Spread the love
  • 22
    Shares

ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in KannadaCumin Seeds Benefits & Uses for Babies & Kids | How to prepare Cumin Water hindi kannada jeera paani

ಜೀರಿಗೆಯಲ್ಲಿ ಅನೇಕ ಔಷಧೀಯ ಗುಣಗಳಿರುವ ಮಸಾಲೆ ಪದಾರ್ಥ. ಹಲವಾರು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಜೀರಿಗೆಯನ್ನು ಸಂಸ್ಕೃತದಲ್ಲಿ ಜಿರಾ ಎಂದು ಕರೆಯಲಾಗುತ್ತದೆ, ಅಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಎಂದರ್ಥ. ಜೀರಿಗೆ ಯಿಂದ ಉಸಿರಾಟದ ಅಸ್ವಸ್ಥತೆಗಳನ್ನು ಗುಣಪಡಿಸುವುದಕ್ಕೆ ಸಹಾಯ ಮಾಡುತ್ತದೆ. ಶಿಶುಗಳಲ್ಲಿ ಉದರ ಸಮಸ್ಯೆ ನಿವಾರಿಸಲು ಮತ್ತು ಉರಿಯೂತಕ್ಕೆ ಉತ್ತಮ ಪರಿಹಾರ. ಈ ಲೇಖನದಲ್ಲಿ ಮತ್ತು ಕೆಳಗೆ ನೀಡಿರುವ ವೀಡಿಯೋದಲ್ಲಿ ಜೀರಿಗೆಯ ಪ್ರಯೋಜನಗಳ ಬಗ್ಗೆ ಮತ್ತು ಶಿಶುಗಳು ಮತ್ತು ಮಕ್ಕಳಿಗಾಗಿ ಮನೆಯಲ್ಲಿ ಜೀರಿಗೆ ನೀರನ್ನು ತಯಾರಿಸುವುದು ಹೇಗೆ ಎಂದು ವಿವರಣೆ ನೀಡಲಾಗಿದೆ.

ಜೀರಿಗೆಯ ಪ್ರಯೋಜನಗಳು :

  1. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ – ಜೀರ್ಣಕಾರಿ ಕಿಣ್ವಗಳ (enzymes) ಸ್ರವಿಸುವುದಕ್ಕೆ ಪ್ರಚೋದನೆ ನೀಡುತ್ತದೆ ಮತ್ತು  ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳಿಗೆ, ಕರುಳಿನ ಸಮಸ್ಯೆಗೆ, ಆಮ್ಲತೆ, ಅನಿಲ, ಉಬ್ಬುವುದು, ಹೊಟ್ಟೆ ನೋವು ಮುಂತಾದ ಚಿಕಿತ್ಸೆ ನೀಡಲು ತುಂಬಾ ಸಹಾಯಕ.
  2. ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ – ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ವ್ಯವಸ್ಥೆಯ ಸಾಮಾನ್ಯ ಕಾರ್ಯವನ್ನು ನಿರ್ವಹಿಸುವುದಕ್ಕೆ ಜೀರಿಗೆ ಉಪಯುಕ್ತ. ವೈರಾಣು ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅನಾರೋಗ್ಯದ  ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
  3. ಉಸಿರಾಟದ ವ್ಯವಸ್ಥೆಗೆ ಸಹಾಯಕ  – ಶೀತ ಕೆಮ್ಮು ನೆಗಡಿಯ ಸಮಯದಲ್ಲಿ ಎದೆಯಲ್ಲಿ ಸಂಗ್ರಹವಾಗುವ  (ಮ್ಯೂಕಸ್)ಕಫ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಬರುವ ಸಿರಾಟದ ತೊಂದರೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಉಸಿರಾಟದ ಸಮಸ್ಯೆಗಳನ್ನು, ಶೀತ ಮತ್ತು ಆಸ್ತಮಾ ಚಿಕಿತ್ಸೆಯಲ್ಲಿ ಜೀರಿಗೆಯನ್ನು  ಹೇರಳವಾಗಿ ಬಳಸುತ್ತಾರೆ.
  4. ಶಕ್ತಿಯನ್ನು ಹೆಚ್ಚಿಸುತ್ತದೆ – ಜೀರಿಗೆ ದೇಹಕ್ಕೆ ಬೇಕಾಗುವ ವಿವಿಧ ಪೌಷ್ಟಿಕ ಜೀವಾಣುಗಳನ್ನು ನೀಡುವುದು. ಶರೀರವನ್ನು ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಶಿಶುಗಳು ಮತ್ತು ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆ ಸಹಾಯಕ.
  5. ಹಸಿವು ಹೆಚ್ಚಿಸಿ ಆರೋಗ್ಯಕರ ತೂಕ ಪಡೆಯಲು – ಜೀರಿಗೆ ನೀರಿನ ನಿಯಮಿತ ಸೇವನೆಯಿಂದ ಚಯಾಪಚಯ ಸುಧಾರಿಸುವುದು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುವುದು. ಹಸಿವು ಹೆಚ್ಚುವುದರಿಂದ ಶಿಶುಗಳು ಮತ್ತು ಮಕ್ಕಳು ತಿನ್ನಲು ಬಯಸುತ್ತಾರೆ ಮತ್ತು ಆರೋಗ್ಯಕರವಾದ ಆಹಾರ ಸೇವಿಸುವುದರಿಂದ ತೂಕ ಹೆಚ್ಚಿಸಲು ಸಹಾಯಕ.

