಅಥವಾ ಬೇಯಿಸಿದ ಖರ್ಜೂರವನ್ನು ಬಳಸಬಹುದು. ನೈಸರ್ಗಿಕ ಸಿಹಿಕಾರಕಗಳಾದ   ಖರ್ಜೂರದ ಪುಡಿ ಮತ್ತು ಡ್ರೈ ಫ್ರೂಟ್ ಪೌಡರ್ ನಮ್ಮ ಅಂಗಡಿಯಲ್ಲಿ ನೀವು ಖರೀದಿಸಬಹುದು. ಒಂದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಜೈವಿಕ ಬೆಲ್ಲ ವನ್ನು  ಕೂಡ ಬಳಸಬಹುದು.

ನಿಮ್ಮ ಸಮಯ ಉಳಿಸಲು ಮತ್ತು ಶೀಘ್ರವಾಗಿ ಶಿಶು ಆಹಾರ ತಯಾರಿಸಲು ನಮ್ಮ ಅಂಗಡಿಯಲ್ಲಿ ನೈಸರ್ಗಿಕ ಸಿಹಿಕಾರಕಗಳು, ಡ್ರೈ ಫ್ರೂಟ್ ಪೌಡರ್  ಅಥವಾ ಪ್ರತ್ಯಕವಾದ ಡ್ರೈ ಫ್ರೂಟ್ ಪುಡಿಗಳನ್ನು ಖರೀದಿಸಬಹುದು.

ನಮ್ಮ ಇತರ ಶಿಶು ಆಹಾರ ಪಾಕವಿಧಾನಗಳನ್ನು ಪ್ರಯತ್ನಿಸಿ : 

ಗೋಧಿ ನುಚ್ಚಿನ ಆರೋಗ್ಯಕರವಾದ ಪ್ರಯೋಜನಗಳು :

  • ಮಕ್ಕಳ ಬೆಳವಣಿಗೆ ಮತ್ತು ಚಯಾಪಚಯವನ್ನು ಸುಧಾರಿಸಲು ಬೇಕಾಗುವ ಎಲ್ಲಾ ಪೋಷಕಾಂಶ ಮತ್ತು ನಾರಿನಾಂಶ ದೊರಕುವುದು
  • ಗೋಧಿ ನುಚ್ಚಿನಲ್ಲಿ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ ಸಮೃದ್ಧವಾಗಿರುತ್ತದೆ.
  • ಅಕ್ಕಿ ಮತ್ತು ಹಿಟ್ಟಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತದೆ.

Video: ಗೋಧಿನುಚ್ಚು ಸರಿ | Dalia Porridge recipe in Kannada

Kannada Subscribe Button TOTS AND MOMS

ಗೋಧಿನುಚ್ಚು ಸರಿ | Dalia Porridge recipe in Kannada

ಗೋಧಿನುಚ್ಚು ಸರಿ | Dalia Porridge recipe in Kannada

ಗೋಧಿ ನುಚ್ಚಿನ ಸರಿ ಬಹಳ ಪೌಷ್ಟಿಕ, ರುಚಿಕರವಾಗಿರುತ್ತದೆ. ಶಿಶುಗಳಿಗೆ ಸರಿ ತಯಾರಿಸುವುದು ಬಹಳ ಸುಲಭ. ಎಲ್ಲಾ ವಯಸ್ಸಿನವರಿಗೆ ಬೆಳವಣಿಗೆಗೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸರಿ ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಗೋಧಿ ನುಚ್ಚು  - 2 Tbsp
  2. ಖರ್ಜೂರದ ಪುಡಿ  - 2 Tsp
  3. ಒಣ ಹಣ್ಣುಗಳ ಪುಡಿ/ಡ್ರೈ ಫ್ರೂಟ್ ಪೌಡರ್ - 1 Tbsp
  4. ಏಲಕ್ಕಿ ಪುಡಿ ಒಂದು ಚಿಟಕೆ
  5. ನೀರು / ಹಾಲು - 1 ಕಪ್

