Spread the love

ಮೂಲಂಗಿ ಸೂಪ್ | Creamy Radish Soup recipe in KannadaCreamy Radish Soup for Babies, Toddlers & Kids | Cough & Cold Remedy hindi kannada recipe mooli moolangi

ಮೂಲಿ ಅಥವಾ ಮೂಲಂಗಿ ತರಕಾರಿ ಶೀತ ಮತ್ತು ಕೆಮ್ಮಿಗೆ ಒಳ್ಳೆಯ ಪರಿಹಾರ.  ಕಾಮಾಲೆ ರೋಗಿಗಳಿಗೆ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶಿಶುಗಳು ಮತ್ತು ಮಕ್ಕಳಿಗಾಗಿ ಮೂಲಂಗಿ ಅಥವಾ ಮೂಲಿ ಬಳಸುವುದರಿಂದ ಅನೇಕ  ಪ್ರಯೋಜನಗಳಿವೆ. ಮಕ್ಕಳು ಮತ್ತು ಶಿಶುಗಳಿಗಾಗಿ ಕೆನೆಭರಿತ ಮೂಲಂಗಿ ಸೂಪ್ ಅನ್ನು ನೀಡಲು ಶಿಫಾರಸು ಮಾಡುತ್ತೇನೆ. ವಯಸ್ಕರಿಗೂ ಆರೋಗ್ಯಕರವಾದ ಪಾನೀಯವಾಗಿ ಸಂಜೆ ನೀಡಬಹುದು ಅಥವಾ ಕೆಮ್ಮು ನೆಗಡಿಗೆ ಉತ್ತಮ ಮನೆ ಪರಿಹಾರವಾಗಿ ನೀಡಬಹುದು.

ಮೂಲಂಗಿಯಲ್ಲಿ ವಿಟಮಿನ್ ಇ, , ಸಿ, ಬಿ6 ಮತ್ತು ಕೆ ಪೋಷಕಾಂಶಗಳು ಸಮೃದ್ಧವಾಗಿವೆ. ಇದಲ್ಲದೆ ಫೈಬರ್, ಸತು, ಪೊಟ್ಯಾಸಿಯಮ್, ತಾಮ್ರ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿ-ಆಕ್ಸಿಡೆಂಟ್ಗಳ ಅಧಿಕ ಪ್ರಮಾಣವನ್ನು ಹೊಂದಿರುತ್ತವೆ. ನಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ತ್ವಚೆಗೆ ಅತ್ಯುತ್ತಮ, ದೀರ್ಘ ಕಾಲದವರಗೆ (ಹೈಡ್ರೇಟೆ) ನೀರಿನಂಶವನ್ನು ಇರಿಸುತ್ತದೆ. ಮೂಲಂಗಿ ಸೂಪ್ ಪಾಕವಿಧನದಲ್ಲಿ ಅಗತ್ಯವಾದ ಕಾರ್ಬೋಹೈಡ್ರೇಟ್ ದೊರಯುತ್ತದೆ. ಆಲೂಗಡ್ಡೆಯನ್ನು ಉಪಯೋಗಿಸಿರುವುದರಿಂದ ಉತ್ತಮ ಕೆನೆ ವಿನ್ಯಾಸವನ್ನು ನೀಡುತ್ತದೆ. ವಯಸ್ಕರಿಗೆ ಅಥವಾ ಹಿರಿಯ ಮಕ್ಕಳಿಗಾಗಿ ಆಲೂಗಡ್ಡೆಯನ್ನು ಬಳಸದೆ ಮಾಡಬಹುದು.

ನಾನು ಈ ಪಾಕವಿಧಾನದಲ್ಲಿ  Wonderchef Blender Jar  ಬಳಸಿದ್ದೇನೆ.