ಹಾಲುಣಿಸುವ ಬಾನಂತಿಯರಿಗೆ ಮತ್ತು ತಾಯಂದಿರಿಗೆ ಜೀರಿಗೆ ನೀರಿನಿಂದಾಗುವ ಪ್ರಯೋಜನಗಳು:

ಜೀರಿಗೆ ನೀರನ್ನು ಸೇವಿಸುವುದರಿಂದ ಸಸ್ತನಿ ಗ್ರಂಥಿಗಳಿಗೆ ಹಾಲಿನ ಸ್ರವಿಸುವಿಕೆಯನ್ನು ಸುಲಭಗೊಳಿಸುತ್ತದೆ. ತಾಯಂದಿರಿಗೆ ಹಾಲುಣಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ತಾಯಿಗೆ ಎದೆಹಾಲು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದಿನವಿಡೀ ಶಕ್ತಿಯುತವಾಗಿ ಉಳಿಯಲು ಸಹಾಯ ಮಾಡುತ್ತದೆ. ಜೀರಿಗೆ  ಜೀರ್ಣಕ್ರಿಯೆಯನ್ನು ಸುಧಾರಿಸಳು ಸಹಾಯಕ.  ಪ್ರಸವಾನಂತರದ ಆಮ್ಲತೆ ಮತ್ತು ಉಬ್ಬುವುದನ್ನು ತಪ್ಪಿಸಲು ನಿಯಮಿತವಾಗಿ ಜೀರಿಗೆ ನೀರನ್ನು ಸೇವಿಸುವುದರಿಂದ ಕಡಿಮೆ ಯಾಗುವುದು. ಜೀರಿಗೆ ನೀರನ್ನು ಹಾಲುಣಿಸುವ ತಾಯಂದಿರಿಗೆ ದಿನಕ್ಕೆ 1/4 – 1/2 ಕಪ್ ಸೇವಿಸಲು ಸಲಹೆ ನೀಡುತ್ತಾರೆ .