ವಿಧಾನ

  1. ಕುಕ್ಕರ್ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ನಂತರ, ಬೇಕಾಗುವಷ್ಟು ಗೋಧಿ ನುಚ್ಚನ್ನು ತೊಳೆದು ನೀರನ್ನು ಬಸೆದು 2 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಿ.
  2. ಈ ಮಿಶ್ರಣಕ್ಕೆ ಖರ್ಜೂರದ ಪುಡಿ ಮತ್ತು ಡ್ರೈ ಫ್ರೂಟ್ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  3. ಒಂದು ಚಿಟಕೆ ಏಲಕ್ಕಿ ಅಥವಾ ಚಕ್ಕೆ ಪುಡಿ ಹಾಕಿ ನಂತರ ಹಾಲು ಅಥವಾ ನೀರು ಹಾಕಿ.
  4. ಮಿಶ್ರಣವನ್ನು ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ ಎರಡು ಸೀಟಿ ಬರುವ ತನಕ ಬೇಯಿಸಿ 15 ನಿಮಿಷ ಪ್ಯಾನ್ ನಲ್ಲಿ ಬೇಯಿಸಬಹುದು.
  5. ತಣ್ಣಗಾದ ನಂತರ ಮುಚ್ಚಳ ತೆಗೆದು ಮಿಶ್ರಣ ಮಾಡಿ. ಗೋಧಿ ನುಚ್ಚಿನ ಸರಿಯನ್ನು ಹಾಗೆ ಶಿಶುಗಳಿಗೆ ನೀಡಬಹುದು.
  6. ಹೊಸ ವಿನ್ಯಾಸ ಪರಿಚಯಿಸಲು ಶಿಶುಗಳಿಗೆ ನೀಡಬಹುದು. ಹಲ್ಲು ಬರದ ಶಿಶುಗಳಿಗೆ ಅಗಿಯಲು ಸುಲಭವಾಗಲು ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ನಾನು ಇಲ್ಲಿ  Wonderchef Blender jar ಬಳಸಿದ್ದೇನೆ. 
  7. ಗೋಧಿ ನುಚ್ಚು ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಗೋಧಿನುಚ್ಚು ಸರಿ | Dalia Porridge recipe in Kannada

ಗೋಧಿನುಚ್ಚು ಸರಿ ಮಾಡಲು ಬೇಕಾಗುವ ಸಾಮಗ್ರಿಗಳು :

  1. ಗೋಧಿ ನುಚ್ಚು  – 2 Tbsp
  2. ಖರ್ಜೂರದ ಪುಡಿ  – 2 Tsp
  3. ಒಣ ಹಣ್ಣುಗಳ ಪುಡಿ/ಡ್ರೈ ಫ್ರೂಟ್ ಪೌಡರ್ – 1 Tbsp
  4. ಏಲಕ್ಕಿ ಪುಡಿ ಒಂದು ಚಿಟಕೆ
  5. ನೀರು / ಹಾಲು – 1 ಕಪ್

ಗೋಧಿನುಚ್ಚು ಸರಿ ಮಾಡುವ ವಿಧಾನ :

1.ಕುಕ್ಕರ್ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ನಂತರ, ಬೇಕಾಗುವಷ್ಟು ಗೋಧಿ ನುಚ್ಚನ್ನು ತೊಳೆದು ನೀರನ್ನು ಬಸೆದು 2 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಿ.Recipe-Steps_1-12.ಈ ಮಿಶ್ರಣಕ್ಕೆ ಖರ್ಜೂರದ ಪುಡಿ ಮತ್ತು ಡ್ರೈ ಫ್ರೂಟ್ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.Recipe-Steps_2-1 3.ಒಂದು ಚಿಟಕೆ ಏಲಕ್ಕಿ ಅಥವಾ ಚಕ್ಕೆ ಪುಡಿ ಹಾಕಿ ನಂತರ ಹಾಲು ಅಥವಾ ನೀರು ಹಾಕಿ.Recipe-Steps_3-1 4.ಮಿಶ್ರಣವನ್ನು ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ ಎರಡು ಸೀಟಿ ಬರುವ ತನಕ ಬೇಯಿಸಿ 15 ನಿಮಿಷ ಪ್ಯಾನ್ ನಲ್ಲಿ ಬೇಯಿಸಬಹುದು.Recipe-Steps_4-1 5.ತಣ್ಣಗಾದ ನಂತರ ಮುಚ್ಚಳ ತೆಗೆದು ಮಿಶ್ರಣ ಮಾಡಿ. ಗೋಧಿ ನುಚ್ಚಿನ ಸರಿಯನ್ನು ಹಾಗೆ ಶಿಶುಗಳಿಗೆ ನೀಡಬಹುದು.Recipe-Steps_5-16.ಹೊಸ ವಿನ್ಯಾಸ ಪರಿಚಯಿಸಲು ಶಿಶುಗಳಿಗೆ ನೀಡಬಹುದು. ಹಲ್ಲು ಬರದ ಶಿಶುಗಳಿಗೆ ಅಗಿಯಲು ಸುಲಭವಾಗಲು ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ನಾನು ಇಲ್ಲಿ  Wonderchef Blender jar ಬಳಸಿದ್ದೇನೆ.Recipe-Steps_6-17.ಗೋಧಿ ನುಚ್ಚು ಸರಿ ತಯಾರಾಗಿದೆ.

ಗೋಧಿನುಚ್ಚು ಸರಿ | Dalia Porridge recipe in KannadaDalia or Broken Wheat Porridge for babies kannada hindi recipe

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love