ನಮ್ಮ ಇತರ ಉಪಯುಕ್ತ ಪಾಕವಿಧಾನಗಳು :

Video: ಮೂಲಂಗಿ ಸೂಪ್ | Creamy Radish Soup recipe in Kannada

ಮೂಲಂಗಿ ಸೂಪ್ | Creamy Radish Soup recipe in Kannada

ಮೂಲಂಗಿ ಸೂಪ್ | Creamy Radish Soup recipe in Kannada

ಮೂಲಂಗಿ ಬಳಸಿ ಪರಿಣಾಮಕಾರಿ ಮನೆ ಪರಿಹಾರವಾದ ಮೂಲಂಗಿ ಸೂಪ್ ತಯಾರಿಸಬಹುದು. ಬಹಳ ರುಚಿಕರವಾಗಿರುತ್ತದೆ. ಶಿಶುಗಳು ಮತ್ತು ಮಕ್ಕಳಿಗೆ ಆರೋಗ್ಯಕರ ತೂಕವನ್ನು ಹೆಚ್ಚಿಸುತ್ತದೆ. ಶೀತ ಮತ್ತು ಕೆಮ್ಮಿಗೆ ಒಳ್ಳೆಯ ಮನೆ ಮದ್ದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: Soup recipe
ತಿನಿಸು:ಭಾರತೀಯ

ಸಾಮಗ್ರಿಗಳು

  1. ಮೂಲಂಗಿ  - 2 ಚಿಕ್ಕ
  2. ಆಲುಗಡ್ಡೆ - 1 ಚಿಕ್ಕ
  3. ಜೀರಿಗೆ ಪುಡಿ ಒಂದು ಚಿಟಕೆ
  4. ಕಾಳು ಮೆಣಸು ಪುಡಿ   - ಒಂದು ಚಿಟಕೆ
  5. ಕೊತ್ತಂಬರಿ ಸ್ವಲ್ಪ
  6. ಉಪ್ಪು – ರುಚಿಗೆ ಬೇಕಾದಷ್ಟು

ವಿಧಾನ

  1. ಕುಕ್ಕರ್ ಅಥವಾ ಬೇಯಿಸುವ ಪಾತ್ರೆಗೆ ಹೆಚ್ಚಿರುವ ಮೂಲಂಗಿ ಮತ್ತು ಆಲುಗಡ್ಡೆ ಹಾಕಿ.
  2. ಬೇಯಿಸಲು ಸ್ವಲ್ಪ ನೀರು ಹಾಕಿ. ನಂತರ ಸ್ವಲ್ಪ ಜೀರಿಗೆ ಮತ್ತು ಮೆಣಸಿನ ಪುಡಿ ಹಾಗು ಉಪ್ಪು ಹಾಕಿ.
  3. ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಬರುವ ತನಕ ಅಥವ ಪಾತ್ರೆಯಲ್ಲಿ ಬೇಯಿಸಿದರೆ 15 ನಿಮಿಷ ಬೇಯಿಸಬೇಕು. ಬೆಂದ ತರಕಾರಿಯನ್ನು ಬ್ಲೆಂಡರ್ ಜಾರ್ ಗೆ ವರ್ಗಾಯಿಸಿ ಜಾಸ್ತಿ ನೀರು ಬಳಸದೆ ಚೆನ್ನಾಗಿ ರುಬ್ಬಿಕೊಳ್ಳಿ.
  4. ನಯವಾದ ಮಿಶ್ರಣ ಮಾಡಿ ಕೊಳ್ಳಿ. ಕೆನೆಯ ತರಹ ಕಾಣುತ್ತದೆ.
  5. ಬಟ್ಟಲಿಗೆ ವರ್ಗಾಯಿಸಿ ಸ್ವಲ್ಪ ಕೊತ್ತಂಬರಿ ಸೊಪ್ಪು ಬೇಕಾದರೆ ಹಾಕಿ.
  6. ಮೂಲಂಗಿ ಸೂಪ್ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಮೂಲಂಗಿ ಸೂಪ್ | Creamy Radish Soup recipe in KannadaCreamy Radish Soup for Babies, Toddlers & Kids | Cough & Cold Remedy hindi kannada recipe mooli moolangi

ಮೂಲಂಗಿ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು :

  1. ಮೂಲಂಗಿ  – 2 ಚಿಕ್ಕ
  2. ಆಲುಗಡ್ಡೆ – 1 ಚಿಕ್ಕ
  3. ಜೀರಿಗೆ ಪುಡಿ ಒಂದು ಚಿಟಕೆ
  4. ಕಾಳು ಮೆಣಸು ಪುಡಿ   – ಒಂದು ಚಿಟಕೆ
  5. ಕೊತ್ತಂಬರಿ ಸ್ವಲ್ಪ
  6. ಉಪ್ಪು – ರುಚಿಗೆ ಬೇಕಾದಷ್ಟು

ಮಾಡುವ ವಿಧಾನ :

1. ಕುಕ್ಕರ್ ಅಥವಾ ಬೇಯಿಸುವ ಪಾತ್ರೆಗೆ ಹೆಚ್ಚಿರುವ ಮೂಲಂಗಿ ಮತ್ತು ಆಲುಗಡ್ಡೆ ಹಾಕಿ.Creamy Radish Soup for Babies, Toddlers & Kids | Cough & Cold Remedy hindi kannada recipe mooli moolangi

2. ಬೇಯಿಸಲು ಸ್ವಲ್ಪ ನೀರು ಹಾಕಿ. ನಂತರ ಸ್ವಲ್ಪ ಜೀರಿಗೆ ಮತ್ತು ಮೆಣಸಿನ ಪುಡಿ ಹಾಗು ಉಪ್ಪು ಹಾಕಿ.Creamy Radish Soup for Babies, Toddlers & Kids | Cough & Cold Remedy hindi kannada recipe mooli moolangi

3. ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಬರುವ ತನಕ ಅಥವ ಪಾತ್ರೆಯಲ್ಲಿ ಬೇಯಿಸಿದರೆ 15 ನಿಮಿಷ ಬೇಯಿಸಬೇಕು. ಬೆಂದ ತರಕಾರಿಯನ್ನು ಬ್ಲೆಂಡರ್ ಜಾರ್ ಗೆ ವರ್ಗಾಯಿಸಿ ಜಾಸ್ತಿ ನೀರು ಬಳಸದೆ ಚೆನ್ನಾಗಿ ರುಬ್ಬಿಕೊಳ್ಳಿ.Creamy Radish Soup for Babies, Toddlers & Kids | Cough & Cold Remedy hindi kannada recipe mooli moolangi

4. ನಯವಾದ ಮಿಶ್ರಣ ಮಾಡಿ ಕೊಳ್ಳಿ. ಕೆನೆಯ ತರಹ ಕಾಣುತ್ತದೆ.Creamy Radish Soup for Babies, Toddlers & Kids | Cough & Cold Remedy hindi kannada recipe mooli moolangi

5. ಬಟ್ಟಲಿಗೆ ವರ್ಗಾಯಿಸಿ ಸ್ವಲ್ಪ ಕೊತ್ತಂಬರಿ ಸೊಪ್ಪು ಬೇಕಾದರೆ ಹಾಕಿ.Creamy Radish Soup for Babies, Toddlers & Kids | Cough & Cold Remedy hindi kannada recipe mooli moolangi

6. ಮೂಲಂಗಿ ಸೂಪ್ ತಯಾರಾಗಿದೆ.

ಮೂಲಂಗಿ ಸೂಪ್ | Creamy Radish Soup recipe in KannadaCreamy Radish Soup for Babies, Toddlers & Kids | Cough & Cold Remedy hindi kannada recipe mooli moolangi

ಸೂಚನೆ :

  1. ಒಂದು ವರ್ಷಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಉಪ್ಪು ಹಾಕಬೇಡಿ,ಸೂಪ್ ಸ್ವಲ್ಪಗಾಢವಾಗಿರಬೇಕು.
  2. ದೊಡ್ಧ ಮಕ್ಕಳಿಗೆ ತರಿ ತರಿಯಾಗಿ ಮೂಲಂಗಿ ಸಿಗುವ ತರಹ ರುಬ್ಬಿಕೊಳ್ಳಬಹುದು.
  3. ಬಿಸಿಬಿಸಿಯಾಗಿ ಸೇವಿಸುವುದು ಉತ್ತಮ.
  4. ದೊಡ್ದವರಿಗೆ ಆಲುಗಡ್ಡೆ ಬಳಸದೆ ಸೂಪ್ ತಯಾರಿಸಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love