ಮಕ್ಕಳಿಗೆ ಜೀರಿಗೆ ನೀರಿನ ಪ್ರಯೋಜನಗಳು :

  • ಸಣ್ಣ ಪ್ರಮಾಣದಲ್ಲಿ ಘನ ಆಹಾರವನ್ನು ಪ್ರಾರಂಭಿಸಿದಾಗ ಶಿಶುಗಳಿಗೆ ಜೀರಿಗೆ ನೀರನ್ನು ನೀಡಬಹುದು. ಆರಂಭದಲ್ಲಿ 2 tbsp ಮತ್ತು ನಂತರ 2 tbsp ವರೆಗೆ ಪ್ರಾರಂಭಿಸಿ ವಾರಕ್ಕೆ 3 ಬಾರಿ ನೀಡಬಹುದು.
  • ಒಂದು ವರ್ಷಕ್ಕಿಂತ ಮೇಲ್ಪಟ್ಟ ಪುಟ್ಟ ಮಕ್ಕಳಿಗೆ ಅಥವಾ ಶಿಶುಗಳು 1/4 ಕಪ್ ಜೀರಿಗೆ ನೀರನ್ನು ವಾರಕ್ಕೆ 3 ಬಾರಿ ಅಥವಾ ದಿನ ಬಿಟ್ಟು ದಿನ ನೀಡಬಹುದು.
  • ಸಾಮಾನ್ಯ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಅಥವಾ ಹೆಚ್ಚು ಘನ ಆಹಾರವನ್ನು ಮಕ್ಕಳು ಸೇವಿಸಿದ ನಂತರ ಜೀರ್ಣಕ್ರಿಯೆಯನ್ನು ಸುಧಾರಿಸಲು ಜೀರಿಗೆ ನೀರನ್ನು ಸೇವಿಸುವುದು ಒಳ್ಳೆಯದು. ಹಸಿವು ಹೆಚ್ಚಿಸಲು 1/4 ಕಪ್ ಜೀರಿಗೆ ನೀರನ್ನು ಸೇವಿಸಬಹುದು.

ಜೀರಿಗೆ ನೀರನ್ನು ಸಂಗ್ರಹಿಸಬಹುದೇ?

ತಾಜಾ ಜೀರಿಗೆ ನೀರನ್ನು ಸೇವಿಸುವುದು ಒಳ್ಳೆಯದು. ತಯಾರಿಸಿದ ಜೀರಿಗೆ ನೀರನ್ನು ಒಂದು ವಾರದ ವರಗೆ ಫ್ರಿಡ್ಜ್ ನಲ್ಲಿ ಶೇಖರಿಸಿಬಹುದು ನನತರ ಬೇಕಾದಾಗ ಬಳಸಬಹುಡು. 3 ತಿಂಗಳವರೆಗೆ ಐಸ್ ಟ್ರೇಗಳಲ್ಲಿ ಜೀರಿಗೆ ನೀರನ್ನು ಫ್ರೀಜ್ ಮಾಡಿ ಸಂಗರಿಸಬಹುದು.

ನಮ್ಮ ಇತರ ಪಾಕವಿಧಾನಗಳು

Video : ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in Kannada

Kannada Subscribe Button TOTS AND MOMS

ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in Kannada

ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in Kannada

ಜೀರಿಗೆ ಉಸಿರಾಟದ ತೊಂದರೆಗಳು, ಉದರ ಶೂಲೆ ಮತ್ತು ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಶಿಶುಗಳಲ್ಲಿ , ಮಕ್ಕಳು ಮತ್ತು ವಯಸ್ಕರಲ್ಲಿ ಹಸಿವು ಉಂಟುಮಾಡುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಮನೆ ಮದ್ದು
ತಿನಿಸು:ಭಾರತೀಯ

ಸಾಮಗ್ರಿಗಳು

  1. ಜೀರಿಗೆ / ಜೀರಾ - 2 tbsp
  2. ನೀರು - 1 + 1 ಕಪ್

ವಿಧಾನ

  1. 2 tsp ಜೀರಿಗೆಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ, 1 ಘಂಟೆಯ ಕಾಲ ನೆನೆಸಿ. ಜೀರಿಗೆ ಪುಡಿಯನ್ನು ಬಳಸಬಹುದು.
  2. ನೆನೆಸಿದ ಜೀರಿಗೆಯನ್ನು ನೀರಿನ ಸಮೇತ ಒಂದು ದೊಡ್ಡ ಪಾತ್ರೆಗೆ ಹಾಕಿ ಇನ್ನು ಒಂದು ಕಪ್ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆ ಯಾಗುವ ತನಕ ಕುದಿಯಲು ಬಿಡಿ.
  3. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಬೆಲ್ಲ ಹಾಕಿ 2 ಅಥವಾ ಮೂರು ನಿಮಿಷ ಬೆಲ್ಲ ಕರಗುವ ತನಕ ಕುದಿಸಬಹುದು.
  4. ಜೀರಿಗೆ ನೀರನ್ನು ಶೋಧಿಸಿ ಬೆಚ್ಚಗೆ ಸೇವಿಸುವುದು ಸೂಕ್ತ.
  5. ಜೀರಿಗೆ ನೀರು ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in KannadaCumin Seeds Benefits & Uses for Babies & Kids | How to prepare Cumin Water hindi kannada jeera paani

ಜೀರಿಗೆ ನೀರನ್ನು ತಯಾರಿಸಲು ಬೇಕಾಗುವ ಪದಾರ್ಥಗಳು :

  1. ಜೀರಿಗೆ / ಜೀರಾ – 2 tbsp
  2. ನೀರು – 1 + 1 ಕಪ್

ಜೀರಿಗೆ ನೀರನ್ನು ಮಾಡುವ ವಿಧಾನ  :

1.2 tsp ಜೀರಿಗೆಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ, 1 ಘಂಟೆಯ ಕಾಲ ನೆನೆಸಿ. ಜೀರಿಗೆ ಪುಡಿಯನ್ನು ಬಳಸಬಹುದು.Cumin Seeds Benefits & Uses for Babies & Kids | How to prepare Cumin Water hindi kannada jeera paani

2. ನೆನೆಸಿದ ಜೀರಿಗೆಯನ್ನು ನೀರಿನ ಸಮೇತ ಒಂದು ದೊಡ್ಡ ಪಾತ್ರೆಗೆ ಹಾಕಿ ಇನ್ನು ಒಂದು ಕಪ್ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆ ಯಾಗುವ ತನಕ ಕುದಿಯಲು ಬಿಡಿ.Cumin Seeds Benefits & Uses for Babies & Kids | How to prepare Cumin Water hindi kannada jeera paani

3. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಬೆಲ್ಲ ಹಾಕಿ 2 ಅಥವಾ ಮೂರು ನಿಮಿಷ ಬೆಲ್ಲ ಕರಗುವ ತನಕ ಕುದಿಸಬಹುದು.Cumin Seeds Benefits & Uses for Babies & Kids | How to prepare Cumin Water hindi kannada jeera paani

4. ಜೀರಿಗೆ ನೀರನ್ನು ಶೋಧಿಸಿ ಬೆಚ್ಚಗೆ ಸೇವಿಸುವುದು ಸೂಕ್ತ.Cumin Seeds Benefits & Uses for Babies & Kids | How to prepare Cumin Water hindi kannada jeera paani

5. ಜೀರಿಗೆ ನೀರು ತಯಾರಾಗಿದೆ.

ಶಿಶು & ಮಕ್ಕಳಿಗೆ ಜೀರಿಗೆಯ ಉಪಯೋಗ | ಜೀರಿಗೆ ನೀರು | Cumin Water benefits & recipe in KannadaCumin Seeds Benefits & Uses for Babies & Kids | How to prepare Cumin Water hindi kannada jeera paani

ಸೂಚನೆ  :

  • ಹೊಸ ಆಹಾರವನ್ನು ಶಿಶುಗಳಿಗೆ ಪರಿಚಯಿಸುವ ಮುನ್ನ ವೈಧ್ಯರ ಸಲಹೆ ಪಡೆಯುವುದು ಒಳ್ಳೆಯದು.
  • ಒಂದು ವರ್ಷಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೆಲ್ಲ ಹಾಕುವ ಅಗತ್ಯವಿಲ್ಲ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 22
    Shares